ಮುಟ್ಟಿನ ಬಗ್ಗೆ Rashmika Mandanna ಆಸೆಯನ್ನು ಆಗ್ಲೇ ಕೇಳಿಬಿಟ್ಟಿದ್ದ ಇಂದ್ರದೇವ! ಈ ಇಂಟರೆಸ್ಟಿಂಗ್​ ಸ್ಟೋರಿ ಕೇಳಿ

Published : Nov 05, 2025, 09:34 PM IST
Rashmika Mandanna

ಸಾರಾಂಶ

ನಟಿ ರಶ್ಮಿಕಾ ಮಂದಣ್ಣ ಅವರು ಗಂಡಸರಿಗೂ ಪಿರಿಯಡ್ಸ್ ಆಗಬೇಕಿತ್ತು ಎಂದ ಹೇಳಿಕೆಯ ಬೆನ್ನಲ್ಲೇ, ಭಾಗವತ ಪುರಾಣದ ಒಂದು ಸ್ವಾರಸ್ಯಕರ ಕಥೆ ಮುನ್ನೆಲೆಗೆ ಬಂದಿದೆ. ಈ ಕಥೆಯ ಪ್ರಕಾರ, ಇಂದ್ರನ ಬ್ರಹ್ಮ ಹತ್ಯಾ ದೋಷದ ಪಾಪದ ಫಲವಾಗಿ ಮಹಿಳೆಯರಿಗೆ ಋತುಸ್ರಾವ ಪ್ರಾರಂಭವಾಯಿತು.

ಜಗಪತಿ ಬಾಬು ಹೋಸ್ಟ್ ಮಾಡುವ 'ಜಯಮ್ಮು ನಿಶ್ಚಯಮ್ಮುರಾ' ಟಾಕ್ ಶೋಗೆ ಬಂದಿದ್ದ ರಶ್ಮಿಕಾ ಮಂದಣ್ಣ, ಮಾತಿನ ಮಧ್ಯೆ ಗಂಡಸ್ರಿಗೂ ಪಿರಿಯಡ್ಸ್​ ಆದ್ರೆ ಹೆಣ್ಣುಮಕ್ಕಳ ತೊಂದರೆ ಗೊತ್ತಾಗ್ತಿತ್ತು ಎಂದಿದ್ದಾರೆ. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಆದರೆ ಇಂಟರೆಸ್ಟಿಂಗ್​ ವಿಷ್ಯ ಒಂದು ಏನು ಗೊತ್ತಾ? ಮೊದ್ಲು ಪಿರಿಯಡ್ಸ್ ಅರ್ಥಾತ್​ ಮುಟ್ಟು ಆಗಿದ್ದು ಗಂಡಸರಿಗೇ ಅನ್ನುತ್ತದೆ ಹಿಂದೂ ಪುರಾಣ. ನಿಜ. ಮೊದಲು ಋತುಸ್ರಾವ ಆಗಿದ್ದು, ಇಂದ್ರನಿಗಂತೆ! ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಇಂದ್ರನಿಗೆ ಆದ ಮುಟ್ಟಿನ ಬಗ್ಗೆ  ಪುರಾಣದಲ್ಲಿ ಇಂಟರೆಸ್ಟಿಂಗ್​ ಸ್ಟೋರಿ ಇದೆ.

ಬ್ರಹ್ಮ ಹತ್ಯಾ ದೋಷ

ಈ ಸ್ಟೋರಿ ಆರಂಭವಾಗುವುದು ಇಂದ್ರ ಮತ್ತು ಬ್ರಹ್ಮನಿಂದಾಗಿ. ಭಾಗವತ ಪುರಾಣದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಮೊದಲಿಗೆ ಸ್ವರ್ಗವನ್ನು ರಾಕ್ಷಸಲು ವಶಪಡಿಸಿಕೊಂಡಿದ್ದರು. ಅದನ್ನು ತಿಳಿದು ಇಂದ್ರನು ಸಹಾಯಕ್ಕಾಗಿ ಬ್ರಹ್ಮನ ಬಳಿ ಹೋದಾಗ, ಬ್ರಹ್ಮ ಬ್ರಾಹ್ಮಣನ ಬಳಿಗೆ ಹೋಗಿ ಪರಿಹಾರ ಕಂಡುಕೊಳ್ಳಲು ಹೇಳಿದ. ಬ್ರಹ್ಮ ಬ್ರಾಹ್ಮಣನ ಬಳಿಯೇನೋ ಹೋದ. ಆದರೆ ಬ್ರಾಹ್ಮಣದ ಹೆಂಡತಿ ರಾಕ್ಷಸಿಯಾಗಿದ್ದಳು. ಇದೇ ಕಾರಣಕ್ಕೆ ಇಂದ್ರನ ತಪಸ್ಸು ಯಶಸ್ವಿಯಾಗಲು ಆಕೆ ಬಿಡಲೇ ಇಲ್ಲ. ಇದರಿಂದ ಕೋಪಗೊಂಡ ಇಂದ್ರನು, ಕೋಪದ ಕೈಗೆ ಬುದ್ಧಿ ಕೊಟ್ಟು ಬ್ರಾಹ್ಮಣ ಮತ್ತು ಅವನ ಹೆಂಡತಿ ಇಬ್ಬರನ್ನೂ ಸಾಯಿಸಿಯೇ ಬಿಟ್ಟನು. ಅಲ್ಲಿಗೆ ಅವನಿಗೆ ಬ್ರಹ್ಮ ಹತ್ಯಾ ದೋಷ ಅಂಟಿಕೊಂಡಿತು.

ಬ್ರಹ್ಮನ ಪಾಪದ ಪರಿಹಾರ

ಏನು ಮಾಡಬೇಕು, ಇದರಿಂದ ಹೇಗೆ ಪಾರಾಗುವುದು ಎಂದು ಅರಿಯದ ಇಂದ್ರ, ಸೀದಾ ಬ್ರಹ್ಮನ ಬಳಿ ಪರಿಹಾರಕ್ಕಾಗಿ ಹೋದಾಗ, ಬ್ರಹ್ಮ ಒಂದು ಪರಿಹಾರವನ್ನು ಹೇಳಿದ. ಅದರ ಪ್ರಕಾರ, ಇಂದ್ರನು ತನ್ನ ಪಾಪವನ್ನು ಅನೇಕ ಭಾಗಗಳಾಗಿ ವಿಂಗಡಿಸಬೇಕು ಎಂಬುದಾಗಿತ್ತು. ಅದಕ್ಕಾಗಿ ಇಂದ್ರನು ಪಾಪ ಪರಿಹಾರಕ್ಕಾಗಿ ಭೂಮಿ, ಮರ, ನೀರನ್ನು ತನ್ನ ಪಾಪದ ಪಾಲುದಾರರನ್ನಾಗಿ ಮಾಡಿದ. ಅದರ ಜೊತೆ ಹೆಣ್ಣನ್ನೂ ಸೇರಿಸಿದ. ಈ ಕಾರಣಕ್ಕೆ ಮಹಿಳೆಯರು ಇಂದ್ರನ ಪಾಪದ ಫಲ ತೀರಿಸತೊಡಗಿದರು, ಅವರಿಗೆ ಋತುಸ್ರಾವ ಆರಂಭವಾಯಿತು. ಬ್ರಾಹ್ಮಣ ಹತ್ಯೆಯ ಅಪರಾಧವು ಇಂದ್ರನ ಮೂಲಕ, ಪ್ರತಿ ತಿಂಗಳು ಮುಟ್ಟಿನ ಹರಿವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಹೆಣ್ಣಿಗೆ ಋತುಸ್ರಾವವಾಗಲು ಈ ಶಾಪವೇ ಕಾರಣ ಎಂದು ಹೇಳಲಾಗುತ್ತದೆಯಾದರೂ, ಇಲ್ಲಿ ಮುಟ್ಟಾಗಿದ್ದು ಹೆಣ್ಣಿಗೇ ಆದರೂ, ಅದು ಇಂದ್ರನ ಪಾಪದ ಫಲ ಆಗಿರುವ ಕಾರಣ, ಮೊದಲ ಮುಟ್ಟು ಇಂದ್ರನಿಗೇ ಎಂದೇ ಹೇಳುತ್ತದೆ ಪುರಾಣ.

ಗ್ರೀಕ್ ಪುರಾಣ

ಮುಟ್ಟಿನ ಪದವು ಗ್ರೀಕ್ ಪುರಾಣದಿಂದ ಬಂದಿದೆ. ಋತುಚಕ್ರವು ಲ್ಯಾಟಿನ್ ಪದ ಮೆನ್ಸೆಸ್ ಎಂಬ ಅರ್ಥದಿಂದ ಬಂದಿದೆ ಮತ್ತು ಇನ್ನೊಂದು ಗ್ರೀಕ್ ಪದ ಮೆನೆ ಅಂದರೆ ಚಂದ್ರನಿಂದ ಬಂದಿದೆ. ಗ್ರೀಕ್ ಪುರಾಣದ ಪ್ರಕಾರ, ಮುಟ್ಟಿನ ಸಮಯದಲ್ಲಿ ಮಹಿಳೆಯರು ಆಧ್ಯಾತ್ಮಿಕ ಮತ್ತು ಮಾನಸಿಕ ಶಕ್ತಿಯನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಅವರನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: 'ದರ್ಶನ್‌ ಜೊತೆ ಅಂದು ನಡೆದಿತ್ತು ವಿಚಿತ್ರ ಘಟನೆ' ಎನ್ನುತ್ತಲೇ Bigg Boss ಡಾಗ್‌ ಸತೀಶ್‌ ಅಚ್ಚರಿಯ ವಿಷ್ಯ ರಿವೀಲ್‌

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!