ಸೆಕ್ಸ್ ನೈಸರ್ಗಿಕ ಕ್ರಿಯೆ. ಇದಕ್ಕೂ ಕೆಲ ರೂಲ್ಸ್ ಇದೆ. ಸಂಭೋಗ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ ಹಾಳು ಮಾಡುವ ಕೆಲಸ ಕೂಡ ಮಾಡುತ್ತದೆ. ಸಂಭೋಗದಿಂದ ಏನೆಲ್ಲ ಸಮಸ್ಯೆ ಕಾಡುತ್ತೆ ಗೊತ್ತಾ?
ಆರೋಗ್ಯಕರ ಲೈಂಗಿಕ ಜೀವನ ಉತ್ತಮ ಆರೋಗ್ಯಕ್ಕೆ ಒಳ್ಳೆಯದು. ಸೆಕ್ಸ್ , ಆರೋಗ್ಯದ ಮೇಲೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ನಿಯಮಿತ ಸೆಕ್ಸ್ ನಿಂದ ಮಾನಸಿಕ ಹಾಗೂ ದೈಹಿಕ ಲಾಭವಿದೆ. ಸಂಭೋಗದಿಂದ ಆರೋಗ್ಯಕ್ಕೆ ಲಾಭವಿದ್ರೂ ಯಾವುದೂ ಅತಿಯಾಗಬಾರದು. ಮಿತಿಮೀರಿದ ಲೈಂಗಿಕ ಕ್ರಿಯೆ ಅನೇಕ ಅಡ್ಡಪರಿಣಾಮ ಬೀರುತ್ತದೆ. ಅತಿಯಾದ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು ಮಹಿಳೆಯ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯ ಹಾಳಾಗುತ್ತದೆ ಎಂದು ತಜ್ಞರು ಹೇಳ್ತಾರೆ. ನಾವಿಂದು ಅತಿಯಾದ ಲೈಂಗಿಕ ಕ್ರಿಯೆ ನಿಮ್ಮ ಜೀವನದ ಮೇಲೆ ಯಾವೆಲ್ಲ ಪರಿಣಾಮ ಬೀರುತ್ತೆ ಎಂಬುದನ್ನು ಹೇಳ್ತೇವೆ.
ಅತಿಯಾದ ಸೆಕ್ಸ್ (Sex) ನಿಂದ ಕಾಡುತ್ತೆ ಈ ಸಮಸ್ಯೆ :
ದುರ್ಬಲ ದೇಹ (Body) : ಲೈಂಗಿಕ ಚಟುವಟಿಕೆ ವೇಳೆ ಶಕ್ತಿ ನಷ್ಟವಾಗುತ್ತದೆ. ದಿನದಲ್ಲಿ ಎರಡು – ಮೂರು ಬಾರಿ ಮಹಿಳೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ರೆ ದೇಹದ ಶಕ್ತಿ ಹೆಚ್ಚು ನಷ್ಟವಾಗುತ್ತದೆ. ದೈಹಿಕ ಬಳಲಿಕೆ ಹೆಚ್ಚಾಗುತ್ತದೆ. ಆಯಾಸ, ಸ್ನಾಯು ನೋವು ಮಹಿಳೆಯರನ್ನು ಕಾಡುತ್ತದೆ.
Relationship Tips: ನಿಮ್ಮಲ್ಲಿ ಅತಿಯಾದ ಸ್ವತಂತ್ರ ಧೋರಣೆ ಇದ್ರೆ ಸಂಬಂಧದಲ್ಲಿ ಈ ತಪ್ಪನ್ನ ಮಾಡ್ತಾನೇ ಇರ್ತೀರಾ!
ಸೋಂಕು (Infection) ಗಳ ಅಪಾಯ ಹೆಚ್ಚು : ಲೈಂಗಿಕ ಕ್ರಿಯೆ ಯಾವಾಗ್ಲೂ ಆರೋಗ್ಯಕರವಾಗಿರಬೇಕು. ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ರೆ ರೋಗದಿಂದ ದೂರವಿರಬಹುದು. ಅದೇ ಅಸುರಕ್ಷಿತ ಹಾಗೂ ಪುನರಾವರ್ತನೆ ಸೆಕ್ಸ್ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಪದೇ ಪದೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದ್ರಿಂದ ಮೂತ್ರನಾಳದ ಸೋಂಕು ಮತ್ತು ಲೈಂಗಿಕವಾಗಿ ಹರಡುವ ಸೋಂಕು ಕಾಡುವ ಅಪಾಯ ಹೆಚ್ಚಿರುತ್ತದೆ.
ಸುಲಭವಾಗಿ ಸಿಗದ ಪರಾಕಾಷ್ಠೆ : ಲೈಂಗಿಕ ಜೀವನ ಹಿತವೆನ್ನಿಸಬೇಕೆಂದ್ರೆ ಪರಾಕಾಷ್ಠೆ ತಲುಪುವುದು ಮುಖ್ಯ. ಅತಿ ಹೆಚ್ಚು ಸೆಕ್ಸ್ ನಿಂದ ಪರಾಕಾಷ್ಠೆ ಸುಲಭವಾಗಿ ಸಿಗೋದಿಲ್ಲ. ಇದ್ರಿಂದ ಸೆಕ್ಸ್ ಒಂದು ಕ್ರಿಯೆಯಾಗುತ್ತದೆಯೇ ವಿನಃ ಸಂತೋಷ, ನೆಮ್ಮದಿ ನೀಡುವುದಿಲ್ಲ.
ಹೆಚ್ಚಾಗುವ ಒತ್ತಡ - ಆತಂಕ : ಪದೇ ಪದೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದ್ರಿಂದ ಒತ್ತಡ, ಆತಂಕ ಹೆಚ್ಚಾಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಸಂತಾನೋತ್ಪತ್ತಿ ಮೇಲೆ ಅಡ್ಡಪರಿಣಾಮ : ಆಗಾಗ್ಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಕಾರಣ ಮಹಿಳೆಯ ಋತುಚಕ್ರದಲ್ಲಿ ಏರುಪೇರಾಗುತ್ತದೆ. ಇದು ಅನಿಯಮಿತ ಮುಟ್ಟು, ಅಧಿಕ ನರಕ್ತಸ್ರಾವಕ್ಕೂ ಕಾರಣವಾಗಬಹುದು. ಇದು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ.
ಸ್ವಾಭಿಮಾನಕ್ಕೆ ಧಕ್ಕೆ : ಲೈಂಗಿಕ ಚಟುವಟಿಕೆ ಹೆಚ್ಚಾದ್ರೆ ಇದು ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡುತ್ತದೆ. ಅನೇಕ ಬಾರಿ ಇಷ್ಟವಿಲ್ಲದೆ ಮಹಿಳೆಯರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಬೇಕಾಗುತ್ತದೆ. ಇದಲ್ಲದೆ ಇದು ತಪ್ಪು ತಿಳುವಳಿಕೆ, ಅಸೂಯೆ ಅಥವಾ ಅಸಮಾಧಾನಕ್ಕೂ ಕಾರಣವಾಗಬಹುದು.
ಜೀವನದಲ್ಲಿ ಅತೃಪ್ತಿ ಕಾಡೋದು ಸಹಜವಾ? ತೃಪ್ತಿ ಇಲ್ಲವಾದ್ರೆ ಹೀಗೆಲ್ಲ ಯಾಕಾಗುತ್ತೆ?
ಎಷ್ಟು ಸೆಕ್ಸ್ ಸುರಕ್ಷಿತ? : ಯಾವುದೇ ಸಂಶೋಧನೆಯಲ್ಲಿ ಎಷ್ಟು ಸೆಕ್ಸ್ ಸುರಕ್ಷಿತ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ವಾರದಲ್ಲಿ ಎರಡು ಬಾರಿ ಲೈಂಗಿಕ ಕ್ರಿಯೆ ನಡೆಸುವುದು ಆರೋಗ್ಯಕರ ಎನ್ನಲಾಗುತ್ತದೆ. ಮತ್ತೆ ಕೆಲ ಸಂಶೋಧನೆಯಲ್ಲಿ ವಾರಕ್ಕೆ ವಾರ ಪೂರ್ತಿ ಸಂಭೋಗ ಬೆಳೆಸಬಹುದು ಎನ್ನಲಾಗುತ್ತದೆ. ನೀವು ಎಷ್ಟು ಭಾರಿ ಲೈಂಗಿಕ ಕ್ರಿಯೆ ನಡೆಸುತ್ತೀರಿ ಎಂಬುದು ನಿಮ್ಮ ಆರೋಗ್ಯವನ್ನು ಅವಲಂಭಿಸಿದೆ. ಮಹಿಳೆಯರು ಯಾವಾಗಲೂ ತಮ್ಮ ದೇಹವನ್ನು ಕೇಳಬೇಕು. ಯಾವುದೇ ರೀತಿಯ ನೋವು ಅಥವಾ ದಣಿವು ಕಂಡುಬಂದರೆ ಅಥವಾ ಸಾಕಷ್ಟು ಲೂಬ್ರಿಕಂಟ್ ಇಲ್ಲದಿದ್ದರೆ, ದೇಹವು ಲೈಂಗಿಕತೆಯನ್ನು ನಿರಾಕರಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸಂಭೋಗ ಮಾಡುವುದು ಆರೋಗ್ಯಕರ. ಯಾವುದೇ ಸಮಸ್ಯೆ ಕಾಣಿಸಿಕೊಂಡಾಗ ಅದನ್ನು ನಿರ್ಲಕ್ಷ್ಯ ಮಾಡಬಾರದು. ಲೈಂಗಿಕತೆಯ ಆಸಕ್ತಿ ಹಾಗೂ ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನವಾಗಿರುತ್ತದೆ. ಇದು ವಯಸ್ಸು, ಲೈಂಗಿಕ ಬಯಕೆ ಮತ್ತು ಆರೋಗ್ಯವನ್ನು ಅವಲಂಬಿಸಿರುತ್ತದೆ.