
ಬೇಸಿಗೆ ಕಾಲ ಎಂದೇರೇನೆ ಪವರ್ ಕಟ್. ಬೇಸಿಗೆಯಲ್ಲಿ ಸರ್ಕಾರ ಪವರ್ ಕಟ್ ಮಾಡಿದ್ರೆ, ಮಳೆಗಾಲದಲ್ಲಿ ಮರಗಳು ಬಿದ್ದು ಕರೆಂಟೇ ಇರಲ್ಲ. ಅದರಲ್ಲಿಯೂ ಗ್ರಾಮೀಣ ಪ್ರದೇಶದವರ ಸ್ಥಿತಿ ಬೇಡವೇ ಬೇಡ ಬಿಡಿ. ಬೇಸಿಗೆಯಲ್ಲಿ ನಗರ ಪ್ರದೇಶಗಳಲ್ಲಿ ಕರೆಂಟ್ ಸಾಮಾನ್ಯವಾಗಿ ಹೋಗುವುದು ಕಡಿಮೆ. ಆದರೆ ವಿದ್ಯುತ್ ಉಳಿತಾಯದ ಮಾತು ಬಂದಾಗ ಅದಕ್ಕೆ ಮೊದಲು ಬಲಿಯಾಗುವವರು ಗ್ರಾಮೀಣ ಪ್ರದೇಶದ ಜನರೇ. ಹಲವು ಸಂದರ್ಭದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಕರೆಂಟ್ ಇಲ್ಲದೇ ಪೇಚಾಡುವ ಸ್ಥಿತಿಯೂ ಬರಬಹುದು. ಇನ್ನು ಮಳೆಗಾಲದಲ್ಲಿ ಮರಗಳಿಗೆ ಹಳ್ಳಿ-ನಗರ ಎಂದೆಲ್ಲಾ ಭೇದಭಾವ ಇರಲ್ವಲ್ಲಾ, ಎಲ್ಲಾ ಕಡೆಯೂ ಉರುಳಿ ಬೀಳೋದೇ. ಇದು ಬಿತ್ತು ಎಂದರೆ ಆ ಭಾಗದ ವಿದ್ಯುತ್ ಕಡಿತವಾಗುವುದು ಸಹಜ.
ಇಂಥ ಸಂದರ್ಭದಲ್ಲಿ ಭಾರಿ ಮಳೆಯಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿ ಬಂದು ರಿಪೇರಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅವರೂ ಎಷ್ಟೋ ಬಾರಿ ಜೀವವನ್ನು ಪಣಕ್ಕಿಟ್ಟು ಸಾಹಸ ಮಾಡುವುದನ್ನೂ ನೋಡಬಹುದು. ಗುಡುಗು- ಮಿಂಚು, ಭಾರಿ ಮಳೆಗೆ ಕರೆಂಟ್ ಹೋದ ಸಂದರ್ಭಗಳಲ್ಲಿ ಎಷ್ಟು ಹೊತ್ತಾದರೂ ಅದು ಬಾರದೇ ಹೋದರೆ ಜನರು ವಿದ್ಯುತ್ ಇಲಾಖೆಯನ್ನು ಬೈದುಕೊಳ್ಳುವುದು ಮಾಮೂಲು, ಶಾಪ ಹಾಕುವವರೂ ಇದ್ದಾರೆ. ಆದರೆ ಅಂಥ ಸಂದರ್ಭಗಳಲ್ಲಿ ಸಿಬ್ಬಂದಿ ಬಂದು ರಿಪೇರಿ ಮಾಡುವುದು ನೋಡಿದರೆ ಅಬ್ಬಾ ಎಷ್ಟು ಸವಾಲಿನ ಕೆಲಸ ಎಂದು ಅನ್ನಿಸದೇ ಇರಲಾರದು. ಆದ್ದರಿಂದ ಕರೆಂಟ್ ಇಲ್ಲದ ಸಂದರ್ಭದಲ್ಲಿ ಕತ್ತಲಲ್ಲಿ ಕುಳಿತು ಅವರಿಗೆ ಇವರಿಗೆ ಶಾಪ ಹಾಕುವ ಬದಲು ಮನೆಯಲ್ಲಿಯೇ ಸುಲಭದಲ್ಲಿ ಬೆಳಕು ತರಿಸಿಕೊಳ್ಳಬಹುದಾದ ಮಾರ್ಗವೊಂದಿದೆ!
ಕಾಗೆಯ ದ್ವೇಷ 17 ವರುಷ! ಸುದೀರ್ಘ ಅಧ್ಯಯನ ರೋಚಕ ವರದಿ ಇಲ್ಲಿದೆ...
ಕೆಲವರ ಮನೆಗಳಲ್ಲಿ ಯುಪಿಎಸ್ ಇರುತ್ತದೆ, ಇನ್ನು ಕೆಲವರು ಕರೆಂಟ್ ಹೋದಾಗ ಆಟೊಮ್ಯಾಟಿಕ್ ಆನ್ ಆಗುವ ಬಲ್ಬ್ಗಳನ್ನು ಅಳವಡಿಸಿಕೊಂಡಿರಬಹುದು. ಆದರೆ ಹಲವು ಮನೆಗಳಲ್ಲಿ ಈ ಸೌಲಭ್ಯ ಇರುವುದಿಲ್ಲ. ವಿದ್ಯುತ್ ಕಡಿತ ಅಪರೂಪ ಆದ ಸಂದರ್ಭಗಳಲ್ಲಿ ಮನೆಯಲ್ಲಿ ಬೇಕಾದಾಗ ಟಾರ್ಚೂ ಸಿಗಲ್ಲ, ಮೋಂಬತ್ತಿಯಂತೂ ಇರುವುದೇ ಇಲ್ಲ. ಆ ಕತ್ತಲಿನಲ್ಲಿ ಅಂಗಡಿಗೆ ಹೋಗಿ ತರುವುದು ಅಸಾಧ್ಯವಾದ ಮಾತು. ಇಂಥ ಸಂದರ್ಭಗಳಲ್ಲಿ ಸುಲಭದಲ್ಲಿ ಮನೆಯಲ್ಲಿಯೇ ಬೆಳಕನ್ನು ತರಿಸಬಹುದಾದ ಕುತೂಹಲವ ಮಾರ್ಗವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಮೂರು ಚಮಚ ಅಕ್ಕಿ, ಮೂರು ಚಮಚ ಎಣ್ಣೆ, ಸ್ವಲ್ಪ ನೀರು ಹಾಗೂ ಕಿವಿಗೆ ಹಾಡುವ ಒಂದು ಬಡ್ ಇದ್ದರೆ ಸಾಕು.
ಅದಕ್ಕಾಗಿ ಮೊದಲಿಗೆ ಒಂದು ಗಾಜಿನ ಲೋಟದಲ್ಲಿ ಮೂರು ಚಮಚ ಅಕ್ಕಿ ಹಾಕಬೇಕು. ಅದು ಮುಳುಗುವಷ್ಟು ನೀರು ಹಾಕಬೇಕು. ಅದಕ್ಕೆ ಮೂರು ಚಮಚ ಎಣ್ಣೆ ಹಾಕಬೇಕು. ಕಿವಿಗೆ ಹಾಡುವ ಬಡ್ ಅನ್ನು ಕಟ್ ಮಾಡಿ ಅದನ್ನು ಈ ವಿಡಿಯೋದಲ್ಲಿ ತೋರಿಸಿರುವಂತೆ ಲೋಟದ ಒಳಗೆ ಸಿಕ್ಕಿಸಿ ಬೆಂಕಿ ಕಡ್ಡಿಯಿಂದ ಹಚ್ಚಿದರೆ ಸಾಕು. ಹಲವಾರು ಗಂಟೆಗಳವರೆಗೆ ಈ ದೀಪ ಉರಿಯುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ!
ತುಟಿ ಬಳಿ ಮಚ್ಚೆ ಇದ್ಯಾ? ಹಾಗಿದ್ರೆ ನಿಮ್ಮ ವ್ಯಕ್ತಿತ್ವ, ಜೀವನ ಖಂಡಿತಾ ಹೀಗೇ ಇರುತ್ತೆ ನೋಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.