
ಉಪೇಂದ್ರ ಸಿನಿಮಾದ ಫೇಮಸ್ ಡೈಲಾಗ್..
ಸ್ವಾಮೀಜಿ: ಮಗು ನಿನ್ನ ಹೆಸರೇನು:
ಹುಡುಗ: 'ನಾನು'
ಸ್ವಾಮೀಜಿ: ಅಲ್ಲಲ್ಲ.. ನಿನ್ನ ಹೆಸರು..ರಾಮ.. ಕೃಷ್ಣ..
ಹುಡುಗ: ಏಯ್..ಹೇಳಿಲ್ವಾ..ನನ್ ಹೆಸರೇ ನಾನು..ನಾನ್ಯಾಕೆ ರಾಮ,ಕೃಷ್ಣ ಅಂತ ಹೆಸರು ಇಟ್ಕೊಳ್ಳಿ ನನ್ನ ಹೆಸರೇ ನಾನು..ನಾನೇ ನಾನು..
ಈ ಡೈಲಾಗ್ ಎಷ್ಟು ಫೇಮಸ್ ಆಯ್ತು ಎಂದರೆ, ಇಂದಿಗೂ ನಾನು ಎಂದರೆ ನೆನಪಿಸಿಕೊಳ್ಳೋದು ಉಪೇಂದ್ರ ಅವರನ್ನೇ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ನಾನು ವೈರಲ್ ಆಗುತ್ತಿದೆ. ಅದು ಕವಯತ್ರಿ ಮಮತಾ ಸಾಗರ್ ಅವರ ನಾನು.
ಮಮತಾ ಸಾಗರ್ ಅವರ ನಾನು ಕೇಳಿದ ಕೂಡಲೇ ಉಪೇಂದ್ರ ಅವರ ನಾನು ಕೂಡ ಎಲ್ಲರಿಗೂ ಮರೆತು ಹೋಗುವಂತಿದೆ. ಅಷ್ಟಕ್ಕೂ ಮಮತಾ ಸಾಗರ್ ನಾನು ಎಂದರೆ ಒಂದು ಕವಿತೆ. ಮಹಿಳೆಯ ಸೂಕ್ಷ್ಮಗಳನ್ನು ಅರ್ಥೈಸಿಕೊಳ್ಳುವ ರೀತಿಯಲ್ಲಿ ಅವರೇ ಬರೆದಿರುವ ಸಾಲುಗಳನ್ನು ಸಮ್ಮೇಳನದಲ್ಲಿ ಓದಿದ್ದರು. ಈಗ ಅದೇ ಸಾಲುಗಳಿಗೆ ವ್ಯಾಪಕ ಪರ-ವಿರೋಧ ವ್ಯಕ್ತವಾಗಿದೆ. ಇದೇ ಸಾಲುಗಳನ್ನು ಒಬ್ಬ ಹುಡುಗ ಬರೆದಿದ್ದರೆ ಇಷ್ಟೊತ್ತಿಗೆ ರಾದ್ದಾಂತಗಳೇ ಆಗಿರುತ್ತಿದ್ದವು ಎಂದು ಟೀಕಿಸಿದ್ದಾರೆ.
ಆ ಕವಿತೆ ಹೀಗಿದೆ...
ನಾನು ನಾನು ನಾನು ಅಂದರೆ
ನಾನು ಅಂದರೆ ನಾನು ಅಂದರೆ
ಒಂದು ಜೊತೆ ಮೆತ್ತಗಿನ ಮೊಲೆ
ತೊಡೆಸಂದಲ್ಲಿ ಅಡಗಿದ ಕತ್ತಲ ಕೋಶ
ನಾನು ಮೆತ್ತಗಿನ ಮೊಲೆ
ನಾನು ಕತ್ತಲ ಕೋಶ
ನಾನು ಒಂದು ಜೊತೆ ಮೆತ್ತಗಿನ ಮೊಲೆ
ತೊಡೆಸಂದಲ್ಲಿ ಅಡಗಿದ ಕತ್ತಲ ಕೋಶ
ನಾನು ನಾನು ಅಂದರೆ ನಾನು ನಾನು
ಅಂದರೆ ನಾನು
ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಅರಿವೆಂಬುದು ಬಿಡುಗಡೆ' ಘೋಷವಾಕ್ಯದಡಿ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಮಮತಾ ಸಾಗರ್ ಅವರ ಈ ಕವಿತೆ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನವೀನ್ ಸಾಗರ್, 'ಇದು ಬುದ್ಧಿಜೀವಿ ಎಡಪಂಥೀಯ ಕವಯತ್ರಿ ಮಮತಾ ಸಾಗರ್ ಅವರ ನಾನು ಎಂದರೆ ಕವನದ ಗೂಢಾರ್ಥ ಗುದಾರ್ಥ ಗಾಡಾರ್ಥ ಗಾಂಡಾರ್ಥ. ಕವನವನ್ನು ಗ್ರಹಿಸುವುದೂ ಒಂದು ಕಲೆ. ಅದು ಸುಮ್ಮನೆ ಒಲಿಯುವುದಿಲ್ಲ.ಒಬ್ಬ ಕವಯತ್ರಿಯ ಕವಿತ್ವ ಅರ್ಥ ಮಾಡಿಕೊಳ್ಳದೇ ಹೀಗಳೆದಿರಿ. ನಿಮ್ಮನಿಮ್ಮ ತನುವನ್ನು ಸಂತೈಸಿಕೊಳ್ಳಿ. ಹೆಸರಿನ ಪಕ್ಕ ನಮ್ಮೂರು ಇದ್ದಿದ್ದಕ್ಕೆ ಎಷ್ಟೆಲ್ಲ ಕಷ್ಟಪಟ್ಟು ಸಮರ್ಥಿಸಿಕೊಂಡೆ. ಅಬ್ಬಾ ಇನ್ನಾಗಲ್ಲ ಸ್ವಾಮಿ. ಫೈನಲಿ... ನಾನು ಎಂದರೆ ನಂಗಿಷ್ಟ' ಎಂದು ಬರೆದುಕೊಂಡಿದ್ದಾರೆ.
ಖಾಸಗಿ ವಾಹಿನಿತ ಪತ್ರಕರ್ತ ನಿಖಿಲ್ ಎನ್ನುವವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ'ನಿಜವಾದ ಅಸಮಾನತೆ ಏನ್ ಗೊತ್ತಾ ಮಮ್ತಾ ಮೇಡಂ ನಾನು ಒಂದು ಜೋಡಿ *ಲೆ, ತೊಡೆ ನಡುವೆ ಕತ್ಲು ಅಂತ ಕವನ ಬರ್ದು ಓದಿದ್ರೆ ಎರ್ರಾಬಿರ್ರಿ ಹಿಟ್ ಆಗುತ್ತೆ. ಆದರೆ ನಾನು ನಾನೆಂದರೆ ಎರಡು ಬೀಜ ಒಂದು ಕೋಲು ಅಂತ ಬರೆದ್ರೆ ಯಾರ್ ಮೂಸ್ತಾರೆ... ಬೀದಿಲೀರೋ ಹೆಣ್ ನಾಯಿನೂ ಕೇಳೋಲ್ಲ. ಇದು ನಿಜವಾದ ಅಸಮಾನತೆ!' ಎಂದು ಬರೆದಿದ್ದಾರೆ.
ನೋಡಿದವರು ಒಬ್ರಾ.. ಇಬ್ರಾ, ನಟಿ ನಡೆಯುವಾಗಲೇ ಕಳಚಿಬಿತ್ತು ಒಳ ಉಡುಪು!
ರಾಘವೇಂದ್ರ ಮೆಣಸೆ ಸುಬ್ರಹ್ಮಣ್ಯ ಅವರು ತಮ್ಮ ವಾಲ್‌ನಲ್ಲಿ''ಭಕ್ತ ಪ್ರಹ್ಲಾದ' ಚಿತ್ರದಲ್ಲಿ ರಾಜ್ಕುಮಾರ್ ಹೇಳುವ "ನಾನಾರು? ಕಶ್ಯಪ ಬ್ರಹ್ಮನ ಮಗ....." ಡೈಲಾಗು ಕ್ರಾಪ್ ಮಾಡಿ, ಅದಕ್ಕೆ ಆ ತಲೆಮಾಸಿದವ ಕವಯತ್ರಿ ವಾಚಿಸಿದ "ನಾನು ಒಂದು ಜೊತೆ ಪ್ಯಾಡೆಡ್ ಬ್ರಾ, ಥಾಂಗ್ಸು" ಅಂತೆಲ್ಲಾ ಹೇಳಿದ ಕವನದ ವಿಡಿಯೋ, ಮತ್ತದಕ್ಕೆ ಅನಂತನಾಗ್ ಅವರ "ನಿಮ್ಮಮ್ಮನ್ ಪಿಂಡ"ದ ವಿಡಿಯೋ, ಉಪೇಂದ್ರ ಸಿನಿಮಾದ "ನಾನು" ಪಾತ್ರದ ಇಂಟ್ರೋ+ಎಂಟ್ರಿ ಸೀನು, ಜೊತೆಗೊಂದು ಸಾಯಿಕುಮಾರ್ ಬೈಗುಳದ ಡೈಲಾಗೂ ಸೇರಿಸಿ ರೀಲ್ ಮಾಡಿ ಹಾಕೋಣ ಅಂತಿದ್ದೆ. ಸಾಧಾರಣವಾಗಿ ಇಂತಹಾ ತಲೆಹರಟೆ ಸಹಿಸಿಕೊಳ್ಳುವ ನನ್ನ ಫ್ರೆಂಡ್ಸೇ ಮೆಟ್ ಕಳಚಿ ಫೈಡ್ ಫೈಡ್ ಅಂತಾ ಹೊಡೀತಾರೆ ಅನ್ನೋದು ಗೊತ್ತಾಗಿ ಸುಮ್ನಾದೆ.' ಎಂದು ಟ್ರೋಲ್ ಮಾಡಿದ್ದಾರೆ.
Bengaluru: ಮೆಟ್ರೋ ನಿಲ್ದಾಣದಲ್ಲೇ ಯುವ ಜೋಡಿಯ ರೋಮ್ಯಾನ್ಸ್, ಇದೆಂಥಾ ಅಸಹ್ಯ ಎಂದ ನೆಟ್ಟಿಗರು!
ಇಷ್ಟೆಲ್ಲಾ ಚರ್ಚೆಗಳ ನಡುವೆ ಕೊನೆಯ ಮಾತೇನೆಂದರೆ..'ನಾನು ನಾನು ಎಂದು ಮೆರೆಯಬೇಡ ಮೂಡ, ನಾನು ಎಂಬುದು ಮಣ್ಣು ಮರೆತು ಹೋಗಬ್ಯಾಡ..' ಎನ್ನುವ ಸಿ.ಅಶ್ವತ್ ಅವರ ಹಾಡಿನ ಸಾಲುಗಳು..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.