
ಆಕೆಗೆ ಬಾಲ್ಯದಿಂದಲೇ ನಾಟ್ಯಕಲೆ (Dance) ಸಿದ್ಧಿಸಿದೆ. ಕಾಲಿಗೆ ನೂಪುರಗಳನ್ನು ಕಟ್ಟಿ ಕುಣಿದರೆ ಸಾಕು ಮನಸ್ಸು (Mind) ಪ್ರಫುಲ್ಲಗೊಳ್ಳುತ್ತದೆ. ಮನಸ್ಸು ಸಂತೋಷದಿಂದ ಬಾನಾಡಿಯಲ್ಲಿ ಹಾರಾಡುತ್ತದೆ. ನೂರಾರು ಜನರು ಆಕೆಯ ನಾಟ್ಯವನ್ನು ನೋಡಿ ಮನತುಂಬಿಕೊಳ್ಳುತ್ತಾರೆ. ಈಕೆಯೇ ಸೋಹಿನಿ ಕಾರಂತ್. ಮೈ ಮನದಲ್ಲೂ ನೃತ್ಯವನ್ನೇ ತುಂಬಿಕೊಂಡಿರುವ ನಾಟ್ಯಪ್ರೇಮಿ. ಸೋಹಿನಿ ತಮ್ಮ ಮೂರರ ಹರೆಯದಿಂದಲೂ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಪುಣೆಯಲ್ಲಿ ಭರತನಾಟ್ಯ (Bharathnatyam)ವನ್ನು ಕಲಿಯುವ ಮೂಲಕ ಅವರು ತಮ್ಮ ನೃತ್ಯಾಭ್ಯಾಸವನ್ನು ಪ್ರಾರಂಭಿಸಿದರು.
ಲಕ್ನೋದಲ್ಲಿ ಗುರು ಶ್ರೀಮತಿ ನಿವೇದಿತಾ ಭಟ್ಟಾಚಾರ್ಯ ಅವರ ಮೂಲಕ ಕೇವಲ 6 ವಯಸ್ಸಿದ್ದಾಗಲೇ ಕಥಕ್ (Kathak) ಕಲಿಯಲು ಆರಂಭಿಸಿದರು. ಲಕ್ನೋದಿಂದ ನಂತರದ ದಿನಗಳಲ್ಲಿ ಬೆಂಗಳೂರಿಗೆ ಬರಬೇಕಾದಾಗ ತಮ್ಮ ಗುರುಗಳಾದ ನಿರುಪಮಾ ರಾಜೇಂದ್ರ ಮತ್ತು ಟಿ.ಡಿ.ರಾಜೇಂದ್ರ ಮಾರ್ಗದರ್ಶನದಲ್ಲಿ ಅಭಿನವ ಡ್ಯಾನ್ಸ್ ಕಂಪನಿಯಲ್ಲಿ ಕಥಕ್ ಕಲಿಯಲು ಆರಂಭಿಸಿದರು. ಕಳೆದ 15 ವರ್ಷಗಳಲ್ಲಿ ನೃತ್ಯ ತರಬೇತಿ ಪಡೆಯುತ್ತಿರುವ ಸೋಹಿನಿ ಕಾರಂತ್ ಪ್ರಸ್ತುತ ಅಭಿನವ ಡ್ಯಾನ್ಸ್ ಕಂಪೆನಿಯಲ್ಲಿ 2020ರಿಂದ ಪ್ರಾಧ್ಯಾಪಕರಾಗಿ, ನೃತ್ಯ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಗುರು ದಿವ್ಯಾಂಗ್ ವಕೀಲ್ ಅವರ ಮಾರ್ಗದರ್ಶನದಲ್ಲಿ ತಾಲ್ ವಿದ್ಯಾ ಮತ್ತು ತಬಲಾವನ್ನು ಸಹ ಕಲಿಯುತ್ತಿದ್ದಾರೆ.
ಏನ್ ಮಾಡಿದ್ರೂ ತೂಕ ಕಡಿಮೆಯಾಗ್ತಿಲ್ಲ ಅನ್ನೋ ಚಿಂತೇನಾ? ಜುಂಬಾ ಡ್ಯಾನ್ಸ್ ಮಾಡಿ ನೋಡಿ
ಸೋಹಿನಿ ಕಾರಂತ್ ಕಥಕ್‌ನಲ್ಲಿ ಅದೆಷ್ಟು ಪರಿಣಿತಿ ಹೊಂದಿದ್ದಾರೆಂದರೆ ಕಥಕ್‌ನ ಪ್ರಮುಖ ಭಾಗಗಳಲ್ಲಿ ಒಂದಾದ ಚಕ್ರ ತೆಗೆದುಕೊಳ್ಳುವುದು, ಮೂವಿಂಗ್ ಮೊದಲಾದ ಅಭ್ಯಾಸಗಳನ್ನು ಸುಲಭವಾಗಿ ಮಾಡುತ್ತಾರೆ. ಮಾತ್ರವಲ್ಲ ವೇಗವುಳ್ಳ ಪಾದ ಮತ್ತು ಆಹ್ಲಾದಕರ ಸ್ವಭಾವವು ಕಥಕ್‌ನಲ್ಲಿ ಅಪರೂಪವಾಗಿದೆ. ಆದರೆ ಸೋಹಿನಿ ಕಾರಂತ್ ಇದೆಲ್ಲದರಲ್ಲೂ ಅತ್ಯುತ್ತಮ ಪರಿಣತಿಯನ್ನು ಹೊಂದಿದ್ದಾರೆ.
ಸೋಹಿನಿ ಅವರು 8 ವರ್ಷ ವಯಸ್ಸಿನಿಂದಲೂ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಹಲವಾರು ಪ್ರತಿಷ್ಠಿತ ಪ್ರದರ್ಶನಗಳಲ್ಲಿ ಭಾಗವಾಗಿದ್ದಾರೆ. ಹೈದರಾಬಾದ್ ರಾಜ್‌ಕೋಟ್, ಉದಯಪುರ, ಚೆನ್ನೈ, ದೆಹಲಿ, ಮುಂಬೈ, ಲಕ್ನೋ, ಕೊಯಮತ್ತೂರು, ಬೆಂಗಳೂರು ಸೇರಿದಂತೆ ದೇಶಾದ್ಯಂತ ವಿವಿಧೆಡೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಚೀನಾ, ಸಿಂಗಾಪುರ್ ಸೇರಿ ವಿದೇಶಗಳಲ್ಲೂ ಕಥಕ್ ಪ್ರದರ್ಶನ ನೀಡಿರುವ ಹೆಗ್ಗಳಿಕೆ ಇವರದ್ದು.
ಜೂನ್ 10ರಂದು ಕಾರ್ಯಕ್ರಮ
ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಡಿಪಾರ್ಟ್‌ಮೆಂಟ್ ಆಫ್ ಕನ್ನೆಡ, ಯೂತ್ ಎಂಪರ್‌ಮೆಂಟ್ ಆಂಡ್ ಸ್ಪೋರ್ಟ್ಸ್ ಫೆಡರೇಷನ್ ಅಫ್ ಇಂಟರ್ ನ್ಯಾಷನಲ್ ಸ್ಟೂಡೆಂಟ್ ಅಸೋಸಿಯೇಷನ್ ಸಹಯೋಗದಲ್ಲಿ ನಾಳೆ ಅಂದರೆ ಜೂನ್ 10ರಂದು ಸೋಹಿನಿ ಕಾರಂತ್ ನೃತ್ಯ ಕಾರ್ಯಕ್ರಮ ನಡೆಯಲಿದೆ. ಜೆಸಿ ರೋಡ್‌ನ ಕನ್ನಡ ಭವನದಲ್ಲಿರುವ ನಯನಾ ಆಡಿಟೋರಿಯಂನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
2017ರಲ್ಲಿ ರಂಗಪ್ರವೇಶ
ಸೋಹಿನಿ ಕಾರಂತ್ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದಿದ್ದಾರೆ ಮತ್ತು ಪೇಂಟರ್ ಕೂಡ ಆಗಿದ್ದಾರೆ. ಶಿಕ್ಷಣದ ಹೊರತಾಗಿ ಸಂಗೀಯ ಮತ್ತು ಯೋಗದ ಕಡೆಗೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಔಪಚಾರಿಕ ತರಬೇತಿಯನ್ನು ಹೊಂದಿದ್ದರು. ಗುರು ಅಭಿಜಿತ್ ಶೆಣೈ ಮತ್ತು ಪಂ. ವೆಂಕಟೇಶ ಗೋಡ್ಕಿಂಡಿ ಅವರ ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಶ್ರೀ ಶ್ರೀ ಸ್ಕೂಲ್ ಆಫ್ ಯೋಗ ಸಂಸ್ಥೆಯಲ್ಲಿ ಯೋಗ ತರಬೇತುದಾರರೂ ಆಗಿದ್ದಾರೆ.
ಡಾನ್ಸ್ ಮಾಡುತ್ತಲೇ ನಿದ್ದೆಗೆ ಜಾರಿದ ಪುಟಾಣಿ: ವಿಡಿಯೋ ವೈರಲ್
ಏಕವ್ಯಕ್ತಿ ಪ್ರದರ್ಶನಗಳು
ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಸಮ್ಮುಖದಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮ,ಕವಿಗುರು ಸ್ಮೃತಿ - ಕಲಾಶ್ರಮದಿಂದ ನೃತ್ಯೋತ್ಸವ, ಕನಸು ಹಬ್ಬ 2021, ನಟನೋತ್ಸವ-ರೋಟರಿ ಕ್ಲಬ್ ಬೆಂಗಳೂರು, ಅನನ್ಯಾ-ಸೇವಾಸದನ್, ಆಲಾಪ್-ಬೆಸ್ಟ್ ಫೂಟ್ ಫಾರ್ವರ್ಡರ್, ಸೃಜನಾ-ಅಭಿನವ್ ಡ್ಯಾನ್ಸ್ ಕಂಪೆನಿ, BHELನಲ್ಲಿ ಸ್ವಾತಂತ್ರ್ಯ ದಿನಾಚರಣೆ, ಬನಸಾಶಂಕರಿ ಸಾಂಸ್ಕೃತಿಕ ಸಂಘ, ರಾಮ ನವಮಿ ಹಬ್ಬಕ್ಕೆ ದಿಗ್ವಿಜಯ್ ಟಿ.ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರೇಮಾ ಕಾರಂತರ ಸ್ಮರಣಾರ್ಥ ಮಕ್ಕಳ ಹಬ್ಬ, ಕುವೆಂಪು ಬಯಲು ರಂಗ ಮಂದಿರ ಮೊದಲಾದೆಡೆ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ.
ಅಂತರರಾಷ್ಟ್ರೀಯ ಪ್ರದರ್ಶನಗಳು
ಮಾರ್ಚ್ 2014ರಲ್ಲಿ ಚೀನಾ-ಅಭಿನವ ನೃತ್ಯ ಕಂಪನಿ, ಡಿಸೆಂಬರ್ 2015 ರಲ್ಲಿ ಸಿಂಗಾಪುರ - (ಸೋಲೋ)ದಲ್ಲಿ ಪ್ರದರ್ಶನ ನೀಡಿದ್ದಾರೆ.
ಅಭಿನವ ನೃತ್ಯ ಸಂಸ್ಥೆಯ ಭಾಗವಾಗಿ ಪ್ರದರ್ಶನಗಳು
ಅಭಿನವ ನೃತ್ಯ ಸಂಸ್ಥೆಯ ಭಾಗವಾಗಿ ವಿಜಯನಗರ ಜಿಲ್ಲೆ ಉದ್ಘಾಟನೆ, ಗೋಸಂರಕ್ಷಣಾ, ಶ್ರೀ ಪೇಜಾವರ ಶ್ರೀಗಳವರ 80ನೇ ಸಂಭ್ರಮ, ಬೆಂಗಳೂರು ಗಣೇಶ ಉತ್ಸವ, ಆಳ್ವಾಸ್ ನುಡಿಸಿರಿ, ಬೆಂಗಳೂರು ಅಂತರಾಷ್ಟ್ರೀಯ ಕಲಾ ಉತ್ಸವ, ಬನ್ನಂಜೆ ಗೋವಿಂದಾಚಾರ್ಯರ 80ನೇ ಜನ್ಮದಿನಾಚರಣೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 10 ನೇ ವಾರ್ಷಿಕೋತ್ಸವ, ರಾಮ ಕಥಾ ವಿಸ್ಮಯ ನಿರ್ಮಾಣ, ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಸ್ಥಾಪಕರ ದಿನಾಚರಣೆ ಮೊದಲಾದೆಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.