Women Health : ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತೆ ಈ ಐದು ಕ್ಯಾನ್ಸರ್

Suvarna News   | Asianet News
Published : Feb 15, 2022, 01:22 PM IST
Women Health : ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತೆ ಈ ಐದು ಕ್ಯಾನ್ಸರ್

ಸಾರಾಂಶ

ಮಹಿಳೆಯರ ದೇಹ ಪ್ರತಿ ಹಂತದಲ್ಲೂ ಬದಲಾಗ್ತಿರುತ್ತದೆ. ಮುಟ್ಟಿನ ಸಂದರ್ಭದಲ್ಲಿ,ಗರ್ಭಧಾರಣೆ ವೇಳೆ,ಹೆರಿಗೆ ಹಾಗೂ ಹೆರಿಗೆ ನಂತ್ರ ಹೀಗೆ ಅನೇಕ ಬಾರಿ ಹಾರ್ಮೋನ್ ಏರುಪೇರಾಗುತ್ತದೆ. ಆದ್ರೆ ಇದು ಸಾಮಾನ್ಯವೆಂದುಕೊಳ್ಳುವ ಬದಲು ಆರಂಭದಲ್ಲಿಯೇ ಚಿಕಿತ್ಸೆ ಪಡೆದಲ್ಲಿ ಕ್ಯಾನ್ಸರ್ ನಿಂದ ದೂರವಿರಬಹುದು.   

ಇತ್ತೀಚಿನ ದಿನಗಳಲ್ಲಿ ಆರೋಗ್ಯ (Health) ದಿಂದಿರುವ ವ್ಯಕ್ತಿಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯ ಅನೇಕರನ್ನು ಕಾಡ್ತಿದೆ. ಚಿತ್ರವಿಚಿತ್ರ ಕಾಯಿಲೆ (Disease)ಗಳು ಜನರನ್ನು ಬಲಿ ಪಡೆಯುತ್ತಿವೆ. ಅದ್ರಲ್ಲಿ ಮಾರಕ ಕ್ಯಾನ್ಸರ್ ಕೂಡ ಒಂದು. ಕ್ಯಾನ್ಸರ್ ವ್ಯಕ್ತಿಯನ್ನು ಸಾವಿನ ಬಾಗಿಲಿಗೆ ಕೊಂಡೊಯ್ಯುತ್ತದೆ. ಅನೇಕ ಕ್ಯಾನ್ಸರ್ ಗಳು ಆರಂಭದಲ್ಲಿ ಯಾವುದೇ ಸೂಚನೆ ನೀಡುವುದಿಲ್ಲ. ಕೊನೆಯ ಹಂತದಲ್ಲಿ ಪತ್ತೆಯಾಗುವ ಕಾರಣ ಫಲಿತಾಂಶ ಶೂನ್ಯವಾಗಿರುತ್ತದೆ. ಎಷ್ಟೇ ಚಿಕಿತ್ಸೆ ನೀಡಿದರೂ ಜೀವ ಉಳಿಸಲು ಸಾಧ್ಯವಾಗುವುದಿಲ್ಲ. ಕ್ಯಾನ್ಸರ್ ಪುರುಷ  ಮತ್ತು ಮಹಿಳೆ ಇಬ್ಬರನ್ನೂ ಕಾಡುತ್ತದೆ. ಸಂಶೋಧನೆಯ ಪ್ರಕಾರ, ಪ್ರತಿ ವರ್ಷ ಸುಮಾರು 7 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತವೆ. ಅದರಲ್ಲಿ ಶೇಕಡಾ 50ರಷ್ಟು ಮಹಿಳೆಯರು ಎಂಬುದು ಅಚ್ಚರಿಯ ವಿಷ್ಯ. ಇದಕ್ಕೆ ಮುಖ್ಯ ಕಾರಣ ಮಹಿಳೆಯರ ನಿರ್ಲಕ್ಷ್ಯ.  ರೋಗಲಕ್ಷಣಗಳನ್ನು ಸಮಯಕ್ಕೆ ಗುರುತಿಸಿದರೆ ಸಾವಿನ ಅಪಾಯವನ್ನು ತಪ್ಪಿಸಬಹುದು. ಆದ್ರೆ ಮಹಿಳೆಯರು ರೋಗ ಲಕ್ಷಣಗಳನ್ನು ನಿರ್ಲಕ್ಷ್ಯಿಸಿ, ವೈದ್ಯರ ಬಳಿ ಹೋಗುವುದಿಲ್ಲ. ಇದು ಅವರ ಜೀವಕ್ಕೆ ಕುತ್ತು ತರ್ತಿದೆ. ಇಂದು ಮಹಿಳೆಯಲ್ಲಿ ಕಾಡುವ ಕ್ಯಾನ್ಸರ್ ಹಾಗೂ ಅದ್ರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡ್ತೇವೆ. 

ಮಹಿಳೆಯರಲ್ಲಿ ಕ್ಯಾನ್ಸರ್  (Women Cancer): ಮಹಿಳೆಯರಲ್ಲಿ ಬರುವ ಕ್ಯಾನ್ಸರ್ ನಲ್ಲಿ ಶೇಕಡಾ  6-8 ಕ್ಯಾನ್ಸರ್ ಪ್ರಕರಣಗಳು ಆನುವಂಶಿಕವಾಗಿ ಬರುತ್ತವೆ. ಮಹಿಳೆಯರ ತಪ್ಪು ಜೀವನಶೈಲಿ, ಬೊಜ್ಜು, ಧೂಮಪಾನ ಮತ್ತು ಅತಿಯಾದ ಮದ್ಯ ಸೇವನೆ, ವಾಯು ಮತ್ತು ಜಲ ಮಾಲಿನ್ಯ ಕೂಡ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಮುಟ್ಟು ಬೇಗ ಶುರುವಾಗುವುದು ಮತ್ತು ಮುಟ್ಟು ಸಮಯಕ್ಕೆ ಸರಿಯಾಗಿ ಆಗದಿರುವುದು ಕೂಡ ಕ್ಯಾನ್ಸರ್ ಗೆ ದಾರಿ ಮಾಡಿ ಕೊಡುತ್ತದೆ.

ಮಹಿಳೆಯರನ್ನು ಕಾಡುವ ಕ್ಯಾನ್ಸರ್ ವಿಧಗಳು

ಸ್ತನ ಕ್ಯಾನ್ಸರ್ : ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದ್ದು, ಪ್ರತಿ ವರ್ಷ ಸುಮಾರು 2.1 ಮಿಲಿಯನ್ ಮಹಿಳೆಯರು ಇದಕ್ಕೆ ತುತ್ತಾಗುತ್ತಿದ್ದಾರೆ. ಇದರ ಆರಂಭಿಕ ಲಕ್ಷಣಗಳು ಸ್ತನದಲ್ಲಿ ಉಂಡೆಗಳು, ಸ್ತನ ಗಾತ್ರದಲ್ಲಿ ಹಠಾತ್ ಬದಲಾವಣೆಗಳು, ಅಸಹಜ ಮೊಲೆತೊಟ್ಟುಗಳ ವಿಸರ್ಜನೆಯಾಗಿದೆ. ಸ್ತನದಲ್ಲಿ ಯಾವುದೇ ಸಣ್ಣ ಬದಲಾವಣೆ ಕಾಣಿಸಿಕೊಂಡರೂ ಮುಜುಗರಪಟ್ಟುಕೊಳ್ಳದೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

ಗರ್ಭಾಶಯದ ಕ್ಯಾನ್ಸರ್ : ಮುಟ್ಟಿನ ಸಂದರ್ಭದಲ್ಲಿ ಹೆಚ್ಚು ರಕ್ತಸ್ರಾವವಾದ್ರೆ ಅದನ್ನು ನಿರ್ಲಕ್ಷಿಸಬೇಡಿ. ಒಂದು ವಾರಕ್ಕಿಂತ ಹೆಚ್ಚು ಕಾಲ ನಿರಂತರ ರಕ್ತಸ್ರಾವವಾಗ್ತಿದ್ದರೆ ಇದು ಗರ್ಭಾಶಯದ ಕ್ಯಾನ್ಸರ್ ಗೆ ಕಾರಣವಾಗಿರಬಹುದು. ಸಂಭೋಗದ ನಂತರ ರಕ್ತಸ್ರಾವ ಅಥವಾ ಮುಟ್ಟಿನ ನಡುವಿನ ಅವಧಿಯಲ್ಲಿ  ರಕ್ತಸ್ರಾವವಾಗ್ತಿದ್ದರೆ ಅದನ್ನು ನಿರ್ಲಕ್ಷ್ಯಿಸಿಬೇಡಿ. 

ಕೊಲೊರೆಕ್ಟಲ್ ಕ್ಯಾನ್ಸರ್ : ಇದು ಮಹಿಳೆಯರಲ್ಲಿ ಮೂರನೇ ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಆಗಿದೆ. ಇದು ದೊಡ್ಡ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಅತಿಸಾರ ಅಥವಾ ಮಲಬದ್ಧತೆ, ಮಲದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ.

Urinary Tract Infection: ಸಂತಾನೋತ್ಪತ್ತಿಗೂ ತರುತ್ತಾ ಕುತ್ತು?

ಗರ್ಭಕಂಠದ ಕ್ಯಾನ್ಸರ್ : ವರದಿಯ ಪ್ರಕಾರ, ಗರ್ಭಕಂಠದ ಕ್ಯಾನ್ಸರ್‌ನಿಂದ ಪ್ರತಿ ವರ್ಷ ಸುಮಾರು 63,000 ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 40 ವರ್ಷ ವಯಸ್ಸಿನ ನಂತರ ಮುಟ್ಟು 1 ವರ್ಷದವರೆಗೆ ನಿಲ್ಲುವುದಿಲ್ಲ ಅಥವಾ ಹೆಚ್ಚು ರಕ್ತಸ್ರಾವ ಗರ್ಭಕಂಠದ ಕ್ಯಾನ್ಸರ್ ಲಕ್ಷಣವಾಗಿರಬಹುದು. ಈ ಸಂದರ್ಭದಲ್ಲಿ, ಮಹಿಳೆಯರು ಸ್ತ್ರೀರೋಗತಜ್ಞರನ್ನು ಸಂಪರ್ಕಿಸಬೇಕು.

ಅಂಡಾಶಯ ಕ್ಯಾನ್ಸರ್ : ಹೊಟ್ಟೆ ಉಬ್ಬುವುದು,ಅನಿಯಮಿತ ಕರುಳಿನ ಚಲನೆ, ಹಠಾತ್ ತೂಕ ನಷ್ಟದಂತಹ ಲಕ್ಷಣಗಳು ಅಂಡಾಶಯದ ಕ್ಯಾನ್ಸರ್ ನ ಲಕ್ಷಣವಾಗಿದೆ. ಆದ್ರೆ ಇದನ್ನು ಅನೇಕ ಮಹಿಳೆಯರು ಗಮನಿಸುವುದಿಲ್ಲ. ಇದನ್ನು ಸಾಮಾನ್ಯ ಸಮಸ್ಯೆಯೆಂದು ನಿರ್ಲಕ್ಷ್ಯಿಸುತ್ತಾರೆ.

WEIRD LOVE STORY : ದೆವ್ವವನ್ನು ಮದುವೆಯಾಗ್ತಾಳಂತೆ ಈಕೆ, ವಿವಾಹದ ದಿನಾಂಕ ವಿಷಯಕ್ಕೆ ಜಗಳವಾಗ್ತಿದೆಯಂತೆ!

ಕ್ಯಾನ್ಸರ್ ನಿಂದ ರಕ್ಷಣೆ ಹೇಗೆ? : ಆರೋಗ್ಯಕರ ಜೀವನಶೈಲಿ ಇದಕ್ಕೆ ಮುಖ್ಯವಾಗುತ್ತದೆ. ನಿಯಮಿತ ವ್ಯಾಯಾಮ, ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು ಒಳ್ಳೆಯದು. ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಮೂಲಕ ಮಹಿಳೆಯರು ಕ್ಯಾನ್ಸರ್ ಅಪಾಯವನ್ನು ತಪ್ಪಿಸಬಹುದು.
ಇದಲ್ಲದೆ, ನಿಯಮಿತವಾಗಿ ಪ್ಯಾಪ್ ಸ್ಮೀಯರ್, ಎಂಡೊಮೆಟ್ರಿಯಂ, ಅಲ್ಟ್ರಾಸೋನೋಗ್ರಫಿ ಮಾಡುವುದರಿಂದ ಕ್ಯಾನ್ಸರ್ ಅನ್ನು ಸಮಯಕ್ಕೆ ಗುರುತಿಸಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!