ಬೊಜ್ಜು ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಉತ್ತಮ ಆರೋಗ್ಯಕ್ಕೆ ತೂಕ ನಿಯಂತ್ರಣ ಮುಖ್ಯ. ಆದ್ರೆ ಕೆಲವೊಮ್ಮೆ ತೂಕ ಹೆಚ್ಚಿದ್ದರೂ, ಆಕ್ಟಿವ್ ಆಗಿರುವ ದೇಹದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸಕಾರಾತ್ಮಕ ಆಲೋಚನೆ ಮೂಲಕ ಹೆಜ್ಜೆಯಿಟ್ಟರೆ ಸಾಧನೆ ಕಷ್ಟವಲ್ಲ.
ತೂಕ (Weight )ಏರಿಕೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆ (Problem)ಯಾಗಿದೆ. ಅನೇಕರು ಏರುತ್ತಿರುವ ತೂಕ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಬೊಜ್ಜು ಹೆಚ್ಚಾಗಿದೆ ಎಂಬ ಚಿಂತೆ ಕೆಲವರನ್ನು ನಿರಂತರವಾಗಿ ಕಾಡ್ತಿರುತ್ತದೆ. ಇದಕ್ಕಾಗಿ ಡಯಟ್ (Diet),ಯೋಗ (Yoga) ಹೀಗೆ ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿ ಸಣ್ಣಗಾಗ್ತಾರೆ. ಆದ್ರೆ ಕೆಲವರು ತೂಕ ಹೆಚ್ಚಾದ್ರೂ ತಲೆಕೆಡಿಸಿಕೊಳ್ಳುವುದಿಲ್ಲ. ನೋಡಲು ದಪ್ಪಗಿದ್ದರೂ ಆಕ್ಟಿವ್ ಆಗಿರುವ ಅನೇಕರಿದ್ದಾರೆ. ದೇಹದ ಆಕಾರವನ್ನೇ ಅವರು ಪ್ಲಸ್ ಪಾಯಿಂಟ್ ಮಾಡಿಕೊಂಡಿರುತ್ತಾರೆ. ದಪ್ಪಗಿದ್ರೂ ಸಾಕಷ್ಟು ಹಣ ಗಳಿಸುತ್ತಿರುವ ಅನೇಕರು ನಮ್ಮಲ್ಲಿದ್ದಾರೆ. ಸಣ್ಣಕಿದ್ದಾಗ ಹೆಚ್ಚು ಗಳಿಸಲು ಸಾಧ್ಯವಾಗದ ಮಹಿಳೆಯೊಬ್ಬಳು ದಪ್ಪಗಾದ್ಮೇಲೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. 100 ಕೆಜಿಗಿಂತ ದಪ್ಪಗಿರುವ ಮಹಿಳೆ ತಿಂಗಳಿಗೆ 10 ಲಕ್ಷ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. ಇಂದು ಆ ಮಹಿಳೆಯ ಬಗ್ಗೆ ಹೇಳ್ತೆವೆ.
ಯಾರು ಈ ಮಹಿಳೆ? : ಸುಮಾರು 101 ಕೆ.ಜಿ ತೂಕವಿರುವ ಈ ಮಹಿಳೆ ಹೆಸರು ಡೇನಿಯಲ್ ಗಾರ್ಡಿನರ್ (Danielle Gardiner). ಡೇನಿಯಲ್ ಗಾರ್ಡಿನರ್ ಮಹಿಳೆ ವಯಸ್ಸು 33 ವರ್ಷ. ಆಕೆ ಮಾಡೆಲ್. ಅನೇಕ ಉತ್ಪನ್ನಗಳಿಗೆ ಈಜುಡುಗೆ ತೊಟ್ಟು ಆಕೆ ಮಾಡಲಿಂಗ್ ಮಾಡ್ತಾಳೆ. ದಪ್ಪಗಿದ್ದರೂ ತನ್ನ ದೇಹವನ್ನು ಆಕೆ ತುಂಬಾ ಪ್ರೀತಿ ಮಾಡ್ತಾಳೆ.
ಡೇನಿಯಲ್ ಪ್ರಕಾರ, ಆಕೆಯ ದೇಹ ನೋಡಿ ಅನೇಕರು ಟ್ರೋಲ್ ಮಾಡ್ತಾರಂತೆ. ಕೆಟ್ಟ ಕೆಟ್ಟ ಶಬ್ಧಗಳ ಬಳಕೆ ಮಾಡ್ತಾರಂತೆ. ಆದ್ರೆ ಡೇನಿಯಲ್ ಇದ್ಯಾವುದಕ್ಕೂ ಹೆದರಲಿಲ್ಲ. ಆಕೆಗೆ ತನ್ನ ಕೆಲಸದ ಮೇಲೆ ವಿಶ್ವಾಸವಿದೆಯಂತೆ. ಡೇನಿಯಲ್, ನೈಕ್ ಮತ್ತು ಪ್ರೆಟಿ ಲಿಟಲ್ ಥಿಂಗ್‌ನಂತಹ ಹಲವಾರು ದೊಡ್ಡ ಹೆಸರಿನ ಬ್ರ್ಯಾಂಡ್‌ಗಳಿಗೆ ಮಾಡೆಲಿಂಗ್ ಮಾಡಿದ್ದಾಳೆ.
ಒಂದು ಮಾಡೆಲಿಂಗ್ ಶೂಟ್ ಗೆ ಇಷ್ಟು ಸಂಭಾವನೆ : ಡೇನಿಯಲ್ ಸಂಪಾದನೆಯಲ್ಲೂ ಹಿಂದೆ ಬಿದ್ದಿಲ್ಲ. ಆಕೆಗೆ ಬೇಡಿಕೆ ಹೆಚ್ಚಿದೆ. ಒಂದು ಮಾಡಲಿಂಗ್ ಶೂಟ್ ಗೆ ಡೇನಿಯಲ್ 66,455 ರೂಪಾಯಿ ಅಂದ್ರೆ 650 ಪೌಂಡ್ ಸಂಭಾವನೆ ಪಡೆಯುತ್ತಾಳಂತೆ. ವಾರದಲ್ಲಿ ಎರಡು ಶೂಟಿಂಗ್ ಮಾಡ್ತಾಳೆ ಡೇನಿಯಲ್. ಅಂದ್ರೆ ತಿಂಗಳಲ್ಲಿ 8 ಮಾಡಲಿಂಗ್ ಶೂಟ್ ಮಾಡುವ ಡೇನಿಯಲ್ 5200 ಪೌಂಡ್ ಅಂದ್ರೆ 5.31 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾಳೆ.
ಯುನೈಟೆಡ್ ಕಿಂಗ್ಡಮ್‌ನ ಎಸೆಕ್ಸ್ ನ ಹಾರ್ನ್‌ಚರ್ಚ್‌ನಲ್ಲಿ ಡೇನಿಯಲ್ ವಾಸಿಸುತ್ತಾಳೆ. ಆಕೆಯ ದೇಹದ ಆಕಾರವೇ ಆಕೆಯ ಗಳಿಕೆಯ ಮೂಲವಾಗಿದೆ. ಪ್ರತಿ ತಿಂಗಳು ಮಾಡೆಲಿಂಗ್ ಶೂಟ್‌ಗಳ ಜೊತೆ ಬ್ರ್ಯಾಂಡ್ ಪ್ರಚಾರದಲ್ಲಿ ಬ್ಯುಸಿಯಿರುವ ಡೇನಿಯಲ್ ತಿಂಗಳಲ್ಲಿ ಸುಮಾರು 10 ಲಕ್ಷ ರೂಪಾಯಿ ಗಳಿಸ್ತಾಳಂತೆ.
Shilpa Shetty Diet: ಫಿಟ್ ಆಗಿರಲು ಕರಾವಳಿ ಬೆಡಗಿ ತಿನ್ನೋದೇನು?
undefined
ಡೇನಿಯಲ್ ಗೆ ಡ್ರೆಸ್, ಜಿಮ್ ಬಟ್ಟೆ ಸೇರಿದಂತೆ 40 ಉತ್ಪನ್ನಗಳನ್ನು ಕಳುಹಿಸಲಾಗುತ್ತದೆ. ಅದನ್ನು ಧರಿಸಿ,ಫೋಟೋ ಶೂಟ್ ಮಾಡಿ ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ತಾಳಂತೆ. ಈ ಫೋಟೋಗಳನ್ನು 35 ಸಾವಿರದಿಂದ 36 ಸಾವಿರ ಜನರು ವೀಕ್ಷಿಸುತ್ತಾರಂತೆ. ಮೂರು ಸ್ಲೈಡ್ ಫೋಟೋಕ್ಕೆ ಡೇನಿಯಲ್ 35 ಸಾವಿರ ರೂಪಾಯಿ ಖರೀದಿ ಮಾಡ್ತಾಳೆ.
ಉತ್ಪನ್ನಗಳ ಫೋಟೋಕ್ಕೆ ಹೆಚ್ಚೆಚ್ಚು ಲೈಕ್ಸ್ ಬರ್ತಿದ್ದಂತೆ ಹೆಚ್ಚೆಚ್ಚು ಹಣ ಸಿಗುತ್ತದೆ. ಇದಲ್ಲದೆ ಉತ್ಪನ್ನವೊಂದರ ಸಾಮಾಜಿಕ ಜಾಲತಾಣದ ಮ್ಯಾನೇಜರ್ ಆಗಿಯೂ ಆಕೆ ಕೆಲಸ ಮಾಡ್ತಿದ್ದಾಳೆ.
Women Health : ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತೆ ಈ ಐದು ಕ್ಯಾನ್ಸರ್
ಡೇನಿಯಲ್ ತೂಕ ಏರಿದ್ದು ಹೇಗೆ? : ಡೇನಿಯಲ್ 21ನೇ ವಯಸ್ಸಿನಲ್ಲಿ ತುಂಬಾ ಸ್ಲಿಮ್ ಆಗಿದ್ದಳಂತೆ. ಆಕೆ ಪೊಲೀಸ್ ಆಗಿ ಕೆಲಸ ಮಾಡ್ತಿದ್ದಳಂತೆ. ಪೊಲೀಸ್ ಹುದ್ದೆಯಲ್ಲಿರುವಾಗ ಸ್ಲಿಮ್ ಆಗಿರುವುದು ಅನಿವಾರ್ಯ. ಆದ್ರೆ 22ನೇ ವಯಸ್ಸಿನಲ್ಲಿ ಮಗುವಾಗ್ತಿದ್ದಂತೆ ಡೇನಿಯಲ್ ತೂಕ ಹೆಚ್ಚಾಗಿತ್ತಂತೆ. ಡೇನಿಯಲ್ ಕಷ್ಟಪಟ್ಟು 22 ಕೆಜಿ ಇಳಿಸಿದ್ದಳಂತೆ. ಆದ್ರೆ ತೂಕ ಇಳಿಕೆ ಆಕೆಗೆ ಖುಷಿ ನೀಡಲಿಲ್ಲವಂತೆ. ಸಿಂಗಲ್ ಮದರ್ ಆಗಿದ್ದ ಡೇನಿಯಲ್ ಗೆ ಮಗು ನೋಡಿಕೊಂಡು ಕೆಲಸ ಮಾಡುವುದು ಕಷ್ಟವಾಗಿತ್ತಂತೆ. ಚಾಕೋಲೇಟ್,ಚಿಪ್ಸ್ ಹೆಚ್ಚು ತಿನ್ನುತ್ತಿದ್ದ ಡೇನಿಯಲ್, ಕೆಲಸ ಬಿಟ್ಟು ಮನೆಯಲ್ಲೇ ಇದ್ದಾಗ ಮತ್ತೆ ತೂಕ ಹೆಚ್ಚಾಯ್ತಂತೆ.