
ಮಹಿಳೆ ತನ್ನ ಜೀವಿತಾವಧಿಯಲ್ಲಿ ಸಾಕಷ್ಟು ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಾಳೆ. ಮುಟ್ಟಿನ ದಿನಗಳಲ್ಲಿ ಮಾತ್ರವಲ್ಲ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಕೂಡ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಮಾತ್ರವಲ್ಲದೆ ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ. ವಯಸ್ಸಾದಂತೆ ಕಾಣುವ ಚರ್ಮ, ಸಡಲವಾಗುವ ಚರ್ಮ ಮಹಿಳೆಯರನ್ನು ಆತಂಕಕ್ಕೊಳಪಡಿಸುತ್ತದೆ. 40 ವರ್ಷ ದಾಟಿದ ಮೇಲೆ ಮಹಿಳೆ ದೇಹದಲ್ಲಿ ಬಹಳಷ್ಟುನ ಬದಲಾವಣೆ ಕಾಣಬಹುದು. 40ರ ನಂತ್ರ ಮಹಿಳೆಗೆ ಮುಟ್ಟು ನಿಲ್ಲುತ್ತದೆ. ಈ ಸಮಯದಲ್ಲಿ ತಿಂಗಳಿಗೆ ಸರಿಯಾಗಿ ಮುಟ್ಟಾಗುವುದಿಲ್ಲ. ಹಾಗೆಯೇ ಹಿಂದಿನಂತೆ ಬ್ಲೀಡಿಂಗ್ ಇರುವುದಿಲ್ಲ. ಕೆಲವರಿಗೆ ವಿಪರೀತ ಬ್ಲೀಡಿಂಗ್ ಕಾಡಿದ್ರೆ ಮತ್ತೆ ಕೆಲವರಿಗೆ ಇದು ಕಡಿಮೆ ಇರುತ್ತದೆ. ಹಾರ್ಮೋನುಗಳ ಏರುಪೇರಿನಿಂದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗ್ತಾಳೆ. ಇದು ಆಕೆ ಮುಖದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಮುಖದ ಸೌಂದರ್ಯ ಹಾಳಾಗ್ತಿದೆ ಎಂಬುದು ಗಮನಕ್ಕೆ ಬರ್ತಿದ್ದಂತೆ ಎಲ್ಲ ಮಹಿಳೆಯರೂ ದಿಗಿಲಗೊಳ್ಳುವುದು ಸಾಮಾನ್ಯ. ಆದ್ರೆ ಈ ಸಂದರ್ಭದಲ್ಲಿ ಸೌಂದರ್ಯ ಹೆಚ್ಚಿಸಲು ಅಪ್ಪಿತಪ್ಪಿಯೂ ಕೆಲ ಪ್ರಯೋಗ ಮಾಡಬಾರದು.
ಮುಟ್ಟು ನಿಲ್ಲುವ ಸಂದರ್ಭದಲ್ಲಿ ಈ ಕೆಲಸ ಮಾಡ್ಬೇಡಿ :
ಮುಖ (Face) ದ ಜಿಡ್ಡು ಕಡಿಮೆ ಮಾಡಲು ಹೋಗ್ಬೇಡಿ : ಮುಟ್ಟು ನಿಲ್ಲುವ ಸಂದರ್ಭದಲ್ಲಿ ಚರ್ಮ (skin) ದಲ್ಲಿ ಶುಷ್ಕ (dry) ತೆಯನ್ನು ನೀವು ನೋಡ್ಬಹುದು. ಮೊದಲಿಗೆ ಹೋಲಿಕೆ ಮಾಡಿದ್ರೆ ಈ ಸಮಯದಲ್ಲಿ ಚರ್ಮ ಹೆಚ್ಚು ಶುಷ್ಕವಾಗುತ್ತದೆ. ಈಗಾಗಲೇ ನೀವು ಶುಷ್ಕ ಚರ್ಮವನ್ನು ಹೊಂದಿದ್ದರೆ ಅದು ಮತ್ತಷ್ಟು ಹೆಚ್ಚಾಗಿ ಗೋಚರಿಸುತ್ತದೆ. ಆಯಿಲ್ ಸ್ಕಿನ್ ನಿಮ್ಮದಾಗಿದ್ದರೂ ಈ ಸಮಯದಲ್ಲಿ ಆಯಿಲ್ ಕಡಿಮೆ ಮಾಡುವ ಕ್ರೀಂ ಬಳಸಬೇಡಿ. ಚರ್ಮದಲ್ಲಿ ಮೊದಲೇ ಆಯಿಲ್ ಕಡಿಮೆ ಇರುವ ಕಾರಣ ನೀವು ಮತ್ತಷ್ಟು ಕಡಿಮೆ ಮಾಡುವ ಕ್ರೀಂ ಹಚ್ಚಿದ್ರೆ ಮುಖದ ಮೇಲೆ ಗೆರೆ ಕಾಣಲು ಶುರುವಾಗುತ್ತದೆ. ನಿಮ್ಮ ಸೌಂದರ್ಯ ಮತ್ತಷ್ಟು ಹದಗೆಡುತ್ತದೆ.
ಎಫ್ಫೋಲಿಯಾಟ್ ಬಳಕೆ ಬೇಡ : ಮೊದಲೇ ಹೇಳಿದಂತೆ ಚರ್ಮ ಈ ಸಮಯದಲ್ಲಿ ಹೆಚ್ಚು ಶುಷ್ಕವಾಗಿರುತ್ತದೆ. ಅದಕ್ಕೆ ನೀವು ಎಫ್ಫೋಲಿಯಾಟ್ ಮಾಡುವ ಉತ್ಪನ್ನ ಅನ್ವಯಿಸಿದ್ರೆ ಮತ್ತಷ್ಟು ಶುಷ್ಕವಾಗುತ್ತದೆ. ಎಫ್ಫೋಲಿಯಾಟ್ ನಿಂದ ಸತ್ತ ಚರ್ಮ ಹೊರಗೆ ಬರುತ್ತದೆ. ಇದು ಚರ್ಮವನ್ನು ಮತ್ತೆ ಡ್ರೈ ಮಾಡುವ ಕಾರಣ ನಿಮ್ಮ ಸೌಂದರ್ಯ ಹಾಳಾಗುತ್ತದೆ. ವಯಸ್ಸಾದಂತೆ ಹೊಸ ಚರ್ಮದ ಕೋಶ ರಚನೆಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ.
ಪೀರಿಯೆಡ್ಸ್ ಮುಂದೂಡೋಕೆ ಟ್ಯಾಬ್ಲೆಟ್ ತಿನ್ಬೇಕಿಲ್ಲ, ದಾಲ್ಚಿನ್ನಿ ಚಹಾ ಕುಡಿದ್ರೆ ಸಾಕು
ಚರ್ಮಕ್ಕೆ ಶಸ್ತ್ರಚಿಕಿತ್ಸೆ ಬೇಡ : ಈ ಸಮಯದಲ್ಲಿ ದೇಹ ಸಂಪೂರ್ಣ ಸೂಕ್ಷ್ಮವಾಗಿರುತ್ತದೆ. ಚರ್ಮದ ಆರೋಗ್ಯ ಕೂಡ ಉತ್ತಮವಾಗಿರುವುದಿಲ್ಲ. ಅಂಥ ಸಂದರ್ಭದಲ್ಲಿ ನೀವು ಅಗ್ಗದಲ್ಲಿ ಸಿಗುತ್ತೆ ಎನ್ನುವ ಕಾರಣಕ್ಕೆ ವಯಸ್ಸನ್ನು ಕಡಿಮೆ ಮಾಡುವ ಶಸ್ತ್ರಚಿಕಿತ್ಸೆ ಮೊರೆ ಹೋದ್ರೆ ಮುಗೀತು. ಯಾವುದೇ ಕಾರಣಕ್ಕೂ ವಯಸ್ಸು ಮುಚ್ಚಿಡುವ ಭರಾಟೆಯಲ್ಲಿ ಅಗ್ಗದ ಚರ್ಮ ಶಸ್ತ್ರಚಿಕಿತ್ಸೆಗೆ ಒಳಗಾಗಬೇಡಿ. ಇದು ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು. ಒಂದ್ವೇಳೆ ಶಸ್ತ್ರಚಿಕಿತ್ಸೆ ಅನಿವಾರ್ಯ ಎನ್ನುವವರು ಈ ಬಗ್ಗೆ ನುರಿತ ವೈದ್ಯರಿಂದ ಮಾಹಿತಿ ಪಡೆದ ನಂತ್ರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಿ.
Pain Free Waxing: ಮನೆಯಲ್ಲಿಯೇ ತಯಾರಿಸಿ ಚಾಕೊಲೇಟ್ ವ್ಯಾಕ್ಸ್!
ತೇವಾಂಶ ಕಡಿಮೆ ಮಾಡುವ ವಸ್ತುಗಳಿಂದ ದೂರವಿರಿ : ಎಲ್ಲ ಸಂದರ್ಭದಲ್ಲಿಯೂ ಚರ್ಮ ತೇವಾಂಶದಿಂದ ಕೂಡಿರುವುದು ಮುಖ್ಯ. ಮುಟ್ಟು ನಿಲ್ಲುವ ಸಮಯದಲ್ಲಿ ಚರ್ಮ ಮಾತ್ರವಲ್ಲ ಇಡೀ ದೇಹಕ್ಕೆ ನೀರಿನ ಅಗತ್ಯತೆ ಹೆಚ್ಚಿರುತ್ತದೆ. ದೇಹ ಸದಾ ಹೈಡ್ರೀಕರಣಗೊಂಡಿರಬೇಕು. ಹಾಗಿರಬೇಕೆಂದ್ರೆ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕು. ಕಾಫಿ ಮತ್ತು ಚಹಾ ಸೇರಿದಂತೆ ದೇಹವನ್ನು ನಿರ್ಜಲೀಕರಣಗೊಳಿಸುವ ಯಾವುದೇ ಪಾನೀಯ ಅಥವಾ ಆಹಾರ ಸೇವನೆ ಮಾಡಬಾರದು. ಆಹಾರದಲ್ಲಿ ಕೂಡ ಹೆಚ್ಚು ನೀರಿನಾಂಶವಿರುವ ಆಹಾರವನ್ನು ಸೇವನೆ ಮಾಡ್ಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.