
ಸೆಕ್ಸ್ (Sex)ಎಂದರೆ ಸಂತೋಷ (Happiness) ಮತ್ತು ತೃಪ್ತಿ (Satisfaction). ನಿಮ್ಮ ಸಂಗಾತಿಯೊಂದಿಗೆ ನಿಕಟ ಬಾಂಧವ್ಯ ಹೊಂದಲು ಸಂಭೋಗ ಮಹತ್ವದ ಹೆಜ್ಜೆಯಾಗಿದೆ. ಸೆಕ್ಸ್ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ನೀರಸ ಸೆಕ್ಸ್ ಅನೇಕರಿಗೆ ಬೋರ್ ಎನ್ನಿಸುತ್ತದೆ. ಹಾಗಾಗಿ ಕೆಲ ಪ್ರಯೋಗಗಳನ್ನು ಮಾಡಲು ಮುಂದಾಗ್ತಾರೆ. ಮಹಿಳೆಯರು ಸಂಭೋಗದಲ್ಲಿ ಪುರುಷರಿಗಿಂತ ಕಡಿಮೆ ಆಸಕ್ತಿ ಹೊಂದಿರುತ್ತಾರೆಂಬ ನಂಬಿಕೆಯಿದೆ. ಆದ್ರೆ ಇದು ಸುಳ್ಳು. ಅನೇಕ ಮಹಿಳೆಯರು ಸೆಕ್ಸ್ ನಲ್ಲಿ ಆಸಕ್ತಿ ಹೊಂದಿರುತ್ತಾರೆ. ಇನ್ನು ಕೆಲ ಮಹಿಳೆಯರು,ಅನೇಕ ಕಾರಣಕ್ಕೆ ಸೆಕ್ಸ್ ನಲ್ಲಿ ನಿರಾಸಕ್ತಿ ಹೊಂದಿರುತ್ತಾರೆ. ಹಾಗೆಯೇ ಸೆಕ್ಸ್ ನಲ್ಲಿ ಕೆಲ ವಿಷ್ಯಗಳನ್ನು ದ್ವೇಷಿಸುತ್ತಾರೆ.ಕೆಲವೊಂದು ಲೈಂಗಿಕ ಚಟುವಟಿಕೆಯನ್ನು ಇಷ್ಟಪಡುವುದಿಲ್ಲ. ಪುರುಷರಿಗೆ ಮಹಿಳೆಯರ ಈ ವಿಷ್ಯ ಗೊತ್ತಿದ್ದರೆ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಲೈಂಗಿಕತೆಯ ಯಾವ ಭಾಗವನ್ನು ಮಹಿಳೆಯರು ನಿಜವಾಗಿಯೂ ದ್ವೇಷಿಸುತ್ತಾರೆ ಎಂಬುದನ್ನು ನಾವಿಂದು ಹೇಳ್ತೆವೆ.
ಅಭದ್ರತೆಯ ಭಾವನೆ : ಸಮಾಜ ನಿಗದಿಪಡಿಸಿದ ಕೆಲ ಮಾನದಂಡಗಳಿಂದಾಗಿ ಮಹಿಳೆಯರು ತಮ್ಮ ದೇಹದ ಬಗ್ಗೆ ತುಂಬಾ ಅಸುರಕ್ಷಿತರಾಗಿದ್ದಾರೆ. ತಮ್ಮ ಲುಕ್ ಬಗ್ಗೆ ಮಹಿಳೆಯರು ಟೆನ್ಷನ್ ಮಾಡಿಕೊಳ್ಳುತ್ತಾರೆ. ತಮ್ಮ ದೇಹ ಸುಂದರವಾಗಿರಬೇಕು,ಸರಿಯಾದ ಫಿಗರ್ ಮೆಂಟೇನ್ ಮಾಡ್ಬೇಕೆಂಬ ಆಸೆ ಹೊಂದಿರುತ್ತಾರೆ. ಅನೇಕ ಮಹಿಳೆಯರು ನಟಿಯರ ದೇಹ ಸೌಂದರ್ಯವನ್ನು ಫಾಲೋ ಮಾಡಲು ಪ್ರಯತ್ನಿಸುತ್ತಾರೆ. ಯಾವುದೇ ಅಂಗ ಅವರು ಬಯಸಿದಂತೆ ಇರದಿದ್ದರೆ ಸಂಭೋಗದ ವೇಳೆ ಟೆನ್ಷನ್ ಗೊಳಗಾಗ್ತಾರೆ. ಆರಾಮವಾಗಿರಲು ಇದು ಅವರನ್ನು ಬಿಡುವುದಿಲ್ಲ. ಸಂಗಾತಿ ಸ್ವಲ್ಪ ಕಾಲ್ಪನಿಕ ಲೋಕದಲ್ಲಿ ವಿಹರಿಸುವ ವ್ಯಕ್ತಿಯಾಗಿದ್ದರೆ ಮಹಿಳೆಯರ ಟೆನ್ಷನ್ ಮತ್ತಷ್ಟು ಜಾಸ್ತಿಯಾಗುತ್ತದೆ.
ಒತ್ತಡ : ಲೈಂಗಿಕ ಸಮಯದಲ್ಲಿ ಮಹಿಳೆಯರು ಹೆಚ್ಚು ಒತ್ತಡಕ್ಕೆ ಒಳಗಾಗ್ತಾರೆ ಎಂದು ಇತ್ತೀಚಿಗೆ ನಡೆದ ಅಧ್ಯಯನವೊಂದು ಹೇಳಿದೆ. ಸೆಕ್ಸ್ ವೇಳೆ ಒತ್ತಡಕ್ಕೊಳಗಾಗಲು ಅನೇಕ ಕಾರಣಗಳಿವೆ. ಅನೇಕ ಮಹಿಳೆಯರು, ಲೈಂಗಿಕ ಸಮಯದಲ್ಲಿ ಹೇಗೆ ಕಾಣುತ್ತಾರೆ ಎಂಬುದರ ಬಗ್ಗೆ ಟೆನ್ಷನ್ ಮಾಡಿಕೊಳ್ತಾರೆ. ಇನ್ನೂ ಕೆಲ ಮಹಿಳೆಯರು,ತಮ್ಮ ಸಂಗಾತಿ ನನ್ನೊಂದಿಗೆ ಸಂತೋಷವಾಗಿರುತ್ತಾರೆಯೇ ಎಂದು ಚಿಂತಿಸುತ್ತಾರೆ. ಸಂಗಾತಿ ತನ್ನ ಭಾವನೆಗಳನ್ನು ಗೌರವಿಸಿದಂತೆ ತನ್ನ ದೇಹವನ್ನೂ ಗೌರವಿಸಬೇಕೆಂದು ಮಹಿಳೆಯರು ಬಯಸ್ತಾರೆ. ಇದಕ್ಕೆ ವಿರುದ್ಧವಾಗಿ ಸಂಗಾತಿ ವರ್ತನೆಯಿದ್ದರೆ ಅದು ಅವರು ಒತ್ತಡಕ್ಕೆ ಕಾರಣವಾಗುತ್ತದೆ.
Google And Women : ಇಂಟರ್ನೆಟ್ ನಲ್ಲಿ ರಾತ್ರಿ- ಹಗಲು ಹುಡುಗಿಯರು ಹುಡುಕೋದೇನು?
ಕ್ಲೈಮ್ಯಾಕ್ಸ್ ಗೆ ಒತ್ತಡ : ಮಹಿಳೆಯರು ಕ್ಲೈಮ್ಯಾಕ್ಸ್ ಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇದು ಸಾಮಾನ್ಯವಾಗಿ ಪುರುಷರಿಗೆ ಅರ್ಥವಾಗದ ವಿಷಯ. ಮಹಿಳೆಯರು ತಮ್ಮ ಸಂಗಾತಿ ಜೊತೆ ಸಂಬಂಧ ಬೆಳೆಸುವ ಸಮಯದಲ್ಲಿ ಪರಾಕಾಷ್ಠೆ ನಿರೀಕ್ಷಿಸುತ್ತಾರೆ. ಈ ಒತ್ತಡ ಮಹಿಳೆಯರ ಮನಸ್ಥಿತಿಯನ್ನು ಸಹ ಹಾಳು ಮಾಡುತ್ತದೆ. ಇನ್ನೊಂದೆಡೆ, ಕೆಲ ಪುರುಷರು, ಸ್ತ್ರೀ ಸಂಗಾತಿಯು ಪರಾಕಾಷ್ಠೆಯನ್ನು ತಲುಪುವವರೆಗೆ ಕಾಯುವುದಿಲ್ಲ ಮತ್ತು ತಾವು ತೃಪ್ತಿ ಹೊಂದಲು ಮಾತ್ರ ಗಮನಹರಿಸುತ್ತಾರೆ. ಇದು ಮಹಿಳೆಯರನ್ನು ತುಂಬಾ ನಿರಾಶೆಗೊಳಿಸುತ್ತದೆ.
ಮಹಿಳೆಯರು ಇಷ್ಟಪಡದ ಇತರ ವಿಷಯ : ಲೈಂಗಿಕ ಸಮಯದಲ್ಲಿ ಅಡಚಣೆ ಉಂಟಾದಾಗ ಅಥವಾ ಪರಾಕಾಷ್ಠೆಯನ್ನು ತಲುಪಲು ಸಾಧ್ಯವಾಗದಿದ್ದಾಗ ಮಹಿಳೆಯರು ಕಿರಿಕಿರಿಗೊಳಗಾಗ್ತಾರೆ. ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಾಗ ಎಸ್ಟಿಐ ಭಯ ಅವರನ್ನು ಕಾಡುತ್ತದೆ. ಹಾಗೆಯೇ ಅಸುರಕ್ಷಿತ ಲೈಂಗಿಕ ಕ್ರಿಯೆ ಬೇಡದ ಗರ್ಭಕ್ಕೆ ಕಾರಣವಾದ್ರೆ ಎಂಬ ಆತಂಕವಿರುತ್ತದೆ. ಮಹಿಳೆಯರು ತಮ್ಮ ಸಂಗಾತಿಯ ನೈರ್ಮಲ್ಯದ ಬಗ್ಗೆ ಗಮನ ಹರಿಸುತ್ತಾರೆ. ಸೋಂಕಿನ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಾರೆ. ಆದರೆ ಹೆಚ್ಚಿನ ಪುರುಷರು ಅದರ ಬಗ್ಗೆ ಗಮನ ಹರಿಸುವುದಿಲ್ಲ.
VAGINAL ODOUR: ಆತಂಕ ಪಟ್ಟುಕೊಳ್ಳುವಂಥದ್ದೇನೂ ಇಲ್ಲ
ಎಲ್ಲ ಮಹಿಳೆಯರು ಮೌಖಿಕ ಸಂಭೋಗವನ್ನು ಇಷ್ಟಪಡುವುದಿಲ್ಲ. ಸಂಗಾತಿ ಅದಕ್ಕೆ ಒತ್ತಡ ಹೇರಿದಾಗ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಅಶ್ಲೀಲ ಚಲನಚಿತ್ರಗಳನ್ನು ನೋಡಿದ ನಂತರ ಪುರುಷ ಸಂಗಾತಿ,ಅದೇ ಸನ್ನಿವೇಶಗಳನ್ನು ನಿರೀಕ್ಷಿಸುತ್ತಾನೆ. ಆ ಪ್ರಯೋಗಕ್ಕೆ ಸಂಗಾತಿಯ ಮೇಲೆ ಒತ್ತಡ ಹೇರುತ್ತಾನೆ. ಇದು ಮಹಿಳೆಯರಿಗೆ ಇಷ್ಟವಾಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.