Vaginal Odour: ಆತಂಕ ಪಟ್ಟುಕೊಳ್ಳುವಂಥದ್ದೇನೂ ಇಲ್ಲ

By Suvarna News  |  First Published Feb 1, 2022, 6:06 PM IST

ಬಹಳಷ್ಟು ಮಹಿಳೆಯರ ಜನನಾಂಗದಿಂದ ವಾಸನೆ ಬರುತ್ತದೆ. ಕೆಲವರಂತೂ ಈ ವಾಸನೆಯನ್ನು ಹೇಗೆ ನಿಯಂತ್ರಿಸುವುದು ಎಂದು ತಿಳಿಯದೆ ಮುಜುಗರಪಟ್ಟುಕೊಳ್ಳುತ್ತಾರೆ. ಹಲವು ರೀತಿಯ ವಾಸನೆಗಳನ್ನು ಗುರುತಿಸಲಾಗಿದ್ದು, ಎಲ್ಲ ವಾಸನೆಗಳೂ ಅನಾರೋಗ್ಯವನ್ನು ಸೂಚಿಸುವುದಿಲ್ಲ. ಇದಕ್ಕೆ ಅವರ ದೇಹಪ್ರಕೃತಿ ಕಾರಣವಾಗಿರುತ್ತದೆ.
 


ಕೆಲವು ಮಹಿಳೆಯರ ದೇಹದಿಂದ ಅತಿಯಾದ ವಾಸನೆ (Smell) ಬರುತ್ತದೆ. ಅದು ಕೇವಲ ಬೆವರಿನದ್ದಾಗಿರುವುದಿಲ್ಲ, ಅವರ ಜನನಾಂಗ(Vagina)ದಿಂದಲೂ ಬರುತ್ತದೆ. ಅಂಡಾಣು (Egg) ಬಿಡುಗಡೆಯಾಗುವುದು, ಮಾಸಿಕ ಋತುಚಕ್ರ (Period), ಬಿಳಿಮುಟ್ಟು (Yeast) ಹೋಗುವುದು ಮುಂತಾದ ಸಮಯಗಳಲ್ಲಿ ಜನನಾಂಗದಿಂದ ವಾಸನೆ ಬರುವುದು ಸಹಜ. ಇವುಗಳ ಹೊರತಾಗಿಯೂ ವಿವಿಧ ಕಾರಣಗಳಿಂದ ಜನನಾಂಗದಿಂದ ವಿಭಿನ್ನ ವಾಸನೆಗಳು ಉಂಟಾಗುತ್ತವೆ.
ಮಹಿಳೆಯರ ಜನನಾಂಗ ಅಥವಾ ಯೋನಿಯಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾ(Bacteria)ಗಳು ನೆಲೆಸಿರುತ್ತವೆ. ಇವುಗಳ ಸಂಖ್ಯೆ, ಮಾದರಿಗಳಲ್ಲಿ ಎಷ್ಟು ಬದಲಾವಣೆ ಇರುತ್ತದೆ ಎಂದರೆ, ಕೆಲವೊಮ್ಮೆ ಪ್ರತಿ ಗಂಟೆಗೊಮ್ಮೆ ಬದಲಾಗಲೂಬಹುದು. ಆಗ ವಾಸನೆಯಲ್ಲೂ ಬದಲಾವಣೆ ಆಗುತ್ತಿರುತ್ತದೆ. ಬ್ಯಾಕ್ಟೀರಿಯಾ ಬದಲಾವಣೆಯಲ್ಲಿ ಪೀರಿಯೆಡ್ಸ್‌ ಪಾತ್ರ ಪ್ರಮುಖ. ಅಲ್ಲದೆ, ಸ್ವಚ್ಛತೆ (Hygiene) ಹಾಗೂ ದೇಹಪ್ರಕೃತಿಗೆ ಅನುಗುಣವಾಗಿಯೂ ವ್ಯತ್ಯಾಸವಿರುತ್ತದೆ. ಕೆಲವು ವಾಸನೆ ಹಾಗೂ ಅವುಗಳಿಗೆ ಕಾರಣಗಳನ್ನು ಹೀಗೆ ಗುರುತಿಸಲಾಗಿದೆ.

•      ಕಟುವಾದ (Tangy) ವಾಸನೆ: ಕೆಲವು ಮಹಿಳೆಯರ ಜನನಾಂಗದಿಂದ ಆಹಾರ ಹುಳಿ (Ferment) ಬಂದಾಗ ಬರುವಂತಹ ಕಟುವಾದ ವಾಸನೆ ಬರುತ್ತದೆ. ಇದು ಗಾಬರಿಯಾಗುವ ವಾಸನೆಯಲ್ಲ. ಅಸಲಿಗೆ ಯೋಗರ್ಟ್‌ ನಲ್ಲಿ ಕಂಡುಬರುವ ಲ್ಯಾಕ್ಟೋಬ್ಯಾಸಿಲಿ (Lactobacilli) ಎನ್ನುವ ಉತ್ತಮ ಬ್ಯಾಕ್ಟೀರಿಯಾದಿಂದ ಈ ವಾಸನೆ ಉಂಟಾಗುತ್ತದೆ. ಅಲ್ಲದೆ, ಆಮ್ಲೀಯತೆಯೂ (Acidity) ಇದಕ್ಕೆ ಕಾರಣವಾಗಬಹುದು. ಜನನಾಂಗದ ಪಿಎಚ್‌ ಮಟ್ಟ 3.8ರಿಂದ 4.5ರವರೆಗೆ ಇರುತ್ತದೆ. ಇದಕ್ಕೆ ಈ ಬ್ಯಾಕ್ಟೀರಿಯಾವೇ ಕಾರಣ. ಇದು ಕೆಟ್ಟ ಬ್ಯಾಕ್ಟೀರಿಯಾ ವೃದ್ಧಿಯಾಗದಂತೆ ತಡೆಯುತ್ತದೆ.

Latest Videos

undefined

•      ತಾಮ್ರದ (Copper) ವಾಸನೆ: ತಾಮ್ರದ ವಾಸನೆ ಬರುವುದು ಕೆಲವು ಮಹಿಳೆಯರ ದೂರು. ಇದಕ್ಕೆ ರಕ್ತದಲ್ಲಿರುವ ಕಬ್ಬಿಣಾಂಶ (Iron) ಕಾರಣವಾಗುತ್ತದೆ. ಮಾಸಿಕ ಮುಟ್ಟಿನ ದಿನಗಳಲ್ಲಿ ರಕ್ತದಲ್ಲಿರುವ ಕಬ್ಬಿಣಾಂಶದಿಂದ ಲೋಹದ ವಾಸನೆ ಬರುತ್ತದೆ. ಇನ್ನು, ಜನನಾಂಗ ಶುಷ್ಕವಾಗಿದ್ದಾಗ ಲೈಂಗಿಕ ಕ್ರಿಯೆ (Sex) ನಡೆಸಿದ ಬಳಿಕ ಅತ್ಯಲ್ಪ ಪ್ರಮಾಣದಲ್ಲಿ ಬ್ಲೀಡಿಂಗ್‌ ಆಗುತ್ತದೆ. ಇದರಿಂದಲೂ ಈ ವಾಸನೆ ಬರಬಹುದು. ಒಂದೊಮ್ಮೆ ಮುಟ್ಟಿನ ದಿನಗಳಲ್ಲದೆ ಇತರ ದಿನಗಳಲ್ಲೂ ತಾಮ್ರದ ವಾಸನೆ ಅಧಿಕವಾಗಿದ್ದರೆ, ತುರಿಕೆ (Itching) ಇತ್ಯಾದಿ ಇದ್ದರೆ ವೈದ್ಯರನ್ನು ಕಾಣಬೇಕು.

•      ಸಿಹಿಯಾದ (Sweet) ವಾಸನೆ: ಮಣ್ಣಿನ ಮಾದರಿಯ ಸಿಹಿಯಾದ ವಾಸನೆಗೆ ಬ್ಯಾಕ್ಟೀರಿಯಾ ಕಾರಣ. ಈ ವಾಸನೆಯಿದ್ದರೂ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.    

•      ಬ್ಲೀಚಿಂಗ್‌ (Bleaching) ಅಥವಾ ರಾಸಾಯನಿಕದ ವಾಸನೆ: ಬಾತ್‌ ರೂಮ್‌ ಕ್ಲೀನ್‌ ಮಾಡಿದ ಬಳಿಕ ಬರುವಂತಹ ವಾಸನೆಯಿದ್ದಾಗ ವೈದ್ಯರನ್ನು ಕಾಣಬೇಕು. ಅಮೋನಿಯಾ ಅಥವಾ ಬ್ಲೀಚಿಂಗ್‌ ವಾಸನೆಗೆ ಮೂತ್ರದಲ್ಲಿರುವ ಅಂಶ ಕಾರಣವಾಗುತ್ತದೆ. ಮೂತ್ರದಲ್ಲಿ ಅಮೋನಿಯಾ ವಾಸನೆ ಗಾಢವಾಗಿದ್ದರೆ ಅದು ದೇಹ ಡಿಹೈಟ್ರೇಟ್‌ (Dehydration) ಆಗಿರುವ ಸೂಚನೆ. ಇನ್ನು, ಬ್ಯಾಕ್ಟೀರಿಯಲ್‌ ವಜಿನೋಸಿಸ್‌ (Vaginosis) ಅಂದರೆ ಒಂದು ರೀತಿಯ ಸೋಂಕಿನಿಂದಲೂ ಈ ವಾಸನೆ ಉಂಟಾಗಬಹುದು. ಇದು ಮಹಿಳೆಯರಲ್ಲಿ ಅತಿ ಸಾಮಾನ್ಯವಾಗಿರುವ ಸೋಂಕು.

Motivational story: ಈಕೆ ತೋಳುಗಳೇ ಇಲ್ಲದ ವಿಮಾನ ಪೈಲಟ್!

•      ಮಾದಕ ದ್ರವ್ಯದ ವಾಸನೆ: ಮರಿಜುವಾನಾ (Marijuana)ದಂತೆ ಮಾದಕ ದ್ರವ್ಯದ ವಾಸನೆಯೂ ಜನನಾಂಗದಿಂದ ಬರಬಹುದು. ಇದು ಬೆವರು ಗ್ರಂಥಿ(Sweat Glands)ಗಳಿಂದ ಬರುತ್ತದೆ. ಭಾವನಾತ್ಮಕ ಒತ್ತಡ (Emotional Stress) ಇಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ನಮ್ಮ ದೇಹ ಎರಡು ರೀತಿಯ ಬೆವರು ಗ್ರಂಥಿಗಳನ್ನು ಹೊಂದಿದೆ. ಇವು ಅಪೋಕ್ರೈನ್‌ (Apocrine) ಮತ್ತು ಎಕ್ರೈನ್ (Eccrine). ಎಕ್ರೈನ್‌ ಗ್ರಂಥಿ ಬೆವರನ್ನು ಉತ್ಪತ್ತಿ ಮಾಡಿ ದೇಹವನ್ನು ತಣಿಸುತ್ತದೆ. ‌ಅಪೊಕ್ರೈನ್‌ ಗ್ರಂಥಿ ನಮ್ಮ ಭಾವನೆಗಳಿಗೆ ಸ್ಪಂದಿಸುತ್ತದೆ. ಈ ಅಪೋಕ್ರೈನ್‌ ಗ್ರಂಥಿ ಕಂಕುಳಿನ ಕೆಳಗೆ, ತೊಡೆಯ ಸಂದುಗಳಲ್ಲಿ ಇರುತ್ತದೆ. ಒತ್ತಡ, ಉದ್ವೇಗದಲ್ಲಿದ್ದಾಗ ಅಪೋಕ್ರೈನ್‌ ಗ್ರಂಥಿ ಹಾಲಿನಂತಹ ದ್ರವವನ್ನು ಬಿಡುಗಡೆ ಮಾಡುತ್ತದೆ. ಇದು ಜನನಾಂಗದ ಬ್ಯಾಕ್ಟೀರಿಯಾದೊಂದಿಗೆ ಸೇರಿದಾಗ ಮಾದಕ ದ್ರವ್ಯದ ವಾಸನೆ ಬರುತ್ತದೆ.

Arranged Marriage: ನಿಮ್ಮ ಭಾವಿ ಪತ್ನಿಯ ಬಳಿ ಏನು ಕೇಳಬೇಕು? ಏನು ಕೇಳಬಾರದು?

•      ಮೀನಿನಂತಹ (Fishy) ವಾಸನೆ: ಕೊಳೆತ ಮೀನಿನಂತಹ ವಾಸನೆಗೆ ಟ್ರೈಮ್‌ ಥಿಲಮೈನ್‌ ಎನ್ನುವ ರಾಸಾಯನಿಕ ಕಾರಣ. ಇದು ಬ್ಯಾಕ್ಟೀರಿಯಲ್‌ ವಜಿನೋಸಿಸ್‌ ಹಾಗೂ ಟ್ರೈಕೋಮೋನಿಯಾಸಿಸ್‌ ಎನ್ನುವ ಸೋಂಕಿನಿಂದ ಉಂಟಾಗುತ್ತದೆ. ಲೈಂಗಿಕ ಕ್ರಿಯೆ ಮೂಲಕ ಬರುವ ಅತಿ ಸಾಮಾನ್ಯ ಸೋಂಕು ಟ್ರೈಕೋಮೋನಿಯಾಸಿಸ್.‌ ಕೆಲವು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮೀನಿನಂತಹ ವಾಸನೆ ಗಂಭೀರ ಸಮಸ್ಯೆಗಳನ್ನು ತೋರಬಹುದು.  

•      ಕೊಳೆತ (Rotten) ವಾಸನೆ: ಕೆಲವು ಮುಂದುವರಿದ ದೇಶಗಳ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. ಋತುಸ್ರಾವದ ಸಮಯದಲ್ಲಿ ಟ್ಯಾಂಪೂನ್‌ (Tampon) ಬಳಕೆ ಮಾಡಿದಾಗ ಅದನ್ನು ಅವರು ಜನನಾಂಗದಲ್ಲಿಯೇ  ಮರೆತುಬಿಡುತ್ತಾರಂತೆ. ಆಗ ಇಂತಹ ವಾಸನೆ ಬರುತ್ತದೆ. ಬಳಿಕ, ವೈದ್ಯರ ಬಳಿಗೆ ಹೋದಾಗ ಪತ್ತೆಯಾಗುವುದೂ ಇದೆ!

click me!