ಅಯ್ಯೋ ಇರೋ ಒಬ್ಳನ್ನೇ ಮೇಂಟೇನ್‌ ಮಾಡಕ್ಕಾಗ್ತಿಲ್ಲ ಅನ್ನೋರು ಇಲ್‌ ಕೇಳಿ

By Suvarna News  |  First Published Feb 2, 2022, 11:32 AM IST
  • 8 ಮದುವೆಯಾಗಿ ಎಲ್ಲರೊಂದಿಗೂ ಖುಷಿಯಾಗಿ ಒಂದೇ ಮನೆಲಿರುವ ವ್ಯಕ್ತಿ
  • ಥೈಲ್ಯಾಂಡ್‌ನ ಟ್ಯಾಟೂ ಆರ್ಟಿಸ್ಟ್‌ ಕಲೆಗಾರಿಕೆ
  • ವೈರಲ್‌ ಆಯ್ತು ಬಹುಪತ್ನಿ ವಲಭನ ಸಂದರ್ಶನ
     

ಥೈಲ್ಯಾಂಡ್(ಫೆ.2): ಅಯ್ಯೋ ಇರೋ ಒಬ್ಬ ಹೆಂಡ್ತಿನೇ ನಮಗೆ ಮೆಂಟೇನ್‌ ಮಾಡಕ್ಕಾಗ್ತಿಲ್ಲ. ಯಾಕಾದ್ರು ಮದ್ವೆ ಆದ್ನೋ ಎಂದು ಕೊರಗುವ ಕೆಲ ಗಂಡಸರನ್ನು ನೀವು ನೋಡಿರಬಹುದು. ಬಹುಶಃ ಹೆಂಡ್ತಿನ ಹೇಗೆ ಮೆಂಟೇನ್‌ ಮಾಡ್ಲಿ ಎಂದು ಯೋಚಿಸುವವರು ನೀವಾಗಿದ್ದಲ್ಲಿ ಈ ಸ್ಟೋರಿ ನಾ ನೀವು ಓದ್ಲೇಬೇಕು. ಥೈಲ್ಯಾಂಡ್‌ನ ವ್ಯಕ್ತಿಯೊಬ್ಬ ಎಂಟು ಯುವತಿಯರನ್ನು ಮದುವೆಯಾಗಿದ್ದು, ಈತನ ಪತ್ನಿಯರೆಲ್ಲರೂ ಒಂದೇ ಮನೆಯಲ್ಲಿ ಯಾವುದೇ ಜಗಳವಿಲ್ಲದೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕುತ್ತಿದ್ದಾರಂತೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಥೈಲ್ಯಾಂಡ್‌ ಈ ವ್ಯಕ್ತಿ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ.

ಮೂಲತಃ ಟ್ಯಾಟೂ ಆರ್ಟಿಸ್ಟ್‌ ಆಗಿರುವ ಓಂಗ್ ಡ್ಯಾಮ್ ಸೊರೊಟ್ (Ong Dam Sorot) ಎಂಬುವವರೇ ಹೀಗೆ ಎಂಟು ಮದುವೆಯಾಗಿ ಎಲ್ಲರೊಂದಿಗೂ ಸುಖವಾಗಿ ಜೀವನ ನಡೆಸುತ್ತಿರುವ ವ್ಯಕ್ತಿ. ಇತ್ತೀಚೆಗೆ ಥಾಯ್ಲೆಂಡ್‌ನ  ಜನಪ್ರಿಯ ಹಾಸ್ಯನಟರೊಂದಿಗೆ ಇವರ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದ ವಿಡಿಯೋ ಯೂಟ್ಯೂಬ್‌ನಲ್ಲಿ ಮೂರು ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಸಂದರ್ಶನದಲ್ಲಿ ಓಂಗ್ ಡ್ಯಾಮ್ ಸೊರೊಟ್ ತನ್ನ ಪ್ರತಿಯೊಬ್ಬ ಹೆಂಡತಿಯನ್ನು ಪರಿಚಯಿಸಿದರು ಮತ್ತು ಅವರನ್ನು ತಾನು ಹೇಗೆ ಭೇಟಿಯಾದೆ ಎಂಬುದರ ಕುರಿತು ವಿವರಿಸಿದರು. 

Tap to resize

Latest Videos

undefined

 

ಈ ಸಂದರ್ಶನದಲ್ಲಿ ಈತನ ಎಂಟು ಪತ್ನಿಯರು ಕೂಡ ತಮ್ಮ ಪತಿಯನ್ನು ಭೂಮಿಯ ಮೇಲಿನ ಅತ್ಯಂತ ಕರುಣಾಮಯಿ, ಅತ್ಯಂತ ಒಳ್ಳೆಯ ವ್ಯಕ್ತಿ ಎಂದು ವಿವರಿಸಿದರು ಮತ್ತು ಅವರು ನಮಗೆ ಅದ್ಭುತವಾಗಿ ಜೊತೆಯಾಗುತ್ತಾರೆ ಎಂದು ಹೇಳಿಕೊಂಡರು. ಓಂಗ್ ಡ್ಯಾಮ್ ಸೊರೊಟ್ ತನ್ನ ಮೊದಲ ಪತ್ನಿ ನಾಂಗ್ ಸ್ಪ್ರೈಟ್  (Nong Sprite) ಎಂಬಾಕೆಯನ್ನು ಸ್ನೇಹಿತನ ಮದುವೆಯಲ್ಲಿ ಭೇಟಿಯಾದರಂತೆ. ಕೂಡಲೇ ಆಕೆಯನ್ನು ಮದುವೆಯಾದ ಅವರು ನಂತರ ತಮ್ಮ ಎರಡನೇ ಪತ್ನಿ ನಾಂಗ್ ಎಲ್ (Nong L) ಅವರನ್ನು ಮಾರುಕಟ್ಟೆಯಲ್ಲಿ ಭೇಟಿಯಾದರಂತೆ.

ಈ ಅಜ್ಜನಿಗೆ ತನ್ನ ವಯಸ್ಸಿಗಿಂತ ಹೆಚ್ಚು ಹೆಂಡತಿಯರು : 92ರ ಮುದಕನಿಗೆ ಇನ್ನೂ ಮದ್ವೆ ಆಗೋ ಆಸೆ!

ಹಾಗೆಯೇ  ಮೂರನೇ ಪತ್ನಿ ನಾಂಗ್ ನಾನ್ (Nong Nan) ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದರು. ನಾಲ್ಕನೇ, ಐದನೇ ಮತ್ತು ಆರನೇ ಪತ್ನಿಯರನ್ನು ಸೊರೊಟ್ ಕ್ರಮವಾಗಿ ಸಾಮಾಜಿಕ ಮಾಧ್ಯಮಗಳಾದ ಇನ್ಸ್ಟಾಗ್ರಾಮ್‌ನಲ್ಲಿ (Instagram), ಫೇಸ್‌ಬುಕ್‌ (Facebook) ಮತ್ತು ಟಿಕ್‌ಟಾಕ್‌( TikTok) ನಲ್ಲಿ ಭೇಟಿಯಾದರಂತೆ. ನಂತರ ಏಳನೇ ಪತ್ನಿ, ನಾಂಗ್ ಫಿಲ್ಮ್ (Nong Film) ಅವರನ್ನು ಫ್ರಾ ಪಾಥೋಮ್ ಚೇಡಿ ದೇವಸ್ಥಾನಕ್ಕೆ ತನ್ನ ತಾಯಿಯೊಂದಿಗೆ  ಹೋದಾಗ ಮೊದಲು ಭೇಟಿಯಾದರಂತೆ. ಹಾಗೆಯೇ ಇನ್ನು ತಮಾಷೆಯ ವಿಚಾರವೆಂದರೆ ಅವರ ಎಂಟನೇ ಹಾಗೂ ಕೊನೆಯ ಪತ್ನಿ ನೋಂಗ್ ಮಾಯ್ (Nong Mai), ಅವರನ್ನು, ಸೊರೊಟ್  ತಮ್ಮ ನಾಲ್ವರು ಪತ್ನಿಯರೊಂದಿಗೆ ಪಟ್ಟಾಯದಲ್ಲಿ ವಿಹಾರಕ್ಕೆ ಹೋಗಿದ್ದ ವೇಳೆ ಭೇಟಿಯಾದರಂತೆ. 

ಈ ಸಂದರ್ಶನದಲ್ಲಿ ಸೊರೊಟ್‌ ಅವರು ನಾವು ನೋಡಿದ ಅತ್ಯಂತ ಕಾಳಜಿಯುಳ್ಳ  ವ್ಯಕ್ತಿ ಎಂದು ಎಂಟು ಪತ್ನಿಯರು ಒಪ್ಪಿಕೊಂಡಿದ್ದಾರೆ. ಅವರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಅವರೊಂದಿಗೆ ಜಗಳವಾಡಲು ಏನೂ ಇಲ್ಲ ಎಂದು ಈ ಪತ್ನಿಯರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಸೊರೊಟ್‌ನ ಇಬ್ಬರು ಪತ್ನಿಯರು ಪ್ರಸ್ತುತ ಗರ್ಭಿಣಿಯಾಗಿದ್ದಾರೆ ಹಾಗೆಯೇ ಸೊರೊಟ್‌ ಈಗಾಗಲೇ ತಮ್ಮ ಮೊದಲ ಪತ್ನಿ ನಾಂಗ್ ಸ್ಪ್ರೈಟ್‌ನೊಂದಿಗೆ ಮಗನನ್ನು ಹೊಂದಿದ್ದಾರೆ. 

ನಾಲ್ಕನೇ ಮದುವೆಗೆ ಸಿದ್ಧವಾದ ಮಹಾಪುರುಷ, ಹೆಂಡತಿಯರೇ ಹೆಲ್ಪ್ ಮಾಡ್ತಾರಂತೆ!

ಈ ಮಹಿಳೆಯರು ಒಂದು ಕೋಣೆಯಲ್ಲಿ ಇಬ್ಬರಂತೆ ನಾಲ್ಕು ಕೋಣೆಯಲ್ಲಿ ಮಲಗುತ್ತಾರಂತೆ. ಹಾಗೆಯೇ ತಮ್ಮ ಪತಿ ಜೊತೆ ಹಾಸಿಗೆ ಹಂಚಿಕೊಳ್ಳಲು ತಮ್ಮ ಸರದಿಗಾಗಿ ಕಾಯುತ್ತಾರಂತೆ. ಈ ವ್ಯವಸ್ಥೆಯ ಬಗ್ಗೆ ಯಾರಿಗೂ ತೊಂದರೆ ಇಲ್ಲವಂತೆ.  ಈ ಟ್ಯಾಟೂ ಕಲಾವಿದನಿಗೆ ಈಗಾಗಲೇ ಮದುವೆಯಾಗಿದೆ ಎಂದು ತಿಳಿದು ಕೂಡ ಮದುವೆಯಾಗಲು ಒಪ್ಪಿದ ಈ ಏಳು ಮಹಿಳೆಯರ ಬಗ್ಗೆ, ಹೆಚ್ಚಿನವರು ಅವನನ್ನು ಹುಚ್ಚನಂತೆ ಪ್ರೀತಿಸಿ ಪರಿಸ್ಥಿತಿಯನ್ನು ಒಪ್ಪಿಕೊಂಡರು ಎಂದು ಹೇಳಿದರು. 

ಕೆಲವು ಮಹಿಳೆಯರು ತಾವು ಬಹುಪತ್ನಿತ್ವ ಹೊಂದಿದ್ದ ವ್ಯಕ್ತಿಯನ್ನು ಮದುವೆಯಾಗುತ್ತಿರುವುದನ್ನು ತಮ್ಮ ಕುಟುಂಬಗಳಿಗೆ ವಿವರಿಸಲು ಸಮಸ್ಯೆಗಳಿದ್ದರೂ ಸಹ, ಅವರು ಓಂಗ್ ಡ್ಯಾಮ್ ಅನ್ನು ಬಿಟ್ಟುಕೊಡಲು ಸಿದ್ಧರಿರಲ್ಲವಂತೆ ಮತ್ತು ಅಂತಿಮವಾಗಿ, ಅವರ ಸ್ನೇಹಿತರು ಮತ್ತು ಕುಟುಂಬದವರು ಪರಿಸ್ಥಿತಿಯನ್ನು ಒಪ್ಪಿಕೊಂಡರು ಎಂದು ಪತ್ನಿಯರು ಹೇಳಿದ್ದಾರೆ. 

click me!