ಕೂದಲು ನಮ್ಮ ಸೌಂದರ್ಯ ಹಾಗೂ ಆರೋಗ್ಯ ಎರಡರ ಸೂಚಕವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ಕೂದಲು ಉದುರುತ್ತಿದ್ದರೆ ಆರೋಗ್ಯದಲ್ಲಿ ವ್ಯತ್ಯಯವಾಗಿದೆ ಎಂದೇ ಅರ್ಥ. ಅದ್ರ ಪತ್ತೆಗೆ ನೀವು ಕೆಲ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.
ಕೂದಲು ಉದುರುವ ಸಮಸ್ಯೆ ಪುರುಷರಿಗೆ ಹೋಲಿಕೆ ಮಾಡಿದಲ್ಲಿ ಮಹಿಳೆಯರಿಗೆ ಕಡಿಮೆ ಎನ್ನಬಹುದು. ಹಾಗಂತ ಮಹಿಳೆಯರು ಈ ಸಮಸ್ಯೆ ಎದುರಿಸೋದಿಲ್ಲ ಎಂದಲ್ಲ. ಈಗಿನ ಆಹಾರ, ಜೀವನ ಪದ್ಧತಿ ಅವರ ಕೂದಲಿನ ಮೇಲೂ ಪರಿಣಾಮ ಬೀರುತ್ತಿದೆ. ಅನೇಕ ಮಹಿಳೆಯರು ವಿಪರೀತ ಕೂದಲುದುರುವ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ನಿಮಗೂ ಈ ಸಮಸ್ಯೆ ಕಾಡುತ್ತಿದೆ ಎಂದಾದ್ರೆ ಖಂಡಿತ ನೀವು ಅದಕ್ಕೆ ಒಂದಿಷ್ಟು ಔಷಧಿ ಸಿದ್ಧಪಡಿಸಿಕೊಳ್ತೀರಿ. ಮನೆ ಮದ್ದು, ವೈದ್ಯರು ಅಂತಾ ಸಾಕಷ್ಟು ಪ್ರಯತ್ನ ನಡೆಯುತ್ತಿರುತ್ತದೆ. ನಿಮ್ಮ ಕೂದಲಿಗೆ ಯಾವುದೇ ಚಿಕಿತ್ಸೆ ನೀಡುವ ಮುನ್ನ ಕೂದಲು ಉದುರಲು ಕಾರಣ ಏನು ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ. ಕಾರಣ ತಿಳಿದ್ರೆ ಚಿಕಿತ್ಸೆ ಸುಲಭವಾಗುತ್ತದೆ. ಕೂದಲು ಉದುರಲು ಏನು ಕಾರಣ ಎಂಬುದನ್ನು ನೀವು ರಕ್ತ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. ನಂತ್ರ ಅದಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯಬಹುದು. ನಾವಿಂದು ಕೂದಲು ಉದುರುವ ಮಹಿಳೆಯರು ಯಾವೆಲ್ಲ ರಕ್ತ ಪರೀಕ್ಷೆಗೆ ಒಳಗಾಗಬೇಕು ಎಂಬುದನ್ನು ಹೇಳುತ್ತೇವೆ.
ನಿಮ್ಮ ಕೂದಲು (Hair) ಉದುರಲು ನಾನಾ ಕಾರಣವಿದೆ. ಹಾರ್ಮೋನ್ (Hormone) ಬದಲಾವಣೆ, ಜೆನೆಟಿಕ್ಸ್ ಕಾರಣ ಇದ್ರಲ್ಲಿ ಒಂದು. ಇದಲ್ಲದೆ ನೀವು ಕಿಮೋಥೆರಪಿ (Chemotherapy) ಗೆ ಒಳಗಾಗಿದ್ದರೆ, ನಿಮ್ಮ ಇಮ್ಯುನಿಟಿ ಶಕ್ತಿ ಕಡಿಮೆ ಇದ್ದರೂ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
undefined
ನೀವು ಕುಳಿತು ಕೆಲಸ ಮಾಡುವ ಖುರ್ಚಿಯಲ್ಲಿದ್ದಾನೆ ಯಮ; ಎಚ್ಚರ ತಪ್ಪಿದ್ರೆ ಸಾವು ಖಚಿತ
ಈ ರಕ್ತ ಪರೀಕ್ಷೆಯಿಂದ ಕೂದಲು ಉದುರುವ ಕಾರಣ ಪತ್ತೆ ಮಾಡಿ :
ಥೈರಾಯ್ಡ್ ಪರೀಕ್ಷೆ : ಈಗಿನ ದಿನಗಳಲ್ಲಿ ಬಹುತೇಕ ಮಹಿಳೆಯರನ್ನು ಕಾಡ್ತಿರುವ ಸಮಸ್ಯೆ ಇದು. ಥೈರಾಯ್ಡ್ ಗೆ ನೀವು ಸರಿಯಾದ ಚಿಕಿತ್ಸೆ ಪಡೆಯದೆ ಹೋದಲ್ಲಿ ನಿಮಗೆ ಕೂದಲು ಉದುರುವ ಸಮಸ್ಯೆ ಕಾಡುತ್ತದೆ. ಥೈರಾಯ್ಡ್ ಹಾರ್ಮೋನುಗಳು TSH, FT3 ಮತ್ತು FT4 ಅನ್ನು ಉತ್ಪಾದಿಸುತ್ತದೆ. ರಕ್ತ ಪರೀಕ್ಷೆ ಮಾಡಿಸಿದ್ರೆ ಪ್ರತಿ ಹಾರ್ಮೋನ್ ಎಷ್ಟು ಉತ್ಪತ್ತಿಯಾಗುತ್ತದೆ ಎಂಬುದನ್ನು ನೀವು ಪತ್ತೆ ಮಾಡಬಹುದು. ಒಂದ್ವೇಳೆ ಥೈರಾಯ್ಡ್ ಇದ್ದಲ್ಲಿ ಅದಕ್ಕೆ ಚಿಕಿತ್ಸೆ ಪಡೆಯಿರಿ. ಕೂದಲು ಉದುರುವ ಸಮಸ್ಯೆ ತಾನಾಗಿಯೇ ಕಡಿಮೆ ಆಗುತ್ತದೆ.
ಮೂಳೆಗಳು ಗಟ್ಟಿಯಾಗಿ ಇರ್ಬೇಕು ಅಂದ್ರೆ ಇಂಥಾ ಆಹಾರ ಮಿಸ್ ಮಾಡ್ದೆ ತಿನ್ನಿ
ಸೆಕ್ಸ್ ಹಾರ್ಮೋನ್ : ನಿಮ್ಮ ಕೂದಲ ಆರೋಗ್ಯ ಪರೀಕ್ಷೆಗೆ ನೀವು ಸೆಕ್ಸ್ ಹಾರ್ಮೋನ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ರಕ್ತ ಪರೀಕ್ಷೆಗಳು ಸಾಮಾನ್ಯವಾಗಿ ಲೈಂಗಿಕ ಹಾರ್ಮೋನ್ ಮಟ್ಟವನ್ನು ತಿಳಿಸುತ್ತವೆ. ಇದು ಟೆಸ್ಟೋಸ್ಟೆರಾನ್, ಓಸ್ಟ್ರಾಡಿಯೋಲ್, ಆಂಡ್ರೊಸ್ಟೆನ್ಡಿಯೋನ್, ಪ್ರೊಲ್ಯಾಕ್ಟಿನ್, ಎಫ್ಎಸ್ಹೆಚ್ ಮತ್ತು ಲುಟೀನ್ ಹಾರ್ಮೋನುಗಳನ್ನು ಒಳಗೊಂಡಿದೆ. ಟೆಸ್ಟೋಸ್ಟೆರಾನ್ ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಮ್ಮ ಕೂದಲು ಉದುರುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಕಬ್ಬಿಣದ ಮಟ್ಟ : ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಇದು ಕೂದಲು ಉದುರಲು ಕಾರಣವಾಗುತ್ತದೆ. ಕಬ್ಬಿಣದ ಕೊರತೆಯು ಅಲೋಪೆಸಿಯಾ ಅರೆಟಾದ ಬೆಳವಣಿಗೆಗೆ ಕಾರಣವಾಗಬಹುದು. ಆರೋಗ್ಯಕರ ಕೂದಲು ಹೊಂದಿರುವ ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ಕೂದಲು ಉದುರುವ ಮಹಿಳೆಯರಲ್ಲಿ ಕಬ್ಬಿಣದ ಮಟ್ಟ ಕಡಿಮೆ ಇರುತ್ತದೆ. ನೀವು ರಕ್ತ ಪರೀಕ್ಷೆ ಮೂಲಕ ನಿಮ್ಮ ಕಬ್ಬಿಣದ ಮಟ್ಟವನ್ನು ತಿಳಿಯಬಹುದು.
ರಕ್ತದ ಎಣಿಕೆ : ಇದನ್ನು ಸಿಬಿಸಿ ಎಂದು ಕರೆಯುತ್ತಾರೆ. ನಿಮ್ಮ ದೇಹದಲ್ಲಿರುವ ರಕ್ತದ ಕಣವನ್ನು ಇದು ತಿಳಿಸುತ್ತದೆ. ಕೆಂಪು ರಕ್ತ ಕಣ, ಬಿಳಿ ರಕ್ತಕಣ ಪ್ಲೇಟ್ಲೆಟ್ ಇದ್ರಿಂದ ಪತ್ತೆಯಾಗುತ್ತದೆ. ಇದು ಕಡಿಮೆ ಆದಾಗ ಕೂದಲಿನ ಕಿರುಚೀಲಗಳ ಸುತ್ತ ಉರಿಯೂತದ ಲಕ್ಷಣ ಕಾಣಿಸಿಕೊಳ್ಳುತ್ತದೆ. ಇದ್ರಿಂದ ಕೂದಲು ಉದುರುತ್ತದೆ.
ವಿಟಮಿನ್ ಡಿ : ವಿಟಮಿನ್ ಡಿ ನಮ್ಮ ದೇಹಕ್ಕೆ ಬಹಳ ಮುಖ್ಯ. ಅದ್ರ ಪ್ರಮಾಣ ಕಡಿಮೆ ಆದಂತೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ನೀವು ರಕ್ತ ಪರೀಕ್ಷೆ ಮೂಲಕ ವಿಟಮಿನ್ ಡಿ ಪರೀಕ್ಷೆ ಮಾಡಿಸಿಕೊಳ್ಳಿ. ಕಡಿಮೆ ಇದ್ದಲ್ಲಿ ಪೂರಕ ಮಾತ್ರೆ, ಆಹಾರ ಸೇವನೆ ಮಾಡಿ.