ಇಲ್ಲೊಬ್ಬ ಪ್ರೇಮಿ ತನ್ನ ಪ್ರಿಯ ಪತ್ನಿಗೆ ನೀಡಿದ ಈ ಅಮೂಲ್ಯ ಗಿಫ್ಟ್ ನೋಡಿ ಹೆಂಗೆಳೆಯರೆಲ್ಲಾ ವಾವ್ ಎಂದಿದ್ದಾರೆ. ಇದೊಂದು ಅದ್ಬುತ ಗಿಫ್ಟ್ ಇದಕ್ಕಿಂತ ದೊಡ್ಡ ಗಿಫ್ಟ್ ಮತ್ತೊಂದಿಲ್ಲ ಎಂದು ಕೊಂಡಾಡುತ್ತಿದ್ದಾರೆ. ಹಾಗಾದರೆ ಆತ ನೀಡಿದ ಗಿಫ್ಟ್ ಏನು ಮುಂದಿದೆ ಓದಿ..
ಪ್ರೇಮಿಗಳ ದಿನ ಕಳೆದೇ ಹೋಯ್ತು. ಆದರೆ ಪ್ರೇಮಿಗಳ ದಿನ ಪತಿಯೋರ್ವ ಪತ್ನಿಗೆ ನೀಡಿದ ಗಿಫ್ಟ್ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಪ್ರೇಮಿಗಳ ದಿನದಂದು ತನ್ನ ಪ್ರೇಮಿಗಾಗಿ ಕೆಲವರು ಬಹಳ ಅದ್ದೂರಿಯಾದ ಗಿಫ್ಟ್‌ಗಳನ್ನು ನೀಡುತ್ತಾರೆ. ಕೆಲವರು ಹಣದಲ್ಲಿ ದುಬಾರಿ ಗಿಫ್ಟ್ ನೀಡಿದರೆ ಮತ್ತೆ ಕೆಲವು ಗಿಫ್ಟ್‌ಗಳ ಮಾರುಕಟ್ಟೆ ಬೆಲೆ ಕಡಿಮೆ ಇದ್ದರೂ ಅದಕ್ಕೆ ಬೆಲೆ ಕಟ್ಟಲಾಗದು. ಅದು ಸೃಜನಾತ್ಮಕವಾಗಿದ್ದು, ಹೃದಯದಾಳವನ್ನು ತಟ್ಟುತ್ತಿರುತ್ತದೆ. ಬಹುಕಾಲ ಪ್ರೇಮಿಗಳ ಮನದಲ್ಲಿ ನೆನಪಿನಲ್ಲಿ ಉಳಿಯುತ್ತದೆ. ಅದೇ ರೀತಿ ಇಲ್ಲೊಬ್ಬ ಪ್ರೇಮಿ ತನ್ನ ಪ್ರಿಯ ಪತ್ನಿಗೆ ನೀಡಿದ ಈ ಅಮೂಲ್ಯ ಗಿಫ್ಟ್ ನೋಡಿ ಹೆಂಗೆಳೆಯರೆಲ್ಲಾ ವಾವ್ ಎಂದಿದ್ದಾರೆ. ಇದೊಂದು ಅದ್ಬುತ ಗಿಫ್ಟ್ ಇದಕ್ಕಿಂತ ದೊಡ್ಡ ಗಿಫ್ಟ್ ಮತ್ತೊಂದಿಲ್ಲ ಎಂದು ಕೊಂಡಾಡುತ್ತಿದ್ದಾರೆ. ಹಾಗಾದರೆ ಆತ ನೀಡಿದ ಗಿಫ್ಟ್ ಏನು ಮುಂದಿದೆ ಓದಿ..
ಸಾಮಾನ್ಯವಾಗಿ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದು ಅಷ್ಟು ಸುಲಭವಲ್ಲ, ಅಮ್ಮನ ಹಿಂದೆಯೇ ಸುತ್ತಾಡುವ ಈ ಮಕ್ಕಳು ಅಮ್ಮ ಒಂಚೂರು ಕಣ್ಣಂಚಿನಿಂದ ದೂರ ಆದರೂ ಜೋರಾಗಿ ಅಳಲು ಶುರು ಮಾಡುತ್ತವೆ. ಇದರಿಂದ ಅಮ್ಮನಿಗೆ ತನ್ನ ವೈಯಕ್ತಿಕ ಕೆಲಸ ಮಾಡುವುದಕ್ಕೂ ಸ್ವಲ್ಪವೂ ಸಮಯ ಇಲ್ಲದಂತಾಗಿರುತ್ತದೆ. ಅಪ್ಪ ಜೊತೆಗಿದ್ದರೂ, ಕಾಳಜಿ ತೆಗೆದುಕೊಳ್ಳಲು ಸಿದ್ಧರಿದ್ದರೂ ಪುಟ್ಟ ಮಗುವಿಗೆ ಮಾತ್ರ ಅಮ್ಮನೇ ಬೇಕು. ಹೊಸದಾಗಿ ತಾಯಿಯಾದವರಿಗೆ ಇದರ ಅನುಭವ ತುಂಬಾ ಚೆನ್ನಾಗಿರುತ್ತದೆ. ತಿನ್ನುವುದಕ್ಕೂ, ನಿದ್ದೆ ಮಾಡುವುದಕ್ಕೂ, ವಾಶ್ ರೂಮ್‌ಗೆ ಹೋಗುವುದಕ್ಕೂ ಕನಿಷ್ಟ ತನ್ನ ಅಮ್ಮನೊಂದಿಗೆ ಮಾತನಾಡುವುದಕ್ಕೂ ಆ ತಾಯಿಗೆ ಸಮಯವಿರುವುದಿಲ್ಲ, ಮಗುವನ್ನು ಮಲಗಿಸಿ ಇನ್ನೇನೂ ನಿದ್ದೆಗೆ ಜಾರಿತ್ತು ತಾನು ಸ್ವಲ್ಪ ನೆಮ್ಮದಿಯಾಗಿರಬಹುದು ಎನ್ನುವಷ್ಟರಲ್ಲಿ ಮಗು ಮತ್ತೆ ಎದ್ದು ಬಿಡುತ್ತಿದೆ. ಕೇವಲ ಒಂದು ತುತ್ತು ಗಂಟಲಿಗಿಳಿಯುತ್ತಿದ್ದಂತೆ ಮಗು ಜೋರಾಗಿ ಅಳಲು ಶುರು ಮಾಡಿ ಮತ್ತೆ ಕೆಲಸ ಕೆಟ್ಟು ಬಿಡುತ್ತದೆ. ಹೀಗಾಗಿ ಹೊಸದಾಗಿ ತಾಯಿಯಾದವರ ಜೊತೆಗೆ ಪುಟ್ಟ 2 ರಿಂದ 3 ವರ್ಷದೊಳಗಿನ ಮಕ್ಕಳಿರುವವ ತಾಯಂದಿರಿಗೆ ವೈಯಕ್ತಿಕ ಬದುಕು ಸಮಯ ಎಂಬುದು ಇರುವುದೇ ಇಲ್ಲ, ಅಮ್ಮನ ಜೊತೆಗೆ ಜೊತೆಯಲ್ಲಿ ಯಾರಾದರೂ ಮಕ್ಕಳನ್ನು ನೋಡುವವರು ಇದ್ದರೇ ತುಸು ನೆಮ್ಮದಿ ಇಲ್ಲದೇ ಹೋದರೆ ಮಗುವಿಗೆ ವರ್ಷ ತುಂಬುವಷ್ಟರಲ್ಲಿ ತಾಯಿ ಹೈರಾಣಾಗಿ ಬಿಡುತ್ತಾಳೆ. ಅಂತಹ ಅಮ್ಮನಿಗೆ ಒಂದು ದಿನ ಪೂರ್ತಿಯಾಗಿ ತನ್ನ ಮಗುವನ್ನು ಅಳದಂತೆ ತನ್ನ ತಂಟೆಗೆ ಬರದಂತೆ ನೋಡಿಕೊಳ್ಳುವ ಮೂಲಕ ಗಿಫ್ಟ್ ನೀಡಿದರೆ ಅದಕ್ಕಿಂತ ದೊಡ್ಡ ಸುಖ ಆಕೆಗೆ ಬೇರಾವುದು ಇಲ್ಲ, ಇದನ್ನು ಚೆನ್ನಾಗಿ ಅರಿತ ಗಂಡನೋರ್ವ ಈ ರೀತಿ ಮಗುವನ್ನು ಒಂದು ದಿನವಿಡೀ ನೋಡಿಕೊಳ್ಳುವ ಮೂಲಕ ಪತ್ನಿಗೆ ವ್ಯಾಲೇಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನದ ಗಿಫ್ಟ್ ನೀಡಿದ್ದು, ಈ ವೀಡಿಯೋ ಸಖತ್ ವೈರಲ್ ಆಗಿದೆ.
ಈ ವೀಡಿಯೋ ನೋಡಿದ ಅನೇಕರು ಇದೊಂದು ಬೆಸ್ಟ್ ಗಿಫ್ಟ್ ಎಂದಿದ್ದಾರೆ. ಹೆಚ್ಚಿನವರು ಅದ್ದೂರಿ ಐಷಾರಾಮಿ ಗಿಫ್ಟ್ ನೀಡುತ್ತಾರೆ. ಆದರೆ ತಾಯಿಗೆ, ವಿಶೇಷವಾಗಿ ಮಹಿಳೆಗೆ ಅಗತ್ಯವಾಗಿ ನೀಡಬೇಕಾಗಿರುವುದು ವೈಯಕ್ತಿಕವಾದ ತಮ್ಮ ಸಮಯ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಗಂಡನೋರ್ವ ಹೆಂಡತಿಗೆ ನೀಡಿದ ಬೆಸ್ಟ್ ಗಿಫ್ಟ್ ಇದು ಎಂದು ವೀಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದಾರೆ. ಸದಾ ವೈರಲ್ ವೀಡಿಯೋವನ್ನು ಪೋಸ್ಟ್ ಮಾಡುವ @TheFigen_ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ಏನಿದೆ?
ವೀಡಿಯೋದಲ್ಲಿ ಕಾಣಿಸುವಂತೆ ಅಮ್ಮ ಈ ಒಂದು ದಿನವನ್ನು ಸಂಪೂರ್ಣವಾಗಿ ತನ್ನ ವೈಯಕ್ತಿಕ ಕೆಲಸ ಊಟ ತಿಂಡಿ ಅಡುಗೆ ಕೆಲಸ ನಿದ್ದೆಯಲ್ಲಿ ತೊಡಗಿದ್ದು, ಆಕೆಗಿರುವ ಪುಟ್ಟ ಮಗು ಅಮ್ಮನ ಬಳಿ ಹೋಗುವಾಗಲೆಲ್ಲಾ, ಅಪ್ಪ ಆ ಮಗುವನ್ನು ತನ್ನತ್ತ ಎಳೆದುಕೊಂಡು ಬಂದು ನೋಡಿಕೊಳ್ಳುತ್ತಾನೆ. ಅಮ್ಮ ಸೋಪಾದಲ್ಲಿ ಕುಳಿತು ಮೊಬೈಲ್ ನೋಡ್ತಿದ್ರೆ ಅಲ್ಲಿ ಮಗು ಹೋಗಿ ಇನ್ನೇನು ಅಮ್ಮನನ್ನು ಮುಟ್ಟಬೇಕು ಅನ್ನವಷ್ಟರಲ್ಲಿ ಮಗುವನ್ನು ಅಪ್ಪ ಬಂದು ಎತ್ತಿಕೊಳ್ಳುತ್ತಾನೆ. ಇದಾದ ನಂತರ ಅಮ್ಮ ಎದ್ದು ಹೋಗುತ್ತಿದ್ದರೆ ಆಗಲು ಅಮ್ಮನ ಹಿಂದೆ ಓಡುತ್ತೆ ಈ ಮಗು, ಆಗಲು ಅಪ್ಪ ಬಂದು ಕಂದನನ್ನು ಎಳೆದುಕೊಂಡು ಬಾಗಿಲು ಹಾಕಿಕೊಳ್ಳುತ್ತಾನೆ ನಂತರ ಅಮ್ಮ ಅಡುಗೆ ಮಾಡ್ತಿದ್ರೆ ಅಲ್ಲಿಗೂ ಮಗು ಹೋಗುತ್ತೆ, ಅಲ್ಲೂ ಅಪ್ಪ ಮಗುವನ್ನು ತನ್ನತ್ತ ಎಳೆದುಕೊಂಡು ಅಮ್ಮನಿಗೆ ಡಿಸ್ಟರ್ಬ್ ಮಾಡದಂತೆ ನೋಡಿಕೊಳ್ಳುತ್ತಾನೆ. ನಂತರ ಅಮ್ಮ ನಿದ್ದೆಗೆ ಜಾರಿದರೆ ಅಲ್ಲೂ ಅಮ್ಮನ ಬಳಿ ಮಗು ಹೋದರೆ ಅಪ್ಪ ಮಗುವಿನ ಕಾಲಿನಲ್ಲಿ ಹಿಡಿದು ಎಳೆದು ಮಗುದನ್ನು ಕರೆದೊಯ್ಯುತ್ತಾನೆ. ಹೀಗೆ ಇಡೀ ದಿನ ಮಗು ತಾಯಿಗೆ ಯಾವುದೇ ಡಿಸ್ಟರ್ಬ್ ಮಾಡದಂತೆ ಈ ಅಪ್ಪ ನೋಡಿಕೊಂಡಿದ್ದು ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ. 6 ಮಿಲಿಯನ್ ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ.
ನೀವು ಈ ಅದ್ಬುತ ವೀಡಿಯೋ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ...
He wanted to give his wife a Valentine's Day gift by taking care of his child 24 hours a day. 😂 pic.twitter.com/FMes88xUvd
— Figen (@TheFigen_)