ಕೈತುಂಬ ಹಣ ಸಿಗುವ ಕೆಲಸದಲ್ಲಿ ನೆಮ್ಮದಿ ಇಲ್ಲವೆಂದ್ರೆ ಕೆಲಸ ಬಿಡೋದು ಸೂಕ್ತ ಆಯ್ಕೆ. ಆದ್ರೆ ಕೆಲಸ ಬಿಟ್ಮೇಲೆ ಏನು ಎಂಬ ಪ್ರಶ್ನೆಗೆ ಉತ್ತರ ಗೊತ್ತಿರಬೇಕು. ಈಕೆಯಂತೆ ಬುದ್ಧಿ ಉಪಯೋಗಿಸಿದ್ರೆ ನೀವೂ ಒಳ್ಳೆ ಆದಾಯ, ನೆಮ್ಮದಿ ಪಡೆಯಬಹುದು.
ಒಳ್ಳೆ ಕೆಲಸದಲ್ಲಿರೋ ಕೆಲವರು ಅಚಾನಕ್ ಕೆಲಸ ಬಿಡುವ ಮೂಲಕ ಜನರನ್ನು ಅಚ್ಚರಿಗೊಳಿಸ್ತಾರೆ. ಇಷ್ಟೆಲ್ಲ ಸಂಬಳ ಬರ್ತಿರೋ ಕೆಲಸ ಬಿಡೋಕೆ ಇವರಿಗೇನು ಹುಚ್ಚಾ ಅಂತಾ ನಾವು ಪ್ರಶ್ನೆ ಮಾಡ್ತಿರುತ್ತೇವೆ. ಆದ್ರೆ ಅವರು ಕೆಲಸ ಬಿಟ್ಟ ಉದ್ದೇಶ ಬೇರೆಯದೇ ಇರುತ್ತದೆ. ಹಣದ ಜೊತೆ ನೆಮ್ಮದಿ ಕೂಡ ಮುಖ್ಯ ಎನ್ನುವ ಕೆಲವರು ತಮ್ಮಿಷ್ಟದ ಕೆಲಸವನ್ನು ಆಯ್ಕೆ ಮಾಡಿಕೊಳ್ತಾರೆ. ಅದ್ರಲ್ಲೇ ಕೈತುಂಬ ಸಂಪಾದನೆ ಮಾಡ್ತಾರೆ. ಅಂಥವರಲ್ಲಿ ಅಮೆರಿಕಾರ ಫಿಲಡೆಲ್ಫಿಯಾ ಪ್ರಾಪರ್ಟಿ ವಕೀಲೆ ಒಬ್ಬರು.
ಒಳ್ಳೆ ಕೆಲಸ ಬಿಟ್ಟು ಸಾಕು ಪ್ರಾಣಿ (Animal) ಪ್ರೇಮಿಯಾದ ಮಹಿಳೆ : ಅವರ ಹೆಸರು ನಿಕ್ಕಿ ವಾಸ್ಕೊನೆಜ್. ವಯಸ್ಸು 33 ವರ್ಷ. ನಿಕ್ಕಿ ವಾಸ್ಕೊನೆಜ್ ಹಿಂದೆ ಮಾಡ್ತಿದ್ದ ಕೆಲಸದಲ್ಲಿ ವಾರ್ಷಿಕವಾಗಿ 62 ಲಕ್ಷ ರೂಪಾಯಿ ಗಳಿಸ್ತಾ ಇದ್ರು. ಆದ್ರೆ ಇದ್ದಕ್ಕಿದ್ದಂತೆ ಆ ಕೆಲಸ ಬಿಟ್ಟ ನಿಕ್ಕಿ ವಾಸ್ಕೊನೆಜ್ ಸಾಕುಪ್ರಾಣಿ (Pet) ತಜ್ಞೆಯಾಗಿ ಬದಲಾಗಿದ್ದಾರೆ. ಈಗ ಅವರು ಸಾಕುಪ್ರಾಣಿಗಳ ಜೊತೆ ಮಾತನಾಡುವ ಕೆಲಸ ಮಾಡ್ತಿದ್ದಾರೆ. ನಿಕ್ಕಿ 2020 ರಲ್ಲಿ ಅದಕ್ಕಾಗಿ ತಯಾರಿ ಆರಂಭಿಸಿದ್ದರು. ಪ್ರಾಣಿಗಳನ್ನು ಅರ್ಥ ಮಾಡಿಕೊಳ್ಳುವ ತರಬೇತಿ ಪಡೆದರು. ಇದಾದ ನಂತ್ರ ಫೇಸ್ಬುಕ್ (Facebook), ಇನ್ಸ್ಟಾಗ್ರಾಮ್ ಹಾಗೂ ಟಿಕ್ ಟಾಕ್ ನಲ್ಲಿ ಜಾಹೀರಾತು ನೀಡಲು ಶುರು ಮಾಡಿದ್ದರು.
ಒಂದು ಅಪಾಯಿಂಟ್ಮೆಂಟ್ ಗೆ ನಿಕ್ಕಿ ಎಷ್ಟು ಹಣ ಪಡೆಯುತ್ತಾರೆ? : ಪ್ರಾಣಿಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಿಕ್ಕಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಯಾಕೆಂದ್ರೆ ಅವರ ಕೆಲಸಕ್ಕೆ ಬೇಡಿಕೆ ಹೆಚ್ಚಾಗಿದೆ. ನೂರಾರು ಬುಕ್ಕಿಂಗ್ ಬರಲು ಶುರುವಾಗಿದೆ. ನಿಕ್ಕಿ ಒಂದು ಅಪಾಯಿಂಟ್ಮೆಂಟ್ 47 ಸಾವಿರ ರೂಪಾಯಿ ಚಾರ್ಜ್ ಮಾಡ್ತಾರೆ.
ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಅಮೆಜಾನ್ ಪೇ ಬಳಕೆದಾರರು ಪ್ರತಿದಿನ ಎಷ್ಟು ಯುಪಿಐ ಪಾವತಿ ಮಾಡ್ಬಹುದು?
ನಿಕ್ಕಿ ಜಾಬ್ ಬದಲಿಸಿದ್ದು ಏಕೆ? : ನಿಕ್ಕಿ ಸಾಕುಪ್ರಾಣಿ ಸೈಕಾಲಜಿಸ್ಟ್ (Pet Psychologist) ಆಗಲು ಕಾರಣವೇನು ಎಂಬುದನ್ನು ಹೇಳಿದ್ದಾರೆ. ಮೊದಲು ಮಾಡ್ತಿದ್ದ ಕೆಲಸದಲ್ಲಿ ಖುಷಿ ಇರಲಿಲ್ಲ ಎನ್ನುವ ನಿಕ್ಕಿ, ಗಂಟೆಗಟ್ಟಲೆ ಕೆಲಸ ಮಾಡ್ಬೇಕಿತ್ತು. ಆದ್ರೆ ಆ ಕೆಲಸದಿಂದ ನನಗೆ ನೆಮ್ಮದಿ ಸಿಗ್ತಿರಲಿಲ್ಲ. ಹಾಗಂತ ಕೆಲಸ ಬಿಡಲು ಹೆದರುತ್ತಿದ್ದೆ. ಈಗ ನನ್ನಿಷ್ಟದ ಕೆಲಸ ಮಾಡ್ತಿದ್ದೇನೆ. ಅದ್ರಲ್ಲಿ ಸಂಪೂರ್ಣ ಖುಷಿ ಇದೆ ಎನ್ನುತ್ತಾರೆ.
ಅಬ್ಬಬ್ಬಾ..ಅಂಬಾನಿ ಕುಟುಂಬದ ಜೊತೆ ಬೆಂಗಾವಲು ಬರೋ ಕಾರಿನ ಬೆಲೆ ಕೋಟಿ ಕೋಟಿ ಮೀರುತ್ತೆ!
ಆರಂಭದಲ್ಲಿ ಉಚಿತ ಸೇವೆ : ನಿಕ್ಕಿ ಆರಂಭದಲ್ಲಿ ಮನೆಯ ಹಾಗೂ ಸ್ನೇಹಿತರ ಮನೆಯ ಸಾಕು ಪ್ರಾಣಿಗಳ ಜೊತೆ ಪ್ರಾಕ್ಟೀಸ್ ಶುರು ಮಾಡಿದ್ದರು. ಬೀದಿ ನಾಯಿಗಳು, ಪ್ರಾಣಿಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದರು. ಅದಕ್ಕೆ ಅವರು ಯಾವುದೇ ಚಾರ್ಜ್ ಮಾಡ್ತಿರಲಿಲ್ಲ. ನಂತ್ರ ಈ ಕೆಲಸವನ್ನು ವೃತ್ತಿಯಾಗಿ ಸ್ವೀಕರಿಸುವ ನಿರ್ಧಾರಕ್ಕೆ ಬಂದರು. ಸಾಮಾಜಿಕ ಜಾಲತಾಣದಲ್ಲಿ ಮೊದಲು ಅಕೌಂಟ್ ತೆರೆದರು. ಅಕೌಂಟ್ ತೆರೆಯುತ್ತಿದ್ದಂತೆ ಅನೇಕ ಫಾಲೋವರ್ಸ್ ಪಡೆದ ನಿಕ್ಕಿಗೆ ನಂತ್ರ ಅಪಾಯಿಂಟ್ಮೆಂಟ್ ಸಿಗ್ತಾ ಹೋಯ್ತು. ಈಗ ನಿಕ್ಕಿ ಈ ಕೆಲಸದಲ್ಲಿ ತುಂಬಾ ಬ್ಯುಸಿಯಿದ್ದಾರೆ. ನಿಕ್ಕಿ ಅಪಾಯಿಂಟ್ಮೆಂಟ್ ಲೀಸ್ಟ್ ನಲ್ಲಿ 4000 ಜನರ ವೇಟಿಂಗ್ ಲಿಸ್ಟ್ ಇದೆ.
ಸಾಕುಪ್ರಾಣಿಗಳ ಜೊತೆ ಮಾತನಾಡೋದು ಹೇಗೆ? : ನಿಕ್ಕಿ ಸಾಕುಪ್ರಾಣಿಗಳ ಮುಖವನ್ನು ನೋಡುತ್ತಾರೆ ಮತ್ತು ಟೆಲಿಪಥಿಕ್ ಆಗಿ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೆಗೆ ಬರುವ ಉತ್ತರವನ್ನು ಮಾಲಿಕರಿಗೆ ಹೇಳ್ತಾರೆ. ಪ್ರಾಣಿಯ ಹೆಸರು, ಅದರ ಲಿಂಗ ಹಾಗೂ ಮನೆಯಲ್ಲಿ ವಾಸಿಸುವ ಜನರ ಮಾಹಿತಿಯನ್ನು ನಿಕ್ಕಿಗೆ ಮೊದಲೇ ನೀಡಬೇಕಾಗುತ್ತದೆ. ಮನಸ್ಸಿನಲ್ಲಿರುವ ಚಿತ್ರಗಳು ಮತ್ತು ದೇಹದಲ್ಲಿನ ಭಾವನೆಗಳನ್ನು ಸ್ವೀಕರಿಸುವ ಮೂಲಕ ನಾನು ಪ್ರಾಣಿಗಳೊಂದಿಗೆ ಸಂವಹನ ನಡೆಸುತ್ತೇನೆ ಎಂದು ನಿಕ್ಕಿ ಹೇಳುತ್ತಾರೆ. ಇದು ಪ್ರಾಣಿಗಳಿಗೂ ಅಗತ್ಯ. ಅವರ ಇಷ್ಟಕಷ್ಟಗಳನ್ನು ಇದ್ರಿಂದ ಪತ್ತೆ ಮಾಡಬಹುದು ಎನ್ನುತ್ತಾರೆ ನಿಕ್ಕಿ.