ಡಾಕ್ಟರ್ ಬದ್ಲು ಕಾಂಪೌಂಡರ್ ಮಾಡಿದ ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್‌ಗೆ ಮಹಿಳೆ ಬಲಿ!

By Suvarna NewsFirst Published Apr 22, 2024, 3:15 PM IST
Highlights

ಶಿಕ್ಷಣಕ್ಕೆ ತಕ್ಕಂತೆ ವೃತ್ತಿ ಮಾಡ್ಬೇಕು. ಅದ್ರಲ್ಲೂ ವೈದ್ಯ, ಕಾಂಪೌಂಡರ್ ನಲ್ಲಿ ಸಾಕಷ್ಟು ವ್ಯತ್ಯಾಸವಿದೆ. ವೈದ್ಯರು ಮಾಡಿದ ಕೆಲಸ ನನಗೂ ಬರುತ್ತೆ ಅಂತಾ ಆಪರೇಷನ್ ಟೂಲ್ ಹಿಡಿದ್ರೆ ರೋಗಿ ಜೀವ ಹೋಗಿದ್ದೂ ತಿಳಿಯೋದಿಲ್ಲ. ಈಗ ಅಂಥಹದ್ದೇ ಘಟನೆ ನಡೆದಿದೆ. 
 

ಆಸ್ಪತ್ರೆ ಅಂದರೆ ದೇವಸ್ಥಾನ ಅಂತ ಜನರು ಭಾವಿಸಿದ್ದಾರೆ. ವೈದ್ಯರು ಯಾವುದೇ ಮಾತ್ರೆ ನೀಡ್ಲಿ ಅದನ್ನು ನಂಬಿಕೆಯಿಂದ ತೆಗೆದುಕೊಳ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆ, ವೈದ್ಯರನ್ನು ನಂಬೋದೇ ಕಷ್ಟ ಎನ್ನುವಂತಾಗಿದೆ. ಒಂದ್ಕಡೆ ಯರ್ರಾಬಿರ್ರಿ ಹಣ ವಸೂಲಿ ಮಾಡುವ ಆಸ್ಪತ್ರೆಯಾದ್ರೆ ಇನ್ನೊಂದು ಕಡೆ ಯಾವುದೋ ಖಾಯಿಲೆಗೆ ಇನ್ನಾವುದೋ ಮಾತ್ರೆ ನೀಡುವ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗೆ ಹೋದವರು ಸುರಕ್ಷಿತವಾಗಿ ಮನೆಗೆ ಬಂದ್ರೆ ಸಾಕು ಎನ್ನುವ ಸ್ಥಿತಿ ಇದೆ ಅಂದ್ರೆ ಅತಿಶಯೋಕ್ತಿ ಆಗೋದಿಲ್ಲ. ಬಿಹಾರದಲ್ಲಿ ನಡೆದ ಘಟನೆಯೊಂದು ಸದ್ಯ ಎಲ್ಲರನ್ನು ಆಘಾತಗೊಳಿಸಿದೆ.

ಬಿಹಾರ (Bihar) ದ ಸಮಸ್ತಿಪುರ ಜಿಲ್ಲೆಯ ಮುಸ್ರಿಘರಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟೋರಿ ರಸ್ತೆ ಬದಿಯಲ್ಲಿರುವ ಅನಿಶಾ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಮುಸ್ರಿಘರಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾಪುರ ಗ್ರಾಮದ ನಿವಾಸಿ 28 ವರ್ಷದ ಬಬಿತಾ ದೇವಿ ಎಂದು ಗುರುತಿಸಲಾಗಿದೆ. ಆರೋಗ್ಯ (Health) ಕೇಂದ್ರದಲ್ಲಿ ವೈದ್ಯರು ಇಲ್ಲದಿದ್ದಾಗ ಕಾಂಪೌಂಡರ್ ಮಹಿಳೆಗೆ ಶಸ್ತ್ರ ಚಿಕಿತ್ಸೆ (Surgery) ಮಾಡಿಸಿದ್ದಾನೆ. ಇದರಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 

EYE CARE: ಬೆಳಗ್ಗೆ ಎದ್ದ ಕೂಡಲೇ ಕಣ್ಣು ತೊಳಿಯೋದು ಬೇಡ ಅಂತಾರೆ ತಜ್ಞರು!

ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ಮಹಿಳೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಕಾಂಪೌಂಡರ್ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿಲ್ಲ ಎಂದು ತಿಳಿಸಿದ್ದರು. ಸ್ವಲ್ಪ ಸಮಯದ ನಂತರ ಕಾಂಪೌಂಡರ್ ಮಹಿಳೆಗೆ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಮಾಡಿದ ತಕ್ಷಣ ಮಹಿಳೆ ಸಾವನ್ನಪ್ಪಿದ್ದಾಳೆ. ಆದರೆ  ಕಾಂಪೌಂಡರ್ ಕುಟುಂಬ ಸದಸ್ಯರಿಗೆ ಈ ಬಗ್ಗೆ ತಿಳಿಸಿರಲಿಲ್ಲ.

ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಮಹಿಳೆಯನ್ನು ಸಮಸ್ತಿಪುರ್ ಮೋಹನ್‌ಪುರದಲ್ಲಿರುವ ಮಾನವ್ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆ ಕುಟುಂಬಸ್ಥರಿಗೆ ಅನುಮಾನ ಬಂದಿದೆ. ಮಹಿಳೆಯ ದೇಹವನ್ನು ಮುಟ್ಟಿದಾಗ ತಣ್ಣಗಾಗಿರುವುದು ಕಂಡು ಬಂದಿದೆ. ನಂತರ ಈ ಘಟನೆಯನ್ನು ಮುಸ್ರಿಘರಾರಿ ಪೊಲೀಸರಿಗೆ ತಿಳಿಸಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ ಮಹಿಳೆ ಮೃತಪಟ್ಟಿರುವುದು ಗೊತ್ತಾಗಿದೆ. ಮಹಿಳೆಯ ಸಾವು ಖಚಿತವಾದ ಬಳಿಕ ಕುಟುಂಬಸ್ಥರು ಮೃತದೇಹವನ್ನು ಆಸ್ಪತ್ರೆಯ ಮುಂದೆ ಇಟ್ಟು ಗಲಾಟೆ ಆರಂಭಿಸಿದ್ದಾರೆ.

ಮುಸ್ರಿಘರಾರಿಯಲ್ಲಿ ಇರುವ ಯಾವುದೇ ಆಸ್ಪತ್ರೆಯಲ್ಲಿ ವೈದ್ಯರಲ್ಲ, ಕಾಂಪೌಂಡರ್‌ಗಳು ಚಿಕಿತ್ಸೆ ನೀಡುತ್ತಿದ್ದಾರೆ ಮತ್ತು ಆಪರೇಷನ್‌ಗಳನ್ನು ಸಹ ಮಾಡುತ್ತಾರೆ ಎಂಬ ಆರೋಪವಿದೆ. ಮಹಿಳೆ ಸಾವನ್ನಪ್ಪಿದ ಬಳಿಕ ಆಸ್ಪತ್ರೆಯ ಸಿಬ್ಬಂದಿಯೆಲ್ಲಾ ಆಸ್ಪತ್ರೆ ಬಂದ್ ಮಾಡಿ ಓಡಿ ಹೋಗಿದ್ದಾರೆ.  

ಸಂತಾನಹರಣ ಚಿಕಿತ್ಸೆ : ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಅತ್ಯುತ್ತಮ ಗರ್ಭನಿರೋಧಕ ವಿಧಾನವಾಗಿದೆ. ಮಹಿಳೆ ತನ್ನ ಕುಟುಂಬ ಪೂರ್ಣಗೊಳಿಸಿದ ನಂತ್ರ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗ್ತಾಳೆ.  ಈಗ ಹೆಚ್ಚಿನ ಜನರು ಕೇವಲ 1 ಅಥವಾ 2 ಮಕ್ಕಳನ್ನಷ್ಟೇ ಪಡೆಯುತ್ತಿದ್ದಾರೆ. ಇದಾದ ನಂತ್ರ ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮನಸ್ಸು ಮಾಡ್ತಾರೆ. ಸಂತಾನ ಹರಣ ವಿಧಾನವು ತುಂಬಾ ಸುಲಭ ಮತ್ತು ಸುರಕ್ಷಿತವಾಗಿದೆ.

ದುಬಾರಿ ಕ್ರೀಮ್‌ ಕೊಂಡು ಮುಖಕ್ಕೆ ಹಚ್ಚಬೇಕಿಲ್ಲ, ಈ ಡ್ರೈಫ್ರೂಟ್ಸ್ ತಿಂದ್ರೆ ಮುಖ ಫಳಫಳ ಹೊಳೆಯುತ್ತೆ

ಮಹಿಳೆ ಅಂಡಾಶಯದಲ್ಲಿ (Overy) ರೂಪುಗೊಂಡ ಮೊಟ್ಟೆಯು ಗರ್ಭಾಶಯವನ್ನು ತಲುಪಿದಾಗ ಮತ್ತು ನಂತರ ಪುರುಷನ ವೀರ್ಯದೊಂದಿಗೆ ಸಂಪರ್ಕಕ್ಕೆ ಬಂದಾಗ ಗರ್ಭಿಣಿಯಾಗುತ್ತಾಳೆ. ಮೊಟ್ಟೆ ಅಂಡಾಶಯದಿಂದ ಗರ್ಭಾಶಯಕ್ಕೆ ಫಾಲೋಪಿಯನ್ ಟ್ಯೂಬ್ ಮೂಲಕ ಚಲಿಸುತ್ತದೆ. ಸಂತಾನಹರಣ ಶಸ್ತ್ರಚಿಕಿತ್ಸೆ ಸಮಯದಲ್ಲಿ ಫಾಲೋಪಿಯನ್ ಟ್ಯೂಬ್ ಅನ್ನು ಕತ್ತರಿಸಲಾಗುತ್ತದೆ ಅಥವಾ ಮುಚ್ಚಲಾಗುತ್ತದೆ. ಇದನ್ನು ಮಾಡುವುದರಿಂದ, ಮಹಿಳೆಯ ಅಂಡಾಶಯದಲ್ಲಿ ರೂಪಗೊಂಡ ಮೊಟ್ಟೆ  ಗರ್ಭಾಶಯವನ್ನು ತಲುಪುವುದಿಲ್ಲ. ಇದ್ರಿಂದ ಗರ್ಭಧರಿಸಲು ಸಾಧ್ಯವಾಗೋದಿಲ್ಲ. ಆದ್ರೆ ಅಪರೂಪಕ್ಕೆ ಒಂದು ಮಹಿಳೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಂತ್ರವೂ ಗರ್ಭಧರಿಸುವ ಅಪಾಯವಿದೆ. ಇದಕ್ಕೆ ನಿಗದಿತ ವಯಸ್ಸಿಲ್ಲವಾದ್ರೂ ಮಕ್ಕಳಾದ ಮಹಿಳೆಯರು 40 ವರ್ಷದ ನಂತ್ರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಆಸಕ್ತಿ ತೋರುತ್ತಾರೆ.

click me!