ಜ್ಯೋತಿಷ್ಯ, ಅದೃಷ್ಟವನ್ನು ಎಷ್ಟು ನಂಬಬೇಕು ಎಂಬುದು ನಿಮಗೆ ಬಿಟ್ಟಿದ್ದು. ಅನೇಕ ಬಾರಿ ಜ್ಯೋತಿಷಿಗಳು ಹೇಳಿದಂತೆ ನಡೆಯೋದಿದೆ. ಆಗ ನಾಸ್ತಿಕನೂ ಗೊಂದಲಕ್ಕೀಡಾಗ್ತಾನೆ. ಈ ಸ್ಟೋರಿ ಕೂಡ ಅಚ್ಚರಿ ಹುಟ್ಟಿಸುತ್ತದೆ.
ಅದೃಷ್ಟ ಕೈ ಹಿಡಿದ್ರೆ ಭಿಕ್ಷುಕ ಕೂಡ ಶ್ರೀಮಂತನಾಗಬಲ್ಲ ಎನ್ನುವ ಮಾತಿದೆ. ಅನೇಕರ ಜೀವನದಲ್ಲಿ ಇದು ಸತ್ಯವಾಗಿದೆ. ಬಡ ಕುಟುಂಬದಿಂದ ಬಂದ ಅದೆಷ್ಟೋ ಮಂದಿ ನಿರಂತರ ಪ್ರಯತ್ನ ಮಾಡಿ ಕೋಟ್ಯಾಧಿಪತಿಗಳಾಗಿದ್ದಾರೆ. ಮತ್ತೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗಿದ್ದಿದೆ. ಲಾಟರಿ ಹೊಡೆದೋ ಇಲ್ಲ ತಂದೆಯ ಆಸ್ತಿ ಮಗನ ಕೈಗೆ ಬಂದೋ ಶ್ರೀಮಂತರಾದವರೇ ಹೆಚ್ಚು. ನಮ್ಮಲ್ಲಿ ಕೆಲವರು ಜ್ಯೋತಿಷ್ಯವನ್ನು ಬಲವಾಗಿ ನಂಬ್ತಾರೆ. ಇಂದು ದಿನ ಚೆನ್ನಾಗಿಲ್ಲ, ರಾಹು- ಕೇತುವಿನ ಕಾಟವಿರೋ ಕಾರಣ ಉದ್ಯೋಗ ಸಿಗ್ತಿಲ್ಲ, ಬಡ್ತಿ ಆಗ್ತಿಲ್ಲ, ವ್ಯಾಪಾರದಲ್ಲಿ ಲಾಭವಾಗ್ತಿಲ್ಲ ಎನ್ನುತ್ತಿರುತ್ತಾರೆ. ಮತ್ತೆ ಕೆಲವರು ಯಾವುದೇ ಕೆಲಸ ಮಾಡ್ಲಿ ಅದಕ್ಕಿಂತ ಮೊದಲು ಜಾತಕ ತೋರಿಸ್ತಾರೆ. ಯಾವುದೇ ಜ್ಯೋತಿಷಿ, ರಾತ್ರೋರಾತ್ರಿ ನೀವು ಶ್ರೀಮಂತನಾಗ್ತೀಯಾ ಎಂದಾಗ ಎಷ್ಟೇ ಭವಿಷ್ಯ ನಂಬುವ ವ್ಯಕ್ತಿಯಾದ್ರೂ ನಕ್ಕು ಅಲ್ಲಿಂದ ಹೊರಗೆ ಬರ್ತಾರೆ. ಈ ಮಹಿಳೆ ಕೂಡ ಹಾಗೇ ಮಾಡಿದ್ದಾಳೆ. ಆದ್ರೆ ಆಕೆ ನಂಬಲಾಗದ ಘಟನೆ ನಡೆದಿದೆ. ರೆಡ್ಡಿಟ್ ನಲ್ಲಿ ತನ್ನ ಕಥೆಯನ್ನು ಹಂಚಿಕೊಂಡ ಮಹಿಳೆ ಅಚ್ಚರಿ ಮೂಡಿಸಿದ್ದಾಳೆ.
ಘಟನೆ ಮಿಚಿಗನ್ (Michigan) ನ ಜೆನೆಸೀ ಕೌಂಟಿಯಲ್ಲಿ ನಡೆದಿದೆ. ಇಲ್ಲಿನ ಮಹಿಳೆಯೊಬ್ಬಳಿಗೆ ಟ್ಯಾರೋ ಕಾರ್ಡ್ (Tarot Card) ರೀಡರ್, ನಿನಗೆ ಕೈ ತುಂಬ ಹಣ ಸಿಗುತ್ತೆ ಎಂದಿದ್ದರಂತೆ. ವಿಚಿತ್ರ ಅಂದ್ರೆ ಅದೇ ದಿನ ರಾತ್ರಿ ಆಕೆ ಕೋಟ್ಯಾಧಿಪತಿಯಾಗಿದ್ದಾಳೆ.
ಪವಿತ್ರ ಗಂಗಾಜಲವನ್ನು ಅಡುಗೆ ಮನೆಯಲ್ಲಿಟ್ಟರೆ ರೋಗ ದೂರ, ವಾಸ್ತು ಟಿಪ್ಸ್ ಇಲ್ಲಿವೆ!
ಹೆಸರು ಹೇಳದ 59 ವರ್ಷದ ಮಹಿಳೆ ಒಂದು ದಿನ ಟ್ಯಾರೋ ಕಾರ್ಡ್ ಸೆಷನ್ ಗೆ ಹೋಗ್ತಿದ್ದಳು. ದಾರಿ ಮಧ್ಯೆ ಬಿಪಿ ಗ್ಯಾಸ್ ಸ್ಟೇಷನ್ ಬಳಿ ಸ್ಕ್ರ್ಯಾಚ್ ಆಫ್ ಟಿಕೆಟ್ ಖರೀದಿಸಿದ್ದಾಳೆ. ಆ ನಂತ್ರ ಮಹಿಳೆ ಟ್ಯಾರೋ ಕಾರ್ಡ್ ರೀಡರ್ ಬಳಿ ಹೋಗಿದ್ದಾಳೆ. ಅಲ್ಲಿ ಅವರು, ಮಹಿಳೆ ರಾತ್ರೋರಾತ್ರಿ ದೊಡ್ಡ ಮಟ್ಟದಲ್ಲಿ ಹಣ ಸಂಪಾದನೆ ಮಾಡ್ತಾಳೆ ಎಂದಿದ್ದಾರೆ. ಮಹಿಳೆಗೆ ಲಾಟರಿ ಖರೀದಿ ಮಾಡಿದ ವಿಷ್ಯ ನೆನಪಿನಲ್ಲಿರಲಿಲ್ಲ. ಎಲ್ಲ ಕೆಲಸ ಮುಗಿಸಿ ಮನೆಗೆ ವಾಪಸ್ ಆದ ಮಹಿಳೆ ಲಾಟರಿ ಚೆಕ್ ಮಾಡಿದ್ದಾಳೆ. ಸಣ್ಣ ಮೊತ್ತದ ಹಣ ಲಾಟರಿಯಲ್ಲಿರಬಹುದೆಂದು ಆಕೆ ನಿರೀಕ್ಷೆ ಮಾಡಿದ್ದಳು. ಆದ್ರೆ ಆಕೆ ಊಹಿಸದ ಘಟನೆ ನಡೆದಿದೆ. ಲಾಟರಿ ಟಿಕೆಟ್ ಸ್ಕ್ರ್ಯಾಚ್ ಮಾಡ್ತಿದ್ದಂತೆ 4 ಕೋಟಿ 18 ಲಕ್ಷ ರೂಪಾಯಿ ಕಾಣಿಸಿದೆ. ಇದನ್ನು ನೋಡಿದ ಮಹಿಳೆ ಖುಷಿಯಲ್ಲಿ ತೇಲಾಡಿದ್ದಾಳೆ. ಈ ಹಣವನ್ನು ಕಾರಿನ ಇಎಂಐ ತುಂಬಲು ಹಾಗೂ ಸ್ನೇಹಿತರ ಜೊತೆ ಕ್ರೂಸ್ ನಲ್ಲಿ ಪ್ರವಾಸಕ್ಕೆ ತೆರಳಲು ಪ್ಲಾನ್ ಮಾಡಿದ್ದಾಳೆ. ಉಳಿದ ಹಣವನ್ನು ಹೂಡಿಕೆ ಮಾಡೋದಾಗಿ ಮಹಿಳೆ ಹೇಳಿದ್ದಾಳೆ.
ನಾನೊಂದು ದಿನ ಲಾಟರಿ ಗೆಲ್ಲುತ್ತೇನೆ ಎಂದು ಮಹಿಳೆ ಆಗಾಗ ಹೇಳ್ತಿದ್ದಳಂತೆ. ವಾರದಲ್ಲಿ ಒಂದು ದಿನ ಲಾಟರಿ ಖರೀದಿ ಮಾಡೋದು ಆಕೆ ಹವ್ಯಾಸ. ಪ್ರತಿ ದಿನ ಒಂದೇ ಜಾಗದಲ್ಲಿ ಲಾಟರಿ ಖರೀದಿ ಮಾಡ್ತಿದ್ದ ಮಹಿಳೆ ಈ ಬಾರಿ ಬೇರೆ ಕಡೆ ಲಾಟರಿ ಖರೀದಿ ಮಾಡಿದ್ದಳು. ಟ್ಯಾರೋ ಕಾರ್ಡ್ ರೀಡರ್ ಬಳಿ ಹೋಗಿದ್ದ ಕಾರಣ ಬೇರೆ ಕಡೆ ಲಾಟರಿ ಖರೀದಿ ಮಾಡಬೇಕಾಯ್ತು. ಅವರು ನಿನಗೆ ಶೀಘ್ರದಲ್ಲೇ ಹಣ ಬರುತ್ತದೆ ಎಂದಾಗ ನನಗೆ ನಂಬಲು ಸಾಧ್ಯವಾಗಿರಲಿಲ್ಲ. ಎಲ್ಲಿಂದ ನನಗೆ ಹಣ ಬರಲು ಸಾಧ್ಯ ಎಂಬ ಆಲೋಚನೆ ಮಾಡಿದ್ದೆ. ಪರ್ಸ್ ನಲ್ಲಿರುವ ಲಾಟರಿಯನ್ನು ನಾನು ಆಗ ಮರೆತಿದ್ದೆ ಎನ್ನುತ್ತಾಳೆ ಮಹಿಳೆ.
Zodiac Sign: ಅಬ್ಬಬ್ಬಾ, ಸಾಕಪ್ಪಾ ಸಾಕು ಇವರ ಸಹವಾಸ, ಸಂಗಾತಿ ಮೇಲೂ ಅಸೂಯೆ ಇವ್ರಿಗೆ!
ಟ್ಯಾರೋ ಕಾರ್ಡ್ ರೀಡಿಂಗ್ ಎಂದರೇನು? : ಟ್ಯಾರೋ ಕಾರ್ಡ್ ರೀಡಿಂಗ್ ಎನ್ನುವುದು ಕಾರ್ಟೊಮ್ಯಾನ್ಸಿಯ ಒಂದು ರೂಪವಾಗಿದೆ. ಭೂತ ಕಾಲ, ವರ್ತಮಾನ ಅಥವಾ ಭವಿಷ್ಯದ ಬಗ್ಗೆ ಮಾಹಿತಿ ಪಡೆಯಲು ತಜ್ಞರು ಟ್ಯಾರೋ ಕಾರ್ಡ್‌ಗಳನ್ನು ಬಳಸುತ್ತಾರೆ.