
ಹೋಳಿ (Holi) ಹಬ್ಬ (Festival)ದ ಜೊತೆಗೆ ಮನರಂಜನೆ (Entertainment)ನೀಡುತ್ತದೆ. ಬಣ್ಣ (Colour)ಗಳಲ್ಲಿ ಆಡುವ ಜನರು ಆ ದಿನವನ್ನು ಎಂಜಾಯ್ ಮಾಡ್ತಾರೆ. ಹೋಳಿ ಹಬ್ಬದಂದು ಮನೆಗೆ ಸ್ನೇಹಿತರು ಮತ್ತು ಆತ್ಮೀಯರನ್ನು ಆಹ್ವಾನಿಸಿ ಹಬ್ಬವನ್ನು ಅನೇಕರು ಸಡಗರದಿಂದ ಆಚರಿಸುತ್ತಾರೆ. ಹಬ್ಬಕ್ಕಾಗಿ ಮನೆಯನ್ನು ಸುಂದರವಾಗಿ ಅಲಂಕರಿಸುತ್ತಾರೆ. ಆದ್ರೆ ಹೋಳಿ ನಂತ್ರ ಮುಖ,ಮೈ ಬಣ್ಣ ಮಾತ್ರವಲ್ಲ ಮನೆಯ ಚಿತ್ರಣವೇ ಬದಲಾಗಿರುತ್ತದೆ. ಅನೇಕರು ಮನೆಯೊಳಗೆ ಹೋಳಿ ಆಡ್ತಾರೆ. ಕೊರೊನಾ ನಂತ್ರ ಜನರು ಹೊರಗೆ ಹೋಗುವುದಕ್ಕಿಂತ ಮನೆಯಲ್ಲಿ ಹೋಳಿ ಆಡಲು ಇಚ್ಛಿಸುತ್ತಾರೆ. ಮನೆಯಲ್ಲಿ ಮಕ್ಕಳಿದ್ರಂತೂ ಮುಗೀತು. ಮನೆಯೆಲ್ಲ ಬಣ್ಣವಾಗಿರುತ್ತದೆ. ಬರೀ ಬಣ್ಣ ಮಾತ್ರವಲ್ಲ,ಬಣ್ಣಕ್ಕೆ ನೀರು ಬೆರೆಸುವುದ್ರಿಂದ ಮನೆಯ ನೆಲ, ಗೋಡೆಗಳೆಲ್ಲ ಬಣ್ಣಮಯವಾಗ್ತವೆ. ಹೋಳಿ ನಂತರ ಈ ಬಣ್ಣದ ಕಲೆಗಳನ್ನು ತೆಗೆದುಹಾಕುವುದು ಸುಲಭವಲ್ಲ. ಅದೊಂದು ಸವಾಲು ಎನ್ನಬಹುದು. ಮನೆಯ ಪ್ರತಿಯೊಂದು ಮೂಲೆಯನ್ನೂ ಸ್ವಚ್ಛಗೊಳಿಸಬೇಕು. ಹೋಳಿ ನಂತ್ರ ಮನೆಯನ್ನು ಸ್ವಚ್ಛಗೊಳಿಸೋದು ಹೇಗೆ ಎಂಬ ಟೆನ್ಷನ್ ನಲ್ಲಿರುವವರಿಗೆ ಇಲ್ಲೊಂದಿಷ್ಟು ಟಿಪ್ಸ್ ಇದೆ. ಈ ಟಿಪ್ಸ್ ಬಳಸಿಕೊಂಡು ನೀವು ಸುಲಭವಾಗಿ ಮನೆಯನ್ನು ಕ್ಲೀನ್ ಮಾಡ್ಬಹುದು.
ಹೋಳಿ ನಂತ್ರ ಮನೆ ಸ್ವಚ್ಛತೆ ಹೀಗಿರಲಿ :
ನೆಲದ ಮೇಲಿರುವ ಒಣ ಬಣ್ಣ : ಹೋಳಿ ಹಬ್ಬದಂದು ಮನೆಗೆ ಒಂದಿಷ್ಟು ಬಣ್ಣದ ಪ್ಯಾಕ್ ಬಂದಿರುತ್ತದೆ. ಅದನ್ನು ಒಡೆಯುವಾಗ ಒಣ ಬಣ್ಣ ನೆಲದ ಮೇಲೆ ಬೀಳುತ್ತದೆ. ಅದರ ಮೇಲೆ ನೀರು ಬಿದ್ದರೆ ಬಣ್ಣವನ್ನು ತೆಗೆದುಹಾಕಲು ತುಂಬಾ ಕಷ್ಟವಾಗುತ್ತದೆ. ಒಣ ಬಣ್ಣವನ್ನು ಸ್ವಚ್ಛಗೊಳಿಸುವುದ ಸುಲಭ. ಹಾಗಾಗಿ ನೆಲದ ಮೇಲೆ ಒಣ ಬಣ್ಣ ಬಿದ್ದಿರುವುದು ಕಂಡ್ರೆ ತಕ್ಷಣ ಅದನ್ನು ಗುಡಿಸಿ ತೆಗೆಯಿರಿ. ಅದರ ಮೇಲೆ ನೀರು ಬೀಳದಂತೆ ನೋಡಿಕೊಳ್ಳಿ.
WORK FROM HOME: ಗಂಡಸರು ಸೋಮಾರಿಗಳು, ಹೆಣ್ಮಕ್ಳೇ ಸ್ಟ್ರಾಂಗ್ ಗುರೂ !
ನೆಲದ ಮೇಲೆ ತೇವ ಬಣ್ಣ : ಮಕ್ಕಳು ಬಣ್ಣದ ಕಾಲಿನಲ್ಲಿ ಮನೆ ಪ್ರವೇಶ ಮಾಡಿದ್ರೆ ಅದ್ರ ಕಲೆ ನೆಲದ ಮೇಲಾಗುತ್ತದೆ. ಬಣ್ಣದ ಕಲೆ ತೆಗೆಯುವುದು ಕಷ್ಟ. ಮೊದಲು ತೇವ ಬಣ್ಣದ ಮೇಲೆ ಸ್ಪಂಜ್ ಇಟ್ಟು ಒಣಗಿಸಿ. ನಂತ್ರ ನೀರು ಹಾಗೂ ಬೇಕಿಂಗ್ ಸೋಡಾವನ್ನು ಆ ಜಾಗಕ್ಕೆ ಹಾಕಿ ಉಜ್ಜಿ,ಸ್ವಚ್ಛಗೊಳಿಸಿದ್ರೆ ಬಣ್ಣ ಇರುವುದಿಲ್ಲ.
ಹಾಸಿಗೆ, ಪರದೆ,ಸೋಫಾ ಸ್ವಚ್ಛತೆ : ಮಕ್ಕಳು ಮನೆಯಲ್ಲಿ ಪಿಚಕಾರಿ ಜೊತೆ ಆಡ್ತಾರೆ. ಆಗ ಬಣ್ಣ ಹಾಸಿಗೆ, ದಿಂಬು ಇತ್ಯಾದಿಗಳ ಮೇಲೆ ಬೀಳುತ್ತದೆ. ಸೋಪಾ ಕವರ್ ಅಥವಾ ಪರದೆ ಮೇಲೂ ಬಣ್ಣ ಬಿದ್ದಿರುತ್ತದೆ. ಒಂದು ಬಕೆಟ್ ನೀರಿನಲ್ಲಿ ನಾಲ್ಕು ಚಮಚ ಬಿಳಿ ವಿನೆಗರ್ ಹಾಕಿ ಮತ್ತು ಬಣ್ಣದ ಬಟ್ಟೆಯನ್ನು 15 ನಿಮಿಷಗಳ ಕಾಲ ನೆನೆಸಿಡಿ. 15 ನಿಮಿಷಗಳ ನಂತರ ಅದನ್ನು ತೊಳೆಯಿರಿ. ಕುಶನ್ ಮೇಲೆ ಬಣ್ಣವಿದ್ದರೆ, ಹತ್ತಿ ಉಂಡೆಯ ಮೇಲೆ ವಿನೆಗರ್ ಅಥವಾ ನಿಂಬೆ ರಸವನ್ನು ಅನ್ವಯಿಸುವ ಮೂಲಕ ನೀವು ಅದನ್ನು ಸ್ವಚ್ಛಗೊಳಿಸಬಹುದು.
ಪೀಠೋಪಕರಣಗಳು ಮತ್ತು ಗೋಡೆಗಳ ಮೇಲೆ ಬಣ್ಣ : ಮನೆಯಲ್ಲಿ ಇರಿಸಲಾಗಿರುವ ಮರದ ಪೀಠೋಪಕರಣಗಳು ಅಥವಾ ಗೋಡೆಯ ಮೇಲೆ ಒಣ ಬಣ್ಣ ಬಿದ್ದಿದ್ದರೆ ಅದನ್ನು ಹಿಡಿಯಿಂದ ಅಥವಾ ಒಣ ಬಟ್ಟೆಯಿಂದ ಆರಾಮವಾಗಿ ಸ್ವಚ್ಛಗೊಳಿಸಬಹುದು. ಬಣ್ಣವು ತೇವವಾಗಿದ್ದರೆ, ಹತ್ತಿ ಉಂಡೆಯನ್ನು ಅಸಿಟೋನ್ ನಲ್ಲಿ ನೆನೆಸಿ, ಸ್ವಚ್ಛಗೊಳಿಸಬೇಕು. ಹಬ್ಬಕ್ಕಿಂತ ಮೊದಲೇ ನೀವು ಗೋಡೆಗೆ ಬಣ್ಣ ಸುಲಭವಾಗಿ ಹೋಗುವ ಪ್ಲಾಸ್ಟಿಕ್ ಕವರ್ ಸ್ಟಿಕ್ ಮಾಡಬಹುದು. ಇದು ಸಾಧ್ಯವಿಲ್ಲವೆಂದ್ರೆ ಗೋಡೆಯ ಬಳಿ ಪಿಠೋಪಕರಣಗಳನ್ನಿಷ್ಟು ಬಣ್ಣ ಗೋಡೆಗೆ ತಾಗದಂತೆ ಕಾಳಜಿ ವಹಿಸಬಹುದು.
Health Alert: ಆರೋಗ್ಯದಲ್ಲಿ ಈ ರೀತಿ ಏರುಪೇರಾದ್ರೆ ಖಂಡಿತಾ ನಿರ್ಲಕ್ಷಿಸಬೇಡಿ!
ಬಾಗಿಲು ಮತ್ತು ಕಿಟಕಿ : ಪೆಟ್ರೋಲಿಯಂ ಜೆಲ್ಲಿ ಅಥವಾ ಸಾಸಿವೆ ಎಣ್ಣೆಯನ್ನು ಬಾಗಿಲು ಮತ್ತು ಕಿಟಕಿಗಳ ಹಿಡಿಕೆಗಳಿಗೆ ಹಚ್ಚಬೇಕು. ಇದು ಬಣ್ಣಗಳಿಂದ ರಕ್ಷಿಸುತ್ತದೆ. ಒಂದು ವೇಳೆ ಬಾಗಿಲುಗಳು ಮತ್ತು ಕಿಟಕಿಗಳು ಬಣ್ಣದ ಕಲೆಯಾಗಿದ್ದರೆ, ಅವುಗಳನ್ನು ಸೌಮ್ಯವಾದ ದ್ರವ ಮಾರ್ಜಕದಿಂದ ಒರೆಸಬೇಕು. ಕಠಿಣವಾದ ಕಲೆಗಳಿಗಾಗಿ, ಅಸಿಟೋನ್ ಬಳಸಬಹುದು. ಬೇಕಿಂಗ್ ಪೌಡರ್ ಮತ್ತು ನೀರಿನ ಪೇಸ್ಟ್ ಕೂಡ ಪ್ರಯೋಜನಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.