ದರೋಡೆಕೋರರ ಕಾಟ –ದಾಂಪತ್ಯದಲ್ಲಿ ಬಿರುಕು, ಕಷ್ಟ ಮೆಟ್ಟಿನಿಂತ ಟ್ರಕ್ ಚಾಲಕಿಗೊಂದು ಸಲಾಂ!

By Suvarna News  |  First Published Nov 25, 2023, 12:52 PM IST

ಮಹಿಳೆಯರನ್ನು ಸುರಕ್ಷಿತ ಚಾಲಕರು ಎಂದೇ ಹೇಳಲಾಗುತ್ತದೆಯಾದ್ರೂ ಟ್ರಕ್ ನಂತಹ ಭಾರದ ವಾಹನ ಚಲಾಯಿಸೋರ ಸಂಖ್ಯೆ ಬಹಳ ಕಡಿಮೆ. ಕಷ್ಟ ಬಂದಾಗ ಮಹಿಳೆಯರು ಇದಕ್ಕೂ ಸಿದ್ಧವಿರ್ತಾರೆ. ಕಲ್ಲುಮುಳ್ಳಿನ ಹಾದಿಯಲ್ಲಿ ಸವಾಲು ಎದುರಿಸಿ ಭೇಷ್ ಎನ್ನಿಸಿಕೊಂಡ ಮಹಿಳೆಯರ ಕಥೆ ಇಲ್ಲಿದೆ. 
 


ವಿಶ್ವದಾದ್ಯಂತ ಮಹಿಳಾ ಚಾಲಕಿಯರ ಸಂಖ್ಯೆ ಬಹಳ ಕಡಿಮೆ ಇದೆ. ಸ್ಕೂಟಿ, ಕಾರ್ ಗಳನ್ನು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಲಾಯಿಸ್ತಾರೆಯಾದ್ರೂ ದೊಡ್ಡ ವಾಹನಗಳನ್ನು ಚಲಾಯಿಸೋದು ಕಡಿಮೆ. ಅದ್ರಲ್ಲೂ ಬಸ್ ಹಾಗೂ ಟ್ರಕ್ ಚಾಲಕಿಯರ ಸಂಖ್ಯೆ ಬಹಳ ಕಡಿಮೆ ಇದೆ. ವಿಶ್ವಾದ್ಯಂತ ಟ್ರಕ್ ಚಾಲಕರಲ್ಲಿ ಕೇವಲ ಶೇಕಡಾ 3ರಷ್ಟು ಮಹಿಳೆಯರಿದ್ದಾರೆ.

ಮಹಿಳೆಯರ ಮೇಲೆ ಹಿಂಸಾಚಾರ (Violence)  ನಿರಂತರವಾಗಿ ನಡೆಯುತ್ತಿದೆ. ಟ್ರಕ್ (Truck ) ನಂತಹ ದೊಡ್ಡ ವಾಹನ ಚಲಾಯಿಸೋದು ಸುಲಭವಲ್ಲ. ಹಾಗೆ ಪ್ರಯಾಣದ ಮಧ್ಯೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಾಡು ಹಾಗೂ ಜನನಿಬಿಡ ಪ್ರದೇಶದಲ್ಲಿ ಪ್ರಯಾಣ ಮಾಡುವ ವೇಳೆ ಅಪಾಯ ಹೆಚ್ಚು. ಮೆಕ್ಸಿಕೊದಂತಹ ನಗರದಲ್ಲಿ ಈಗ್ಲೂ ಲಿಂಗ ಆಧಾರಿತ ಹಿಂಸೆ ಹಾಗೂ ದರೋಡೆ ಮಾಮೂಲಿಯಾಗಿದೆ. ಹಾಗಾಗಿ ಮೆಕ್ಸಿಕೊದಂತಹ ಜಾಗದಲ್ಲಿ ಟ್ರಕ್ ಚಾಲನೆ ಮಾಡುವ ಮಹಿಳೆಯರ ಸಂಖ್ಯೆ ಬಹಳ ಕಡಿಮೆ. ಆದ್ರೆ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಟ್ರಕ್ ಚಾಲನೆ ಮಾಡ್ತಿರುವ ಮಹಿಳೆಯರು ಎಲ್ಲರಿಗೆ ಮಾದರಿಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮದುವೆ ಹಾಗೂ ಪತಿಯ ಮೋಸ, ಆರ್ಥಿಕ ಸ್ಥಿತಿ ಈ ಮಹಿಳೆಯರು ಟ್ರಕ್ ಚಾಲನೆಗೆ ಇಳಿಯುವಂತೆ ಮಾಡಿದೆ. ಅವರ ಕಥೆ ಇಲ್ಲಿದೆ.

Tap to resize

Latest Videos

ಇವಳಿಗೆ ಏನೇ ತಿಂದ್ರೂ ಅಲರ್ಜಿ. ಸಾವಿನ ಕತ್ತಿ ಮೇಲೆ ಸಾಗಿಸ್ತಾಳೆ ಲೈಫು!

ಮೆಕ್ಸಿಕೊ (Mexico) ದಲ್ಲಿ ಟ್ರಕ್ ಚಲಾಯಿಸುತ್ತಿರುವ ಮಹಿಳೆ ಹೆಸರು ಕ್ಲಾರಾ ಫ್ರಾಗೊಸೊ. ಆಕೆಗೆ ಈಗ 57 ವರ್ಷ ವಯಸ್ಸು. ಆಕೆ ಟ್ರಕ್ ಚಾಲಾಯಿಸುವಾಗ ದರೋಡೆಕೋರನೊಬ್ಬ ಆಕೆ ಮೇಲೆ ದಾಳಿ ಮಾಡಲು ಮುಂದಾಗಿದ್ದ. ಇನ್ನೇನು ಜೀವ ಹೋಯ್ತು ಎಂದುಕೊಂಡಿದ್ದ ಕ್ಲಾರಾ ಬದುಕುಳಿದಿದ್ದೇ ಅಚ್ಚರಿ. ಕ್ಲಾರಾ ಆತನ ಮುಂದೆ ತನ್ನ ಕಥೆ ಹೇಳಿದ್ದಾಳೆ.

ಕ್ಲಾರಾ 17 ನೇ ವಯಸ್ಸಿನಲ್ಲೇ ಮದುವೆಯಾದಳು. ಆಕೆ ದಾಂಪತ್ಯ ಚೆನ್ನಾಗಿರಲಿಲ್ಲ. ಹಿಂಸಾತ್ಮಕ ಪತಿಯೊಂದಿಗೆ ಬದುಕು ನಡೆಸುವುದು ಕಷ್ಟವಾಗಿತ್ತು. ಅಂತಿಮವಾಗಿ 15 ವರ್ಷಗಳ ನಂತರ ಈ ಮದುವೆಯಿಂದ ಕ್ಲಾರಾ ಹೊರ ಬಂದಳು. ಆದ್ರೆ ಮುಂದಿನ ಬದುಕು ಸುಲಭವಾಗಿರಲಿಲ್ಲ. ವೇಟರ್ ಆಗಿ ಕೆಲಸ ಮಾಡಿದ ಕ್ಲಾರಾಗೆ ವಾರಕ್ಕೆ 50 ಡಾಲರ್ ಹಣ ಸಿಗ್ತಾಯಿತ್ತು. ಅದ್ರಲ್ಲಿ ಆಕೆ ಹಾಗೂ ಮಕ್ಕಳ ಜೀವನ ನಡೆಸುವುದು ಕಷ್ಟವಾಗಿತ್ತು. ಟ್ರಕ್ ಚಾಲಕರಿಗೆ ಹೆಚ್ಚಿನ ಹಣ ಬರುತ್ತದೆ ಎಂಬುದನ್ನು ತಿಳಿದ ಕ್ಲಾರಾ, ಆ ವೃತ್ತಿಯನ್ನು ಆಯ್ದುಕೊಳ್ಳುವ ಮನಸ್ಸು ಮಾಡಿದರು. 18 ವರ್ಷಗಳ ಹಿಂದೆ ಕ್ಲಾರಾ, ಟ್ರಕ್ ಡ್ರೈವರ್ ಆದರು. ಮೆಕ್ಸಿಕೊದಲ್ಲಿ ಮಹಿಳಾ ಟ್ರಕ್ ಚಾಲಕಿಯರನ್ನು ಟ್ರೋಲೆರಾ ಎಂದು ಕರೆಯುತ್ತಾರೆ. 

ಗರ್ಭಿಣಿಯೂ ಅಲ್ಲ, ಮಗುವೂ ಆಗಿಲ್ಲ, ಆದ್ರೂ ಸ್ತನಗಳಿಂದ ಡಿಸ್ಚಾರ್ಜ್ ಆಗ್ತಿದ್ಯಾ?

ಕ್ಲಾರಾ ಮಾತ್ರವಲ್ಲ 45 ಲಿಜ್ಜೀ ಹೈಡ್ ಗೊನ್ಜಾಲೆಜ್ ಕೂಡ ಟ್ರಕ್ ಚಾಲಕಿ. ಪ್ರತಿ ದಿನ ಪ್ರಯಾಣ ಮಾಡುವ ಅವರನ್ನು ದರೋಡೆಕೋರರು ಬಲ್ಲರು. ಒಂದು ಬಾರಿ ಆಕೆಯನ್ನು ತಡೆದಿದ್ದ ದರೋಡೆಕೋರರು ಟ್ರಕ್ ನಲ್ಲಿ ತಮಗೆ ಬೇಕಾದ ವಸ್ತುವಿನ ಹುಡುಕಾಟ ನಡೆಸಿ ಜೀವಂತ ಬಿಟ್ಟಿದ್ದರಂತೆ. ಇವರಿಬ್ಬರು ಉಳಿದ ಟ್ರಕ್ ಚಾಲಕಿಯರಿಗೆ ನೆರವಾಗಲು ಮುಂದಾಗಿದ್ದಾರೆ. ಲಿಜ್ಜೀ ಸಾಮಾಜಿಕ ಜಾಲತಾಣದಲ್ಲಿ (Social Media) ಖಾತೆ ಹೊಂದಿದ್ದು, ಆಕೆಗೆ ಸಾಕಷ್ಟು ಫಾಲೋವರ್ಸ್ (Followers) ಇದ್ದಾರೆ. ಕ್ಲಾರಾ ತಮ್ಮ ಕಚೇರಿಯಲ್ಲಿಯೇ ಕೆಲಸ ಮಾಡುವ ನಾಲ್ಕೈದು ಟ್ರಕ್ ಚಾಲಕಿಯರಿಗೆ ನೆರವಾಗ್ತಿದ್ದಾರೆ. ಪ್ರತಿ ದಿನ ಅವರಿಗೆ ಕರೆ ಮಾಡಿ ಮಾತನಾಡ್ತಾರೆ. ಟ್ರಕ್ ನಲ್ಲಿಯೇ ತಮಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು (Basic Amenities) ಮಾಡಿಕೊಂಡಿರುವ ಇವರು ಟ್ರಕ್ ನಿಂದ ಕೆಳಗಿಳಿಯುವ ಸಾಹಸ ಮಾಡೋದಿಲ್ಲ.  ಮೆಕ್ಸಿಕೋದ ಒಟ್ಟು ಐದು ಲಕ್ಷ ಟ್ರಕ್ ಚಾಲಕರಲ್ಲಿ ಕೇವಲ ಶೇಕಡಾ 2ರಷ್ಟು ಮಹಿಳೆಯರಿದ್ದಾರೆ. ಚೀನಾದಲ್ಲಿ ಶೇಕಡಾ 5ರಷ್ಟು ಮತ್ತು ಯುಎಸ್ ನಲ್ಲಿ ಶೇಕಡಾ 8 ರಷ್ಟು ಮಹಿಳೆಯರಿದ್ದಾರೆ. 

click me!