ಇವಳೇನು ಮನುಷ್ಯಳಾ..ರಾಕ್ಷಸಿನಾ, ಆಸ್ತಿಗಾಗಿ ವಯಸ್ಸಾದ ಅತ್ತೆಗೆ ಪರಚಿ, ಹೊಡೆದು ಕಚ್ಚಿದ ಸೊಸೆ!

By Vinutha Perla  |  First Published Jun 28, 2023, 1:13 PM IST

ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಅತ್ತೆ-ಸೊಸೆ ಅಂದ್ರೆ ಎಣ್ಣೆ-ಸೀಗೆಕಾಯಿ ಸಂಬಂಧ. ಏನ್ ಮಾಡಿದ್ರೂ ಆಗಿ ಬರಲ್ಲ. ಪ್ರತಿ ಮನೆಯಲ್ಲೂ ಅತ್ತೆ-ಸೊಸೆ ಜಗಳ ಇದ್ದಿದ್ದೇ. ಆದ್ರೆ ಇಲ್ಲೊಂದೆಡೆ ಇಬ್ಬರ ನಡುವಿನ ಜಗಳ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ. ಅತ್ತೆ-ಸೊಸೆ ಇಬ್ಬರೂ ನಾಯಿ-ಬೆಕ್ಕಿನ ಥರ ಮೇಲ್ ಮೇಲೆ ಬಿದ್ದು ಹೊಡೆದಾಡಿಕೊಂಡಿರೋ ವಿಡಿಯೋ ವೈರಲ್ ಆಗಿದೆ. 


ಅತ್ತೆ-ಸೊಸೆ ಜಗಳ ಅಂದ್ರೆ ಸಿಕ್ಕಾಪಟ್ಟೆ ಕಾಮನ್ ಬಿಡಿ. ಅಡುಗೆ ಮಾಡುವ ವಿಚಾರಕ್ಕೆ, ಮನೆ ಕ್ಲೀನ್ ವಿಚಾರಕ್ಕೆ, ಶಾಪಿಂಗ್ ವಿಚಾರಕ್ಕೆ ಹೀಗೆ ಹಲವು ಕಾರಣಗಳಿಗಾಗಿ ಇಬ್ಬರ ನಡುವೆ ಜಗಳ ನಡೀತಾನೆ ಇರುತ್ತೆ. ಸಾಮಾನ್ಯವಾಗಿ ಚೆನ್ನಾಗಿ ಬೈದು, ಜಗಳವಾಡಿ, ವಾದ-ವಿವಾದ ಮಾಡಿ ಅತ್ತೆ-ಸೊಸೆ ಸಿಟ್ಟು ತೀರಿಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದೆಡೆ ಇಬ್ಬರ ನಡುವಿನ ಜಗಳ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ. ಅತ್ತೆ-ಸೊಸೆ ಇಬ್ಬರೂ ನಾಯಿ-ಬೆಕ್ಕಿನ ಥರ ಮೇಲ್ ಮೇಲೆ ಬಿದ್ದು ಹೊಡೆದಾಡಿಕೊಂಡಿರೋ ವಿಡಿಯೋ ವೈರಲ್ ಆಗಿದೆ. ಗುಜರಾತ್‌ನ ಸೂರತ್‌ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಗುಜರಾತ್‌ನ ಸೂರತ್‌ನಲ್ಲಿ ನಡೆದ ಅತ್ತೆ-ಸೊಸೆಯ (Mother in Law- Daughter in law) ಜಗಳ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆದ ನಂತರ ಸಾರ್ವಜನಿಕರ ಗಮನ ಸೆಳೆದಿದೆ. ಆಸ್ತಿಯ ಕುರಿತಾದ (Property Dispute) ಭಿನ್ನಾಭಿಪ್ರಾಯದಿಂದ ಇಬ್ಬರ ನಡುವೆ ಜಗಳ ನಡೀತು ಎಂದು ತಿಳಿದುಬಂದಿದೆ. ಇದು ಮಹಿಳೆ ಮತ್ತು ಆಕೆಯ ಅತ್ತೆಯ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಾತಿಗೆ ಮಾತು ಬೆಳೆಸಿದ ಇಬ್ಬರೂ ನಂತರ ಕೈ ಕೈ ಮಿಲಾಯಿಸಿಕೊಂಡರು. ನಾಯಿ-ಬೆಕ್ಕಿನ ಥರ ಮೇಲ್ ಮೇಲೆ ಬಿದ್ದು ಹೊಡೆದಾಡಿಕೊಂಡರು. ಸೊಸೆ ವಯಸ್ಸಾದ ತನ್ನ ಅತ್ತೆಯನ್ನು ತಳ್ಳುವುದು, ಹೊಡೆಯುವುದು ಮತ್ತು ಕಚ್ಚುವುದನ್ನು ವಿಡಿಯೋದಲ್ಲಿ ನೋಡಬಹುದು. 

Tap to resize

Latest Videos

ಮೊಬೈಲ್‌ ಅಡಿಕ್ಟ್ ಸೊಸೆಗೆ ಅತ್ತೆಯ ಕ್ಲಾಸ್‌, ಮದ್ವೆಯಾದ ನಾಲ್ಕೇ ದಿನದಲ್ಲಿ ಗಂಡನನ್ನು ಬಿಟ್ಹೋದ ವಧು!

ಸೋಫಾ ಮೇಲೆ ಅತ್ತೆಯನ್ನು ದೂಡಿ ಹಾಕಿ ಹೊಡೆದು ಕಚ್ಚುವ ಸೊಸೆ
ಜಗಳ ನಡೆಯುತ್ತರುವಾಗ ಒಬ್ಬ ವ್ಯಕ್ತಿ, ಬಹುಶಃ ಮಾವನಾಗಿರಬೇಕು ತನ್ನ ಹೆಂಡತಿಯನ್ನುರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಆತನ ಪ್ರಯತ್ನವೂ ವಿಫಲವಾಗುತ್ತದೆ. ಸೊಸೆ ತನ್ನ ಅತ್ತೆಯನ್ನು ಸೋಫಾ ಮೇಲೆ ದೂಡಿ ಹಾಕಿ ಹೊಡೆಯುತ್ತಾಲೆ. ಗೊಂದಲದ ಘಟನೆಯ ನಡುವೆ, ಹುಡುಗಿಯೊಬ್ಬಳು, ಈ ಜಗಳವನ್ನು (Fight) ನೋಡಿ ಭಯದಿಂದ ಹಿಂದೆ ಸರಿಯುತ್ತಾಳೆ. ಇನ್ನೊಬ್ಬ ವ್ಯಕ್ತಿಯು ಹಿನ್ನಲೆಯಲ್ಲಿ ಸೋಫಾದ ಮೇಲೆ ಆರಾಮವಾಗಿ ಕುಳಿತಿರುವುದನ್ನು ಕಾಣಬಹುದು. ಯಾವುದೇ ವಾಗ್ವಾದಲ್ಲಿ ಭಾಗಿಯಾಗುವುದಿಲ್ಲ ಮತ್ತು ಜಗಳವನ್ನು ಬಿಡಿಸುವುದಿಲ್ಲ.

ವಯಸ್ಸಾದ ಮಹಿಳೆಯ ಮುಖದ ಮೇಲೆ ಕಚ್ಚಿದ ಗುರುತುಗಳು (Bitting marks) ಗೋಚರಿಸುವುದರಿಂದ ವೀಡಿಯೊದ ಆತಂಕಕಾರಿ ಸ್ವರೂಪವು ಇನ್ನಷ್ಟು ಸ್ಪಷ್ಟವಾಗುತ್ತದೆ, ಇದು ದಾಳಿಯ ಗಂಭೀರತೆ ಮತ್ತು ಕ್ರೂರತೆಯನ್ನು ಒತ್ತಿಹೇಳುತ್ತದೆ. ಈ ವೀಡಿಯೊವನ್ನು ಆರಂಭದಲ್ಲಿ ಟ್ವಿಟ್ಟರ್ ಬಳಕೆದಾರ ದೀಪಿಕಾ ಭಾರದ್ವಾಜ್ ಎಂಬವರು ಹಂಚಿಕೊಂಡಿದ್ದಾರೆ, 'ಆಸ್ತಿ ವಿರುದ್ಧದ ಜಗಳದಲ್ಲಿ ಸೊಸೆಯು ವಯಸ್ಸಾದ ಅತ್ತೆಯನ್ನು ಹೊಡೆದು ಕಚ್ಚುತ್ತಾಳೆ. ಇದು ಎಷ್ಟು ಆತಂಕಕಾರಿಯಾಗಿದೆ' ಎಂದು ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿ ಮನೆಯಲ್ಲೂ ಅತ್ತೆ-ಸೊಸೆ ಜಗಳ ಇರುತ್ತೆ, ಇದು ಸಾಮಾನ್ಯ ಎಂದ ಕೋರ್ಟ್‌!

ಕ್ರೂರಿ ಸೊಸೆಯ ವಿರುದ್ಧ ನೆಟ್ಟಿಗರ ಆಕ್ರೋಶ
ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಅಗಿರುವ ವಿಡಿಯೋಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ವೀಡಿಯೊಗೆ ಪ್ರತಿಕ್ರಿಯೆಯಾಗಿ, ಕಾಮೆಂಟ್ ವಿಭಾಗವು ಆಕ್ರೋಶದಿಂದ ತುಂಬಿದೆ. ಕೆಲವು ಬಳಕೆದಾರರು 'ಆಸ್ತಿಗಾಗಿ ಜನರು ಈ ಕಾಲದಲ್ಲಿ ಏನನ್ನೂ ಮಾಡಬಲ್ಲರು' ಎಂದು ಕಿಡಿಕಾರದ್ದಾರೆ. ಮತ್ತೊಬ್ಬರು ಅಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮೊದಲು ಸತ್ಯ ಪರಿಶೀಲನೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಒಬ್ಬ ಬಳಕೆದಾರ 'ಸಾಮಾಜಿಕ ಮಾಧ್ಯಮದಲ್ಲಿ ಕೌಟುಂಬಿಕ ವಿವಾದವನ್ನು ಹಾಕುವುದು ಸರಿಯಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಹಂಚಿಕೊಂಡ ನಂತರ, ವೀಡಿಯೊ 340K ವೀವ್ಸ್‌ ಸಂಗ್ರಹಿಸಿದೆ ಮತ್ತು 1000 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಹೊಂದಿದೆ.

ಮಕ್ಕಳ್ ಮಾಡ್ಕೊ ಅಂತಾ ಅತ್ತೆ ಹಿಂದೆ ಬಿದ್ದಿದ್ದಾಳೆ ಏನ್ ಮಾಡ್ಲಿ?ಸೊಸೆಗೆ ಸಲಹೆ ಕೊಡಿ ಪ್ಲೀಸ್

Daughter-In-Law beats up and bites old mother-in-law in a fight over property. Take action against her pic.twitter.com/8zr8RhDkUA

— Deepika Narayan Bhardwaj (@DeepikaBhardwaj)
click me!