
ಹಿಂದಿನ ಕಾಲದಲ್ಲಿ ಕುಟುಂಬಗಳಲ್ಲಿ ಮಹಿಳೆ (Woman)ಯರನ್ನು ಮುಟ್ಟಿನ ದಿನಗಳಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಇರುವಂತೆ ಮಾಡಲಾಗುತ್ತಿತ್ತು. ಆ ಕೋಣೆಗಳಿಗೋ ಸರಿಯಾದ ಗಾಳಿ ಬೆಳಕು ಇರುತ್ತಿರಲಿಲ್ಲ. ಕೆಲವು ಕಡೆ, ಹಳ್ಳಿಗಳಲ್ಲಿ, ಮನೆಯಾಚೆಗಿನ ಕೊಟ್ಟಿಗೆಯಲ್ಲೂ ಇರಬೇಕಾಗಿ ಬರುತ್ತಿತ್ತು. ಮುಟ್ಟಿನ ಬಳಲಿಕೆಯಿಂದ ಸುಸ್ತಾದ ಸ್ತ್ರೀ ಆ ಕೋಣೆಗಳ ಅನಾರೋಗ್ಯಕರ ವ್ಯವಸ್ಥೆಯಿಂದಲೇ ಬೇರೆ ಅನಾರೋಗ್ಯಗಳಿಗೆ ತುತ್ತಾದರೂ ಆಶ್ಚರ್ಯವಿರುತ್ತಿರಲಿಲ್ಲ. ಅಂದಿಗೂ ಇಂದಿಗೂ ಪರಿಸ್ಥಿತಿ ತುಂಬಾ ಏನೂ ಬದಲಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಹಾಗೇ ಇದೆ. ಹೆಣ್ಣುಮಕ್ಕಳಲ್ಲಿ ಶಿಕ್ಷಣ ಹೆಚ್ಚಿದಂತೆ ಮುಟ್ಟನ್ನು ನೋಡುವ ಪ್ರವೃತ್ತಿ ಆಧುನಿಕ ಕುಟುಂಬಗಳಲ್ಲಿ ಬದಲಾಗಿದೆಯಾದರೂ, ಗಂಡು ಮಕ್ಕಳಲ್ಲಿ ಆ ಬಗ್ಗೆ ಸೂಕ್ಷ್ಮತೆ ಇನ್ನೂ ಬೆಳೆದಿದೆ ಅನ್ನಿಸುವುದಿಲ್ಲ. ಈಗಲೂ ಮುಟ್ಟಿನ ಬಗ್ಗೆ ತಗ್ಗಿದ, ಸಣ್ಣ ದನಿಯಲ್ಲೇ ಮಾತನಾಡಿಕೊಳ್ಳಲಾಗುತ್ತದೆ.
ಎಲ್ಲಾ ಹೆಣ್ಣು ಮಕ್ಕಳಿಗೆ ಋತುಚಕ್ರದ (Menstruation) ಕುರಿತು ತಿಳಿದಿರುತ್ತದೆ ಎಂದು ಸ್ಪಷ್ಟವಾಗಿ ಹೇಳುವಂತಿಲ್ಲ. ಗಂಡು ಮಕ್ಕಳಿಗಂತೂ ಈ ಬಗ್ಗೆ ಏನೂ ತಿಳಿಯದಂತೆಯೇ ಬೆಳೆಸಲಾಗುತ್ತದೆ. ಹೀಗಾಗಿ ಅದು ಒಂದು ಗುಟ್ಟಿನ ವಿಷಯವಾಗಿಯೇ ಉಳಿದುಹೋಗುತ್ತದೆ. ಹೆಚ್ಚಿನ ಬಾರಿ ಮೊದಲ ಬಾರಿ ಮುಟ್ಟಾಗುವ ಹದಿಹರೆಯದವರಿಗೆ ಈ ಬಗ್ಗೆ ಏನೂ ತಿಳಿದಿರುವುದಿಲ್ಲ- ಅಥವಾ ತಂದೆ ತಾಯಿ ಈ ಬಗ್ಗೆ ಕನಿಷ್ಠ ಅರಿವನ್ನೂ ಮಕ್ಕಳಲ್ಲಿ ಮೂಡಿಸಿರುವುದಿಲ್ಲ. ಮಕ್ಕಳು (Children) ಎಂಟು- ಹತ್ತು ವರ್ಷ ಆದೊಡನೆಯೇ ಅವರಿಗೆ ಋತುಸ್ರಾವದ ಬಗ್ಗೆ ಸರಿಯಾದ ಕಲ್ಪನೆ ಮೂಡಿಸಿ, ಹೆಣ್ಣು ಮಕ್ಕಳನ್ನು ಸಜ್ಜುಗೊಳಿಸುವುದು ಅಗತ್ಯ. ಗಂಡು ಮಕ್ಕಳಲ್ಲೂ ಈ ಕುರಿತಂತೆ ಅರಿವು ಮೂಡಿಸಿ, ಅವರು ಋತುಸ್ರಾವವನ್ನು ಅಸ್ಪೃಶ್ಯ ರೀತಿಯಲ್ಲಿ ನೋಡದಂತೆ ಪ್ರಜ್ಞೆ ಬೆಳೆಸುವುದು ಅಗತ್ಯ.
Periods Problem: ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೇ? ಈ ಆಹಾರ ಸೇವಿಸಿ
ಋತುಚಕ್ರದ ಜೀವನದಲ್ಲಿ ಪಿರಿಯಡ್ಸ್ (Periods0 ನಿಯಮಿತ ಭಾಗವಾಗಿದ್ದರೂ ಸಹ, ಅವರ ಸುತ್ತಲೂ ಸಾಕಷ್ಟು ನಿಷೇಧಗಳಿವೆ. ಒಬ್ಬ ಮಹಿಳೆ ತನ್ನ ಮಗಳು ಮತ್ತು ಅವಳ ಸ್ನೇಹಿತರಿಗೆ ಮುಟ್ಟಿನ ವಿಷಯಕ್ಕೆ ಬಂದಾಗ ನಾಚಿಕೆಪಡುವ ಅಗತ್ಯವಿಲ್ಲ ಎಂದು ತೋರಿಸಲು ನಿರ್ಧರಿಸಿದರು. ಜೇಡ್ ಪೊವೆಲ್ ತನ್ನ ಮಗಳು ಮತ್ತು ಅವಳ ಸ್ನೇಹಿತರಿಗೆ ಪಿರಿಯಡ್‌ಗಳು ಸಾಮಾನ್ಯ ಜೈವಿಕ ಕ್ರಿಯೆ ಎಂದು ತೋರಿಸಲು 'ಪೀರಿಯಡ್ ಪಾರ್ಟಿ' (Periods party) ಆಯೋಜಿಸಿದರು. ಜೇಡ್ ಪಾರ್ಟಿಗಾಗಿ ರಕ್ತದ ಹನಿಗಳು, ಸ್ಯಾನಿಟರಿ ನ್ಯಾಪ್ಕಿನ್‌ಗಳು ಮತ್ತು ಗರ್ಭಾಶಯದ ಕಾನ್ಫೆಟ್ಟಿಗಳನ್ನು ತಯಾರಿಸಿದರು. ಕೆಂಪು ಚಾಕೊಲೇಟ್ ಕಾರಂಜಿಯನ್ನು ಸಹ ಸಿದ್ಧಪಡಿಸಿದರು.
ಬರ್ತ್‌ಡೇ , ಆನಿವರ್ಸರಿಯನ್ನು ಸೆಲಬ್ರೇಟ್ ಮಾಡುವಂತೆಯೇ ಈಕೆ ಎಲ್ಲರನ್ನೂ ಕರೆದು ಪಿರಿಯಡ್ಸ್ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯಲ್ಲಿ ಎಲ್ಲಾ ವಸ್ತುವನ್ನು ಕೆಂಪು ಬಣ್ಣದ ವಸ್ತುಗಳೊಂದಿಗೆ ಅಲಂಕಾರ ಮಾಡಲಾಗಿತ್ತು. ಕೆಂಪು ಬಣ್ಣದ ಪಿಜ್ಜಾ, ಕಪ್‌ಕೇಕ್‌ಗಳು ಮತ್ತು ಟೈ-ಡೈಡ್ ಶರ್ಟ್‌ಗಳು ಪಾರ್ಟಿಯ ಆಕರ್ಷಣೆಯಾಗಿತ್ತು .ಜೇಡ್ ಪೊವೆಲ್ ತನ್ನ ಮಗಳು ಮತ್ತು ಮಗಳ ಸ್ನೇಹಿತರಿಗೆ ಪ್ಯಾಡ್‌ಗಳು ಮತ್ತು ಪ್ರೌಢಾವಸ್ಥೆಯ ಕುರಿತು 'ಸೆಲೆಬ್ರೇಟ್ ಯುವರ್ ಬಾಡಿ' ಎಂಬ ಪುಸ್ತಕವನ್ನು ಒಳಗೊಂಡಿರುವ ಸ್ಟಾರ್ಟರ್ ಕಿಟ್ ಅನ್ನು ನೀಡಿದರು. ಜೇಡ್ ತನ್ನ ಮಗಳೊಂದಿಗೆ ಮುಕ್ತ ಮತ್ತು ಪ್ರಾಮಾಣಿಕ ಸಂಬಂಧವನ್ನು ಹೊಂದಲು ಬಯಸುತ್ತೇನೆ ಎಂದು ಹೇಳಿದರು.
ಪೀರಿಯಡ್ಸ್ ಅಂದ್ರೇನು ಅಂತ ಗಂಡಸ್ರನ್ನು ಕೇಳಿದ್ರೆ ಹಿಂಗನ್ನೋದಾ..?
ಜೇಡ್ ವಿಶೇಷ ಪಿರಿಯಡ್ಸ್ ಪಾರ್ಟಿಯ ಬಗ್ಗೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಹೃದಯಸ್ಪರ್ಶಿಯಾಗಿದೆ. ಇಂಥಾ ಕಾರ್ಯಕ್ರಮಗಳು ಪಿರಿಯಡ್ಸ್ ಕುರಿತಾಗಿರುವ ಜನರ ಅಭಿಪ್ರಾಯವನ್ನು ಇಲ್ಲವಾಗಿಸುತ್ತದೆ ಎಂದಿದ್ದಾರೆ. ಇನ್ನು ಕೆಲವರು ಈ ರೀತಿ ತಿಳುವಳಿಕೆ ನೀಡುವ ಕಾರ್ಯಕ್ರಮ ಹೆಣ್ಣುಮಕ್ಕಳಿರುವ ಭಯವನ್ನು ಹೋಗಲಾಡಿಸಲು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬರು ಹೀಗೆ ಬರೆದಿದ್ದಾರೆ, ನನ್ನ ಅಮ್ಮ ಎಂದಿಗೂ ನನ್ನೊಂದಿಗೆ ಪಿರಿಯಡ್ಸ್ ಬಗ್ಗೆ ಮಾತನಾಡಲಿಲ್ಲ ಆದ್ದರಿಂದ ಇಡೀ ವಿಷಯವು ಭಯಾನಕ ಮತ್ತು ಏಕಾಂಗಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು, ನೀವು ಅವಳನ್ನು ಆರಾಮದಾಯಕವಾಗಿಸುತ್ತಿದ್ದೀರಿ ಮತ್ತು ಅದು ಒಳ್ಳೆಯದು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳು ಅದನ್ನು ವಿಚಿತ್ರವಾಗಿ ಮರೆಮಾಚಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.