ISRO ಚಂದ್ರಯಾನ-3 ತಂಡದಲ್ಲಿ ಮಂಗಳೂರಿನ ಸುಮನಾ ವಾಲ್ಕೆ

By Vinutha PerlaFirst Published Jul 16, 2023, 3:17 PM IST
Highlights

ಇಸ್ರೋ ಚಂದ್ರಯಾನ-3ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ದೇಶದ ಜನರೆಲ್ಲರೂ ಸಂತಸದಿಂದ ಬೀಗುವಂತೆ ಮಾಡಿದ ಈ ತಂಡದಲ್ಲಿ ಮಂಗಳೂರಿನ ಹಿರಿಯ ವಿಜ್ಞಾನಿಯೊಬ್ಬರು ಇದ್ದರು ಅನ್ನೋದು ಹೆಮ್ಮೆಯ ಸಂಗತಿ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದ ಇಸ್ರೋ ಯಶಸ್ವಿಯಾಗಿ ಚಂದ್ರನತ್ತ ನೌಕೆಯನ್ನು ಉಡಾಯಿಸಿದೆ. ಭಾರತದೆಲ್ಲೆಡೆ ಇದಕ್ಕೆ ಸಂಭ್ರಮ ವ್ಯಕ್ತವಾಗಿದೆ. ಇಸ್ರೋದ ವಿಜ್ಞಾನಿಗಳ ಸಾಧನೆಗೆ ಜನರು ಶಹಬ್ಬಾಸ್ ಹೇಳುತ್ತಿದ್ದಾರೆ. ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದಿರನ ಅಂಗಳಕ್ಕೆ ಚಂದ್ರಯಾನ-3ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ದೇಶದ ಜನರೆಲ್ಲರೂ ಸಂತಸದಿಂದ ಬೀಗುವಂತೆ ಮಾಡಿದ ಈ ತಂಡದಲ್ಲಿ ಮಂಗಳೂರಿನ ಹಿರಿಯ ವಿಜ್ಞಾನಿಯೊಬ್ಬರು ಇದ್ದರು ಅನ್ನೋದು ಹೆಮ್ಮೆಯ ಸಂಗತಿ. ಮಂಗಳೂರು ನಗರದ ಬೊಕ್ಕಪಟ್ಣ ನಿವಾಸಿ ಸುಮನಾ ವಾಲ್ಕೆ ಅವರೇ ಈ ಹಿರಿಮೆಗೆ ಪಾತ್ರರಾದವರು.

ಬಾಲ್ಯದಿಂದ ಮಂಗಳೂರಿನಲ್ಲೇ ಶಿಕ್ಷಣ ಪೂರೈಸಿರುವ ಸುಮನಾ ವಾಲ್ಕೆ ಅವರು ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದರು. ಕೆನರಾ ಎಜುಕೇಶನಲ್‌ ಇನ್ಸಿಟ್ಯೂಟ್‌ನಲ್ಲಿ ತಮ್ಮ ವಿದ್ಯಾಭ್ಯಾಸ (Education) ಪೂರೈಸಿದ್ದರು. ಸುಮನಾ ವಾಲ್ಕೆ ಕೆನರಾ ಪದವಿ ಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿನಿಯಾಗಿದ್ದರು. ISRO ಚಂದ್ರಯಾನ-3 ತಂಡದಲ್ಲಿ ಮಂಗಳೂರಿನ  ಸುಮನಾ ವಾಲ್ಕೆ ಕೆಲಸ ಮಾಡಿದ್ದರು.

Latest Videos

ಚಂದ್ರಯಾನ-3 ಮೊದಲ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ: ಉತ್ತಮ ಸ್ಥಿತಿಯಲ್ಲಿ ವ್ಯೋಮನೌಕೆ

ಚಂದ್ರಯಾನ-3 ತಂಡದಲ್ಲಿ ಬಾಳೆಹೊನ್ನೂರು ಯುವತಿ ಡಾ.ಕೆ ನಂದಿನಿ
ಆಂದ್ರಪ್ರದೇಶದ ಶ್ರೀಹರಿಕೋಟಾ ಸತೀಶ್‌ ಧವನ್‌ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಶುಕ್ರವಾರ ಉಡಾವಣೆ ಮಾಡಿದ ಚಂದ್ರಯಾನ 3ರ ತಂಡದಲ್ಲಿ ಬಾಳೆಹೊನ್ನೂರು ಸಮೀಪದ ತುಪ್ಪೂರು ಗ್ರಾಮದ ಯುವತಿ ಇರುವುದು ಹೆಮ್ಮೆ ಮೂಡಿಸಿದೆ. ಬಾಳೆಹೊನ್ನೂರು ಪಟ್ಟಣದಲ್ಲಿ ಕಾಫಿ ಉದ್ಯಮ, ವ್ಯವಹಾರ ನಡೆಸುತ್ತಿರುವ ಕೇಶವಮೂರ್ತಿ, ಮಂಗಳ ದಂಪತಿ ಪುತ್ರಿ ಡಾ. ಕೆ.ನಂದಿನಿ(Dr K Nandini) ಚಂದ್ರಯಾನ 3 ತಂಡದಲ್ಲಿ ಇದ್ದು ಶುಕ್ರವಾರ ನಡೆದ ಯಶಸ್ವಿ ಉಡಾವಣೆಯಲ್ಲಿ ಈಕೆಯೂ ಪಾಲ್ಗೊಂಡಿರುವುದು ಆಕೆಯ ಕುಟುಂಬಸ್ಥರು ಸೇರಿದಂತೆ ಸ್ಥಳೀಯರಲ್ಲಿ ಹರ್ಷ ಮೂಡಿದೆ.

ಡಾ.ನಂದಿನಿ ಕಳೆದ 8 ವರ್ಷಗಳಿಂದ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು 2019ರ ಚಂದ್ರಯಾನ 2ರ ತಂಡದಲ್ಲೂ ಭಾಗವಹಿಸಿದ್ದು, ಸತತ ಎರಡನೇ ಬಾರಿಯೂ ಕಾರ್ಯನಿರ್ವಹಿಸಿ ಬಾಳೆಹೊನ್ನೂರಿಗೆ ಕೀರ್ತಿ ತಂದಿದ್ದಾರೆ.

ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್‌ನಲ್ಲಿ ಮಾಡಿ, ನಂತರ 12ನೇ ತರಗತಿಯವರೆಗೆ ಸೀಗೋಡು ಜವಾಹರ್‌ ನವೋದಯ ವಿದ್ಯಾಲಯ ದಲ್ಲಿ ವ್ಯಾಸಂಗ ಮಾಡಿದ್ದಾರೆ. ಮೂಡಬಿದ್ರೆಯ ಆಳ್ವಾಸ್‌ ವಿದ್ಯಾಸಂಸ್ಥೆಯಲ್ಲಿ ಬಿಎಸ್ಸಿ, ಎಂಎಸ್ಸಿ ವಿದ್ಯಾಭ್ಯಾಸ, ನ್ಯಾಶನಲ್‌ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ ಸುರತ್ಕಲ್‌ನಲ್ಲಿ ಪೂರೈಸಿದ್ದಾರೆ. ಇದೇ ಸಂಸ್ಥೆಯಲ್ಲಿ 5 ವರ್ಷಗಳ ಪಿಎಚ್‌ಡಿ ಪೂರೈಸಿ, ನಂತರ ಬೆಂಗಳೂರು ಇಸ್ರೋದಲ್ಲಿ ಉದ್ಯೋಗದಲ್ಲಿದ್ದಾರೆ.

ಚಂದ್ರನ ಮೇಲೆ ಮೂಡಲಿದೆ ಭಾರತದ ಮುದ್ರೆ : ರೋವರ್‌ ಹೆಜ್ಜೆ ಇಟ್ಟಲೆಲ್ಲಾ ಅಶೋಕ ಚಕ್ರ ಸಿಂಹದ ಮುಖ, ಇಸ್ರೋ ಗುರುತು

click me!