ಈ ರಾಜ್ಯದ ಮಹಿಳೆಯರಿಗೆ ಸಿಗಲಿದೆ ಒಂದು ವರ್ಷದ ಮೆಟರ್ನಿಟಿ ಲೀವ್‌

By Vinutha PerlaFirst Published Jul 27, 2023, 12:22 PM IST
Highlights

ಸರ್ಕಾರವು ತಮ್ಮ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ 1 ವರ್ಷ ಹೆರಿಗೆ ರಜೆ ಹಾಗೂ ಪುರುಷರಿಗೆ ಒಂದು ತಿಂಗಳ ಪೆಟರ್ನಿಟಿ ರಜೆಯನ್ನು ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಘೋಷಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಗ್ಯಾಂಗ್ಟಕ್: ಸಿಕ್ಕಿಂ ರಾಜ್ಯ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಹೆರಿಗೆ ರಜೆ ನೀಡಲು ನಿರ್ಧರಿಸಿದೆ. ಸರ್ಕಾರವು ತಮ್ಮ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ 1 ವರ್ಷ ಹೆರಿಗೆ ರಜೆ ಹಾಗೂ ಪುರುಷರಿಗೆ ಒಂದು ತಿಂಗಳ ಪೆಟರ್ನಿಟಿ ರಜೆಯನ್ನು ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಘೋಷಿಸಿದ್ದಾರೆ. ಸಿಕ್ಕಿಂ ರಾಜ್ಯ ನಾಗರಿಕ ಸೇವಾ ಅಧಿಕಾರಿಗಳ ಸಂಘದ (ಎಸ್‌ಎಸ್‌ಸಿಎಸ್‌ಒಎ) ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಯೋಜನವನ್ನು ಒದಗಿಸಲು ಸೇವಾ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗುವುದು ಎಂದು ಹೇಳಿದರು.

ಈ ಪ್ರಯೋಜನವು ಸರ್ಕಾರಿ ನೌಕರರು (Government employee) ತಮ್ಮ ಮಕ್ಕಳನ್ನು ಮತ್ತು ಕುಟುಂಬವನ್ನು ಉತ್ತಮವಾಗಿ ನೋಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಹೆರಿಗೆ ಪ್ರಯೋಜನ ಕಾಯಿದೆ 1961ರ ಪ್ರಕಾರ, ಕೆಲಸ ಮಾಡುವ ಮಹಿಳೆಯು (Woman) 6 ತಿಂಗಳು ಅಥವಾ 26 ವಾರಗಳ ವೇತನ ಸಹಿತ ಹೆರಿಗೆ ರಜೆಗೆ ಅರ್ಹರಾಗಿದ್ದಾರೆ. ಸದ್ಯ ಮಹಿಳೆಯರು 6 ತಿಂಗಳು ಅಥವಾ 26 ವಾರಗಳ ವೇತನ ಸಹಿತ ಹೆರಿಗೆ ರಜೆ (Maternity leave) ಪಡೆಯುತ್ತಿದ್ದಾರೆ.

Latest Videos

ಮುಟ್ಟಿನ ರಜೆ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಹೆರಿಗೆ ರಜೆ, ಕೇರಳ ಸರ್ಕಾರ ಘೋಷಣೆ

ಹಿಮಾಲಯದ ತಪ್ಪಲಿನಲ್ಲಿರುವ ಸಿಕ್ಕಿಂ ರಾಜ್ಯದಲ್ಲಿ ಸುಮಾರು 6.32 ಲಕ್ಷ ಜನರಿದ್ದಾರೆ. ಹಿಮಾಲಯನ್ ರಾಜ್ಯವು ಭಾರತದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ, ಸುಮಾರು 6.32 ಲಕ್ಷ. ಸಿಕ್ಕಿಂ ಮತ್ತು ಅದರ ಜನರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವ ಅಧಿಕಾರಿಗಳು ರಾಜ್ಯದ ಆಡಳಿತದ ಬೆನ್ನೆಲುಬು ಎಂದು ತಮಾಂಗ್ ಹೇಳಿದರು.

ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿ ಪ್ರಕ್ರಿಯೆ ಚುರುಕುಗೊಳಿಸುವತ್ತ ಗಮನ ಹರಿಸಲಾಗಿದ್ದು, ಬಡ್ತಿ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು. ಅವರು ಎಲ್ಲಾ ಹೊಸ IAS ಮತ್ತು SCS (ಸಿಕ್ಕಿಂ ನಾಗರಿಕ ಸೇವೆಗಳು) ಅಧಿಕಾರಿಗಳನ್ನು ಅಭಿನಂದಿಸಿದರು ಮತ್ತು ಅವರು ಯಶಸ್ವಿ ವೃತ್ತಿಜೀವನಕ್ಕೆ ಶುಭ ಹಾರೈಸಿದರು.

Maternity Leave: ಹುಟ್ಟಿದ ಬಳಿಕ ಮಗು ಮೃತಪಟ್ಟರೆ ಮಹಿಳಾ ಸಿಬ್ಬಂದಿಗೆ 60 ದಿನ ಹೆರಿಗೆ ರಜೆ

ಮಗುವಾದ ನಂತರವೂ ಮಹಿಳಾ ಉದ್ಯೋಗಿ ಹೆರಿಗೆ ರಜೆ ತೆಗೆದುಕೊಳ್ಳಬಹುದು, ಹೈಕೋರ್ಟ್ ಮಹತ್ವದ ತೀರ್ಪು
ಈ ಹಿಂದೆ ಮಹಿಳಾ ಉದ್ಯೋಗಿಗಳಿಗೆ ಮಗುವಿನ ಜನನದ ನಂತರವೂ ಹೆರಿಗೆ ರಜೆ (Maternity leave) ಹಕ್ಕಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತುದೆ.  ಕಾನೂನಿನ ಪ್ರಕಾರ, ಮಗುವಿನ ಜನನದ ನಂತರವೂ ಹೆರಿಗೆ ರಜೆ ಪಡೆಯುವ ಹಕ್ಕು ಮಹಿಳೆಗೆ ಇದೆ. ಮಾತೃತ್ವ ರಜೆ ಮತ್ತು ಮಕ್ಕಳ ಆರೈಕೆ ರಜೆ ಎರಡೂ ಬೇರೆ ಬೇರೆ ರಜೆಗಳು ಎಂದು ನ್ಯಾಯಾಲಯ ಹೇಳಿದೆ. ಎರಡನ್ನೂ ಒಟ್ಟಿಗೆ ತೆಗೆದುಕೊಳ್ಳಬಹುದು. ಮಗು ಹುಟ್ಟಿದೆ. ಈ ನೆಲೆಯಲ್ಲಿ ಹೆರಿಗೆ ರಜೆ ನಿರಾಕರಣೆ ತಪ್ಪು ಎಂದು ಸ್ಪಷ್ಟಪಡಿಸಿತ್ತು.

ಮಗುವಿನ ಜನನದ ನಂತರ ಹೆರಿಗೆ ರಜೆ ನೀಡಲು ನಿರಾಕರಿಸಿದ ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ಇಟಾ ಅವರ ಆದೇಶವನ್ನು ಕಾನೂನುಬಾಹಿರ ಎಂದು ಘೋಷಿಸಿದ ನ್ಯಾಯಾಲಯವು (Court) ಅದನ್ನು ರದ್ದುಗೊಳಿಸಿತು. ಅರ್ಜಿದಾರರಿಗೆ ಬಾಕಿ ವೇತನದೊಂದಿಗೆ ನಿಯಮಿತ ವೇತನವನ್ನು ನೀಡುವಂತೆ ಹೀರಾಪುರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಿತು. ಎರಡು ವಾರಗಳಲ್ಲಿ ಆದೇಶ ಹೊರಡಿಸುವಂತೆ ನ್ಯಾಯಾಲಯ ಬಿಎಸ್‌ಎಗೆ ಸೂಚಿಸಿತ್ತು.

click me!