'74ನೇ ವಯಸ್ಸಲ್ಲಿ ಹೊಸ ವೃತ್ತಿ..' ತಾಯಿ ಸುಧಾಮೂರ್ತಿಯ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಮಗ ರೋಹನ್

By Reshma Rao  |  First Published Jul 2, 2024, 10:25 AM IST

ಸುಧಾ ಮೂರ್ತಿ ಅವರ ವ್ಯಕ್ತಿತ್ವದ ಬಗ್ಗೆ ದೇಶವೇ ಹೆಮ್ಮೆ ಪಡುತ್ತದೆ. ಇದೀಗ ಅವರ ಮಗ ರೋಹನ್ ಮೂರ್ತಿ ರಾಜ್ಯಸಭಾ ಸದಸ್ಯರಾಗಿರುವ ತಾಯಿಯನ್ನು ಶ್ಲಾಘಿಸಿ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 
 


ಲೇಖಕಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ಅವರು ಈ ಬಾರಿ ಸಂಸತ್ತಿನ ಸದಸ್ಯರಾಗಿ ಹೊಸ ಪಾತ್ರವನ್ನು ವಹಿಸಿದ್ದಾರೆ. 74ನೇ ವಯಸ್ಸಿನಲ್ಲಿ, ಅವರು ರಾಜ್ಯಸಭಾ ಸಂಸದರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಆಕೆಯ ಮಗ ರೋಹನ್ ಮೂರ್ತಿ ಇತ್ತೀಚಿನ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ತಾಯಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರೋಹನ್ ಮೂರ್ತಿ ಅವರು ತಮ್ಮ ತಾಯಿಯ ಅನೇಕ ಸಾಧನೆಗಳನ್ನು ಶ್ಲಾಘಿಸಿದ್ದಾರೆ. 'ಅವರು ಇಂಜಿನಿಯರ್, ಪ್ರೋಗ್ರಾಮರ್, ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರು, ಲೇಖಕರು, ಲೋಕೋಪಕಾರಿ, ತಾಯಿ ಮತ್ತು ಹೆಂಡತಿಯಾಗಿದ್ದಾರೆ. ಮತ್ತು ನಿನ್ನೆ, 74 ನೇ ವಯಸ್ಸಿನಲ್ಲಿ, ಅವರು ಭಾರತೀಯ ಸಂಸತ್ತಿನ ಮೇಲ್ಮನೆ ಸದಸ್ಯರಾಗಿ ಹೊಸ ವೃತ್ತಿಜೀವನವನ್ನು ಪ್ರಾರಂಭಿಸಿದರು ' ಎಂದು ಬರೆದಿದ್ದಾರೆ. 'ಅವರು ಮೊದಲ ದಿನ ಮನೆಯಿಂದ ಹೊರಡುವ ಮೊದಲು!' ಎಂದು ರಾಜ್ಯಸಭೆಯ ತಮ್ಮ ಮೊದಲ ದಿನಕ್ಕೆ ಸಿದ್ಧರಾಗಿರುವ ಅವರ ತಾಯಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ತಿಳಿ ಹಸಿರು ಸೀರೆ ಉಟ್ಟ ಸುಧಾ ಮೂರ್ತಿ, ಬ್ಯಾಗ್ ಹಿಡಿದು ನಗೆ ಬೀರುತ್ತಿದ್ದಾರೆ. 

Latest Videos

undefined

16 ವರ್ಷದ ಈ ಹುಡುಗಿ 100 ಕೋಟಿಯ ಸ್ಟಾರ್ಟಪ್ ಕಟ್ಟಿ ಬೆಳೆಸಿದ ಮಾಲಕಿ!
 

ಸುಧಾ ಮೂರ್ತಿ ಅವರು ಮಾರ್ಚ್ 14 ರಂದು ತಮ್ಮ ಪತಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಸಮ್ಮುಖದಲ್ಲಿ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಭಾಪತಿ ಜಗದೀಪ್ ಧನಕರ್ ಪ್ರಮಾಣ ವಚನ ಬೋಧಿಸಿದರು. ಅಂತರಾಷ್ಟ್ರೀಯ ಮಹಿಳಾ ದಿನದಂದು ಸುಧಾ ಮೂರ್ತಿ ಅವರನ್ನು ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನ ಮಾಡಲಾಯಿತು. ಅವರ ಜೀವನದುದ್ದಕ್ಕೂ, ಅವರು ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.

27 ವರ್ಷಗಳಿಂದ ಸೀರೆನೇ ಕೊಳ್ಳದ ಸುಧಾ ಮೂರ್ತಿ ಸೀರೆ ಬಗ್ಗೆ ಎಷ್ಟು ತಿಳ್ಕೊಂಡಿದಾರೆ ಗೊತ್ತಾ?
 

ಸುಧಾ ಮೂರ್ತಿ ಅವರ ವ್ಯಕ್ತಿತ್ವದ ಬಗ್ಗೆ ದೇಶವೇ ಹೆಮ್ಮೆ ಪಡುತ್ತದೆ. ಆದರೆ, ಸ್ವಂತ ಮಗನ ಬಳಿಯೇ ಹೊಗಳಿಸಿಕೊಳ್ಳುವ ಸಂಭ್ರಮವೇ ಬೇರೆ.. ಏನಂತೀರಾ?

 

 

click me!