ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನಾಡಿನ ಹೆಮ್ಮೆ ಸುಧಾಮೂರ್ತಿಯವರ ಜೀವನದ ಘಟನೆಗಳು ಆಗಾಗ ಸುದ್ದಿಯಲ್ಲಿರುತ್ತವೆ. ಸಂದರ್ಶನವೊಂದರಲ್ಲಿ ಸುಧಾಮೂರ್ತಿ, ಇನ್ಫೋಸಿಸ್ ಕಂಪನಿಯನ್ನು ಆರಂಭಿಸುವಾಗ ತಮ್ಮ ಪತಿ ನಾರಾಯಣ ಮೂರ್ತಿ ಅವರಿಗೆ ಹೇಗೆ ಸಹಾಯ ಮಾಡಿದರು ಎಂಬುದರ ಕುರಿತು ಹೇಳಿಕೊಂಡಿದ್ದಾರೆ.
ಇಂದು ಕೋಟಿ ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ Infosys, 1981ರಲ್ಲಿ ಸುಧಾ ಮೂರ್ತಿ ತನ್ನ ಪತಿ ನಾರಾಯಣ ಮೂರ್ತಿಗೆ ನೀಡಿದ 10,000 ರೂ. ಸಾಲದೊಂದಿಗೆ ಪ್ರಾರಂಭವಾಯಿತು ಎಂಬುದು ಹಲವರಿಗೆ ತಿಳಿದಿರದ ವಿಷಯ. ಹೌದು, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸುಧಾ ಮೂರ್ತಿ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ತಾವು ಪತಿಗೆ ತಿಳಿಯದೆ ಕೂಡಿಟ್ಟ ಹಣವನ್ನು ಅವರಿಗೆ ಕೊಟ್ಟಿದ್ದಾಗಿ ಸುಧಾಮೂರ್ತಿ ಹೇಳಿದರು. ಮಹಿಳೆಯರಿಗೆ ತಮ್ಮ ಗಂಡನಿಗೆ ತಿಳಿಯದೇ ಹಣವನ್ನು ಉಳಿತಾಯ ಮಾಡಬೇಕು. ಇದರಿಂದ ಸಂಸಾರದಲ್ಲಿ ಬರೋ ಆರ್ಥಿಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು ಎಂದು ಸುಧಾಮೂರ್ತಿ ಸಾಮಾಜಿಕ ಸಂದೇಶವನ್ನು ನೀಡಿದ್ದಾರೆ.
'ನಾನು ಮದುವೆಯಾದಾಗ ನನ್ನ ತಾಯಿ (Mother) ಹೇಳಿದ್ದರು. ನೀನು ಯಾವಾಗಲೂ ಸ್ವಲ್ಪ ಹಣವನ್ನು ಇಟ್ಟುಕೊಳ್ಳಬೇಕು. ಮತ್ತು ಈ ಹಣವನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು, ಸೀರೆ ಖರೀದಿಸಲು ಅಲ್ಲ, ಚಿನ್ನ ಅಥವಾ ಯಾವುದನ್ನಾದರೂ ಖರೀದಿಸಲು ಅಲ್ಲ' ಎಂದು ಸುಧಾಮೂರ್ತಿ ತಿಳಿಸಿದ್ದಾರೆ. ತಾಯಿಯ ಸಲಹೆಯನ್ನು ಅನುಸರಿಸಿ, ಸುಧಾಮೂರ್ತಿ ಪ್ರತಿ ತಿಂಗಳು ಅವಳ ಮತ್ತು ಅವಳ ಗಂಡನ (Husband) ಸಂಬಳದ ಸ್ವಲ್ಪ ಭಾಗವನ್ನು ಅವನಿಗೆ ತಿಳಿಯದೆ ಉಳಿಸುತ್ತಿದ್ದರು. ಇದು ಕಷ್ಟಕಾಲದಲ್ಲಿ ನೆರವಿಗೆ ಬಂತು ಎಂದವರು ಹೇಳಿದ್ದಾರೆ.
60 ವರ್ಷಗಳ ಹಿಂದೆ ಅಜ್ಜಿ ಕಾಲೆಳಿತಿದ್ದೆ ಈಗ ಆಕೆಯಂತೆ ನಾ ಆಡುವೆ: ಸುಧಾಮೂರ್ತಿ
ಇನ್ಫೋಸಿಸ್ ಕಂಪೆನಿ ಆರಂಭಿಸಲು ಆರಂಭಿಕ ಸಾಲ ನೀಡಿದ ಸುಧಾಮೂರ್ತಿ
ಕಂಪನಿಯನ್ನು ಆರಂಭಿಸುವಾಗ ಸುಧಾ ಮೂರ್ತಿ ಅವರು ಪತಿ ನಾರಾಯಣ ಮೂರ್ತಿ ಅವರಿಗೆ ಆರಂಭಿಕ ಸಾಲ ನೀಡುವ ಮೂಲಕ ಕಂಪನಿಯಲ್ಲಿ ಅತ್ಯುತ್ತಮ ಹೂಡಿಕೆ (Investment) ಮಾಡಿದರ ಕುರಿತು ಮಾತನಾಡಿದರು. ಸಂದರ್ಶನದಲ್ಲಿ ಸುಧಾಮೂರ್ತಿ,ಕೌಟುಂಬಿಕ ಮತ್ತು ವೃತ್ತಿ ಜೀವನದಲ್ಲಿ ದಂಪತಿಗಳಿಬ್ಬರು ಎದುರಿಸಿದ ಸವಾಲುಗಳನ್ನು ಬಹಿರಂಗಪಡಿಸಿದರು.
ನಾರಾಯಣ ಮೂರ್ತಿ ಅವರನ್ನು ಸುಧಾ ಮೂರ್ತಿ ಮದುವೆಯಾದಾಗ ಅವರು ನಿರುದ್ಯೋಗಿಯಾಗಿದ್ದರು ಎಂಬ ಮಾಹಿತಿಯನ್ನು ಸಹ ಹಂಚಿಕೊಂಡರು. ಆದಾದ ನಂತರ ತಮ್ಮ ಕುಟುಂಬಕ್ಕೊಸ್ಕರ ಹೇಗೆ ಸಂಪಾದಿಸಿದರು ಎಂಬುದರ ಬಗ್ಗೆಯೂ ಹೇಳಿಕೊಂಡಿದ್ದಾರೆ. ಇನ್ಫೋಸಿಸ್‌ನ್ನು ಸ್ಥಾಪಿಸುವಾಗ ನಾನು 10,000 ರೂಪಾಯಿಗಳ ಸಾಲವನ್ನು ನೀಡಿದ್ದೆ. ಆ ಹಣವೇ ನನ್ನ ಜೀವನದ 'ಅತ್ಯುತ್ತಮ ಹೂಡಿಕೆ' ಆಗಿತ್ತು ಎಂದು ಸುಧಾಮೂರ್ತಿ ಸಂತಸದಿಂದ ಹೇಳಿದ್ದಾರೆ.
ಇಂಥಾ ಗಂಡನ ಜೊತೆ ಜೀವನ ಮಾಡುವುದು ತುಂಬಾ ಕಷ್ಟ; ಸುಧಾಮೂರ್ತಿ ಹೀಗೆ ಹೇಳಿದ್ಯಾಕೆ?
10,000 ರೂಪಾಯಿ ಸಾಲ, ನನ್ನ ಬೆಸ್ಟ್ ಇನ್ವೆಸ್ಟ್‌ಮೆಂಟ್: ಸುಧಾ ಮೂರ್ತಿ
'ನಾವು ಮುಂಬೈನ ಬಾಂದ್ರಾದಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೆವು. ಅವರು 1981ರಲ್ಲಿ ಇನ್ಫೋಸಿಸ್ ಅನ್ನು ಪ್ರಾರಂಭಿಸಿದರು. ಒಂದು ದಿನ ಅವರು ನನ್ನ ಬಳಿ ಬಂದು ಒಂದು ಸಾಫ್ಟ್‌ವೇರ್ ಕಂಪನಿಯನ್ನು ಪ್ರಾರಂಭಿಸುತ್ತಿರುವುದಾಗಿ ಹೇಳಿದರು. ನಮ್ಮ ಕುಟುಂಬ ಮಿಡ್ಲ್ ಕ್ಲಾಸ್ ಆಗಿರೋದರಿಂದ ಅದಕ್ಚೆ ಬೇಕಾದ ಹಣವನ್ನು ಹೇಗೆ ಹೊಂದಿಸುತ್ತೀರಿ ಎಂದು ಕೇಳಿದೆ. ಆಗ ನಾರಾಯಣ ಮೂರ್ತಿ ಭಾರತಕ್ಕೆ ಎಷ್ಟರ ಮಟ್ಟಿಗೆ ಸಾಫ್ಟ್‌ವೇರ್ ಕ್ರಾಂತಿಯ ಅಗತ್ಯವಿದೆ ಎಂಬುದನ್ನು ಹೇಳಿದರು.
'ಮುಂದಿನ ಮೂರು ವರ್ಷಗಳ ಕಾಲ ನಾನು ಸಂಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ನೀನೇ ಕುಟುಂಬವನ್ನು ನೋಡಿಕೊ ಎಂದರು. ಆಗ ನಾನು ಅವರಿಗೆ ಗೊತ್ತಿಲ್ಲದೆ 10,250 ರೂ ಉಳಿಸಿದ್ದೆ ಮತ್ತು ಅವರಿಗೆ 10 ಸಾವಿರ ಕೊಟ್ಟು ಉಳಿದ ಹಣವನ್ನು ತುರ್ತು ಪರಿಸ್ಥಿತಿಗಾಗಿ ಉಳಿಸಿಕೊಂಡೆ. ನಂತರ ಕಂಪನಿಯ ಬೆಳವಣಿಗೆ ಬಗ್ಗೆ ನಿಮಗೆ ಗೊತ್ತಿದೆ' ಎಂದು ಸುಧಾ ಮೂರ್ತಿ ಮಾಹಿತಿ ನೀಡಿದ್ದಾರೆ.