Success Women: ಸಪ್ತಾ ಜೌಧರಿ ಮೀರಿಸೋ ಈ ಡ್ಯಾನ್ಸರ್ ತಿಂಗಳ ಗಳಿಕೆ ಲಕ್ಷ ಲಕ್ಷ@

Published : Jul 26, 2023, 04:35 PM IST
Success Women: ಸಪ್ತಾ ಜೌಧರಿ ಮೀರಿಸೋ ಈ ಡ್ಯಾನ್ಸರ್ ತಿಂಗಳ ಗಳಿಕೆ ಲಕ್ಷ ಲಕ್ಷ@

ಸಾರಾಂಶ

ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡ್ತಾನೆ ಪ್ರಸಿದ್ಧಿ ಪಡೆದವರು ಅನೇಕರಿದ್ದಾರೆ. ಇದ್ರಲ್ಲಿ ಕೆಲವರು ಇನ್ನೂ ಟಿಕ್ ಟಾಕ್ ನಲ್ಲಿಯೇ ಉಳಿದಿದ್ರೆ ಮತ್ತೆ ಕೆಲವರು ಚಿತ್ರೋದ್ಯಮದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮುದ್ದಾದ ಮುಖ ಹೊಂದಿರುವ, ಸಖತ್ ಡಾನ್ಸ್ ಮಾಡುವ ಈ ಬೆಡಗಿಗೆ ಈಗ ಕೈ ತುಂಬ ಕೆಲಸವಿದೆ. ಸ್ವಪ್ನ ಚೌಧರಿಗೆ ಟಕ್ಕರ್ ನೀಡ್ತಿರುವ ಈಕೆ ಯಾರು ಗೊತ್ತಾ?  

ಬಾಲಿವುಡ್, ಹಾಲಿವುಡ್ ಸಿನಿಮಾದಲ್ಲಿ ನಟಿಸಿಯೇ ಹೆಸರು ಮಾಡ್ಬೇಕು ಅಂದೇನಿಲ್ಲ. ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದೆ ಕೇವಲ ಡಾನ್ಸ್ ಮೂಲಕ ಪ್ರಸಿದ್ಧಿ ಪಡೆದವರು ನಮ್ಮಲ್ಲಿದ್ದಾರೆ. ಅದ್ರಲಿ ಸ್ವಪ್ನಾ ಚೌದರಿ ಕೂಡ ಒಬ್ಬರು. ಡಾನ್ಸ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ತನ್ನತ್ತ ಸೆಳೆದಿದ್ದ ಕಲಾವಿದೆಗೆ ಈಗ ಸಾಕಷ್ಟು ಅವಕಾಶ ಸಿಗ್ತಿದೆ. ಈಗ ಖ್ಯಾತ ನಟಿ, ಡಾನ್ಸರ್ ಹಾಗೂ ಮಾಡೆಲ್ ಆಗಿರುವ ಹರಿಯಾಣದ ಚೆಲುವೆ ಪ್ರಾಂಜಲ್ ದಹಿಯಾ ತಮ್ಮ ಡಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಇತ್ತೀಚೆಗೆ ಎಲ್ಲಿ ನೋಡಿದರೂ ಅವರ ಡಾನ್ಸ್ ಸದ್ದು ಕೇಳಿಬರುತ್ತಿದೆ. 

ಟಿಕ್ ಟಾಕ್ (Tik Tok) ನಲ್ಲಿ ಡಾನ್ಸ್ ಮಾಡ್ತಾ ಪ್ರಸಿದ್ಧಿ ಪಡೆದವರು ಪ್ರಾಂಜಲ್ ಮಾಡೆಲಿಂಗ್ ನಲ್ಲಿ ತನ್ನ ಕರೀಯರ್ ಆರಂಭಿಸಿದ್ದಾರೆ. ಇಂದು 52 ಗಜ್ ಕಾ ದಾಮನ್ ಹಾಡಿಗೆ ಡಾನ್ಸ್ ಮಾಡುವ ಮೂಲಕ ಕೋಟ್ಯಂತರ ವೀಕ್ಷಕರ ಮನ ಗೆದ್ದಿದ್ದಾರೆ. ಪ್ರಾಂಜಲ್ (Pranjal) ಅವರ ಡಾನ್ಸ್ (Dance) ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಮಲ್ಲೇಶ್ವರಂ ಬೀದಿಯಲ್ಲಿ ಚಪ್ಪಲಿ ಖರೀದಿಸಿದ ಲಕ್ಷಣ ಶ್ವೇತಾ; ದುಡ್ಡುಳಿಸಲು ಒಳ್ಳೆ ಉಪಾಯ!

ಮನೆಮಾತಾಗಿರುವ ಹರಿಯಾಣದ ಡಾನ್ಸರ್ ಪ್ರಾಂಜಲ್ ದಹಿಯಾ : ಶಶಿ ದಹಿಯಾ ಮತ್ತು ಸೀಮಾ ದಹಿಯಾ ಅವರ ಮಗಳಾದ ಪ್ರಾಂಜಲ್ ದಹಿಯಾ ಹರಿಯಾಣದ ಫರೀದಾಬಾದ್ ನಲ್ಲಿ ಮೇ 5, 1996ರಲ್ಲಿ ಜನಿಸಿದರು. 2018 ರಲ್ಲಿ ಇವರು ಹರಿಯಾಣದ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಇವರು ಸುಶಾಂತ, ರಾಹುಲ್ ಮತ್ತು ನೇಹಾ ಎಂಬ ಸಹೋದರ ಸಹೋದರಿಯನ್ನು ಕೂಡ ಹೊಂದಿದ್ದಾರೆ. ಅನೇಕ ಮಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರುಗಳಿಸಲು ತಮ್ಮ ಪೂರ್ತಿ ಜೀವನವನ್ನೇ ಮೀಸಲಿಡುತ್ತಾರೆ. ಆದರೆ ಪ್ರಾಂಜಲ್ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಎಲ್ಲೆಡೆ ಖ್ಯಾತರಾಗಿದ್ದಾರೆ. ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಇವರ ಫ್ಯಾನ್ಸ್ ಆಗಿರೋದು ಇದಕ್ಕೆ ಸಾಕ್ಷಿ.

Big Salute : ಎರಡು ನದಿ ದಾಟಿ ಶಾಲೆಗೆ ಹೋಗುವ ಈ ಶಿಕ್ಷಕಿಗೆ ನಮ್ಮದೊಂದು ಸಲಾಂ

ಕೇವಲ 3 ತಿಂಗಳಲ್ಲಿ 45 ಕೋಟಿ ಜನರ ಮೆಚ್ಚುಗೆ : ಹರಿಯಾಣ ಮ್ಯೂಸಿಕ್ ಇಂಡಸ್ಟ್ರಿಯ ಜೀವಾಳವಾಗಿರುವ ಪ್ರಾಂಜಲ್ ದಹಿಯಾ ಅವರು ತಮ್ಮ ಮನಸೂರೆಗೊಳ್ಳುವ ಡಾನ್ಸ್ ನಲ್ಲಿ ಸಪ್ನಾ ಚೌಧರಿ ಅವರನ್ನೂ ಮೀರಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ‘52 ಗಜ್ ಕಾ ದಾಮನ್’ ಎಂಬ ಅವರ ಡಾನ್ಸ್ ಸಖತ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರೋ ಈ ಡಾನ್ಸ್ ಕೇವಲ 3 ತಿಂಗಳ ಅವಧಿಯಲ್ಲಿ 45 ಕೋಟಿಗೂ ಹೆಚ್ಚು ವ್ಯೂ ಪಡೆದಿದೆ. 

ಪ್ರಾಂಜಲ್ ಗಳಿಕೆ : ಹಾಡಿಗೆ ಹೆಜ್ಜೆ ಹಾಕುವ ಪ್ರಾಂಜಲ್ ತಮ್ಮ ಒಂದು ಹಾಡಿಗೆ 50 ರಿಂದ 60 ಸಾವಿರ ಚಾರ್ಜ್ ಮಾಡುತ್ತಾರೆ. ವರದಿಗಳ ಪ್ರಕಾರ ಪ್ರಾಂಜಲ್ ತಿಂಗಳ ವರಮಾನ 5ರಿಂದ 6 ಲಕ್ಷವಾಗಿದೆ. ಟಿಕ್ ಟಾಕ್ ನಲ್ಲಿ ಹಲವಾರು ಪಂಜಾಬಿ ಮತ್ತು ಹರ್ಯಾನ್ವಿ ಹಾಡುಗಳಿಗೆ ಹೆಜ್ಜೆ ಹಾಕಿರುವ ಪ್ರಾಂಜಲ್ ಅವರು  ಮೊದಲಿಂದಲೇ ಮಾಡೆಲಿಂಗ್ ಮತ್ತು ಹಾಡಿನಲ್ಲಿಯೂ ಆಸಕ್ತಿ ಹೊಂದಿದ್ದರು. ಇವರು ಅನೇಕ ಪಾಪ್ ಹಾಡು, ಫೋಟೋ ಶೂಟ್ ಹಾಗೂ ಫ್ಯಾಶನ್ ಶೋ ಗಳಲ್ಲಿ ಕೂಡ ಭಾಗವಹಿಸಿದ್ದಾರೆ. ಪ್ರಾಂಜಲ್ ಅವರು ತಮ್ಮ ಶಿಕ್ಷಣವನ್ನು ಫರಿದಾಬಾದ್ ನಲ್ಲಿ ಮುಗಿಸಿದ್ದಾರೆ. ನಂತರ ಅವರು ತಮ್ಮ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ಮಾಡೆಲಿಂಗ್ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದಾರೆ. 

ಖ್ಯಾತಿಯ ಉತ್ತುಂಗದಲ್ಲಿರುವ ಪ್ರಾಂಜಲ್ ದಹಿಯಾ ಅವರು ಫೇಸ್ ಬುಕ್, ಇನ್ಸ್ಟಾ ಗ್ರಾಂ ಮತ್ತು ಟ್ವಿಟರ್ ಮುಂತಾದ ಸೋಷಿಯಲ್ ಮೀಡಿಯಾದಲ್ಲಿ 3 ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇವರು ತಮ್ಮ ಫೋಟೋ, ವಿಡಿಯೋ ಹಾಗು ಕೆಲವು ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಲ್ಲದೆ ಅದ್ರ ಮೂಲಕವೂ ಹಣ ಸಂಪಾದನೆ ಮಾಡ್ತಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Earrings: ದುಂಡು ಮುಖದವರಿಗೆ ಸೂಪರ್ ಆಗಿ ಕಾಣುತ್ತೆ ಈ 7 ಹಾಫ್ ಹೂಪ್ಸ್ ಡಿಸೈನ್ಸ್!
ಮುಗ್ಧ ಮುಖ, ಸಖತ್ ಸ್ಟೈಲ್! ಕಾಜಲ್ ಸೂಟ್ ಕಲೆಕ್ಷನ್‌ನಿಂದ ಸ್ಫೂರ್ತಿ ಪಡೆಯಿರಿ