ಸಾಮಾನ್ಯವಾಗಿ ಸರಳವಾದ ಸೀರೆಯಲ್ಲಿಯೇ ಲಕ್ಷಣವಾಗಿ ಕಾಣಿಸಿಕೊಳ್ಳುವ ಸುಧಾಮೂರ್ತಿ ಸೀರೆ ಬಗ್ಗೆ ಎಷ್ಟೊಂದು ತಿಳಿದುಕೊಂಡಿದ್ದಾರೆ ಎಂದು ನೋಡಿದರೆ ಅಚ್ಚರಿಯಾಗುತ್ತದೆ.
ಸುಧಾಮೂರ್ತಿ ಸೀರೆ ಕೊಂಡುಕೊಳ್ಳೋಲ್ಲ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರೋ ವಿಷಯ. 27 ವರ್ಷಗಳ ಹಿಂದೆಯೇ ಅವರು ಕಾಶಿಯಲ್ಲಿ ತಮಗಿಷ್ಟವಾದ ಸೀರೆಯನ್ನು ಇನ್ನು ಕೊಳ್ಳೋಲ್ಲ ಎಂದು ಬಿಟ್ಟು ಬಂದಿದ್ದಾರೆ. ಆ ನಂತರದಲ್ಲಿ ಉಡುಗೊರೆಯಾಗಿ ಬರುವ ಸೀರೆಗಳನ್ನಷ್ಟೇ ಅವರು ಉಡೋದು. ಸಾಮಾನ್ಯವಾಗಿ ಸರಳವಾದ ಸೀರೆಯಲ್ಲಿಯೇ ಲಕ್ಷಣವಾಗಿ ಕಾಣಿಸಿಕೊಳ್ಳುವ ಸುಧಾಮೂರ್ತಿ ಸೀರೆ ಬಗ್ಗೆ ಎಷ್ಟೊಂದು ತಿಳಿದುಕೊಂಡಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ.
ಸೀರೆಯ ಬಗ್ಗೆ ಸುಧಾಮೂರ್ತಿ ಮಾತಾಡಿರೋ ವಿಡಿಯೋವನ್ನು ಬಹಳಷ್ಟು ಜನರು ಇಷ್ಟಪಟ್ಟಿದ್ದಾರೆ. ಈ ವಿಡಿಯೋದಲ್ಲಿ ಮೈಸೂರು ಸಿಲ್ಕ್ ಸೀರೆ ಉಟ್ಟಿರುವ ಅವರು, ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎಂದಿದ್ದಾರೆ.
undefined
ವಿಡಿಯೋದಲ್ಲಿ ಏನಂತಾರೆ?
'ಲಕ್ಷುರಿ ಸೀರೆಗಳು, ರಾಯಲ್ ಸೀರೆಗಳು, ಸಿಂಪಲ್ ಸೀರೆಗಳು- ಬಹಳಷ್ಟು ರೀತಿಯ ಸೀರೆಗಳಿವೆ. ಉದಾಹರಣೆಗೆ ಪೈತಾನಿ ಸೀರೆಗಳು- ಮುಂಚೆ ಇದು ತುಂಬಾ ದುಬಾರಿಯಾಗಿತ್ತು. ನಂತರದಲ್ಲಿ ಇದನ್ನು ಕೊಂಚ ವಿಭಿನ್ನವಾಗಿ ಮಾಡಿ ಕೊಳ್ಳಬಹುದಾದ ದರದ ಸೀರೆಯಾಗಿಸಿದರು. ಇದನ್ನು ಜನ ಮದುವೆಗೆ ಮಾತ್ರ ಕೊಳ್ಳುತ್ತಾರೆ' ಎಂದು ಸುಧಾಮ್ಮ ಹೇಳುತ್ತಾರೆ.
ನಂತರ ಮಾತು ಮುಂದುವರಿಸಿ, 'ನಂತರದಲ್ಲಿ ನಾರಾಯಣಪುರ ಸೀರೆಗಳು- ಕೊಳ್ಳಬಹುದಾದ ಮತ್ತು ಚೆಂದದ ಸೀರೆಗಳು. ಗದ್ವಾಲ್ ಸೀರೆಗಳು- ಕಾಟನ್ ಮತ್ತು ಸಿಲ್ಕ್ ಬಾರ್ಡರ್ ಹೊಂದಿರುತ್ತದೆ. ಅದನ್ನು ಬಹಳ ವಿಶೇಷವಾಗಿ ಮಡಚಲಾಗುತ್ತದೆ. ಗದ್ವಾಲ್ ಆಂಧ್ರ ಮತ್ತು ಕರ್ನಾಟಕ ಗಡಿಯಲ್ಲಿ ಬರುತ್ತದೆ.
ಪ್ರತಿದಿನದ ಬಳಕೆಗೆ ಈಚಲ್ಕರಂಜಿ ಸೀರೆಗಳು- ಕಡಿಮೆ ಬೆಲೆಗೆ ಸಿಗುತ್ತವೆ - ಹೀಗೆ ಹಲವಾರು ವಿಭಿನ್ನ ಸೀರೆಗಳಿವೆ. ಆದರೆ, ನಾನು ಸೀರೆಗಳನ್ನು ಕೊಳ್ಳುವುದಿಲ್ಲ. ಉಡುಗೊರೆಯಾಗಿ ಬರುವ ಸೀರೆಗಳನ್ನೇ ಉಡುತ್ತೇನೆ. ಈಗೀಗ ಸೀರೆ ಉಡುಗೊರೆ ನೀಡಬೇಡಿ, ಸಾಕಷ್ಟಿದೆ ಎನ್ನುತ್ತೇನೆ' ಎಂದಿದ್ದಾರೆ.
ಸೀರೆಯ ಕುರಿತ ಸುಧಾಮೂರ್ತಿಯವರ ಮತ್ತೊಂದು ಅನುಭವ
ಸುಧಾಮೂರ್ತಿ ದೇವದಾಸಿಯರ ಬದುಕನ್ನು ತಮ್ಮ ಫೌಂಡೇಶನ್ ಮೂಲಕ ಬದಲಿಸಲು ಪಣ ತೊಟ್ಟಿದ್ದರು. ಈ ಸಂದರ್ಭದಲ್ಲಿ ದೇವದಾಸಿಯರನ್ನು ಮೊದಲ ಬಾರಿ ಭೇಟಿಯಾಗಲು ಹೋದಾಗ ಬಾಬ್ ಕಟ್ ಜೊತೆಗೆ ಜೀನ್ಸ್ ಟಿಶರ್ಟ್ ಧರಿಸಿದ್ದರು. ಆಗ, ಅವರು ಸುಧಾಮೂರ್ತಿ ಎಡೆಗೆ ಚಪ್ಪಲಿ ಎಸೆದರಂತೆ, ಮುಂದಿನ ಬಾರಿ ಹೋದಾಗ ಟೊಮ್ಯಾಟೋ ಎಸೆದರಂತೆ. ಮತ್ತೊಂದು ಬಾರಿ ಹೋದಾಗ ಸೀರೆ ಉಟ್ಟು, ಕೂದಲು ಕಟ್ಟಿ ಹೋಗಿದ್ದರತೆ. ಆಗ ದೇವದಾಸಿಯರು ಅವರನ್ನು ಒಪ್ಪಿಕೊಂಡು ಮಾತನಾಡಿಸಿದ್ದರು.