
ಛಾಯಾಗ್ರಾಹಕ @framesbyankit ಹೀಗೇ ಸುಮ್ಮನೆ ದಾರಿಯಲ್ಲಿ ಸಾಗುವ ಅಪರಿಚಿತರನ್ನು ಮಾತನಾಡಿಸಿ ಅವರ ಫೋಟೋಗಳನ್ನು ತೆಗೆವ ಹವ್ಯಾಸ ಇಟ್ಟುಕೊಂಡಿದ್ದಾರೆ. ನಂತರ ಆ ಫೋಟೋಗಳನ್ನು ಹಾಗೂ ವಿಡಿಯೋವನ್ನು ತಮ್ಮ ಇನ್ಸ್ಟಾ ಪೇಜಿನಲ್ಲಿ ಹಂಚಿಕೊಳ್ಳುತ್ತಾರೆ.
ಪ್ರತಿ ಬಾರಿಯಂತೆ ಈ ಬಾರಿಯೂ ಅವರು ದಾರಿಯಲ್ಲಿ ಹೋಗುತ್ತಿದ್ದ ಅಕ್ಕತಂಗಿಯರನ್ನು ನೋಡಿ ಮಾತನಾಡಿಸಿದ್ದಾರೆ. ಅವರ ಅಚ್ಚರಿಗೆ ಆ ಇಬ್ಬರೂ ಸೋದರಿಯರು ಉತ್ತಮ ಸಾಧಕಿಯರಾಗಿದ್ದರು.
ಹೌದು, ಪರಿ ಬಿಷ್ಣೋಯ್ ಮತ್ತು ಪಾಲಕ್ ಬಿಷ್ಣೋಯ್ ಎಂಬ ಆ ಸೋದರಿಯರು- ಅಕ್ಕ ಐಎಎಸ್ ಆಫೀಸರ್ ಆಗಿದ್ದರೆ, ತಂಗಿ ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕ್ರಿಮಿನಲ್ ಲಾಯರ್ ಎಂದು ಪರಿಚಯಿಸಿಕೊಳ್ಳುತ್ತಾರೆ. ಇದನ್ನು ಕೇಳಿದ ಛಾಯಾಗ್ರಾಹಕ, ಇದು ಅನಿರೀಕ್ಷಿತವಾಗಿದ್ದು, ಮೊದಲ ಬಾರಿಗೆ ತಾನು ಐಎಎಸ್ ಆಫೀಸರೊಬ್ಬರನ್ನು ಹೀಗೆ ದಾರಿಯಲ್ಲಿ ಭೇಟಿಯಾಗುತ್ತಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ.
ಈ ಅಕ್ಕತಂಗಿಯರ ಪ್ರಭಾವಶಾಲಿ ಹುದ್ದೆಗಳನ್ನು ಕೇಳಿದ ನೆಟ್ಟಿಗರು ಹೆಮ್ಮೆ ಪಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಪ್ರಸ್ತುತ ಸಿಕ್ಕಿಂನಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿರುವ ಪರಿ ಬಿಷ್ಣೋಯ್ ಅವರು ತಮ್ಮ ಪ್ರಭಾವಶಾಲಿ ರುಜುವಾತುಗಳಿಂದ ಗಮನ ಸೆಳೆದರು. 2019ರಲ್ಲಿ MA ಪದವಿ ಪಡೆದ ಪರಿ, UPSC ಪರೀಕ್ಷೆಗಳಲ್ಲಿ ಎಐಆರ್ 30 ರ್ಯಾಂಕ್ ಸಾಧಿಸಿದರು,. ಇದು ರಾಜಸ್ಥಾನದಲ್ಲಿರುವ ಅವರ ಸಮುದಾಯಕ್ಕೆ ಒಂದು ಅದ್ಭುತ ಸಾಧನೆಯಾಗಿದೆ. ಅವರ ಇತ್ತೀಚಿನ ಚುನಾವಣೆಯ ಮೇಲ್ವಿಚಾರಣೆಯ ಪಾತ್ರವು ಶಾಂತಿಯುತ ಫಲಿತಾಂಶಗಳಿಂದ ಗುರುತಿಸಲ್ಪಟ್ಟಿದೆ, ಇದು ಅವರ ಸಮರ್ಪಣೆ ಮತ್ತು ನಾಯಕತ್ವಕ್ಕೆ ಸಾಕ್ಷಿಯಾಗಿದೆ. ತನ್ನ ಯಶಸ್ಸಿನ ಹಾದಿಯನ್ನು ಪ್ರತಿಬಿಂಬಿಸುತ್ತಾ ಪರಿ, ತಾಯಿ ರಾಜಸ್ಥಾನ ಪೋಲೀಸ್‌ನ ಗೌರವಾನ್ವಿತ ಸದಸ್ಯೆಯಾಗಿದ್ದರು. ಈ ಹುದ್ದೆಯಿಂದಲೇ ತಾಯಿ ಸಮಾಜಲ್ಲಿ ಇಷ್ಟೊಂದು ಬದಲಾವಣ ತರುವಾಗ ತಾನು ಐಎಎಸ್ ಅಧಿಕಾರಿಯಾದರೆ ಇನ್ನೂ ಹೆಚ್ಚಿನ ಬದಲಾವಣೆ ತರು ಸಾಧ್ಯ ಎಂದು ಯೋಚಿಸಿ ಈ ಹಾದಿ ಹಿಡಿದಿದ್ದಾಗಿ ಹೇಳಿದ್ದಾರೆ.
ಇನ್ನು ಪರಿಯ ಸಹೋದರಿ ಪಾಲಕ್, ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡರಲ್ಲೂ ಪ್ರಾಕ್ಟೀಸ್ ಮಾಡುತ್ತಿರುವ ಕ್ರಿಮಿನಲ್ ಲಾಯರ್ ತಾನೆಂದು ಪರಿಚಯಿಸಿಕೊಳ್ಳುತ್ತಾರೆ. ಈ ಸೋದರಿಯರ ಬುದ್ಧಿವಂತಿಕೆ, ಧೈರ್ಯ, ಯಶಸ್ಸು ನೆಟ್ಟಿಗರ ಗಮನ ಸೆಳೆಯುತ್ತಿದೆ.
ಸೋಶಿಯಲ್ ಮೀಡಿಯಾ ಬಳಕೆದಾರರು ಗಮನಾರ್ಹ ಸಾಧನೆಗಳಿಗಾಗಿ ಸಹೋದರಿಯರನ್ನು ಬಹಳಷ್ಟು ಹೊಗಳುತ್ತಿದ್ದಾರೆ. ಅವರ ಆಕರ್ಷಕ ವ್ಯಕ್ತಿತ್ವಗಳು ಮತ್ತು ಅವರ ಪ್ರಯಾಣದ ಧನಾತ್ಮಕ ಪ್ರಭಾವವನ್ನು ಆಚರಿಸುವ ಕಾಮೆಂಟ್‌ಗಳು ಪ್ರವಾಹವಾಗಿ ಬಂದವು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.