ದಿನಾ ಮನೆ ಕೆಲಸಕ್ಕೆ ಸಹಾಯ ಮಾಡುವ ಮಕ್ಕಳು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗ್ತಾರೆ: ಅಧ್ಯಯನ ವರದಿ

Published : Sep 30, 2025, 12:33 PM IST
House chores by children

ಸಾರಾಂಶ

benefits of children doing chores: ಇಂದಿನ ಪೋಷಕರು ಮಕ್ಕಳಿಗೆ ಅತಿಯಾದ ಸವಲತ್ತುಗಳನ್ನು ನೀಡಿ ಅವರನ್ನು ಅವಲಂಬಿತರನ್ನಾಗಿ ಮಾಡುತ್ತಿದ್ದಾರೆ. ಆದರೆ, ಹೊಸ ಅಧ್ಯಯನದ ಪ್ರಕಾರ ಮನೆಗೆಲಸಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳು ಹೆಚ್ಚು ಸಮರ್ಥರಾಗಿ, ಯಶಸ್ವಿ ವಯಸ್ಕರಾಗಿ ಬೆಳೆಯುತ್ತಾರಂತೆ.

ಮಕ್ಕಳನ್ನು ಪರಾವಲಂಬಿಯಾಗಿಸುತ್ತಿರುವ ಪೋಷಕರು

ಇತ್ತೀಚೆಗೆ ಪುಟ್ಟ ಮಕ್ಕಳಿಗೆ ಪೋಷಕರು ಸ್ಪೂನ್ ಫೀಡಿಂಗ್ ಮಾಡುವುದೇ ಹೆಚ್ಚು. ಯಾವ ಕೆಲಸವನ್ನು ಮಕ್ಕಳ ಕೈಯಲ್ಲಿ ಪೋಷಕರು ಮಾಡಿಸುವುದಿಲ್ಲ. ಅವರು ಕುಳಿತಲ್ಲಿಗೆ ಊಟ ತಿಂಡಿ, ಚಹಾವನ್ನು ತಂದು ಕೊಟ್ಟು ಆರೈಕೆ ಮಾಡುವ ಅನೇಕ ಪೋಷಕರಿದ್ದಾರೆ. ಕೆಲವು ಮಕ್ಕಳು ಕೋಣಗಳಂತೆ ದೇಹ ಬೆಳೆಸಿಕೊಂಡಿದ್ದರೂ ತಾವು ತಿಂದ ತಟ್ಟೆಯನ್ನು ಕೂಡ ತೊಳೆಯುವುದಿಲ್ಲ, ತಮ್ಮ ಬಟ್ಟೆಯನ್ನು ತಾವೇ ತೊಳೆಯುವುದಿಲ್ಲ, ತಮ್ಮ ರೂಮ್‌ಗಳನ್ನು ಸ್ವಚ್ಛ ಮಾಡಿಕೊಳ್ಳುವುದಿಲ್ಲ, ಪೋಷಕರು ನೀಡಿರುವ ಅತೀಯಾದ ಸವಲತ್ತುಗಳು ಇದಕ್ಕೆ ಕಾರಣ. ಇದು ಒಳ್ಳೆಯ ಪೇರೆಂಟಿಂಗ್ ಅಂತೂ ಅಲ್ಲವೇ ಅಲ್ಲ. ಇದರಿಂದ ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಸಾಕಷ್ಟು ಕಷ್ಟಪಡುವಂತಹ ಸ್ಥಿತಿ ಬರುತ್ತದೆ. ಅತೀ ಶ್ರೀಮಂತರಾಗಿದ್ದರೆ ಪರವಾಗಿಲ್ಲ, ದುಡ್ಡು ಕೊಟ್ಟು ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳಬಹುದು. ಆದರೆ ಶ್ರೀಮಂತರಿಗಿಂತ ಮಧ್ಯಮ ವರ್ಗದ ಜನರೇ ತಮ್ಮಿಂದ ಸಾಧ್ಯವಾಗುವುದಕ್ಕಿಂತಲೂ ಹೆಚ್ಚಿನ ಸೌಲಭ್ಯವನ್ನು ಮಕ್ಕಳಿಗೆ ಕೊಟ್ಟು ಸಾಕುತ್ತಿರುತ್ತಾರೆ. ಇದರಿಂದ ಮಕ್ಕಳು ತಮ್ಮ ಕೆಲಸಗಳಿಗೆ ಇನ್ಯಾರದ್ದೋ ಮೇಲೆ ಅವಲಂಬಿತರಾಗುತ್ತಾರೆ. (ಎಲ್ಲಾ ಪೋಷಕರು ಈ ರೀತಿ ಇರುವುದಿಲ್ಲ, ಒಂದು ಮನೆಯಿಂದ ಒಂದು ಮನೆಯ ಸಂಸ್ಕೃತಿ ಆಚಾರಗಳಿಗೆ ಬಹಳ ವ್ಯತ್ಯಾಸವಿದೆ. ಆದರೆ ಬಹುತೇಕ ಕಡೆ ಇತ್ತೀಚೆಗೆ ಪೋಷಕರು ಅತೀ ಮುದ್ದು ಮಾಡಿ ಹಾಳು ಮಾಡುವುದೇ ಹೆಚ್ಚು).

ಕೆಲ ದಶಕಗಳ ಹಿಂದೆ ಮಕ್ಕಳ ಬದುಕು ಹೇಗಿತ್ತು?

ಆದರೆ ಕೆಲವು ದಶಕಗಳ ಹಿಂದೆ ಹೀಗಿರಲಿಲ್ಲ, ಪ್ರತಿಯೊಂದು ಮಕ್ಕಳಿಗೆ ಮನೆಯಲ್ಲಿ ಸಾಕಷ್ಟು ಕೆಲಸಗಳಿರುತ್ತಿದ್ದವು. ಶಾಲೆಗೆ ಹೋಗಬೇಕಾದರೂ ಮಕ್ಕಳು ತಮ್ಮ ದೈನಂದಿನ ಕೆಲಸಗಳನ್ನು ಮುಗಿಸಿಯೇ ಶಾಲೆಗೆ ಹೋಗಬೇಕಿತ್ತು. ಮನೆಯಲ್ಲಿ ಹಸುಕರುಗಳಿದ್ದಾರೆ. ಹಾಲು ಕರೆಯುವುದು, ಅವುಗಳಿಗೆ ಮೇವು ತರುವುದು, ಹಾಲನ್ನು ಅಕ್ಕಪಕ್ಕದ ಮನೆಗಳಿಗೂ ಪಕ್ಕದ ಊರುಗಳಿಗೋ ಕೊಟ್ಟು ಬರುವುದು, ಮನೆಯಲ್ಲಿ ಪಾತ್ರೆಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದು, ನೆಲ ಒರೆಸುವುದು ಹೀಗೆ ಮನೆಯಲ್ಲಿ ಮಕ್ಕಳು ಹೆಚ್ಚಿರುತ್ತಿದ್ದಿದ್ದರಿಂದ ಎಲ್ಲರೂ ಒಂದೊಂದು ಕೆಲಸವನ್ನು ಮಾಡಿಕೊಂಡು ಶಾಲೆಗೆ ಹೋಗುತ್ತಿದ್ದರು. ಶಾಲೆ ಬಿಟ್ಟು ಬಂದ ನಂತರವೂ ಈಗಿನಂತೆ ಟ್ಯೂಷನ್‌ ಕ್ಲಾಸ್‌ಗಳಿಗೆ ಮಕ್ಕಳನ್ನು ಪೋಷಕರು ಅಟ್ಟುತ್ತಿರಲಿಲ್ಲ. ಬದಲಾಗಿ ಮನೆಯ ಇತರ ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಳ್ಳುತ್ತಿದ್ದರು. ಆ ಕೆಲಸಗಳು ಮುಗಿದ ನಂತರವೇ ಓದು ಬರಹಕ್ಕೆ ಮಕ್ಕಳು ಕುಳಿತುಕೊಳ್ಳಬೇಕಿತ್ತು.

ಹೊಸ ಅಧ್ಯಯ ಹೇಳಿದ್ದೇನು?

ಆದರೆ ಈಗಿನ ಪೋಷಕರು ಪುಟ್ಟ ಮಕ್ಕಳಿಗೆ ಓದುವುದಕ್ಕೆ ಸಮಯವಿರುವುದಿಲ್ಲ, ಹೀಗಿರುವಾಗ ನಮ್ಮ ಕೆಲಸ ಮಾಡಲು ಅವರಿಗೆ ಸಮಯವೆಲ್ಲಿರುತ್ತದೆ ಎಂದು ಹೇಳುತ್ತಾರೆ. ಇದರ ಜೊತೆಗೆ ಇಂದಿನ ಶಿಕ್ಷಣ ಪದ್ಧತಿಯೂ ಹಾಗಿದೆ. ಆದರೆ ಈ ವಿಚಾರ ನಿಮಗೆ ಗೊತ್ತಾ? ಮನೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳು ಬದುಕಿನಲ್ಲಿ ಹೆಚ್ಚು ಯಶಸ್ವಿ ಎನಿಸುತ್ತಾರಂತೆ. ಹೊಸ ಅಧ್ಯಯನವೊಂದರಿಂದ ಇದು ಸಾಬೀತಾಗಿದೆ. ಮಕ್ಕಳ ಬೆಳವಣಿಗೆಯನ್ನು ಅಧ್ಯಯನ ಮಾಡುವ ಮನಶ್ಶಾಸ್ತ್ರಜ್ಞರು, ಮನೆಯ ಸುತ್ತಲ ಚಟುವಟಿಕೆಗಳಲ್ಲಿ, ಮನೆ ಕೆಲಸದಲ್ಲಿ ಸಹಾಯ ಮಾಡುವ ಮಕ್ಕಳು ಮುಂದೆ ಹೆಚ್ಚು ಸಮರ್ಥರು, ಯಾವುದೇ ಪರಿಸ್ಥಿತಿಗೂ ಹೊಂದಿಕೊಳ್ಳಬಲ್ಲ ಯಶಸ್ವಿ ವಯಸ್ಕರಾಗಿ ಬೆಳೆಯುತ್ತಾರೆ ಎಂಬುದನ್ನು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ.

ಮಕ್ಕಳು ಮಕ್ಕಳು ಪಾತ್ರೆಗಳನ್ನು ತೊಳೆಯುವುದು, ಮನೆಯ ಕಸ ತೆಗೆಯುವುದು ಅಥವಾ ಡೈನಿಂಗ್ ಟೇಬಲ್ ಸಿದ್ಧಪಡಿಸುವುದು ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಮಾಡುವಾಗ ಅವರಿಗೆ ಸಮಯ ನಿರ್ವಹಣೆ ಮತ್ತು ಪ್ರಯತ್ನವು ಇಡೀ ಕುಟುಂಬಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಅವರು ಕಲಿಯುತ್ತಾರೆ. ಈ ಕಾರ್ಯಗಳು ಅವರಿಗೆ ಇತರರ ಬಗ್ಗೆ ಸಹಾನುಭೂತಿ ಮತ್ತು ಸಹಕಾರವನ್ನು ನಿರ್ಮಿಸುತ್ತವೆ. ಜೀವನವು ಅವರ ಅಗತ್ಯಗಳ ಬಗ್ಗೆ ಮಾತ್ರವಲ್ಲ, ತಮ್ಮ ಗುಂಪಿಗೆ ಕೊಡುಗೆ ನೀಡುವುದರ ಬಗ್ಗೆ ಅವರಿಗೆ ಕಲಿಸುತ್ತದೆ.

ಕೆಲವು ಅಧ್ಯಯನಗಳು ಬಾಲ್ಯದಲ್ಲಿ ಮನೆಗೆಲಸಕ್ಕೆ ಕೈ ಜೋಡಿಸುವ ಮಕ್ಕಳು ನಂತರದ ಜೀವನದಲ್ಲಿ ಉನ್ನತ ಮಟ್ಟದ ವೃತ್ತಿಪರ ಮತ್ತು ವೈಯಕ್ತಿಕ ಯಶಸ್ಸಿಗೆ ಕಾರಣರಾಗುತ್ತಾರೆ. ಹೀಗಾಗಿ ಪೋಷಕರು ಮನೆಕೆಲಸವೂ ಮಕ್ಕಳಿಗೆ ಮನೆ ಕೆಲಸ ಹೊರೆಯಾಗುತ್ತದೆ ಎಂದು ಭಾವಿಸುವ ಬದಲು ಅವರನ್ನು ಜಗತ್ತನ್ನು ಎದುರಿಸಲು ಸಿದ್ಧಪಡಿಸಬೇಕಿದೆ.

ಇದನ್ನೂ ಓದಿ: ಗರ್ಭ ನಿರೋಧಕ ಕಾಪರ್‌ ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಜನಿಸಿದ ಮಿರಾಕಲ್ ಬೇಬಿ!

ಇದನ್ನೂ ಓದಿ: ಒಬ್ಬನೇ ಪ್ರಯಾಣಿಸುವ ಕಾರುಗಳಿಗೆ ವಾಹನ ದಟ್ಟಣೆ ತೆರಿಗೆ ವಿಧಿಸಲು ಮುಂದಾದ ರಾಜ್ಯ ಸರ್ಕಾರ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!