ಸಾಮಾಜಿಕ ಜಾಲತಾಣದಲ್ಲಿ ಯಾರು ಯಾವ ವಿಷ್ಯವನ್ನು ಟ್ರೋಲ್ ಮಾಡ್ತಾರೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಯುಪಿ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆದ್ರೂ ಪ್ರಾಚಿ ನಿಗಮ್ ಟ್ರೋಲ್ ಆಗಿದ್ದರು. ಈಗ ಅವರ ಇನ್ನೊಂದು ವಿಡಿಯೋ ವೈರಲ್ ಆಗಿದೆ.
ಪ್ರಾಚಿ ನಿಗಮ್.. ಕೆಲ ದಿನಗಳಿಂದ ಚರ್ಚೆಯಲ್ಲಿರುವ ವಿದ್ಯಾರ್ಥಿನಿ. ಯುಪಿ ಬೋರ್ಡ್ 10ನೇ ತರಗತಿಯಲ್ಲಿ ಶೇಕಡಾ 98.5 ಅಂಕ ಗಳಿಸಿ ಟಾಪರ್ ಆಗಿದ್ದ ಪ್ರಾಚಿ ನಿಗಮ್ ಎಲ್ಲರ ಗಮನ ಸೆಳೆದಿದ್ದರು. ಪ್ರಾಚಿ ನಿಗಮ್ ಇಷ್ಟು ಸಾಧನೆ ಮಾಡಿದ್ರೂ ಜನರು ಅವರ ಸೌಂದರ್ಯವನ್ನು ಟ್ರೋಲ್ ಮಾಡಿದ್ದರು. ಪ್ರಾಚಿ ನಿಗಮ್ ಎಲ್ಲ ಹುಡುಗಿಯರಂತೆ ಮೇಕಪ್ ಮಾಡೋದಿಲ್ಲ. ಐಬ್ರೋ, ಅಪ್ಪರ್ ಲಿಪ್ ಮಾಡೋದಿಲ್ಲ. ಸಾಮಾನ್ಯ ಹುಡುಗಿಯರಿಗಿಂತ ಪ್ರಾಚಿ ನಿಗಮ್ ಗೆ ಅಪ್ಪರ್ ಲಿಪ್ ಮೇಲೆ ಹೆಚ್ಚಿನ ಕೂದಲಿದೆ. ಅದನ್ನು ಅವರು ಶೇವ್ ಮಾಡಿಲ್ಲ. ಯಾವುದೇ ಮೇಕಪ್ ಇಲ್ಲದೆ, ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡದೆ ಪ್ರಾಚಿ ಓದಿಗೆ ಮಹತ್ವ ನೀಡಿದ್ದರು. ಹಾಗಾಗಿಯೇ ಪ್ರಾಚಿ ಯುಪಿ ಬೋರ್ಡ್ ನಲ್ಲಿ ಟಾಪರ್. ಜನರು ಪ್ರಾಚಿ ಸಾಧನೆಯನ್ನು ಮೆಚ್ಚದೆ ಅವರ ಸೌಂದರ್ಯದ ಬಗ್ಗೆ ಕಮೆಂಟ್ ಮಾಡೋಕೆ ಶುರು ಮಾಡಿದ್ರು. ಈಗ್ಲೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಚಿ ಸೌಂದರ್ಯದ ಬಗ್ಗೆ ಟ್ರೋಲ್ ಆಗ್ತಾನೆ ಇದೆ.
ಟ್ರೋಲ್ (Troll) ಆಗ್ತಿದ್ದಂತೆ ಬಳಕೆದಾರರ ಮುಂದೆ ಬಂದಿದ್ದ ಪ್ರಾಚಿ, ನಾನು ಸೌಂದರ್ಯ (Beauty) ಕ್ಕೆ ಹೆಚ್ಚು ಮಹತ್ವ ನೀಡೋದಿಲ್ಲ ಎಂದಿದ್ದರು. ಇಷ್ಟು ದಿನ ನನ್ನ ಸೌಂದರ್ಯದ ಬಗ್ಗೆ ಒಬ್ಬರೂ ಅವಹೇಳನ ಮಾಡಿರಲಿಲ್ಲ ಎಂದಿದ್ದರು. ಅದಾದ್ಮೇಲೆ ಪ್ರಕರಣ ಸ್ವಲ್ಪ ತಣ್ಣಗಾಗಿತ್ತು. ಈಗ ಮತ್ತೆ ಪ್ರಾಚಿ (Prachi) ಸುದ್ದಿಯಲ್ಲಿದ್ದಾರೆ. ಈ ಬಾರಿ ಮೇಕ್ ಓವರ್ ಮಾಡಿಕೊಂಡು ಜನರನ್ನು ಪ್ರಾಚಿ ಬೆರಗುಗೊಳಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರಾಚಿ ಮೇಕ್ ಓವರ್ ವಿಡಿಯೋ ಹಾಗೂ ಅವರ ಮಾತು ವೈರಲ್ ಆಗಿದೆ.
ನೀವು 30 ದಾಟಿದ ಮಹಿಳೆಯಾ? ಈ 8 ವೈದ್ಯಕೀಯ ಪರೀಕ್ಷೆ ಮಾಡಿಸೋಕೆ ಮರೀಬೇಡಿ..
ಸಂಗೀತಗಾರ ಅನೀಶ್ ಭಗತ್ ಪ್ರಾಚಿ ನಿಗಮ್ ಮನೆಗೆ ಬರ್ತಾರೆ. ಮಹಮೂದಾಬಾದ್‌ನಲ್ಲಿರುವ ಪ್ರಾಚಿ ನಿಗಮ್ ಮನೆಗೆ ಅನೀಶ್ ಭಗತ್ ಬರ್ತಾರೆ. ಪ್ರಾಚಿ ಮನೆ ಬಾಗಿಲು ತೆರೆಯುತ್ತಿದ್ದಂತೆ ಅನೀಶ್ ಭಗತ್ ಅವರಿಗೆ ಹೂ ನೀಡಿ ಶುಭಕೋರುತ್ತಾರೆ. ನಂತ್ರ ಪ್ರಾಚಿ ನಿಗಮ್ ಗೆ ಗ್ಲೋ ನೀಡೋದಾಗಿ ಅನೀಶ್ ಭಗತ್ ಹೇಳ್ತಾರೆ.
ಪ್ರಾಚಿ ವಿಡಿಯೋದಲ್ಲಿ ಕಣ್ಣಿಗೆ ಮಸ್ಕರಾ ಹಚ್ಚೋದನ್ನು ನೀವು ನೋಡ್ಬಹುದು. ಸುಗಂಧ ದ್ರವ್ಯ ಕೂಡ ಹಾಕಿಕೊಳ್ತಾರೆ. ಕೂದಲು ಬಾಚಿಕೊಳ್ಳೋದಲ್ಲದೆ ಪ್ರಾಚಿ ನೇಲ್ ಪಾಲಿಶ್ ಹಚ್ಚಿಕೊಳ್ತಾರೆ. ನಂತ್ರ ತಮ್ಮ ಮುಖವನ್ನು ತಾವೇ ನೋಡ್ಕೊಂಡು ಖುಷಿಯಾಗ್ತಾರೆ.
ಮೇಕ್ ಓವರ್ ಅಂದ್ರೆ ಪ್ರಾಚಿ ಐಬ್ರೋ, ಅಪ್ಪರ್ ಲಿಪ್ ಶೇವ್ ಸೇರಿದಂತೆ ಹೇರ್ ಕಟ್ ಮಾಡ್ಕೊಂಡು ಮಿಂಚುತ್ತಾರೆ ಎಂದು ಜನರು ಭಾವಿಸಿದ್ದರು. ಆದ್ರೆ ಪ್ರಾಚಿ ಈ ಸಮಯದಲ್ಲೂ ಜನರಿಗೆ ಶಾಕ್ ನೀಡ್ತಾರೆ. ಮುಖಕ್ಕೆ ಗ್ಲೋ ಮಾತ್ರ ನೀಡಿದ್ದಾರೆ. ಯಾವುದೇ ಕೂದಲನ್ನು ಅವರು ಶೇವ್ ಮಾಡಿಲ್ಲ. ಮೇಕ್ ಓವರ್ ಮಾಡಿಕೊಂಡಿಲ್ಲ.
ಅನೀಶ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ಮುಂದೆ ಟ್ರೋಲರ್ ಶಾಶ್ವತವಾಗಿ ಬಾಯಿ ಮುಚ್ಚಿಕೊಳ್ತಾರೆ ಎಂಬ ಶೀರ್ಷಿಕೆ ಹಾಕಿದ್ದಾರೆ. ಇದು ಅಭದ್ರತೆಯಿಂದ ತುಂಬಿರುವ ಎಲ್ಲ ಜನರಿಗೆ. ನೀವೆಲ್ಲರೂ ನಿಮ್ಮನ್ನು ಸ್ವಲ್ಪ ಉತ್ತಮವಾಗಿ ಪರಿಗಣಿಸಲು ಅರ್ಹರು ಎಂದು ಅನೀಶ್ ಬರೆದಿದ್ದಾರೆ. ಅನೀಶ್ ಪೋಸ್ಟ್ ಮಾಡಿರುವ ವಿಡಿಯೋ ಕೊನೆಯಲ್ಲಿ ಪ್ರಾಚಿ ಸಂದೇಶವೊಂದನ್ನು ನೀಡಿದ್ದಾರೆ. ಡಿಯರ್ ಲೇಡಿಸ್, ಯಾವುದು ಮುರಿದೇ ಇಲ್ಲವೋ ಅದನ್ನು ಜೋಡಿಸು ಪ್ರಯತ್ನ ಮಾಡ್ಬೇಡಿ ಎಂದಿದ್ದಾರೆ.
ಪತ್ನಿಯನ್ನು ಪ್ರಾಣಿಗೆ ಹೋಲಿಸಿದ ತಾಂಡವ್: ಭಾಗ್ಯಲಕ್ಷ್ಮಿ ಸೀರಿಯಲ್ ವಿರುದ್ಧ ನೆಟ್ಟಿಗರ ಭಾರಿ ಆಕ್ರೋಶ
ಪ್ರಾಚಿ ನಿಗಮ್ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾಚಿ ಮತ್ತು ಅನೀಶ್ ಅವರ ಶೈಲಿಯನ್ನು ಬಳಕೆದಾರರು ಇಷ್ಟಪಟ್ಟಿದ್ದಾರೆ. ಗುಣಮಟ್ಟದ ವಿಷ್ಯ ವಾಸ್ತವದಲ್ಲಿ ಯಾವಾಗ್ಲೂ ಹೀಗೆ ಕಾಣುತ್ತದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.