ಗಂಡಸರೇ ಹುಷಾರ್‌! ಎದುರಿಗೆ ಗಂಡ ಇದ್ದಾನೆಂದು ಕಲ್ಪಿಸಿಕೊಂಡು ಈ ಪತ್ನಿಯರು ಏನ್‌ ಮಾಡ್ತಿದ್ದಾರೆ ನೋಡಿ..

By Suchethana D  |  First Published Jul 18, 2024, 2:31 PM IST

ಗಂಡನ ಮೇಲೆ ಸಿಟ್ಟು ತೀರಿಸಿಕೊಳ್ಳಲಾಗದೇ ಒದ್ದಾಡುತ್ತಿರುವ ಮಹಿಳೆಯರಾಗಿ ಈ ವಿಶೇಷ ಶಿಬಿರ ಆಚರಿಸಲಾಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ನೋಡಿ!
 


ಭಾರತೀಯ ಸಂಪ್ರದಾಯದಲ್ಲಿ ಪತಿಯೇ ಪರದೈವ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ತಲೆತಲಾಂತರಗಳಿಂದಲೂ ಗಂಡನ ವಿರುದ್ಧ ಹೆಣ್ಣು ಏನೇ ಎದುರು ಮಾತನಾಡುವಂತಿಲ್ಲ ಎಂದೇ ಹೇಳಿಕೊಂಡು ಬರಲಾಗುತ್ತಿದೆ. ಇದೇ ಕಾರಣಕ್ಕೆ ಹೆಣ್ಣಿಗೆ ಹಲವು ವಿಶೇಷಣೆಗಳನ್ನು ಕೊಟ್ಟು ಖುಷಿ ಪಡಿಸಲಾಗಿದೆ. ಹೆಣ್ಣನ್ನು ಸರ್ವಶ್ರೇಷ್ಠ ಸ್ಥಾನದಲ್ಲಿ ಹಿಂದೂ ಸಂಪ್ರದಾಯದಲ್ಲಿ ನೋಡುವುದು ಇದೆ, ಆಕೆಗೆ ದೇವಿಯ ಸ್ಥಾನವನ್ನೂ ಕೊಡಲಾಗಿದೆ. ಇಷ್ಟೆಲ್ಲಾ ವಿಶೇಷಣಗಳು ಇದ್ದರೂ ಆಕೆಗೆ ಪತಿಯೇ ಪರದೈವ ಎನ್ನುವುದೂ ಅಷ್ಟೇ ನಿಜ. ಗಂಡು ಹೆಣ್ಣಿನ ಮೇಲೆ ಏನೇ ದೌರ್ಜನ್ಯ ಎಸಗಿದರೂ ಹೆಣ್ಣು ಅದನ್ನು ಸಹಿಸಿಕೊಂಡು ಬರಬೇಕು, ಏಕೆಂದರೆ ಆಕೆ ಸಹನಾಮೂರ್ತಿ ಎಂದೆಲ್ಲಾ ಹೇಳಿಕೊಂಡೇ ಬರಲಾಗಿದೆ. 

ಈಗ ಅದೆಲ್ಲಾ ಬದಲಾಗಿದೆ ಬಿಡಿ. ಎಷ್ಟೋ ಗಂಡು ಮಕ್ಕಳು ಹೆಣ್ಣಿನ ದೌರ್ಜನ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ನಡೆಯುವುದು ವರದಿಯಾಗುತ್ತಿದೆ. ಆದರೆ ಭಾರತೀಯ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುವವರು ಅದೆಷ್ಟೋ ಮಂದಿ ಇದ್ದಾರೆ. ಪತಿಯ ಎದುರು ಮಾತನಾಡಲು ಹೆದರುವವರು, ಆತ ಹೊಡೆದು, ಬಡಿದರೂ ಎಲ್ಲವನ್ನೂ ಸಹಿಸಿಕೊಂಡು ಇರುವವರು ಇಂದಿಗೂ ಕಾಣಸಿಗುತ್ತಾರೆ. ಹೆಣ್ಣಿನ ಮೇಲೆ ಗಂಡ ಕೈಮಾಡಿದಾಗ ಸುದ್ದಿಯಾಗುವುದಿಲ್ಲ, ಆದರೆ ಗಂಡನ ಮೇಲೆ ಹೆಣ್ಣು ಕೈ ಮಾಡಿದಾಗ ಅದು ಸುದ್ದಿಯಾಗುವ ಹಿಂದೆಯೂ ಇದೇ ಕಾರಣವೇ ಇದೆ.

Latest Videos

ವಿಚ್ಛೇದನ ಸುಲಭವಲ್ಲ... ಆದರೆ ನಿರೀಕ್ಷೆಯೇ ಹುಸಿಯಾದಾಗ.... ಐಷ್‌-ಅಭಿ ಬಿರುಕಿಗೆ ಸಾಕ್ಷಿಯಾದ ಪೋಸ್ಟ್‌?

ಇದೇ ಕಾರಣದಿಂದ ಹೆಣ್ಣು ಅದೆಷ್ಟೋ ನೋವನ್ನು ತನ್ನೊಳಗೆ ಸಹಿಸಿಕೊಂಡು ಇರುತ್ತಾಳೆ. ಗಂಡನ ಮೇಲೆ ಆಕೆಗೆ ಆಕ್ರೋಶ ಇದ್ದರೂ ಅದನ್ನು ತೋರಿಸಲು ಸಾಧ್ಯವಾಗದೇ ಒಳಗೊಳಗೇ ಕುದಿಯುತ್ತಿರುತ್ತಾಳೆ. ಗಂಡ, ಗಂಡನ ಮನೆಯವರು... ಹೀಗೆ ಆಕೆಗೆ ಕೋಪವಿದ್ದರೂ ಬಡವನ ಕೋಪ ದವಡೆಗೆ ಮೂಲ ಎನ್ನುವ ಸ್ಥಿತಿಯಲ್ಲಿ ಇಂದಿಗೂ ಹಲವು ಮಹಿಳೆಯರು ಇದ್ದಾರೆ.  ಕೋಪದ ಕೋಟೆ ಒಡೆದು ಸ್ಫೋಟಗೊಂಡಾಗಿ ದಾಂಪತ್ಯವೂ ಸ್ಫೋಟಗೊಳ್ಳುತ್ತದೆ ಎನ್ನುವ ಕಾಣಕ್ಕೆ ಮೌನವಾಗಿಯೇ ಎಲ್ಲವನ್ನೂ ಸಹಿಸಿಕೊಳ್ಳುತ್ತಲೇ ಬಂದಿದ್ದಾಳೆ ಹೆಣ್ಣು. ಹಾಗಿದ್ದರೆ ಗಂಡನ ಮೇಲಿನ ಕೋಪವನ್ನು ಹೇಗೆ ಹೊರಕ್ಕೆ ಹಾಕುವುದು? ಹೆಚ್ಚಿನ ಮನೆಗಳಲ್ಲಿ ಆ ಕೋಪ ಎಲ್ಲವೂ ಮಕ್ಕಳ ಮೇಲೆ ಅಮ್ಮ ತೋರಿಸುವುದು ಮಾಮೂಲು. ಆದರೆ ಇದಕ್ಕೆ ಒಂದು ಕಡಿವಾಣ ಬೀಳಬೇಕಲ್ಲವೆ?

ಅಂಥ ಪತ್ನಿಯರಿಗೆ ಈ ವಿಡಿಯೋ ಸಮರ್ಪಣೆಯಾಗಿದೆ. ಅಂದಹಾಗೆ ಇದು ಭಾರತದ ವಿಡಿಯೋ ಅಲ್ಲ ಎನ್ನುವುದು ಇಲ್ಲಿರುವ ಮಹಿಳೆಯರನ್ನು ನೋಡಿದರೆ ತಿಳಿಯುತ್ತದೆ. ಹಾಗಿದ್ದರೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಹೆಣ್ಣಿಗೆ ಇದೇ ಸ್ಥಿತಿ ಇದೆ ಎಂದಾಯಿತು. ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದು ಮಹಿಳೆಯರಿಗಾಗಿ ಇರುವ ವಿಶೇಷ ಶಿಬಿರದ ಕುರಿತು. ಇಲ್ಲಿ ಪ್ರತಿ ಪತ್ನಿಯ ಕೈಯಲ್ಲಿ ದೊಡ್ಡದಾದ ಕೋಲು ನೀಡಲಾಗಿದೆ. ಅದನ್ನು ಆಕೆ ನೆಲಕ್ಕೆ ಬಡಿದು ಬಡಿದು ಕೋಪವನ್ನು ತಣಿಸಿಕೊಳ್ಳುತ್ತಿದ್ದಾಳೆ. ಒಳಗೆ ಕುದಿಯುತ್ತಿರುವ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂಬ ರೀತಿಯಲ್ಲಿ ಈಕೆ ವರ್ತಿಸುತ್ತಿದ್ದಾಳೆ. ಅಸಲಿಗೆ ಇದು ಗಂಡನ ಮೇಲಿರುವ ಸಿಟ್ಟನ್ನು ಹೊರಗೆ ಬರಿಸಲು ಪತ್ನಿಯರಿಗೆ ಇರುವ ಶಿಬಿರವಂತೆ! ಹೀಗೆಂದು ಶೀರ್ಷಿಕೆಯೊಂದಿಗೆ ವೈರಲ್‌ ಆಗಿದ್ದು, ಭಾರತದಲ್ಲಿಯೂ ಇಂಥ ಶಿಬಿರ ಏರ್ಪಡಿಸಿ ಎಂಬ ಒತ್ತಾಯವೂ ಕಮೆಂಟ್‌ಗಳಲ್ಲಿ ಕೇಳಿಬರುತ್ತಿದೆ. ಈ ವಿಡಿಯೋ ನೋಡಿದರೆ ಗಂಡನ ಮೇಲೆ ಈ ಪರಿ ಕೋಪನಾ? ಒಂದು ವೇಳೆ ಈ ಮಹಿಳೆಯರು ನಿಜವಾಗಿಯೂ ಗಂಡನ ಮೇಲೆ ಈ ಸಿಟ್ಟು ತೀರಿಸಿಕೊಂಡಿದ್ದರೆ ಆತನ ಸ್ಥಿತಿ ಏನಾಗುತ್ತಿತ್ತು ಎಂದು ಹಲವರು ಗಾಬರಿಯಿಂದ ಕಮೆಂಟ್‌ ಮಾಡುತ್ತಿದ್ದಾರೆ. 

ಅವಳು ನನ್ನ ಹೋಮ್​ವರ್ಕ್​ ಮಾಡ್ತಿದ್ಲು... ಕಾಲೇಜ್​ನ ಕ್ರಷ್​ ಒಂದಾ, ಎರಡಾ... ಚಂದನ್​ ಶೆಟ್ಟಿ ಓಪನ್​ ಮಾತು

 
 
 
 
 
 
 
 
 
 
 
 
 
 
 

A post shared by Dax (@thatsdax)

click me!