ಕೊರಳಲ್ಲಿ ಮಂಗಳಸೂತ್ರ ಮಾತ್ರ, ಅಂಬಾನಿ ಮದ್ವೆಯಲ್ಲಿ ಸುಧಾಮೂರ್ತಿ ಸರಳತೆಗೆ ಭಾರಿ ಮೆಚ್ಚುಗೆ!

Published : Jul 16, 2024, 09:19 PM IST
ಕೊರಳಲ್ಲಿ ಮಂಗಳಸೂತ್ರ ಮಾತ್ರ, ಅಂಬಾನಿ ಮದ್ವೆಯಲ್ಲಿ ಸುಧಾಮೂರ್ತಿ ಸರಳತೆಗೆ ಭಾರಿ ಮೆಚ್ಚುಗೆ!

ಸಾರಾಂಶ

ಅನಂತ್ ಅಂಬಾನಿ ರಾಧಿಕಾ ಮದುವೆಯಲ್ಲಿ ಆಹ್ವಾನಿತ ಗಣ್ಯರನ್ನು ನೋಡಲು ಎರಡು ಕಣ್ಮು ಸಾಲದು. ಎಲ್ಲರು ಕೋಟಿ ಕೋಟಿ ಬೆಳೆಬಾಳುವ ಶ್ರೀಮಂತರು. ಅವರ ಉಡುಪು, ಆಭರಣದಲ್ಲೂ ಈ ಶ್ರೀಮಂತಿಕೆ ಎದ್ದುಕಾಣುತ್ತಿದೆ. ಆದರೆ ಇದರ ನಡುವೆ ಬಿಲೇನಿಯರ್ ಸುಧಾ ಮೂರ್ತಿ ಸರಳತೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.  

ಮುಂಬೈ(ಜು.16) ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಅದ್ಧೂರಿಯಾಗಿ ನಡೆದಿದೆ. ಸಮಾರಂಭಕ್ಕೆ ದೇಶ ವಿದೇಶಗಳ ಗಣ್ಯರು ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ. ಬಾಲಿವುಡ್ ಸೇರಿದಂತೆ ಭಾರತ ಚಿತ್ರರಂಗದ ಸ್ಟಾರ್ ನಟ ನಟಿಯರು ಅಂಬಾನಿ ಮದುವೆಯಲ್ಲಿದ್ದರು. ಎಲ್ಲರು ವಿಶೇಷ ಅಲಂಕೃತ ಡ್ರೆಸ್‌ನಲ್ಲಿ, ಆಭರಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮದುವೆ ಕಾರ್ಯಕ್ರಮಕ್ಕೆ ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಪತ್ನಿ, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ನಾರಾಯಣ ಮೂರ್ತಿ ಪಾಲ್ಗೊಂಡಿದ್ದಾರೆ. ಶ್ರೀಮಂತಿಕೆ, ಆಡಂಬರ, ಅದ್ಧೂರಿ ನಡುವೆ ಸುಧಾ ಮೂರ್ತಿ ಸರಳತೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಪಾಲ್ಗೊಂಡು ಬಹುತೇಕ ಎಲ್ಲರು ಅಷ್ಟೇ ಶ್ರೀಮಂತಿಕೆಯ ಡ್ರೆಸ್ ಧರಿಸಿದ್ದಾರೆ. ಅದಕ್ಕೆ ಒಪ್ಪುವಂತ ಆಭರಣಗಳು ಸೇರಿದಂತೆ ಎಲ್ಲವೂ ಅತ್ಯಂತ ದುಬಾರಿ. ಸೆಲೆಬ್ರೆಟಿಗನ್ನು ನೋಡಲೆರಡು ಕಣ್ಣು ಸಾಲದು. ಇವರ ನಡುವೆ ಎಲ್ಲರ ಕೇಂದ್ರಬಿಂದುವಾಗಿದ್ದು ರಾಜ್ಯಸಭಾ ಸದಸ್ಯೆ, ಲೇಖಕಿ, ಸಮಾಜ ಸುಧಾರಕಿ ಸುಧಾ ಮೂರ್ತಿ. 

ಅಂಬಾನಿ ಮದ್ವೆಯಲ್ಲಿ ಸೈಫ್‌ ಪುತ್ರನಿಂದ ನಾಚಿಕೆಗೇಡಿನ ವರ್ತನೆ! ದುಂಬಾಲು ಬಿದ್ದರೂ ಸಿಗ್ಲಿಲ್ಲ ಗಾಯಕನ ಜಾಕೆಟ್‌

ಸುಧಾ ಮೂರ್ತಿ ಪಿಂಕ್ ಬಣ್ಣದ ಸೀರೆ ಧರಿಸಿದ್ದಾರೆ. ಕೊರಳಲ್ಲಿ ಮಂಗಳ ಸೂತ್ರ ಮಾತ್ರ. ಇತರ ಆಭರಣಗಳಿಲ್ಲ, ಆಡಂಬರವಿಲ್ಲ. ಇನ್ನು ಕೈಯಲ್ಲೊಂದು ವಾಚ್. ಇಷ್ಟೇ ನೋಡಿ, ಈ ಸರಳತೆಯ ಸಾಕಾರ ಮೂರ್ತಿ ಮತ್ತೆ ಎಲ್ಲರ ಹೃದಯ ಗೆದ್ದಿದ್ದಾರೆ. ಸುಧಾ ಮೂರ್ತಿ ಒಟ್ಟು ಆಸ್ತಿ, ಆದಾಯ ಕೋಟಿ ಕೋಟಿ ರೂಪಾಯಿ. ಬಿಲೇನಿಯರ್ ಆಗಿದ್ದರೂ ಸುಧಾ ಮೂರ್ತಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನವನ್ನು ಆನಂದಿಸುತ್ತಿದ್ದಾರೆ. 

 

 

ಅಂಬಾನಿ ಮದುವೆಯಲ್ಲಿ ಮಾತ್ರವಲ್ಲ, ಸುಧಾ ಮೂರ್ತಿ ಪ್ರತಿ ನಿತ್ಯ ಇರುವುದೇ ಹಾಗೆ. ಆಡಂಬರವಿಲ್ಲ, ಅದ್ಧೂರಿತನವಿಲ್ಲ. ಅತ್ಯಂತ ಸರಳ ಬದುಕು. ಬಿಲೇನಿಯರ್ ಆಗಿ ಈ ರೀತಿ ಸರಳತೆಯಲ್ಲಿ ಬುದುಕುವುದು ಸುಧಾ ಮೂರ್ತಿ ಬಿಟ್ಟರೆ ಇನ್ಯಾರಿಗೂ ಸಾಧ್ಯವಿಲ್ಲ. ಅಂಬಾನಿ ಮದುವೆಯಲ್ಲಿ ಸುಧಾ ಮೂರ್ತಿ ಜೊತೆ ಹಲವು ಸೆಲೆಬ್ರೆಟಿಗಳು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ತಮ್ಮ ತಮ್ಮಮ ಸಾಮಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ವೇಳೆ ಎಲ್ಲರೂ ಸುಧಾ ಮೂರ್ತಿ ಸರಳತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.

ಅಂಬಾನಿ ಮದುವೆಯನ್ನು ವಿರೋಧಿಸಿದ್ದೇಕೆ ರಾಹುಲ್ ? ಸೋನಿಯಾ, ರಾಹುಲ್ ಮದುವೆಗೆ ಹೋಗದಿರಲು ಕಾರಣವೇನು ?
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!