ವ್ಯಾಪಾರದಲ್ಲಿ ಲಾಭ ಆಗ್ಬೇಕು ಅಂದ್ರೆ ಸ್ವಲ್ಪ ಬುದ್ದಿವಂತಿಕೆ ಸೇರಬೇಕು. ನಗರದಲ್ಲಿ ಯಾವ ವಸ್ತುವಿಗೆ ಬೇಡಿಕೆ ಇದೆ ಎಂಬುದನ್ನು ತಿಳಿಯುವ ಜೊತೆಗೆ ಬೇಡಿಕೆ ಇರುವ ಯಾವ ವಸ್ತು ಅಲ್ಲಿ ಸಿಗ್ತಿಲ್ಲ ಎಂಬುದನ್ನು ಪತ್ತೆ ಮಾಡಿ ಆ ಬ್ಯುಸಿನೆಸ್ ಶುರು ಮಾಡಿದಾಗ ಯಶಸ್ಸು ಬೇಗ ಸಿಗುತ್ತೆ. ಅದಕ್ಕೆ ಈ ಹುಡುಗಿಯರು ಉತ್ತಮ ಉದಾಹರಣೆ.
ವಡಾ ಪಾವ್ ಅಂದ್ರೆ ಉತ್ತರ ಭಾರತೀಯರ ಬಾಯಲ್ಲಿ ನೀರು ಬರುತ್ತೆ. ದಕ್ಷಿಣ ಭಾರತೀಯರೂ ಈಗ ವಡಾ ಪಾವ್ ತಿನ್ನೋದ್ರಲ್ಲಿ ಮುಂದಿದ್ದಾರೆ. ಆದ್ರೆ ಅಲ್ಲಿ ಬೆಳಿಗ್ಗೆ – ರಾತ್ರಿ ಅನ್ನೋ ಅಂತರ ಇಲ್ಲ. ಯಾವ ಟೈಂನಲ್ಲಿ ಕೊಟ್ರೂ ವಡಾ ಪಾವ್ ತಿನ್ನುತ್ತೇವೆ ಎನ್ನುವವರ ಸಂಖ್ಯೆ ಹೆಚ್ಚಿದೆ. ಆಹಾರದ ಬ್ಯುಸಿನೆಸ್ ಮಾಡುವ ಪ್ಲಾನ್ ನಲ್ಲಿರುವವರು, ಬೀದಿ ಬದಿಯಲ್ಲಿ ಸಣ್ಣ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡ್ತೇನೆ ಎನ್ನುವವರಿಗೆ ವಡಾ ಪಾವ್ ಮಾರಾಟ ಒಳ್ಳೆ ಆಯ್ಕೆ ಅನ್ನೋದು ಈಗಾಗಲೇ ಸಾಭೀತಾಗಿದೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರೆಲ್ಲ ಅನಕ್ಷರಸ್ಥರಲ್ಲ. ಈಗ ಕಾಲ ಬದಲಾಗಿದೆ. ಯಾವುದೇ ಆಯ್ಕೆ ಇಲ್ಲ ಎಂದಾಗ ಹಿಂದಿನ ಕಾಲದ ಜನರು ಬೀದಿ ಬದಿ ವ್ಯಾಪಾರ ಶುರು ಮಾಡ್ತಿದ್ದರು. ಆದ್ರೆ ಈಗ ಮಾಸ್ಟರ್ ಡಿಗ್ರಿ ಮಾಡಿದ ಯುವಕರು ಬೀದಿ ಬದಿ ವ್ಯಾಪಾರಕ್ಕೆ ಇಳಿಯುತ್ತಿದ್ದಾರೆ. ಇಂಜಿನಿಯರಿಂಗ್ ನಂತ್ರ ಪಾನಿ ಪುರಿ ಮಾರಾಟ ಮಾಡಿ ಲಕ್ಷಾಂತರ ಹಣ ಗಳಿಸುತ್ತಿರುವ ಹುಡುಗಿ ಸುದ್ದಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಈಗ ವಡಾ ಪಾವ್ ಸಹೋದರಿಯರು ಎಲ್ಲರ ಗಮನ ಸೆಳೆದಿದ್ದಾರೆ.
ಕರ್ನಾಲ್ (Karnal) ನಲ್ಲಿ ನೆಲೆಸಿರುವ ಇಬ್ಬರು ಸಹೋದರಿಯರು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಎಸಿಯಲ್ಲಿ ಕೆಲಸ ಮಾಡುವ ಬದಲು ಸ್ವಂತ ಉದ್ಯೋಗ ಶುರು ಮಾಡಿದ್ದಾರೆ. ವಡಾ ಪಾವ್ (Wada Pav) ಮಾರಾಟ ಮಾಡುವ ಮೂಲಕ ತಮ್ಮ ತಾಯಿಯ ಸ್ವಂತ ಮನೆ ಕನಸನ್ನು ನನಸು ಮಾಡುವ ಗುರಿ ಹೊಂದಿದ್ದಾರೆ.
ಅಡುಗೆ ಮಾಡೋದ ಬಿಟ್ಟರೆ ಬೇರೇನೂ ಗೊತ್ತಿಲ್ಲ ಅನ್ನೋರೂ ಲಕ್ಷಗಟ್ಟಲೆ ದುಡೀಬಹುದು!
ಬೀದಿ ಬದಿಯಲ್ಲಿ ವಡಾ ಪಾವ್ ಮಾರುತ್ತಿರುವ ಸಹೋದರಿ (Sister) ಯರು : ಕರ್ನಾಲ್ ನ ವೈಶಾಲಿ ತನ್ನ ಸಹೋದರಿ ಜೊತೆ ವಡಾ ಪಾವ್ ಮಾರಾಟ ಮಾಡುತ್ತಿದ್ದಾರೆ. ವೈಶಾಲಿ, ಆರಂಭದಲ್ಲಿ ವಿದೇಶದಲ್ಲಿ ಕೆಲಸ ಮಾಡುವ ಆಸೆ ಹೊಂದಿದ್ದರು. ಆದ್ರೆ ಹಣದ ಸಮಸ್ಯೆಯಿಂದ ಅವರಿಗೆ ವಿದೇಶಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಕರ್ನಾಲ್ ನಲ್ಲಿ ವಡಾ ಪಾವ್ ನ ಒಂದೂ ಅಂಗಡಿ ಇಲ್ಲ ಎಂಬುದು ವೈಶಾಲಿ ಗಮನಕ್ಕೆ ಬಂದಿತ್ತು. ಹಾಗಾಗಿ ಬೀದಿ ಬದಿಯಲ್ಲಿ ವಡಾ ಪಾವ್ ಮಾರಾಟ ಮಾಡುವ ನಿರ್ಧಾರಕ್ಕೆ ಬಂದ್ರು.
ವೈಶಾಲಿ ಹಾಗೂ ಆಕೆ ಸಹೋದರಿಗೆ ವಡಾ ಪಾವ್ ಅಂದ್ರೆ ತುಂಬಾ ಇಷ್ಟ. ತಾವು ಪ್ರೀತಿಯಿಂದ ತಿನ್ನುವ ವಡಾ ಪಾವನ್ನು ಕರ್ನಾಲ್ ಜನರಿಗೆ ತಿನ್ನಿಸುವ ನಿರ್ಧಾರಕ್ಕೆ ಬಂದ್ರು. ಕರ್ನಾಲ್ ನ ಬಸ್ ನಿಲ್ದಾಣದ ಬೀದಿ ಬದಿಯಲ್ಲಿ ವಡಾ ಪಾವ್ ಮಾರಾಟ ಶುರು ಮಾಡಿದ್ರು. ನಿಧಾನವಾಗಿ ವಡಾ ಪಾವ್ ಗೆ ಬೇಡಿಕೆ ಹೆಚ್ಚಾಯ್ತು. ಈಗ ವೈಶಾಲಿ ಹಾಗೂ ಆಕೆ ಸಹೋದರಿ ಅಲ್ಲಿಯೇ ಇರುವ ಸಣ್ಣ ಅಂಗಡಿಯನ್ನು ಬಾಡಿಗೆಗೆ ಪಡೆದು ಅಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.
ಮಧ್ಯಮ ವರ್ಗಕ್ಕೆ ವರ್ಷಕ್ಕೆಷ್ಟು ಖರ್ಚಾಗುತ್ತೆ? ವ್ಯಕ್ತಿಯ ಲೆಕ್ಕ ನೋಡಿ ನೆಟ್ಟಿಗರು ದಂಗು
ವಡಾ ಪಾವ್ ಮಾರಾಟದ ಹಾದಿ ಸುಲಭವಾಗಿರಲಿಲ್ಲ. ವೈಶಾಲಿ ಹಾಗೂ ಆಕೆ ಸಹೋದರಿ ಕೆಲವು ಕಡೆ ಅದನ್ನು ತಯಾರಿಸೋದು ಹೇಗೆ ಎಂಬುದನ್ನು ಕಲಿತ್ರು. ನಂತ್ರ ಅಂಗಡಿ ಶುರು ಮಾಡಿದ್ರು. ಒಂದು ವಡಾ ಪಾವ್ ಗೆ 50 ರೂಪಾಯಿಯಂತೆ ಅವರು ಮಾರಾಟ ಮಾಡುತ್ತಾರೆ. ದಿನಕ್ಕೆ 150 -180 ವಡಾಪಾವ್ ಮಾರಾಟವಾಗುತ್ತದೆ. ಅಂದ್ರೆ ದಿನಕ್ಕೆ 9 ಸಾವಿರ ರೂಪಾಯಿ ಗಳಿಸುವ ವೈಶಾಲಿ ದಿನವೂ ಬೇಡಿಕೆ ಇಷ್ಟೇ ಇದ್ದಲ್ಲಿ ತಿಂಗಳಿಗೆ ಎರಡು ಲಕ್ಷದವರೆಗೆ ಸಂಪಾದಿಸಬಹುದು. ರುಚಿ ಹಾಗೂ ಶುದ್ಧ ವಡಾ ಪಾವ್ ನೀಡ್ತಿರುವ ವೈಶಾಲಿ ಹಾಗೂ ಅವರ ಸಹೋದರಿ ಯುವಕರಿಗೆ ಸ್ಪೂರ್ತಿ.