ಅಡುಗೆ ಮಾಡೋದ ಬಿಟ್ಟರೆ ಬೇರೇನೂ ಗೊತ್ತಿಲ್ಲ ಅನ್ನೋರೂ ಲಕ್ಷಗಟ್ಟಲೆ ದುಡೀಬಹುದು!

By Suvarna NewsFirst Published Apr 17, 2024, 2:31 PM IST
Highlights

ಮನೆಯಲ್ಲಿ ಟೈಂ ಪಾಸ್ ಆಗ್ತಿಲ್ಲ, ಏನಾದ್ರೂ ಕೆಲಸ ಹೇಳಿ ಎನ್ನುವ ಮಹಿಳೆಯರ ಸಂಖ್ಯೆ ಸಾಕಷ್ಟಿದೆ. ಅವರು ಸುಲಭವಾಗಿ ಮಾಡಬಹುದಾದ ಕೆಲಸಗಳೂ ಬಹಳಷ್ಟಿವೆ. ಆದ್ರೆ ಅದು ಯಾವುದು ಎಂಬ ಮಾಹಿತಿ ಅನೇಕರಿಗಿಲ್ಲ. ನಾವಿಂದು ಮಹಿಳೆಯರು ಮನೆಯಲ್ಲೇ ಮಾಡಬಹುದಾದ ಒಂದು ಬ್ಯುಸಿನೆಸ್ ಬಗ್ಗೆ ನಿಮಗೆ ಹೇಳ್ತೇವೆ.
 

ಆಹಾರ ಕ್ಷೇತ್ರದಲ್ಲಿ ಬಹುಬೇಡಿಕೆ ಇದೆ. ಯಾವುದೇ ಸಮಯದಲ್ಲೂ ಜನರು ಆಹಾರ ಸೇವಿಸೋದನ್ನು ಬಿಡೋದಿಲ್ಲ. ಕೊರೊನಾದಂತಹ ಸಂದರ್ಭದಲ್ಲಿ ಕೂಡ ಆನ್ಲೈನ್ ಫುಡ್ ಡಿಲೆವರಿ ನಡೆದಿತ್ತು. ಕಚೇರಿಯಲ್ಲಿ ಕೆಲಸ ಮಾಡುವವರಿಂದ ಹಿಡಿದು ಮನೆಯಲ್ಲಿರುವ ಮಹಿಳೆಯರು ಕೂಡ ಅನೇಕ ಬಾರಿ ಹೊಟೇಲ್ ಆಹಾರ ಸೇವಿಸಲು ಇಷ್ಟಪಡ್ತಾರೆ. ಆದ್ರೆ ಎಲ್ಲ ಸಮಯದಲ್ಲಿ ರೆಸ್ಟೋರೆಂಟ್, ಹೊಟೇಲ್ ಗೆ ಹೋಗೋದು ಸಾಧ್ಯವಿಲ್ಲ. ಆಗ ನೆರವಾಗೋದು ಆನ್ಲೈನ್. ಗ್ಯಾಜೆಟ್ ನಲ್ಲಿ ತಮ್ಮಿಷ್ಟದ ಆಹಾರ ಬುಕ್ ಮಾಡಿದ್ರೆ ಸಾಕು, ಮನೆಗೆ ಬಂದು ಡೆಲಿವರಿ ಬಾಯ್ಸ್ ಆಹಾರ ಕೊಡ್ತಾರೆ. ಬಹುತೇಕರಿಗೆ ಈ ಆನ್ಲೈನ್ ಫುಡ್ ಅಪ್ಲಿಕೇಷನ್ ಆಹಾರ ತಯಾರಿಸೋ ಕೆಲಸ ತಪ್ಪಿಸಿದ್ರೆ ಮತ್ತೆ ಅನೇಕರಿಗೆ ಇದು ಹೊಟ್ಟೆ ತುಂಬಿಸುತ್ತಿದೆ. ಮನೆಯಲ್ಲಿ ಖಾಲಿ ಸಮಯದಲ್ಲಿ ಆಹಾರ ತಯಾರಿಸಿ ಅದನ್ನು ಮಾರಾಟ ಮಾಡಿ ಹಣ ಗಳಿಸುತ್ತಿರುವವರು ನಮ್ಮಲ್ಲಿ ಅನೇಕರಿದ್ದಾರೆ. ನೀವು ಕ್ಲೌಡ್ ಕಿಚನ್ ಬಗ್ಗೆ ಕೇಳಿರ್ತೀರಿ. ಈಗಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಕ್ಲೌಡ್ ಕಿಚನ್ ಬಗ್ಗೆ ನಾವೊಂದಿಷ್ಟು ಮಾಹಿತಿ ನೀಡ್ತೇವೆ.

ಅಡುಗೆ (Cooking) ಯಲ್ಲಿ ಆಸಕ್ತಿ ಇರುವ, ರುಚಿ ರುಚಿ ಅಡುಗೆ ಮಾಡಲು ಬರುವ ಹಾಗೂ ಅದಕ್ಕೆ ಸಮಯವಿದೆ ಎನ್ನುವ ಜನರು ಈ ಕ್ಲೌಡ್ (Cloud) ಕಿಚನ್ (Kitchen) ಬ್ಯುಸಿನೆಸ್ ಶುರು ಮಾಡಬಹುದು. , ಕ್ಲೌಡ್ ಕಿಚನ್‌ನಲ್ಲಿ, ಆನ್‌ಲೈನ್ ಫುಡ್ ಡೆಲಿವರಿ ಕಂಪನಿಗಳ ಆರ್ಡರ್‌ಗೆ ಅನುಗುಣವಾಗಿ ವಿವಿಧ ರೀತಿಯ ಭಕ್ಷ್ಯಗಳನ್ನು ಸಿದ್ಧಪಡಿಸಬೇಕು. ಕರ್ನಾಟಕದಲ್ಲೂ ಇದನ್ನು ಆದಾಯದ ಮೂಲವಾಗಿಸಿಕೊಂಡು ಬದುಕುತ್ತಿರುವ ಅನೇಕರಿದ್ದಾರೆ. ಮಹಾರಾಷ್ಟ್ರದ ವಿರಾರ್ ನಿವಾಸಿ ಆದಿತ್ಯ ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಕ್ಲೌಡ್ ಕಿಚನ್ ಯಶಸ್ವಿಯಾಗಿ ನಡೆಸುತ್ತಿರುವ ಆದಿತ್ಯ, ಮಾಮ್ಸ್ ಕ್ಲೌಡ್ ಕಿಚನ್ ಎಂದು ತಮ್ಮ ಅಡುಗೆ ಮನೆಗೆ ಹೆಸರಿಟ್ಟಿದ್ದಾರೆ. ಮೆಕ್‌ಡೊನಾಲ್ಡ್ ಮತ್ತು ಡೊಮಿನೋಸ್‌ನಂತಹ ದೊಡ್ಡ ಬ್ರ್ಯಾಂಡ್‌ಗಳಿಗೆ ಕ್ಲೌಡ್ ಕಿಚನ್‌ಗಳನ್ನು ತೆರೆದಿದ್ದಾರೆ. ಪಿಜ್ಜಾ, ಪಾಸ್ಟಾ, ಸಾಸ್ಗಳನ್ನು ಅವರು ತಯಾರಿಸ್ತಾರೆ. ಈ ಕ್ಷೇತ್ರದಲ್ಲಿ 20 ವರ್ಷಗಳ ಅನುಭವ ಹೊಂದಿದ್ದರೂ ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತ್ರ ಕ್ಲೌಡ್ ಕಿಚನ್ ತೆರೆದಿದ್ದಾರೆ ಆದಿತ್ಯ. 

ತಿಂಗಳಿಗೆ 2 ಕೋಟಿ ಪಾಕೆಟ್ ಮನಿ ಕೊಟ್ಟರೂ ಗಂಡನ ಬಗ್ಗೆ ಕಂಪ್ಲೇಂಟ್ ನಿಂತಿಲ್ಲ, ನೆಟ್ಟಿಗರು ದುಡ್ಡಿಗೇ ಬದುಕಿದ್ಯಾ ಕೇಳ್ತಿದ್ದಾರೆ!

ಆದಿತ್ಯ ಪತ್ನಿ ಹಾಗೂ ತಾಯಿ ಕೂಡ ಕ್ಲೌಡ್ ಕಿಚನ್ ನಡೆಸುತ್ತಿದ್ದಾರೆ. ದಿನಕ್ಕೆ 30 -40 ಆರ್ಡರ್ ಬರುತ್ತದೆ. ದೋಸೆ, ನೂಡಲ್ಸ್, ಸ್ಯಾಂಡ್ವಿಚ್, ಪಾಸ್ತಾ, ಪಿಜ್ಜಾ ಹೀಗೆ ನಾನಾ ರೀತಿಯ ಆಹಾರ ಇವರ ಕ್ಲೌಡ್ ಕಿಚನ್ ನಲ್ಲಿ ಸಿದ್ಧವಾಗುತ್ತದೆ. ಸುಮಾರು  10 ರಿಂದ 15 ಖಾದ್ಯಗಳನ್ನು ಆದಿತ್ಯ ಕ್ಲೌಡ್ ಕಿಚನ್ ನಲ್ಲಿ ತಯಾರಿಸುತ್ತಾರೆ. ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಸಂಪಾದನೆ ಇದೆ ಎನ್ನುತ್ತಾರೆ ಆದಿತ್ಯ. 

ಕ್ಲೌಡ್ ಕಿಚನ್ ತೆರೆಯೋದು ಹೇಗೆ? : ನೀವೂ ಮನೆಯಲ್ಲಿ ಸಣ್ಣ ಬ್ಯುಸಿನೆಸ್ ಶುರು ಮಾಡುವ ಐಡಿಯಾದಲ್ಲಿದ್ದರೆ ಕ್ಲೌಡ್ ಕಿಚನ್ ಶುರು ಮಾಡಬಹುದು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕು. ಇದಕ್ಕೆ 1500 ರಿಂದ 2000 ರೂಪಾಯಿ ಪಾವತಿಸಬೇಕು. ನೀವು ಆನ್ಲೈನ್ ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ 8 ದಿನಗಳಲ್ಲಿ ನಿಮಗೆ ಎಫ್‌ಎಸ್‌ಎಸ್‌ಎಐ ಖಾತೆ ರಚನೆಯಾಗುತ್ತದೆ. ಆ ನಂತ್ರ ನೀವು ಸ್ವಿಗ್ಗಿ ಮತ್ತು ಜೋಮಾಟೋಗೆ, ಎಫ್‌ಎಸ್‌ಎಸ್‌ಎಐ ಖಾತೆಯನ್ನು ಲಿಂಕ್ ಮಾಡಬೇಕು. ಇದಕ್ಕೆ ಅರ್ಜಿ ಭರ್ತಿ ಮಾಡಬೇಕಾಗುತ್ತದೆ. ಎಲ್ಲ ಕೆಲಸವಾದ್ಮೇಲೆ ನೀವು ನಿಮ್ಮ ಮೆನ್ಯು ಸಿದ್ಧಪಡಿಸಬಹುದು. 

ಹತ್ತನೇ ತರಗತಿ ನಂತ್ರ ಮದುವೆಯಾದ್ರೂ ಕನಸು ಬಿಡದ ಮಹಿಳೆ ಈಗ ಯಶಸ್ವಿ ಉದ್ಯಮಿ!

ಇಲ್ಲಿ ಕೆಲಸ ಮಾಡಿದ ಆದಿತ್ಯ, ಅವರ ಪತ್ನಿ ಪ್ರಿಯಾಂಕ ಪ್ರಕಾರ, ನಮ್ಮ ಮನೆಯಲ್ಲಿ ತಯಾರಿಸಲು ಸಾಧ್ಯವಾದ ಹಾಗೂ ಬೇಡಿಕೆ ಹೆಚ್ಚಿರುವ ಆಹಾರವನ್ನು ಮಾತ್ರ ಮೆನ್ಯುವಿನಲ್ಲಿ ಇಡಬೇಕು. ಆರಂಭದಲ್ಲಿ ಕ್ಲೌಡ್ ಕಿಚನನ್ನು ನೀವು ಸಣ್ಣ ಪ್ರಮಾಣದಲ್ಲಿ ಶುರು ಮಾಡಬಹುದು. ಅದಕ್ಕೆ 15000 ರಿಂದ 20000 ರೂಪಾಯಿ ಖರ್ಚಾಗುತ್ತದೆ. 

click me!