ಬಿಕಿನಿ ಧರಿಸಿ ಬಸ್ ಏರಿದ ಮಹಿಳೆ: ಪುರುಷ ಪ್ರಯಾಣಿಕರೊಂದಿಗೆ ಅಶ್ಲೀಲ ವರ್ತನೆ: ವೈರಲ್ ವೀಡಿಯೋ

By Anusha KbFirst Published Apr 18, 2024, 9:22 AM IST
Highlights

ಇಷ್ಟು ದಿನ ಬಸ್‌ನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಪುರುಷರ ಬಗ್ಗೆ ಸುದ್ದಿಯಾಗಿದ್ದವು. ಆದರೆ ಈಗ ಮಹಿಳೆಯೊಬ್ಬಳ ಸರದಿ, ಬಿಕಿನಿ ಧರಿಸಿ ಬಸ್ ಏರಿದ ಮಹಿಳೆ ಪುರುಷರತ್ತ ಅಸಭ್ಯವಾಗಿ ಸನ್ನೆ ಮಾಡಿ ಕಿರುಕುಳ ನೀಡಿದ ಘಟನೆ ರಾಷ್ಟ್ರ ರಾಜಧಾನಿಯ ದೆಹಲಿಯ ಜೀವನಾಡಿ ಆಗಿರುವ ಡಿಟಿಸಿ ಬಸ್‌ನಲ್ಲಿ ನಡೆದಿದೆ.

ನವದೆಹಲಿ: ಇಷ್ಟು ದಿನ ಬಸ್‌ನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಪುರುಷರ ಬಗ್ಗೆ ಸುದ್ದಿಯಾಗಿದ್ದವು. ಆದರೆ ಈಗ ಮಹಿಳೆಯೊಬ್ಬಳ ಸರದಿ, ಬಿಕಿನಿ ಧರಿಸಿ ಬಸ್ ಏರಿದ ಮಹಿಳೆ ಪುರುಷರತ್ತ ಅಸಭ್ಯವಾಗಿ ಸನ್ನೆ ಮಾಡಿ ಕಿರುಕುಳ ನೀಡಿದ ಘಟನೆ ರಾಷ್ಟ್ರ ರಾಜಧಾನಿಯ ದೆಹಲಿಯ ಜೀವನಾಡಿ ಆಗಿರುವ ಡಿಟಿಸಿ ಬಸ್‌ನಲ್ಲಿ ನಡೆದಿದೆ.

ಎಲ್ಲೆಡೆ ಸೆಖೆ ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸೆಖೆಯಿಂದ ಸ್ವಲ್ಪ ನಿರಾಳರಾಗುವುದಕ್ಕಾಗಿ ಜನ ತಂಪು ಪಾನೀಯಗಳತ್ತ, ಖಾದಿ ಹತ್ತಿಯ ಬಟ್ಟೆಗಳತ್ತ ಮುಖ ಮಾಡುತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲೂ ಬಿಸಿಲೂ ವಿಪರೀತವಾಗಿದ್ದು, ಈ ಬಿಸಿಲಿನ ತಾಪವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದಾಳೆ, ಈ ಹುಚ್ಚು ಮಹಿಳೆ. 


ಮಹಿಳೆ ಕೇವಲ ಬಿಕಿನಿ ಧರಿಸಿ ಪ್ರಯಾಣಿಕರಿಂದ ತುಂಬಿದ್ದ ಬಸ್ ಏರಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಬಿಕಿನಿ ಧರಿಸಿದ್ದ ಮಹಿಳೆಯನ್ನು ನೋಡಿ ಬೆಚ್ಚಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ದೆಹಲಿ ಮೆಟ್ರೋದಲ್ಲಿ ಯುವತಿಯರ ಹೋಳಿ ಸಂಭ್ರಮದ ವಿಡಿಯೋ ಡೀಪ್‌ಫೇಕ್‌ ? ಡಿಎಂಆರ್‌ಸಿ ಹೀಗೆ ಹೇಳಿದ್ದೇಕೆ!

ಟ್ವಿಟ್ಟರ್‌ನಲ್ಲಿ ದೆಹಲಿ ಬಸ್ ಎಂಬ ಖಾತೆಯಿಂದ ಈ ವೀಡಿಯೋ ವೈರಲ್ ಆಗಿದೆ. ಬಿಕಿನಿ ಧರಿಸಿ ಬಸ್ ಏರಿದ ಮಹಿಳೆ ಪುರುಷ ಪ್ರಯಾಣಿಕರತ್ತ ಅಶ್ಲೀಲವಾಗಿ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿರುವ ದೃಶ್ಯ ವೀಡಿಯೋದಲ್ಲಿ ಸೆರೆ ಆಗಿದೆ. ಈಕೆಯ ಅಸಭ್ಯ ವರ್ತನೆ ನೋಡಿದ ಪುರುಷ ಪ್ರಯಾಣಿಕರು ತಾವು ಕುಳಿತಿದ್ದ ಸೀಟಿನಿಂದ ಎದ್ದು ಹೋಗಿ  ಬಸ್‌ನ ಮುಂಭಾಗದಲ್ಲಿ ಬಂದು ನಿಂತಿದ್ದಾರೆ.

ದೆಹಲಿ ಸಾರಿಗೆ ಕಾರ್ಪೋರೇಷನ್‌ಗೆ ಸೇರಿದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆ ಬಸ್ ಏರುತ್ತಿದ್ದಂತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾಳೆ. ಅಲ್ಲದೇ ಮಹಿಳಾ ಪ್ರಯಾಣಿಕರ ಜೊತೆ ವಾದ ಮಾಡುತ್ತಾಳೆ. ಈಕೆಯ ವರ್ತನೆ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ. ಅನೇಕರು ಈಕೆಯ ವರ್ತನೆಯಿಂದ ಕಿರಿಕಿರಿಗೊಳಗಾಗಿರುವುದು ಕಾಣಿಸುತ್ತಿದೆ. ಮತ್ತೆ ಕೆಲವರು ಆಕೆಯ ವರ್ತನೆ ನೋಡಲಾಗದೇ ಸೀಟಿನಿಂದ ಎದ್ದು ಹೋಗುತ್ತಿದ್ದಾರೆ.

ಹಿರಿಯ ನಾಗರಿಕನ ಮೇಲೆ ಹಲ್ಲೆ: ಯುವಕನ ಹಿಡಿದು ಸರಿಯಾಗಿ ತದುಕಿದ ಮೆಟ್ರೋ ಪ್ರಯಾಣಿಕರು

ಆದರೆ ಈ ರೀತಿ ಅಸಭ್ಯವಾಗಿ ವರ್ತಿಸಿದ ಮಹಿಳೆ ಯಾರು ಎಂಬುದು ತಿಳಿದು ಬಂದಿಲ್ಲ, ಅಧಿಕಾರಿಗಳು ಈಕೆಯ ಗುರುತನ್ನು ಕೆಲ ಕಾರಣಗಳಿಗಾಗಿ ಬಹಿರಂಗಪಡಿಸಿಲ್ಲ, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ವರ್ತನೆಗಳನ್ನು ತಡೆಯುವ ಯಾವುದೇ ಕಾನೂನುಗಳು ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ದೆಹಲಿ ಮೆಟ್ರೋದ ನಂತರ ದೆಹಲಿ ಸಂಚಾರ ವ್ಯವಸ್ಥೆಯಲ್ಲಿ ಡಿಟಿಸಿ ಬಸ್ ಪ್ರಮುಖ ಪಾತ್ರ ವಹಿಸುತ್ತದೆ.  ಮಹಿಳೆಯರಿಗೆ ಉಚಿತವಾಗಿದ್ದು, ಹೀಗಾಗಿ ಉದ್ಯೋಗಕ್ಕೆ ತೆರಳುವ ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರಿಂದ ಬಸ್ ತುಂಬಿ ತುಳುಕಾಡುತ್ತಿರುತ್ತದೆ.  ಆದರೆ ಈ ಘಟನೆಯೂ ಬಸ್‌ನಲ್ಲಿ ಪ್ರಯಾಣಿಸುವವರಲ್ಲಿ ಆತಂಕ ಉಂಟು ಮಾಡಿದೆ. 

ಇಲ್ಲಿದೆ ವೀಡಿಯೋ :

दिल्ली की बसों की व्यवस्था पूरी तरह से बदहाल हो चुकी हैं ।
दिल्ली मैट्रो से ज्यादा असुरक्षित हैं दिल्ली की बसें ।
यह तो एक छोटी सी घटना हैं हर रोज़ सैकड़ो लोगों की बसों में जेब कट रही हैं उसका जिम्मेदार कोन हैं....? pic.twitter.com/FzEe26UuCe

— Delhi Buses (@DELHIBUSES1)

 

click me!