ಪ್ರತಿ ದಿನ ಎಷ್ಟು ಖರ್ಚಾಯ್ತು ಅಂತ ಲೆಕ್ಕ ಬರೆದಿಡುವವರ ಸಂಖ್ಯೆ ಬಹಳ ಕಡಿಮೆ. ಹಾಗಾಗಿ ಸಂಬಳ ಬಂದಿದ್ದು ಕಣ್ಣಿಗೆ ಕಾಣುತ್ತೇ ವಿನಃ ಖರ್ಚಾಗಿದ್ದಲ್ಲ. ವ್ಯಕ್ತಿಯೊಬ್ಬ ಲೆಕ್ಕ ನೀಡುವ ಪ್ರಯತ್ನ ಮಾಡಿದ್ದಾನೆ. ಆತನ ಪಟ್ಟಿ ನೋಡಿ ನೆಟ್ಟಿಗರು ಕಣ್ಣು ಕೆಂಪು ಮಾಡಿದ್ದಾರೆ.   

ಉತ್ತಮ ಉದ್ಯೋಗ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಜನರು ಪಟ್ಟಣಗಳಲ್ಲಿ ವಾಸಿಸೋದು ಅನಿವಾರ್ಯವಾಗಿದೆ. ನಗರಗಳಿಗೆ ಅರಸಿ ಬರುವ ಜನರು ಹಗಲಿರುಳು ದುಡಿಯುವುದು ಅನಿವಾರ್ಯ. ಒಂದು ಬಾರಿ ಮನೆಯಿಂದ ಹೊರಗೆ ಹೋದ್ರೆ ನೂರು – ಹತ್ತು ರೂಪಾಯಿ ಅಲ್ಲ ಸಾವಿರ ರೂಪಾಯಿಗಿಂತ ಹೆಚ್ಚು ಖರ್ಚಾಗುತ್ತೆ. ಮನೆಯಲ್ಲಿ ಮಕ್ಕಳು, ವೃದ್ಧರಿದ್ದರೆ ಖರ್ಚು ಮತ್ತಷ್ಟು ಹೆಚ್ಚು. ಹಣದುಬ್ಬರ ಮೆಟ್ರೋ ಸಿಟಿ ಜನರನ್ನು ಕಂಗೆಡಿಸಿದೆ. ಉಳಿತಾಯಕ್ಕೆ ಜನರು ನಾನಾ ಪ್ರಯತ್ನಗಳನ್ನು ಮಾಡಿದ್ರೂ ಪ್ರಯೋಜನ ಶೂನ್ಯ. ಬಡವರು ಇದ್ದಿದ್ದರಲ್ಲಿ ತಿಂದುಂಡು ಮಲಗುವ ಅಭ್ಯಾಸ ಮಾಡಿಕೊಂಡಿರ್ತಾರೆ. ಇನ್ನು ಶ್ರೀಮಂತರಿಗೆ ಹಣದ, ಐಷಾರಾಮಿ ಜೀವನದ ಕೊರತೆ ಇರೋದಿಲ್ಲ. ಎಲ್ಲದಕ್ಕೂ ಒದ್ದಾಡೋದು ಮಧ್ಯಮ ವರ್ಗದ ಜನರು. ಅತ್ತ ದರಿ ಇತ್ತ ಪುಲಿ ಎನ್ನುವ ಸ್ಥಿತಿ ಅವರದ್ದಾಗಿರುತ್ತದೆ. ಇಡೀ ದಿನ ದಂಪತಿ ದುಡಿದ್ರೂ ತಿಂಗಳ ಕೊನೆಯಲ್ಲಿ ಇಬ್ಬರ ಕೈನಲ್ಲೂ ಹಣವಿರೋದಿಲ್ಲ. ಅಗತ್ಯವಿರುವ ವಸ್ತುಗಳನ್ನು ಮನೆಗೆ ತರ್ಲೇಬೇಕು. ಬಟ್ಟೆಯಲ್ಲಿ ಸ್ಟ್ಯಾಂಡರ್ಡ್ ಮೆಂಟೇನ್ ಮಾಡ್ಬೇಕು. ಓಡಾಟಕ್ಕೆ ಅಂತ ಕೈನಲ್ಲೊಂದು ಬೈಕ್ ಅಥವಾ ಕಾರ್ ಬೇಕು. ಹೀಗೆ ಅವರ ಪಟ್ಟಿ ಬೆಳೆಯುತ್ತ ಹೋಗುತ್ತೇ ವಿನಃ ಕಡಿಮೆ ಆಗೋದಿಲ್ಲ. ಖರಗ್‌ಪುರದ ಐಐಟಿಯ ಹಳೆಯ ವಿದ್ಯಾರ್ಥಿಯೊಬ್ಬರು ನಗರದಲ್ಲಿ ಮಧ್ಯಮ ವರ್ಗದ ಕುಟುಂಬದ ಖರ್ಚೆಷ್ಟು ಎಂಬುದನ್ನು ಪಟ್ಟಿ ಮಾಡಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗಿದ್ದು, ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರೀತೇಶ್ ಕಾಕಣಿ, ನಾಲ್ಕು ಜನರ ಮಧ್ಯಮ ಕುಟುಂಬ (Family) ವೊಂದು ವರ್ಷಕ್ಕೆ 20 ಲಕ್ಷ ಖರ್ಚು ಮಾಡುತ್ತದೆ ಎಂದಿದ್ದಾರೆ. ಭಾರತ (India) ದ ಮೆಟ್ರೋ ನಗರದಲ್ಲಿ ನಾಲ್ವರ ಕುಟುಂಬಕ್ಕೆ ಪ್ರತಿ ವರ್ಷ 20 ಲಕ್ಷ ರೂಪಾಯಿ ಹಣ ಬೇಕು. ಯಾವುದೇ ಐಷಾರಾಮಿ ಸಂಬಂಧಿತ ವೆಚ್ಚಗಳನ್ನು ಇಲ್ಲಿ ಸೇರಿಸಲಾಗಿಲ್ಲ ಎಂದು ಪ್ರೀತೇಶ್ ಕಾಕಣಿ ಶೀರ್ಷಿಕೆ ಹಾಕಿದ್ದಾರೆ. 

ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ, ಏಪ್ರಿಲ್ ತಿಂಗಳ ವೇತನದ ಜೊತೆಗೆ ಖಾತೆ ಸೇರಲಿದೆ ಡಿಎ ಹೆಚ್ಚಳದ ಬಾಕಿ ಮೊತ್ತ

ಖರ್ಚಿನ ಪಟ್ಟಿಯ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿರುವ ಪ್ರೀತೇಶ್ ಕಾಕಣಿ, ತಿಂಗಳಿಗೆ ಎಷ್ಟು ಖರ್ಚಾಗುತ್ತೆ, ವರ್ಷಕ್ಕೆ ಎಷ್ಟು ಖರ್ಚಾಗುತ್ತೆ ಎಂಬುದನ್ನು ಪಟ್ಟಿ ಮಾಡಿದ್ದಾರೆ. ಪ್ರೀತೇಶ್ ಕಾಕಣಿ ಪ್ರಕಾರ, ವಾರ್ಷಿಕ ಬಾಡಿಗೆ ಅಥವಾ ಇಎಂಐ 4,20,000 ರೂಪಾಯಿ. ಒಂದು ಮಗುವಿನ ಶಾಲಾ ಶುಲ್ಕ 4,00,000 ರೂಪಾಯಿ ಆದ್ರೆ ಆಹಾರ ವೆಚ್ಚ 1,20,000 ರೂಪಾಯಿ. ಏಷ್ಯಾ ಅಥವಾ ಭಾರತದ ಯಾವುದೇ ಸ್ಥಳಕ್ಕೆ ಪ್ರಯಾಣಿಸುವ ವೆಚ್ಚ 1,50,000 ರೂಪಾಯಿ ಎಂದು ಲೀಸ್ಟ್ ಮಾಡಿರುವ ಪ್ರೀತೇಶ್, ಕುಟುಂಬದ ಇನ್ನೂ ಅನೇಕ ಖರ್ಚುಗಳ ಬಗ್ಗೆ ಬರೆದಿದ್ದಾರೆ. ಪ್ರೀತೇಶ್ ಈ ಪೋಸ್ಟ್ ವೇಗವಾಗಿ ವೈರಲ್ ಆಗ್ತಿದೆ. 8.3 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. 

ಬಹುತೇಕ ಬಳಕೆದಾರರು ಪ್ರೀತೇಶ್ ಲೆಕ್ಕವನ್ನು ಅಲ್ಲಗಳೆದಿದ್ದಾರೆ. ಇಷ್ಟು ಖರ್ಚಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಮಧ್ಯಮ ವರ್ಗದ ಜನರಿಗೆ ಇಷ್ಟೊಂದು ಐಷಾರಾಮಿ ಅಗತ್ಯವಿಲ್ಲ ಎಂದಿದ್ದಾರೆ. ಕಾರು ಹಾಗೂ ನಾಯಿ ಮನುಷ್ಯನ ಅವಶ್ಯಕತೆ ಎಂದು ನಾನು ಭಾವಿಸೋದಿಲ್ಲ. ಸ್ವಂತ ಮನೆಯಿಲ್ಲ ಎನ್ನುವವರು ಐಎಂಐ ಮೂಲಕ ಕಾರು ಖರೀದಿ ಮಾಡಬಾರದು ಎಂದು ಬಳಕೆದಾರನೊಬ್ಬ ಸಲಹೆ ನೀಡಿದ್ದಾನೆ. 

ಅಬ್ಬಬ್ಬಾ..ಬೆರಗಾಗಿಸುತ್ತೆ ವಿಶ್ವದ ಶ್ರೀಮಂತ ವ್ಯಕ್ತಿ ಕುಮಾರ್ ಮಂಗಲಂ ಬಿರ್ಲಾ ಕಿರಿಯ ಮಗಳ ನೆಕ್ಲೇಸ್ ಬೆಲೆ!

ಭಾರತದ ಮೆಟ್ರೋ ನಗರಗಳಲ್ಲಿ ಕಾರು ಅತ್ಯಗತ್ಯ. ಮನೆಯನ್ನು ಹೊಂದುವುದು ದೀರ್ಘ ಪ್ರಕ್ರಿಯೆಯಾಗಿದ್ದು, ಇದಕ್ಕಾಗಿ ಕಾಋ ಖರೀದಿ ತಡೆಯಲು ಸಾಧ್ಯವಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ತಿಂಗಳಿಗೆ 10 ಸಾವಿರ ರೂಪಾಯಿ ಬಟ್ಟೆಗೆ ಖರ್ಚು ಹಾಕಿರುವ ಪೀತೇಶ್ ಪೋಸ್ಟ್ ನೋಡಿದ ಬಳಕೆದಾರರೊಬ್ಬರು ಇದು ಐಷಾರಾಮಿ ಅಲ್ಲದೆ ಇನ್ನೇನು? 21 ನೇ ಶತಮಾನದಲ್ಲಿ ಬಡತನದ ಗುರುತು ಏನು ಎಂದು ಕೇಳಿದ್ದಾರೆ. 

Scroll to load tweet…