ಬಾಯ್ ಫ್ರೆಂಡ್ ಹುಡುಕಾಟಕ್ಕೆ ಜಾಹೀರಾತು: ಒಂದೇ ದಿನ 3000 ಸಾವಿರ ರಿಯಾಕ್ಷನ್

By Suvarna News  |  First Published Sep 1, 2023, 2:11 PM IST

ಈಗಿನ ಯುವಜನತೆ ತಮಗೆ ಅಗತ್ಯವಿರೋದನ್ನು ಸಾಮಾಜಿಕ ಜಾಲತಾಣದ ಮೂಲಕ ಹುಡುಕಿಕೊಳ್ತಾರೆ. ಸಿಂಗಲ್ ಆಗಿದ್ದ ಈ ಹುಡುಗಿ ಕೂಡ ಬಾಯ್ ಫ್ರೆಂಡ್ ಹುಡುಕಾಟಕ್ಕೆ ಅಪ್ಲಿಕೇಷನ್ ಬಿಟ್ಟಿದ್ದಾಳೆ. ಇಷ್ಟವಿದ್ರೆ ನೀವೂ ಟ್ರೈ ಮಾಡಿ ನೋಡಿ.
 


ಜನರು ನೌಕರಿ, ಮದುವೆಗೆ ಜಾಹೀರಾತು ನೀಡೋದನ್ನು ನೀವು ಕೇಳಿರ್ತೀರಿ, ನೋಡಿರುತ್ತೀರಿ. ಈಗಿನ ದಿನಗಳಲ್ಲಿ ಅನೇಕರು ಮದುವೆಗೆ ಹೆಣ್ಣು ಬೇಕು ಎಂದೋ ಇಲ್ಲ ಗಂಡು ಬೇಕು ಎಂದೋ ಜಾಹೀರಾತು ನೀಡ್ತಿರುತ್ತಾರೆ. ಆದ್ರೆ ಈ ಯುವತಿ ಬಾಯ್ ಫ್ರೆಂಡ್ ಹುಡುಕಾಟದಲ್ಲಿದ್ದಾಳೆ. ಬಾಯ್ ಫ್ರೆಂಡ್ ಗಾಗಿ ಒಂದು ಅಪ್ಲಿಕೇಷನ್ ಸಿದ್ಧಪಡಿಸಿದ್ದಾಳೆ.

ಟಿಕ್ ಟಾಕ್ (Tik Tok) ನಲ್ಲಿ @itsveradijkmans ಹೆಸರಿನ ಐಡಿಯಿಂದ ವೆರಾ ಹೆಸರಿನ ಯುವತಿ ಈ ಅಪ್ಲಿಕೇಷನ್ ಹಾಕಿದ್ದಾಳೆ. ಆಕೆಗೆ ಟಿಕ್ ಟಾಕ್ ನಲ್ಲಿ 374,000 ಗಿಂತಲೂ ಹೆಚ್ಚು ಫಾಲೋವರ್ಸ್ (Followers) ಇದ್ದಾರೆ. 

Tap to resize

Latest Videos

ಅಮ್ಮ – ಅಪ್ಪನ ಜೊತೆ ವಾಸವಾಗಿದ್ದೀರಾ? ಕಾರ್ ಇದ್ಯಾ? : ಲಂಡನ್ ನಿವಾಸಿ ವೆರಾ, ಪ್ರೀತಿಯನ್ನು ಹುಡುಕಲು ನಾನು ಹಾಕಿರುವ ಅಪ್ಲಿಕೇಷನ್ ಕೆಲವರಿಗೆ ವಿಚಿತ್ರ ಎನ್ನಿಸಬಹುದು. ಆದ್ರೆ ಅನೇಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ ಎಂದು ವೆರಾ ಹೇಳಿದ್ದಾಳೆ. ಅಲ್ಲದೆ, ಅಪ್ಪ ಅಮ್ಮನ ಜೊತೆ ಈಗ್ಲೂ ನೆಲೆಸಿದ್ದೀರಾ, ನಿಮ್ಮ ಬಳಿ ಕಾರ್ ಇದೆಯೇ ಎಂದೆಲ್ಲ ವೆರಾ ಕೇಳಿದ್ದು, ಅದ್ರ ಬಗ್ಗೆಯೂ ಟಿಕ್ ಟಾಕ್ ನಲ್ಲಿ ಚರ್ಚೆ ನಡೆಸಿದ್ದಾಳೆ. 

89ನೇ ವಯಸ್ಸಿನಲ್ಲೂ ಪಂಚಾಯತ್ ಅಧ್ಯಕ್ಷೆಯಾಗಿರುವ ಈ ಅಮ್ಮನ ಸಿಕ್ರೆಟ್ ಏನು?

ಒಂದೇ ದಿನದಲ್ಲಿ ಬಂದಿದೆ ಇಷ್ಟೊಂದು ಅಪ್ಲಿಕೇಷನ್ : 2023ರ ಸಮಯದಲ್ಲಿ ಬಾಯ್ ಫ್ರೆಂಡ್, ಪ್ರೀತಿ ಹುಡುಕೋದು ಸುಲಭವಲ್ಲ ಎನ್ನುತ್ತಾಳೆ ವೆರ. ಈಗಿನ ಸಮಯದಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ. ಶೀರ್ಘವಾಗಿ ಹಾಗೂ ನನಗೆ ಸೂಕ್ತವಾದ ವ್ಯಕ್ತಿ ಸಿಗಲಿ ಎನ್ನುವ ಕಾರಣಕ್ಕೆ ನಾನು ಈ ಜಾಹೀರಾತು ನೀಡಿದ್ದೆ ಎನ್ನುತ್ತಾಳೆ ವೆರ. ಅಪ್ಲಿಕೇಷನ್ ಹಾಕಿದ ನಂತ್ರ ವೆರಾ ಡಿಎಂ ಫುಲ್ ಆಗಿದೆಯಂತೆ. ಎಷ್ಟು ಅಪ್ಲಿಕೇಷನ್ ಬಂದಿದೆ ಎನ್ನುವುದನ್ನು ಲೆಕ್ಕ ಹಾಕೋಕೆ ಸಾಧ್ಯವಾಗ್ತಿಲ್ಲ ಎನ್ನುತ್ತಾಳೆ ವೆರಾ. ಅಂದಾಜು ಮಾಡಿ ಹೆಳ್ತೇನೆ, 24 ಗಂಟೆಯಲ್ಲಿ ಸುಮಾರು 3 ಸಾವಿರಕ್ಕಿಂತಲೂ ಹೆಚ್ಚು ಅಪ್ಲಿಕೇಷನ್ ಬಂದಿದೆ ಎನ್ನುತ್ತಾಳೆ ವೆರಾ.

ಮಾನದಂಡದಲ್ಲಿ ರಾಜಿ ಇಲ್ಲ : ಇನ್ನೂ ಹೆಚ್ಚು ಅಪ್ಲಿಕೇಷನ್ ಬರುತ್ತೆ ಎನ್ನುವ ನಿರೀಕ್ಷೆಯಲ್ಲಿ ವೆರಾ ಇದ್ದಾಳೆ. ಆದ್ರೆ ಮಾನದಂಡದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಆಕೆ ಹೇಳಿದ್ದಾಳೆ. ನಾನು ಜೀವನದ ಇಷ್ಟು ದಿನ ಸಿಂಗಲ್ ಆಗಿದ್ದೆ. ಈಗ ಬಾಯ್ ಫ್ರೆಂಡ್ ಪಡೆಯಲು, ಕುಟುಂಬ ನಿರ್ವಹಿಸಲು ಸಿದ್ಧವಾಗಿದ್ದೇನೆ. ಈ ಬಗ್ಗೆ ನಾನು ಗಂಭೀರವಾಗಿದ್ದೇನೆ ಎನ್ನುವ ವೆರಾ, ಪ್ರೀತಿ ಅಷ್ಟು ಬೇಗ ಸಿಗೋದು ಕಷ್ಟ ಎಂಬುದು ನನಗೂ ಗೊತ್ತು ಎನ್ನುತ್ತಾಳೆ. 

ನಟ ವಿಜಯ್​ ಜೊತೆ ಸೆಕ್ಸ್​ ಕುರಿತು ಹೇಳಿದ್ದ ತಮನ್ನಾಗೆ ಮದ್ವೆ ಬಗ್ಗೆ ಕೇಳಿದ್ರೆ ಹೀಗೆ ಹೇಳಿದ್ರು...

ವೆರಾ ದೊಡ್ಡದೊಂದು ಅಪ್ಲಿಕೇಷನ್ ಪೋಸ್ಟ್ ಮಾಡಿದ್ದಾಳೆ. ಅದ್ರಲ್ಲಿ ಅನೇಕ ಸಂಗತಿಗಳನ್ನು ನೀವು ನೋಡ್ಬಹುದು. ಹುಡುಗನು ಬುದ್ಧಿವಂತನಾಗಿರಬೇಕು, ಅವನು ಸಂಗೀತದಲ್ಲಿ ಉತ್ತಮ ಅಭಿರುಚಿಯನ್ನು ಹೊಂದಿರಬೇಕು ಮತ್ತು ಅವನ ಸ್ವಂತ ಆದಾಯವನ್ನು ಹೊಂದಿರಬೇಕು ಎನ್ನುತ್ತಾಳೆ ವೆರಾ. ಅವನು ನಿಷ್ಠಾವಂತರಾಗಿರಬೇಕು ಮತ್ತು ಕಾರ್ಟೂನ್ ನೋಡುವ ವ್ಯಕ್ತಿಯಾಗಬೇಕು ಎಂಬುದನ್ನೂ ಆಕೆ ಹೇಳಿದ್ದಾಳೆ. ಮೊದಲ ಡೇಟ್ ನಲ್ಲಿ ಬಿಲ್ ಯಾರು ನೀಡ್ತಾರೆ ಎಂಬುದನ್ನೂ ಅಪ್ಲಿಕೇಷನ್ ನಲ್ಲಿ ನಮೂದಿಸಿದ್ದಾಳೆ. ವೆರಾ. ಅಗತ್ಯ ಬಿದ್ರೆ ನಾನೇ ಬಿಲ್ ಪಾವತಿ ಮಾಡ್ತೇನೆ ಎಂದೂ ಆಕೆ ಹೇಳಿದ್ದಾಳೆ. 

ಅಪ್ಲಿಕೇಷನ್ ನಲ್ಲಿ ಹೆಸರು, ಬ್ಲಡ್ ಗ್ರೂಪ್, ಮಕ್ಕಳಿದ್ದಾರಾ ಎಂಬುದರಿಂದ ಹಿಡಿದು ಅನೇಕ ಸಂಗತಿಗಳನ್ನು ನೋಡಬಹುದು. ನೀವು ಅದನ್ನು ತುಂಬಿ ಕಳಿಸಿದ್ರೆ ಸಾಕು. ವೆರಾ ನಂತ್ರ ಆಯ್ಕೆ ಮಾಡ್ತಾಳೆ.
ವೆರಾ ಅಪ್ಲಿಕೇಷನ್ ಗೆ ಅನೇಕರು ಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿಯೊಬ್ಬ ನನ್ನ ಜೊತೆ ಅಪ್ಪ - ಅಮ್ಮ ವಾಸವಾಗಿದ್ದಾರೆ. ಆದ್ರೆ ನನ್ನ ಬಳಿ ಕಾರ್ ಇಲ್ಲ. ನನ್ನ ಬಳಿ ಎರಡು ಬೋಟ್ ಇದೆ ಎಂದಿದ್ದಾನೆ.  
 

click me!