
ಹೊಸ ಸೋಪ್ ಬಳಸೋಕೆ ಹಾಕಿ ನಾಲ್ಕು ದಿನ ಆಗಿಲ್ಲ. ಈಗ್ಲೇ ಖಾಲಿ ಆಯ್ತಾ ಅಂತಾ ಮನೆ ಯಜಮಾನ ಕೂಗಾಡೋದನ್ನು ನೀವು ಕೇಳ್ಬಹುದು. ಪ್ರತಿ ದಿನ ಪ್ರತಿಯೊಬ್ಬರೂ ಬಳಸುವ ವಸ್ತುಗಳಲ್ಲಿ ಸೋಪ್ ಕೂಡ ಒಂದು. ನೀವು ಬಟ್ಟೆ ವಾಶ್ ಮಾಡೋಕೆ, ಸ್ನಾನ ಮಾಡೋಕೆ ಸೋಪ್ ಬಳಕೆ ಮಾಡ್ತೀರಿ. ಅದು ಬೇಗ ಬೇಗ ಖಾಲಿಯಾಗುತ್ತೆ. ಸೋಪ್ ಬಾಕ್ಸ್ ತಳದಲ್ಲಿ ಸಣ್ಣದೊಂದು ಚೂರನ್ನು ನೀವು ಕಾಣ್ತೀರಿ. ಆದ್ರೆ ಆ ಚೂರು ಯಾವುದೇ ಪ್ರಯೋಜನಕ್ಕೆ ಬರೋದಿಲ್ಲ. ಹಾಗಾಗಿ ಅನೇಕರು ಅದನ್ನು ತೆಗೆದು ಕಸಕ್ಕೆ ಹಾಕ್ತಾರೆ. ಮತ್ತೆ ಕೆಲವರ ಮನೆ ಬಾತ್ ರೂಮಿನ ಅಲ್ಲಿ ಇಲ್ಲಿ ಬಿದ್ದು ಅದು ಕರಗಿ ಕೊನೆಗೆ ನೀರಾಗುತ್ತೆ. ನಿಮ್ಮ ಮನೆಯಲ್ಲೂ ಇಂಥ ಸಣ್ಣ ಪೀಸುಗಳು ಬಿದ್ದಿದ್ರೆ ಅದನ್ನು ಕಸಕ್ಕೆ ಹಾಕಬೇಡಿ. ಅದನ್ನು ಮರುಬಳಕೆ ಮಾಡೋದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಹ್ಯಾಂಡ್ ವಾಶ್ (Hand Wash) ಆಗಿ ಬಳಕೆ ಮಾಡಿ : ಉಳಿದ ಸೋಪ್ (Soap) ತುಂಡುಗಳಿಂದ ನೀವು ಹ್ಯಾಂಡ್ ವಾಶ್ ತಯಾರಿಸಬಹುದು. ಇದಕ್ಕಾಗಿ ನಿಮಗೆ ಬಹಳಷ್ಟು ಸೋಪ್ ತುಣುಕುಗಳು ಅಗತ್ಯವಿದೆ. ನೀವು 10-12 ತುಣುಕುಗಳನ್ನು ಸಂಗ್ರಹಿಸಿ, ಅದನ್ನು ಚೆನ್ನಾಗಿ ಪುಡಿಮಾಡಿ. ನಂತರ ಅದನ್ನು ನೀರಿನಲ್ಲಿ ಹಾಕಿ ಕರಗಲು ಬಿಡಿ. ಸುಗಂಧಕ್ಕಾಗಿ ನಿಮ್ಮ ಆಯ್ಕೆಯ ಪರಿಮಳ ತೈಲವನ್ನು ಸಹ ನೀವು ಇದಕ್ಕೆ ಸೇರಿಸಬಹುದು. ನಂತ್ರ ಅದನ್ನು ಸ್ಪ್ರೇ (Spray) ಬಾಟಲಿಯಲ್ಲಿ ಹಾಕಿ, ಹ್ಯಾಂಡ್ ವಾಶ್ ರೀತಿಯಲ್ಲಿ ಬಳಸಿ.
ಅಯ್ಯಯ್ಯೋ! ಇದೆಂಥಾ ಎಣ್ಣೆ ಕುಡಿದಂಗೆ ಪರ್ಫ್ಯೂಮ್ ಕುಡಿದ್ಲಲ್ಲ ಈ ಮಹಿಳೆ?
ಬೂಟ್ ವಾಸನೆ ತೆಗೆಯಲು ಹೀಗೆ ಬಳಸಿ : ಬೆವರಿನಿಂದಾಗಿ ಅಥವಾ ಕೆಲ ಶೂಗಳ ಸಮಸ್ಯೆಯಿಂದ ಕೆಟ್ಟ ವಾಸನೆ ಬರ್ತಿರುತ್ತದೆ. ಅದನ್ನು ತೊಡೆದು ಹಾಕಲು ನೀವು ಉಳಿದ ಸೋಪ್ ತುಂಡುಗಳನ್ನು ಬಳಸಬಹುದು. ಸಣ್ಣ ಸೋಪನ್ನು ಒಂದು ಬಟ್ಟೆಯಲ್ಲಿ ಸುತ್ತಿ ಅದನ್ನು ಬೂಟ್ ಒಳಗೆ ಇಟ್ಟು ಒಂದು ರಾತ್ರಿ ಹಾಗೆ ಬಿಡಿ. ಬೆಳಿಗ್ಗೆ ಶೂ ವಾಸನೆ ಮಾಯವಾಗಿರುತ್ತದೆ. ಶೂ ಫ್ರೆಶ್ ಆಗಿರುತ್ತದೆ.
ಕೀಟನಾಶಕವಾಗಿ ಬಳಕೆ : ಹವಾಮಾನದಲ್ಲಿನ ಬದಲಾವಣೆಯಿಂದಾಗಿ ಕೀಟಗಳು ಹೆಚ್ಚಾಗಿ ಸಸ್ಯಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅವು ನಿಮ್ಮ ಕೈತೋಟವನ್ನು ಹಾಳು ಮಾಡುತ್ತವೆ. ಅವುಗಳನ್ನು ಸಸ್ಯದಿಂದ ದೂರವಿಡಲು ನೀವು ಸೋಪ್ ಕೀಟನಾಶಕ ತಯಾರಿಸಬಹುದು. ಇದಕ್ಕಾಗಿ ಸೋಪ್ ದ್ರಾವಣವನ್ನು ತಯಾರಿಸಿ, ನಂತರ ಅದಕ್ಕೆ ಸಸ್ಯಜನ್ಯ ಎಣ್ಣೆಯನ್ನು ಸೇರಿಸಿ. ಆಮೇಲೆ ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಗುಲಾಬಿ ತೋಟದಲ್ಲಿ ಸಿಂಪಡಿಸಿ. ನೀವು ಹೀಗೆ ಮಾಡಿದ್ರೆ ಒಂದೇ ಒಂದು ಕೀಟ ನಿಮ್ಮ ತೋಟದಲ್ಲಿ ಕಾಣಸಿಗೋದಿಲ್ಲ.
ಒಂದೇ ವಾರದಲ್ಲಿ ಎರಡು ಬಾರಿ ಹೃದಯಾಘಾತ, 33 ವರ್ಷದ ಫಿಟ್ನೆಸ್ ಇನ್‌ಫ್ಲುಯೆನ್ಸರ್ ನಿಧನ!
ಬಟ್ಟೆಯ ಒದ್ದೆ ವಾಸನೆ ತೆಗೆಯುತ್ತೆ ಸೋಫ್ : ಬಟ್ಟೆಯನ್ನು ಕಪಾಟಿನಲ್ಲಿ ಇಟ್ಟಾಗ ಅದರಿಂದ ವಿಚಿತ್ರವಾದ ವಾಸನೆ ಬರಲು ಶುರುವಾಗುತ್ತದೆ. ಮಳೆಯ ದಿನಗಳಲ್ಲಿ ಬಟ್ಟೆ ಸರಿಯಾಗಿ ಒಣಗದೆ ಹೋದಾಗ್ಲೂ ವಾಸನೆ ಬರುತ್ತದೆ. ಅದು ನಮಗೆ ಮುಜುಗರವನ್ನುಂಟು ಮಾಡುತ್ತದೆ. ಎಷ್ಟೇ ಸೆಂಟ್ ಹೊಡೆದ್ರೂ ವಾಸನೆ ಹೋಗೋದಿಲ್ಲ. ಹೀಗಿರುವಾಗ ನೀವು ಬಟ್ಟೆಗಳನ್ನು ತಾಜಾವಾಗಿಡಲು ನಿಮ್ಮ ಪರಿಮಳಯುಕ್ತ ಸ್ನಾನದ ಸೋಪಿನ ಉಳಿದ ತುಂಡುಗಳನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿ ಇಡಬೇಕು. ಇದ್ರಿಂದ ಬಟ್ಟೆಯಿಂದ ಬರುವ ವಾಸನೆ ಕಡಿಮೆ ಆಗುತ್ತದೆ.
ಸೋಪ್ ತುಂಡು ಬಳಸಿ ಶೇವಿಂಗ್ ಕ್ರೀಮ್ ತಯಾರಿಸಿ : ಶೇವಿಂಗ್ ಕ್ರೀಮ್‌ಗೆ ಪರ್ಯಾಯವಾಗಿ ನೀವು ಉಳಿದ ಸೋಪ್ ಅನ್ನು ಸಹ ಬಳಸಬಹುದು. ದುಬಾರಿ ಶೇವಿಂಗ್ ಕ್ರೀಂನಂತೆಯೇ ಇದು ಚರ್ಮಕ್ಕೆ ಹೊಳಪು ಮತ್ತು ಮೃದುತ್ವವನ್ನು ನೀಡುತ್ತದೆ. ತುಂಡುಗಳನ್ನು ಒಂದು ಕಡೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ ಅಥವಾ ಒಂದು ಬಾಕ್ಸ್ ನಲ್ಲಿ ಹಾಕಿಟ್ಟು ಅದನ್ನು ಶೇವಿಂಗ್ ಕ್ರೀಮ್ ಬದಲು ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.