ದಿನಾ ನೋಡೋ, ಮಾತನಾಡಿಸೋ ಹುಡುಗಿಯರು ಸಿಗುತ್ತಲೇ ಇರುತ್ತಾರೆ. ಇವರಲ್ಲಿ ಯಾರು ನಿಮಗೆ ಒಲಿದಿದ್ದಾರೆ, ನಿಮ್ಮ ಆಕರ್ಷಣೆಗೆ ತುತ್ತಾಗಿದಾರೆ, ನಿಮ್ಮ ಗಮನ ಸೆಳೆಯೋಕೆ ಪ್ರಯತ್ನ ಮಾಡ್ತಿದಾರೆ ಅಂತ ಗೊತ್ತು ಮಾಡಿಕೊಳ್ಳೋಕೆ ಬಾಡಿ ಲ್ಯಾಂಗ್ವೇಜ್ ಸುಲಭದ ಸಾಧನ. ಹಾಗಿದ್ರೆ, ಅಂಥ ದೇಹ ಸೂಚನೆಗಳು ಯಾವುದು?
ಹುಡುಗ- ಹುಡುಗಿಯರಿಗೆ ತಮ್ಮ ದೇಹದ ಭಾಷೆ, ಮನಸ್ಸಿನ ಭಾಷೆ ಬಲು ಬೇಗನೆ ಅರ್ಥವಾಗುತ್ತೆ. ನಂಗೆ ಆಕೆ ಒಲಿದಿದಾಳೋ ಇಲ್ಲವೋ, ನಂಗೆ ಆತ ಗಾಳ ಹಾಕ್ತಿದಾನೋ ಇಲ್ಲವೋ ಎಂಬುದನ್ನು ಎದುರಿಗೆ ಇರೋ ಹದಿಹರೆಯದ ಮನಸ್ಸು ಥಟ್ಟನೆ ಅಂದಾಜು ಮಾಡುತ್ತೆ. ಯಾಕೆಂದರೆ ಅವರದು ಇನ್ನೂ ಹಸಿಹಸಿಯಾದ, ಕಲ್ಲು ಹರಳು ಒಗೆದರೆ ಅಂಟಿಕೊಳ್ಳುವಂತ ಹಸಿ ಮನಸ್ಸು. ತುಸು ದೊಡ್ಡವರಾದ ಮೇಲೆ, ಆಫೀಸ್ ಕೆಲಸ ಇತ್ಯಾದಿಗಳಿಗೆ ಸೇರಿಕೊಂಡ ಮೇಲೆ ಹಾಗಿರೊಲ್ಲ. ಅಷ್ಟು ಹೊತ್ತಿಗಾಗಲೇ ಪ್ರೇಮದ ಭಾವನೆಗಳ ಮೇಲೆ ದಿನಚರಿ, ದಿನನಿತ್ಯದ ಒತ್ತಡಗಳು ಸವಾರಿ ಮಾಡೋಕೆ ಶುರು ಮಾಡಿರುತ್ತೆ. ಹೀಗಾಗಿ ಮನಸ್ಸು ಜಡವಾಗುತ್ತಾ ಹೋಗುತ್ತದೆ- ನಾವು ನಮ್ಮ ಬಾಡಿ ಲ್ಯಾಂಗ್ವೇಜನ್ನೇ ಮರೆಯುತ್ತಾ ಹೋಗುತ್ತೇವೆ.
ದಿನಾ ನೋಡೋ, ಮಾತನಾಡಿಸೋ ಹುಡುಗಿಯರು ಸಿಗುತ್ತಲೇ ಇರುತ್ತಾರೆ. ಇವರಲ್ಲಿ ಯಾರು ನಿಮಗೆ ಒಲಿದಿದ್ದಾರೆ, ನಿಮ್ಮ ಆಕರ್ಷಣೆಗೆ ತುತ್ತಾಗಿದಾರೆ, ನಿಮ್ಮ ಗಮನ ಸೆಳೆಯೋಕೆ ಪ್ರಯತ್ನ ಮಾಡ್ತಿದಾರೆ ಅಂತ ಗೊತ್ತು ಮಾಡಿಕೊಳ್ಳೋಕೆ ಬಾಡಿ ಲ್ಯಾಂಗ್ವೇಜ್ ಸುಲಭದ ಸಾಧನ. ಹಾಗಿದ್ರೆ, ಅಂಥ ದೇಹ ಸೂಚನೆಗಳು ಯಾವುದು?
ಹುಬ್ಬುಗಳನ್ನು ಕುಣಿಸುತ್ತಾಳೆ
ಆಕೆ ನಿಮ್ಮ ಜೊತೆ ಮಾತನಾಡುತ್ತಾ ಇರುವಾಗ ಆಕೆಯ ಹುಬ್ಬುಗಳನ್ನು ಪದೇ ಪದೇ ಕುಣಿಸುತ್ತಾ ಇರುತ್ತಾಳೆ ಅಂದರೆ, ಆಕೆಗೆ ನಿಮ್ಮ ಬಗ್ಗೆ ಒಂದು ಬಗೆಯ ಕ್ರಷ್ ಮೂಡಿದೆ ಅಂತಾನೇ ಅರ್ಥ. ಇದು ತನ್ನ ಕಣ್ಣಿನ ಕಡೆಗೆ, ಅದರಲ್ಲಿರೋ ಭಾವನೆಗಳ ಕಡೆಗೆ ಎದುರಿಗಿರುವಾತನನ್ನು ಸೆಳೆಯುವ ಪ್ರಯತ್ನ.
ಪೋರ್ನ್ ಚಿತ್ರಗಳಲ್ಲಿ ಮಿಂಚಿದ ಖ್ಯಾತ ನಟಿ ಬಿಚ್ಚಿಟ್ಟ ರಿಯಲ್ ಸ್ಟೋರಿ
ಬಟ್ಟೆಗಳನ್ನು ಸರಿಪಡಿಸಿಕೊಳ್ತಾಳೆ
ಆಕೆ ನಿಮ್ಮ ಎದುರಿಗಿದ್ದಾಗ ಯಾವುದೇ ತನ್ನ ಉಡುಪನ್ನು ಆಗಾಗಾ ಸರಿಪಡಿಸಿಕೊಳ್ತಾ ಇದ್ದರೆ, ಆಕೆಗೆ ತನ್ನ ಉಡುಪು ಹಾಗೂ ದೇಹದ ಆ ಭಾಗದ ಮೇಲೆ ನಿಮ್ಮ ಗಮನ ಸೆಳೆಯುವ ಆಸಕ್ತಿ ಇದೆ ಅಂತ ಅರ್ಥ ಮಾಡಿಕೊಳ್ಳಬೇಕು.
ಮಣಿಕಟ್ಟು ಸರಿಪಡಿಸುವುದು
ನಿಮ್ಮೆದುರಿಗೆ ಇರುವಾಗ ಆಕೆ ತನ್ನ ಕೈಯ ಮಣಿಕಟ್ಟನ್ನು ಆಗಾಗ ಸರಿಪಡಿಸಿಕೊಳ್ತಾ ಇದ್ದರೆ ಅದರಲ್ಲೇನಫ ಸೂಚನೆ ಇರುತ್ತೆ. ಯಾಕೆಂದರೆ ಮಣಿಕಟ್ಟು ಆಕೆಯ ದೇಹದ ಸೆಕ್ಸಿ ಭಾಗಗಳಲ್ಲಿ ಒಂದು. ಹಿಂದೆಲ್ಲ ಮಹಿಳೆಯರು ಪೂರ್ತಿ ದೇಹ ಮುಚ್ಚುವಂತೆ ಬಟ್ಟೆ ಧರಿಸುತ್ತಿದ್ದರು. ಮಣಿಕಟ್ಟು ಮಾತ್ರ ಹೊರಗೆ ಕಾಣಿಸುವಂತಿರುತ್ತಿತ್ತು.
ಪೀರಿಯಡ್ಸ್ ಟೈಮ್‌ನಲ್ಲಿ ಸೆಕ್ಸ್ ಮಾಡಬಹುದಾ?
ನಿಮ್ಮ ಜಾಗದತ್ತ ಆಕೆಯ ಕೈ
ನಿಂತು ಅಥವಾ ಕೂತು ಮಾತನಾಡುವಾಗ, ಪ್ರತಿಯೊಬ್ಬರಿಗೂ ಅವರದೇ ಜಾಗ ಅಥವಾ ಸ್ಪೇಸ್ ಇರುತ್ತೆ. ಸಾಮಾನ್ಯವಾಗಿ ಯಾರೂ ಅದನ್ನು ಕ್ರಾಸ್ ಮಾಡೊಲ್ಲ. ಆದರೆ ಆಕೆ ನಿಮ್ಮ ಸ್ಪೇಸ್‌ನತ್ತ ತನ್ನ ಕೈಯನ್ನು ಹೆಚ್ಚು ಹೆಚ್ಚು ಚಲಿಸಬಹುದು.
ಖಾಸಗಿ ಭಾಗ
ತನ್ನ ದೇಹದ ಖಾಸಗಿ ಭಾಗವೊಂದು ನಿಮಗೆ ಕಾಣುವಂತೆ ಆಕೆ ಮಾಡಬಹುದು. ಅದು ಉದ್ದೇಶಪೂರ್ವಕವೋ ಅಥವಾ ಅಚಾನಕ್ಕಾಗಿ ಆದದ್ದೋ ಎಂಬುದರ ಮೇಲೆ ಇದು ಅವಲಂಬಿಸಿರುತ್ತದೆ. ಉದ್ದೇಶಪೂರ್ವಕ ಆಗಿದ್ದರೆ ಇದು ಒಂದಕ್ಕಿಂತ ಹೆಚ್ಚು ಬಾರಿ ಘಟಿಸಬಹುದು.
ವಾರಕ್ಕೊಮ್ಮೆ ಸೆಕ್ಸ್ ಮಾಡೋರಿಗೆ ಮೆನೋಪಾಸ್ ದೂರ
ಕಾಲುಗಳತ್ತ ಗಮನ
ಆಕೆ ಪದೇ ಪದೇ ತನ್ನ ಕಾಲುಗಳನ್ನು ಕ್ರಾಸ್ ಆಗಿ ಕೂತುಕೊಳ್ಳಬಹುದು, ಮತ್ತೆ ಮತ್ತೆ ಕ್ರಾಸ್ ಪೊಸಿಷನ್‌ನಿಂದ ಅದನ್ನು ಬದಲಾಯಿಸಬಹುದು. ಹೀಗೆ ಪದೇ ಪದೇ ಬದಲಾಯಿಸ್ತಿದ್ದರೆ ಆಕೆ ತನ್ನ ಕಾಲು ಹಾಗೂ ತೊಡೆಗಳತ್ತ ನಿಮ್ಮ ಗಮನ ಸೆಳೆಯೋಕೆ ಪ್ರಯತ್ನ ಮಾಡ್ತಿದ್ದಾಳೆ ಅಂತ ಅರ್ಥ.
ಮುಖ, ಬಾಯಿ, ತುಟಿ
ಇದು ಅತ್ಯಂತ ಪವರ್‌ಫುಲ್ ಸಿಗ್ನಲ್. ಆಕೆ ಪದೇ ಪದೇ ತನ್ನ ಮುಖ, ಬಾಯಿ ಮತ್ತು ತುಟಿಗಳನ್ನು ಮುಟ್ಟಿಕೊಳ್ತಾ ಇದ್ದರೆ, ತನ್ನ ಆಸಕ್ತಿ ಆಕರ್ಷಣೆಯನ್ನು ತುಂಬ ಡೇರಿಂಗ್ ಆಗಿಯೇ ನಿಮಗೆ ತಲುಪಿಸ್ತಾ ಇದಾಳೆ ಅಂತ ಅರ್ಥ ಮಾಡಿಕೊಳ್ಳಬೇಕು.
ಆಫೀಸಿನಲ್ಲಿ ಲವ್ ಮಾಡೋದ್ರಿಂದ ಹಲವು ಲಾಭಗಳಿವೆ