ಗಂಡಂಗೆ ಮೋಸ ಮಾಡೋದ್ರಲ್ಲಿ ಬೆಂಗಳೂರಿಗರು ನಂ.1: ಸರ್ವೆ

By Suvarna News  |  First Published Feb 6, 2020, 6:45 PM IST

ವಿವಾಹದ ವಿಷಯಕ್ಕೆ ಬಂದರೆ ಮೊದಲೇ ಬೆಂಗಳೂರಿನ ಹುಡುಗಿ ಬೇಡ ಎನ್ನುವವರು ಹಲವರು. ಅಂಥದರಲ್ಲಿ ಈ ಸರ್ವೆಯ ಫಲಿತಾಂಶ ಕೇಳಿದ ಮೇಲಂತೂ, ಬೆಂಗಳೂರು ಬೆಡಗಿಯರಿಂದ ಮಾರು ದೂರ ಹಾರಿಯಾರು. ಏಕೆಂದರೆ, ಪತಿಗೆ ಮೋಸ ಮಾಡುವುದರಲ್ಲಿ ಐಟಿಸಿಟಿಯ ಸುಂದರಿಯರು ಎತ್ತಿದ ಕೈಯಂತೆ. 


ಈ ಸರ್ವೆ ಫಲಿತಾಂಶ ಕೇಳಿದ್ರೆ ಖಂಡಿತಾ  ಹೌಹಾರ್ತೀರಿ. ಬ್ಯಾಚುಲರ್‌ಗಳು ವಿವಾಹವಾಗಬೇಕೆಂದ್ರೆ ಬೆಚ್ಚಿ ಬೀಳ್ತಾರೆ. ವಿವಾಹಿತರು ಸುಖಾಸುಮ್ಮನೆ ಪತ್ನಿಯನ್ನು ಅನುಮಾನಿಸುವಂತಾಗುತ್ತದೆ. ಮತ್ತಿನ್ನೇನು? ಭಾರತದಲ್ಲಿ 10ರಲ್ಲಿ 7 ಮಹಿಳೆಯರು ತಮ್ಮ ಗಂಡನಿಗೆ ವಂಚಿಸುತ್ತಾರೆ ಎಂದರೆ ಭಯವಾಗದಿರುತ್ತದೆಯೇ ?

ಹೌದು, ವಿವಾಹವೆಂಬುದು ತನ್ನ ಮೂಲ ಅರ್ಥ ಕಳೆದುಕೊಳ್ಳುತ್ತಿದೆ, ನಂಬಿಕೆಯೇ ಬುನಾದಿಯಾಗಬೇಕಾದ ಸಂಬಂಧದಲ್ಲಿ ವಂಚನೆ, ಸುಳ್ಳುಗಳು, ಎಕ್ಸ್‌ನೆಡೆಗಿನ ಪ್ರೀತಿ ಮುಂತಾದವು ನುಗ್ಗಿ ವಿವಾಹ ವಿಚ್ಚೇದನ, ಕೊಲೆ, ಜೊತೆಗಿದ್ದೂ ಇಲ್ಲದಿರುವಂಥ ಜೀವನಗಳಲ್ಲಿ ಕೊನೆಯಾಗುತ್ತಿವೆ. ನೀವು ವಿವಾಹ ಸಂಬಂಧಗಳನ್ನು ಸಮರ್ಥಿಸಿಕೊಳ್ಳಲು ಎಷ್ಟೇ ಅಂಕಿಸಂಖಿಗಳನ್ನು, ಅಧ್ಯಯನ ವರದಿಗಳನ್ನು ಕೆದಕಿ ತನ್ನಿ, ವಿವಾಹಿತ ಪತಿ ಅಥವಾ ಪತ್ನಿ ಪರಸ್ಪರ ಮೋಸ ಮಾಡಿಕೊಳ್ಳುವುದು ಹೆಚ್ಚಾಗಿದೆ. 

Latest Videos

undefined

ಏಳೇಳೂ ಜನುಮಕ್ಕೂ ಇವರೇ ಸಿಗಲಿ ಎಂದು ಬಯಸುತ್ತಿದ್ದ ಕಾಲ ಹೋಗಿ, ಈ ಜನ್ಮದಲ್ಲಿಯೇ ಏಳಾದರೂ ಸಿಗಲಿ ಎನ್ನುವ ದುರಾಸೆ, ದುರಾಲೋಚನೆ ಹೆಚ್ಚುತ್ತಿದೆ. ಈ ಬಗ್ಗೆ ಫ್ರೆಂಚ್ ವಿವಾಹೇತರ ಸಂಬಂಧದ ಡೇಟಿಂಗ್ ಆ್ಯಪ್  ಗ್ಲೀಡೆನ್ ಇತ್ತೀಚೆಗೆ ಸರ್ವೆಯೊಂದನ್ನು ನಡೆಸಿದ್ದು, ಭಾರತೀಯ ಮಹಿಳೆಯರು ಏಕೆ ಪತಿಗೆ ವಂಚಿಸುತ್ತಾರೆ ಎಂದು ಅರ್ಥ  ಮಾಡಿಕೊಳ್ಳಲು ಪ್ರಯತ್ನಿಸಿದೆ. ಸುಮಾರು 1 ದಶಕದಿಂದ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಡೇಟಿಂಗ್ ಆ್ಯಪ್‌ಗೆ ನಮ್ಮ ದೇಶವೊಂದರಲ್ಲೇ 5 ಲಕ್ಷ ಜನ ಸಬ್‌ಸ್ಕ್ರೈಬರ್ಸ್ ಇದ್ದಾರೆ! ಈ ಸರ್ವೆ ಬಹಿರಂಗಪಡಿಸಿದ ಒಂದು ಆಸಕ್ತಿಕರ ವಿಷಯವೆಂದರೆ ಈ ಆ್ಯಪ್ ಬಳಸುತ್ತಿರುವವರಲ್ಲಿ ಶೇ.20ರಷ್ಟು ಭಾರತೀಯ ಪುರುಷರು ಹಾಗೂ ಶೇ.13ರಷ್ಟು ಭಾರತೀಯ ಮಹಿಳೆಯರು ತಾವು ತಮ್ಮ ಸಂಗಾತಿಗೆ ಮೋಸ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನೂ ಶಾಕಿಂಗ್ ಎಂದರೆ, ಇದನ್ನು ಬಳಸುತ್ತಿರುವ ಮಹಿಳೆಯರ ಸರಾಸರಿ ವಯಸ್ಸು 34ರಿಂದ 49 ಎಂಬುದು. ಜೊತೆಗೆ ವಿವಾಹದ ಹೊರತಾದ ಸಂಬಂಧಕ್ಕಾಗಿ ಆನ್‌ಲೈನ್ ಅವಕಾಶಗಳ ಮೊರೆ ಹೋಗುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂಬುದು ಕೂಡಾ ಆಘಾತಕಾರಿ. 

ಗಂಡನೇ ದೊಡ್ಡ ತಲೆನೋವು ಮರಾಯ್ರೆ: ಉದ್ಯೋಗಸ್ಥೆ ಮಹಿಳೆ ಅಳಲು!...


ಇಷ್ಟೇ ಅಲ್ಲ
ಸರ್ವೆಯಲ್ಲಿ  ಕಂಡುಕೊಂಡ  ಮತ್ತಷ್ಟು ವಿಷಯಗಳನ್ನು ಕೇಳಿದ್ರೆ ನಿಮಗೆ ಆಶ್ಚರ್ಯವಾಗಬಹುದು. 
- ಭಾರತದಲ್ಲಿ 10ರಲ್ಲಿ 7 ಮಹಿಳೆಯರು, ತಮ್ಮ ಪತಿ ತಮಗೆ  ಮನೆಗೆಲಸಗಳಲ್ಲಿ ಸಹಾಯ ಮಾಡುವುದಿಲ್ಲ ಎಂಬ ಕಾರಣಕ್ಕಾಗಿ ಪತಿಗೆ ಮೋಸ ಮಾಡುತ್ತಾರಂತೆ. ಇನ್ನು ಅಷ್ಟೇ ಸಂಖ್ಯೆಯ ಮಹಿಳೆಯರು, ದಿನದ ಏಕತಾನತೆಯನ್ನು ಕಳೆವ ಸಲುವಾಗಿ ಪತಿಗೆ ವಂಚಿಸುತ್ತಾರಂತೆ. 
- ಸರ್ವೆಯಲ್ಲಿ ಪಾಲ್ಗೊಂಡ ಶೇ.77ರಷ್ಟು ಮಹಿಳೆಯರು ತಾವು ಏಕತಾನತೆಯಿಂದ ಬೇಸತ್ತು ಅಥವಾ ವಿವಾಹೇತರ ಸಂಬಂಧ ಬದುಕಿಗೆ ಎಕ್ಸೈಟ್‌ಮೆಂಟ್ ತರುತ್ತದೆ ಎಂದು ಬಾಹ್ಯ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. 
- 10ರಲ್ಲಿ ನಾಲ್ಕು ಮಹಿಳೆಯರು ತಮ್ಮ ಸತ್ತಂತ ವಿವಾಹ ಸಂಬಂಧಕ್ಕೆ ಪತಿಯೊಂದಿಗೆ ಫ್ಲರ್ಟ್ ಮಾಡುವುದರಿಂದ ಜೀವ ಬಂದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
- ಭಾರತದಲ್ಲಿ ಸಲಿಂಗಿ ವಿವಾಹೇತರ ಸಂಬಂಧಗಳ ಸಂಖ್ಯೆಯಲ್ಲಿ ಶೇ.45ರಷ್ಟು ಏರಿಕೆಯಾಗಿದೆ.
- ಕಳೆದ ವರ್ಷ ಸುಪ್ರೀಂ ಕೋರ್ಟ್ ಸೆಕ್ಷನ್  377 ನಿಷೇಧಿಸಿದ ಬಳಿಕ , ಸಮಾಜದ ಒತ್ತಡಕ್ಕೆ ವಿವಾಹವಾದ ಸಲಿಂಗಿಗಳಿಗೆ ತಮ್ಮ ಇಷ್ಟಾರ್ಥ ಸಿದ್ದಿಗೆ ಇರುವ ಏಕೈಕ ಮಾರ್ಗ ವಿವಾಹೇತರ ಸಂಬಂಧ. ಅದೂ ಆನ್‌ಲೈನ್ ವೇದಿಕೆಗಳಾದರೆ ಸುಲಭ. 

ನಾವೇಕೆ ಮಕ್ಕಳಿಗೆ ಪುರಾಣದ ಕತೆ ಹೇಳಬೇಕು?...


- ಸರ್ವೆಯ ಫಲಿತಾಂಶದಂತೆ ಬೆಂಗಳೂರು, ಮುಂಬೈ ಹಾಗೂ ಕೋಲ್ಕತಾ ಮಹಿಳೆಯರು ತಮ್ಮ ಪತಿಗೆ ಅತಿ ಹೆಚ್ಚು ವಂಚನೆ ಮಾಡುವವರು. ಇವುಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಇಲ್ಲದಿರುವುದು ಆಶ್ಚರ್ಯವೇ ಸರಿ. 
- ಶೇ.57ರಷ್ಟು ಪುರುಷರು, ಶೇ.52ರಷ್ಟು ಮಹಿಳೆಯರು ತಮ್ಮ ಸಂಗಾತಿ ಬಿಸ್ನೆಸ್ ಟ್ರಿಪ್‌ಗೆ ಹೋದಾಗ ಮೋಸ ಮಾಡುವುದಾಗಿ ಹೇಳಿದ್ದಾರೆ. ಈಗಂತೂ ಬಹುತೇಕ ಮನೆಗಳಲ್ಲಿ ಇಬ್ಬರಲ್ಲೊಬ್ಬರು ಕೆಲಸ ಎಂದು ಒಂದಿಲ್ಲೊಂದು ನಗರಕ್ಕೆ ಹೋಗುತ್ತಲೇ ಇರುವಾಗ ಹೊರಗೊಂದು ಅಫೇರ್ ಹೊಂದುವ ವಿಷಯ ಅಪರೂಪವಲ್ಲ. 
- ಪತಿಗೆ ವಂಚಿಸುವ ಶೇ.31ರಷ್ಟು ಮಹಿಳೆಯರು ತಾವು ಅಕ್ಕಪಕ್ಕದ ಮನೆಯವರೊಡನೆ ಸಂಬಂಧ ಹೊಂದಿರುವುದಾಗಿ ಹೇಳಿದ್ದಾರೆ. 
ಇವೆಲ್ಲ ನೋಡಿದಾಗ ವಿವಾಹಗಳು ಸ್ವರ್ಗದಲ್ಲಿ ಆಗುತ್ತವೆಂಬ ಮಾತಿದೆ. ಅದು ಭೂಮಿಗೆ ಬರುತ್ತಲೇ ಮೋಸ, ವಂಚನೆಯಿಂದ ಕೂಡುತ್ತವಿರಬೇಕು ಎನಿಸದಿರದು. 


 

click me!