
ಪೆನ್ಸಿಲ್ವೇನಿಯಾದಲ್ಲಿ ಒಬ್ಬಳು 20 ವರ್ಷದ ವಿದ್ಯಾರ್ಥಿನಿ ಇದ್ದಾಳೆ. ಈಕೆಗೆ ಹುಟ್ಟುವಾಗಲೇ ಎರಡು ಯೋನಿಗಳಿದ್ದವು. ಈಕೆ ವಯಸ್ಸಿಗೆ ಬಂದಾಗ, ಎಲ್ಲರಂತೆಯೇ ಈಕೆಗೂ ಮುಟ್ಟು ಆಗಲು ಶುರುವಾಯಿತು. ಆದರೆ ತುಂಬಾ ಇರ್ರೆಗ್ಯುಲರ್ ಆಗಿ, ಅನಿಯಮಿತವಾಗಿ ಮುಟ್ಟು ಆಗತೊಡಗಿತು. ಇದೇನು ಎಂದು ಆಕೆಗೆ ಅರ್ಥವೇ ಆಗಲಿಲ್ಲ. ಇದು ಮುಂದುವರಿದರೂ ಆಕೆ ಪರಿಶೀಲನೆಗೆ ಹೋಗಲಿಲ್ಲ.
ಇದು ಗೊತ್ತಾದದ್ದು ಆಕೆಗೆ ಹದಿನೆಂಟು ವರ್ಷ ಆದಾಗ. ಆಕೆಯನ್ನು ಪರಿಶೀಲಿಸಿದ ವೈದ್ಯರು, ಈಕೆಯ ಎರಡು ಪೀರಿಯೆಡ್ಸ್‌ಗೆ ಕಾರಣ ಪತ್ತೆ ಹಚ್ಚಿದರು. ಎಂಆರ್ಐ ಸ್ಕ್ಯಾನಿಂಗ್ ಮಾಡಿದಾಗ, ಆಕೆಯಲ್ಲಿ ಎರಡು ಯೋನಿಗಳಿರುವುದು ಗೊತ್ತಾಯಿತು. ಅಚ್ಚರಿಗೊಂಡ ವೈದ್ಯರು ಮತ್ತಷ್ಟು ಪರಿಶೀಲಿಸಲಾಗಿ, ಎರಡು ಗರ್ಭಕೋಶ ವ್ಯವಸ್ಥೆಯೇ ಆಕೆಯಲ್ಲಿರುವುದು ಕಂಡುಬಂತು. ಆಕೆಯ ಪೀರಿಯಡ್ಸ್ ನಿಜಕ್ಕೂ ಅನಿಯಮಿತವಾಗಿರಲಿಲ್ಲ. ಬದಲಾಗಿ, ತಿಂಗಳಿಗೆ ಎರಡು ಬಾರಿ ಮುಟ್ಟು ಆಗುತ್ತಿತ್ತು. ಎರಡು ಗರ್ಭಕೋಶಗಳಿರುವ ಕಾರಣ ಆಕೆಗೆ ಹೀಗಾಗುತ್ತಿದೆ.
ಈಕೆಯ ಹೆಸರು ಪೈಗೆ ಡೀಏಂಜೆಲೊ, ಈ ಸಮಸ್ಯೆಯನ್ನು ವೈದ್ಯರು ಯುಟೆರೈನ್ ಡಿಡೆಲ್ಫಿಸ್ ಎಂದು ಕರೆದಿದ್ದಾರೆ. ವೈದ್ಯರಿಗೂ ಇಂಥ ಪ್ರಕರಣಗಳು ಹೊಸದು, ಇದು ಹತ್ತು ಕೋಟಿಗೊಬ್ಬರಲ್ಲೂ ಕಂಡುಬರುವುದಿಲ್ಲ. ಹೀಗಾಗಿ ಇದನ್ನು ಪೂರ್ತಿ ಅರ್ಥ ಮಾಡಿಕೊಳ್ಳಲು ತಜ್ಞರು ಇನ್ನೂ ಹೆಣಗುತ್ತಿದ್ದಾರೆ.
ಮಹಿಳೆಯರಲ್ಲಿ ಕಾಡುವ ಹಾರ್ಮೋನ್ ಅಸಮತೋಲನ, ಮುಟ್ಟಿನ ಬದಲಾವಣೆಗೆ ಪರಿಹಾರವೇನು..? ...
ಮತ್ತೊಂದು ವಿಚಿತ್ರ ಗೊತ್ತೇ? ಈಕೆ ಎಲ್ಲಾದರೂ ಗರ್ಭಿಣಿಯಾದರೆ, ಆಗಲೂ ಆಕೆ ತಿಂಗಳು ತಿಂಗಳು ತಪ್ಪದೆ ಮುಟ್ಟಾಗಬಹುದು. ಹಾಗೂ ಒಂದು ಮಗು ಹೊಟ್ಟೆಯಲ್ಲಿರುವಾಗಲೇ ಇನ್ನೊಂದು ಭ್ರೂಣ ಉಂಟಾಗಲೂ ಕಾರಣವಾಗಬಹುದು. ಆದರೆ ಇದು ಅಪಾಯಕಾರಿ ಎಂದಿದ್ದಾರೆ ವೈದ್ಯರು. ಯಾಕೆಂದರೆ ಆಕೆಯ ಎರಡು ಗರ್ಭಕೋಶ ಹಾಗೂ ಗರ್ಭನಾಳಗಳು ಸಾಮಾನ್ಯರಲ್ಲಿ ಇರುವುದಕ್ಕಿಂತ ಕಿರಿದಾಗಿವೆ. ಆದ್ದರಿಂದಲ ಏಕಕಾಲಕ್ಕೆ ಎರಡರಲ್ಲಿ ಗರ್ಭ ಹೊತ್ತರೆ ಶಿಶುಗಳಿಗೂ, ಆಕೆಗೂ ಸಮಸ್ಯೆ ಉಂಟಾಗಬಹುದು. ಹೀಗಾಗಿ ಎಚ್ಚರದಿಂದಿರುವಂತೆ ಹೇಳಿದ್ದಾರೆ.
ಈಕೆ ವಿದ್ಯಾವಂತೆ. ಆಕೆ ಒಂದು ಟಿವಿ ಚಾನೆಲ್‌ನಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡುತ್ತಿದ್ದಾಳೆ. ಇತ್ತೀಚೆಗೆ ಇನ್‌ಸ್ಟಗ್ರಾಂ, ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಖಾತೆ ತೆರೆದಿದ್ದು, ಅಲ್ಲಿ ತನ್ನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾಳೆ. ಆಕೆಗೆ ಅಲ್ಲಿ ಸುಮಾರು 3 ಲಕ್ಷ ಫಾಲೋವರ್‌ಗಳು ಕೂಡ ಇದ್ದಾರಂತೆ. ಇವಳಂತೆಯೇ ಸಮಸ್ಯೆ ಇರುವ ಕೆಲವರು ಕೂಡ ಆಕೆಯನ್ನು ಸಂಪರ್ಕಿಸಿದ್ದು, ಅವರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾಳೆ.
ಯಾವ ಬಗೆಯ ಸ್ತನಗಳಿಗೆ ಯಾವ ಬಗೆಯ ಬ್ರಾ? ...
ಸೋಶಿಯಲ್ ಸೈಟ್‌ಗಳಲ್ಲಿ ಆಕೆಯನ್ನು ಕಾಳಜಿಯಿಂದ ಮಾತನಾಡಿಸುವವರ ಜೊತೆಗೆ ಆಕೆಯ ದೇಹಸ್ಥಿತಿಯ ಬಗ್ಗೆ ಕೆಟ್ಟ ಕುತೂಹಲ ತೋರಿಸುವವರೂ ಇದ್ದಾರೆ. ಹೆಚ್ಚಿನವರು ತಪ್ಪು ಕಲ್ಪನೆ ಹೊಂದಿದ್ದಾರೆ. ಅಂದರೆ ಈಕೆಯ ಎರಡೂ ಯೋನಿಗಳು ಮೇಲ್ನೋಟಕ್ಕೆ ಕಾಣಬಹುದು ಎಂದುಕೊಂಡಿದ್ದಾರೆ. ಆದರೆ ಹಾಗಿಲ್ಲ. ಮೇಲ್ನೋಟಕ್ಕೆ ಈಕೆ ಎಲ್ಲರ ಹಾಗೆಯೇ, ನಾರ್ಮಲ್ ಆಗಿರುವ ಹೆಣ್ಣು. ಯೋನಿಗಳು ಕೂಡ ಒಂದರ ಪಕ್ಕ ಒಂದು ಅಥವಾ ಒಂದಕ್ಕಿಂತ ಬೇರೆಯಾಗಿ ಇನ್ನೊಂದಿಲ್ಲ. ಮೇಲ್ನೋಟಕ್ಕೆ ಒಂದೇ ಯೋನಿಯಂತೆ ತೋರುತ್ತದೆ ಹಾಗೂ ಅದನ್ನು ಎರಡಾಗಿ ಪ್ರತ್ಯೇಕಿಸುವ ಒಂದು ತೆಳುವಾದ ಪೊರೆ ಇದೆ. ಈಕೆಗೊಬ್ಬ ಬಾಯ್‌ಫ್ರೆಂಡ್ ಇದ್ದಾನೆ. ಆತನ ಜೊತೆಗೆ ಆಕೆಯ ಲೈಂಗಿಕ ಜೀವನವೂ ಚೆನ್ನಾಗಿಯೇ ಇದೆ. ಆತನಿಗೂ ಇವಳಿಗೆ ಎರಡು ಯೋನಿಗಳಿರುವ ಸಂಗತಿ ಆಕೆ ಹೇಳುವವರೆಗೂ ಅರಿವಿಗೆ ಬಂದೇ ಇಲ್ಲ.
ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಪೈಗೆಗೆ ಸ್ಪಷ್ಟತೆ ಇಲ್ಲ. ಆಕೆಯೂ ಗೊಂದಲದಲ್ಲಿದ್ದಾಳೆ. ಈ ವಿಷಯ ತಿಳಿದಾಗ ಆಕೆಗೆ ದುಃಖವಾಯಿತಂತೆ. ಎಲ್ಲರಂತೆ ತಾನೂ ಮದುವೆಯಾಗಿ, ಮಕ್ಕಳು ಮಾಡಿಕೊಂಡು ಸಾಮಾನ್ಯ ಸಂಸಾರಿಯಾಗಿ ಬದುಕಬೇಕು ಎಂದುಕೊಂಡಿದ್ದಳಂತೆ. ಆದರೆ ಇವಳೀಗ ಇರುವ ಸ್ಥಿತಿಯಲ್ಲಿ ಮಕ್ಕಳನ್ನು ಹೆರುವುದು ಕಷ್ಟವೇ. ಗರ್ಭಧಾರಣೆ ತಡೆಯುವ ಕ್ರಮಗಳಲ್ಲಿ ಯಾವುದನ್ನು ಅನುಸರಿಸಬೇಕು ಎಂಬುದು ಕೂಡ ಈಕೆಗೆ ತಿಳಿಯದು.
ಮಹಿಳೆಯ ಕಾಂಡೋಮ್‌ಗೆ ಹೆಚ್ಚಾದ ಬೇಡಿಕೆ, ಪುರುಷರು ಫುಲ್ ಖುಶ್! ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.