Asianet Suvarna News Asianet Suvarna News

ಯಾವ ಬಗೆಯ ಸ್ತನಗಳಿಗೆ ಯಾವ ಬಗೆಯ ಬ್ರಾ?

ಬ್ರಾ ಧರಿಸುವುದರಿಂದ ಸ್ತನಗಳು ಜೋತು ಬೀಳಬಾರದು; ಅಥವಾ ಎದೆ ಬಿಗಿದಂತೆಯೂ ಆಗಬಾರದು. ಹಿತಕರವಾದ ಫೀಲ್ ಕೊಡಲು, ಆರೋಗ್ಯಕರವಾಗಿರಲು ನಿಮ್ಮ ಸ್ತನಗಳ ಸ್ವರೂಪಕ್ಕೆ ತಕ್ಕ ಬ್ರಾ ಧರಿಸಿ.

What type of Bra you should wear according to your breast
Author
Bengaluru, First Published Jul 1, 2021, 9:43 AM IST

ಈಗ ಟ್ರೆಂಡ್‌ನಲ್ಲಿ ಒಟ್ಟು ಹದಿನಾರು ಬಗೆಯ ಬ್ರಾಗಳಿವೆ. ಎದೆ ಗಾತ್ರಕ್ಕೆ ತಕ್ಕ ಹಾಗೆ ಈ ಬ್ರಾಗಳನ್ನು ಧರಿಸಬಹುದು. ಇದರಿಂದ ಪ್ರಯೋಜನಗಳೂ ಅಧಿಕ. ಸ್ತನಗಳಿಗೆ ಆಧಾರ ಸಿಕ್ಕಿ ಕಂಫರ್ಟ್‌ ಫೀಲ್ ಇರುತ್ತೆ ಅನ್ನೋದು ಒಂದು ಕಾರಣ ಆದರೆ ಎದೆ ಜೋತುಬೀಳದ ಹಾಗೆ ತಡೆಯೋದು, ಸ್ತನಗಳಿಗೆ ಸುಂದರ ಶೇಪ್ ಕೊಡೋದು ಮತ್ತೊಂದು ಕಾರಣ.

ಸರಿಯಾಗಿ ಹೊಂದದ ಬ್ರಾ ಧರಿಸೋದರಿಂದ ಚರ್ಮದ ಸಮಸ್ಯೆ, ಸ್ತನಗಳು ಶೇಪ್‌ಔಟ್‌ ಆಗೋದು ಸೇರಿ ಹಲವು ಸಮಸ್ಯೆಗಳಾಗುತ್ತವೆ. ಇಲ್ಲಿ ಸ್ತನಗಳ ಗಾತ್ರ, ಶೇಪ್‌ಗೆ ತಕ್ಕಂಥಾ ಬ್ರಾಗಳ ವಿವರ ಇದೆ. ಆನ್‌ಲೈನ್‌ ನಲ್ಲೂ ಇವುಗಳನ್ನು ಖರೀದಿಸಬಹುದು.

1. ಬಾಲ್ಕೊನೇಟ್‌ ಬ್ರಾ

ಸಣ್ಣ ಹಾಗೂ ಮಧ್ಯಮ ಎದೆಗಾತ್ರ ಹೊಂದಿದ್ದವರಿಗೆ ಇದು ಸರಿಯಾಗುತ್ತದೆ. ಸ್ತನಗಳನ್ನು ಕೊಂಚ ಮೇಲಕ್ಕೆತ್ತುವ ಈ ಬ್ರಾಗಳು ಕಂಫರ್ಟ್‌ ಫೀಲ್‌ಕೊಡುತ್ತವೆ. ಎದೆಸೀಳೂ ಸೇರಿಸಿ ಇಡೀ ಎದೆಯ ಭಾಗವನ್ನು ಕವರ್‌ ಮಾಡುವ ಈ ಬ್ರಾಗಳ ಪಟ್ಟಿಯೂ ಆಕರ್ಷಕ. ಸಖತ್‌ ಸೆಕ್ಸಿ ಲುಕ್ ನೀಡುವ ಈ ಬ್ರಾಗಳನ್ನು ನಿತ್ಯ ಬಳಕೆಗೂ ಬಳಸಬಹುದು. ಲೋ ನೆಕ್‌ಲೈನ್‌ ಇರುವ ಉಡುಗೆಗಳಿಗೂ ಬಳಸಬಹುದು.

2. ಪ್ಲಂಗ್ ಬ್ರಾ

ಎದೆಸೀಳನ್ನು ತೋರಿಸೋ ಉಡುಗೆಗಳಿಗೋಸ್ಕರ ಸಿದ್ಧಪಡಿಸಿರೋ ಬ್ರಾ. ಇದನ್ನ ಸೆಲೆಬ್ರಿಟಿಗಳು ಹೆಚ್ಚಾಗಿ ಬಳಸುತ್ತಾರೆ. ಪ್ಲಂಗ್ ಅಂದರೆ ಧುಮುಕು, ಹಾರಿಬೀಳು ಅನ್ನೂ ರೀತಿಯ ಅರ್ಥಗಳಿವೆ. ಸ್ತನಗಳ ಚಲನೆಗೆ ಅವಕಾಶ ಕೊಡೋ ಈ ಬ್ರಾಗಳು ಸಖತ್ ಸೆಕ್ಸಿ ಏನೋ ಹೌದು. ಆದರೆ ಹಾಕ್ಕೊಳ್ಳೋಕೆ ಕೊಂಚ ಎದೆಗಾರಿಕೆ ಬೇಕು. ಸಹಜವಾಗಿ ಎದೆಗಾತ್ರ ಹೇಗಿದೆಯೋ ಹಾಗೆ ತೋರಿಸೋ ದಿಟ್ಟ ಬ್ರಾಗಳಿವು.

ಮಗುವಿಗೆ ಸ್ತನ್ಯಪಾನ ಮಾಡಿಸುವ ತಾಯಂದಿರು ಈ ಆಹಾರ ಅವಾಯ್ಡ್ ಮಾಡಿ ...

3. ಅಂಡರ್‌ ವೈರ್ ಬ್ರಾ

ಹೆಸರೇ ಹೇಳುವಂತೆ ಈ ಬ್ರಾಗಳ ಸುತ್ತಲೂ ಸಣ್ಣ ವಯರ್‌ ಇದ್ದು ಎದೆಯ ಸುತ್ತಳತೆಯನ್ನು ಆವರಿಸಿ ನಿಲ್ಲುತ್ತದೆ. ಕೊಂಚ ಜೋತುಬಿದ್ದಂಥಾ ಎದೆಗಳನ್ನುಲಿಫ್ಟ್ ಮಾಡುತ್ತವೆ. ಮಧ್ಯಮ ಗಾತ್ರದ ಸ್ತನಗಳಿಗೆ ಉತ್ತಮ. ಈ ವೈರೈಟಿ ಬ್ರಾಗಳಲ್ಲಿ ಸರಿಯಾದ ಸೈಜನ್ನೇ ಆರಿಸಿಕೊಳ್ಳಬೇಕು. ಸೈಜ್‌ನಲ್ಲಿ ಕೊಂಚ ವ್ಯತ್ಯಾಸ ಆದರೂ ಸ್ತನಗಳ ಗಾತ್ರ ವಿಚಿತ್ರವಾಗಿ ಕಂಡು ಕಸಿವಿಸಿಯಾಗುತ್ತದೆ.

What type of Bra you should wear according to your breast

ಇದರಲ್ಲಿ ನಾನ್ ವೈರ್ಡ್ ಬ್ರಾ ಅನ್ನೋ ಮತ್ತೊಂದು ವೆರೈಟಿ ಇದೆ. ಅದರಲ್ಲಿ ಈ ವೈರ್‌ನ ಬದಲಿಗೆ ಸ್ತನದ ಸುತ್ತ ಎತ್ತಿ ಹಿಡಿಯುವಂಥಾ ಸ್ಟ್ರಾಪ್ ಗಳನ್ನು ವಿನ್ಯಾಸ ಮಾಡಿರುತ್ತಾರೆ. 

4. ಬ್ರಾಲೆಟ್

ಇದನ್ನು ಲೇಸಿನ ವಿನ್ಯಾಸದಲ್ಲಿ ಡಿಫರೆಂಟ್ ಆಗಿ ಡಿಸೈನ್ ಮಾಡಿರುತ್ತಾರೆ. ಸ್ಪೆಷಲ್ ಸಂದರ್ಭಗಳಲ್ಲಿ, ಪೇಜ್ ೩ ಪಾರ್ಟಿಗಳಲ್ಲಿ ಇದನ್ನೇ ಬ್ಲೌಸ್ ಬದಲಿಗೆ ಸೆಕ್ಸಿಯಾಗಿ ಧರಿಸೋದೂ ಇದೆ. ಸ್ತನಗಳಿಗಾಗಿ ಸಪರೇಟ್ ಕಪ್‌ ಅಥವಾ ಶೇಪ್‌ಗಳಿಲ್ಲದ ಈ ಬ್ರಾಲೆಟ್‌ಅನ್ನು ಧರಿಸಿ ಇದರ ಮೇಲಿಂದ ಬ್ಲೇಸರ್ಸ್ ಅಥವಾ ಟ್ರೌಸರ್ಸ್ ಹಾಕಿಕೊಂಡರೂ ಚೆನ್ನಾಗಿರುತ್ತೆ. ಡೀಪ್‌ ನೆಕ್‌ ಲೈನ್‌ ಇರುವ ಟಾಪ್‌ಗಳ ಜೊತೆಗೆ, ಪಾರದರ್ಶಕ ಶೀರ್‌ ಟಾಪ್‌ಗಳ ಒಳಗೆ ಈ ಬ್ರಾ ಧರಿಸಬಹುದು. ಇದು ಅತ್ತ ಸಣ್ಣವೂ ಅಲ್ಲದ, ಇತ್ತದ ಹೆವ್ವೀ ಸ್ತನಗಳೂ ಅಲ್ಲದ ನಾರ್ಮಲ್‌ ಸ್ತನಗಳಿಗೆ ಹೊಂದುತ್ತದೆ.

ಇಲ್ಲಿನ ಮಹಿಳೆಯರಿಗಿನ್ನು ಒಬ್ಬನಿಗಿಂತ ಹೆಚ್ಚು ಗಂಡನ ಪಡೆಯೋ ಅವಕಾಶ ...

5. ಡೆಮಿ ಕಪ್

ಇದು ಬಾಲ್ಕೊನೇಟ್ ಬ್ರಾದಂತೇ ಇರುತ್ತೆ. ಆದರೆ ಬ್ರಾದ ಒಳಗೆ ಕಪ್‌ನ ವಿನ್ಯಾಸವಿದ್ದು ಸ್ತನಗಳು ಕಪ್‌ನ ಒಳಗೆ ಕೂರುವಂತೆ ಸಪೋರ್ಟ್ ಕೊಡುತ್ತವೆ. ಟೀ ಶರ್ಟ್‌ ಧರಿಸುವಾಗ ಈ ಬ್ರಾ ಧರಿಸಬಹುದು. ಸ್ತನಗಳಿಗೆ ಸಾಮಾನ್ಯ ಲುಕ್ ನೀಡುತ್ತವೆ ಈ ಡೆಮಿ ಕಪ್ ಬ್ರಾಗಳು. ಕ್ಯಾಶ್ಯುವಲ್‌ ಟಾಪ್, ಟೀ ಶರ್ಟ್ ಜೊತೆಗೆ ಧರಿಸಬಹುದು.

6. ಲಾಂಗ್‌ಲೈನ್ ಬ್ರಾ

ಇವು ಹೆಸರಿನಲ್ಲಿರುವಂತೆ ಎದೆಯನ್ನು ಆವರಿಸಿ ಹಿಂಭಾಗದವರೆಗೂ ಆವರಿಸುವಷ್ಟು ಉದ್ದವಾಗಿರುತ್ತವೆ. ಸ್ತನಗಳು ಕ್ಯೂಟ್ ಶೇಪ್‌ನಲ್ಲಿ ಕಾಣಲು ಈ ಬ್ರಾ ಬಳಸಲಾಗುತ್ತೆ. ಇದನ್ನು ವಿಶೇಷ ಸಂದರ್ಭಗಳಲ್ಲಿ ಅಂದರೆ ರಿಸೆಪ್ಶನ್‌ಗೆ ಬ್ರೈಡಲ್‌ವೇರ್ ಧರಿಸುವಾಗ ಹಾಕಿಕೊಳ್ಳೋದು ರೂಢಿ.

7.ಪುಶ್‌ಅಪ್ ಬ್ರಾ

ಜಗತ್ತಿನಲ್ಲಿ ಅತೀ ಹೆಚ್ಚು ಮಂದಿ ಬಳಸೋ ಬ್ರಾಗಳಿವು. ಇವು ಸ್ತನಗಳನ್ನುಮೇಲಕ್ಕೆತ್ತಿ ಬಿಗಿಯಾಗಿರುವಂತೆ ತೋರಿಸುತ್ತವೆ. ಸ್ತನಗಳು ಇರುವ ಗಾತ್ರಕ್ಕಿಂತಲೂ ಕೊಂಚ ದೊಡ್ಡವಾಗಿ ತೋರಿಸುತ್ತವೆ. ವೈರ್ಡ್, ನಾನ್ ವೈರ್ಡ್ ಆಪ್ಶನ್ ಈ ಬಗೆಯ ಬ್ರಾಗಳಲ್ಲಿವೆ.

ಮಹಿಳೆಯ ಕಾಂಡೋಮ್‌ಗೆ ಹೆಚ್ಚಾದ ಬೇಡಿಕೆ, ಪುರುಷರು ಫುಲ್ ಖುಶ್! ...

ಹೆವ್ವಿ ಅಥವಾ ಅಧಿಕ ಗಾತ್ರ ಸ್ತನ ಹೊಂದಿರುವವರು ಇದನ್ನು ಅವಾಯ್ಡ್ ಮಾಡಬಹುದು. ಕೆಲವೊಂದು ಸನ್ನಿವೇಶದಲ್ಲಿ ಸ್ತನಗಳು ಶೇಪ್ ಇರುವಂತೆ ಕಾಣಲು ಧರಿಸಿದರೂ ಅಭಾಸ ಎನಿಸದು. ಹೆಚ್ಚಿನವರು ಇದನ್ನು ನಿತ್ಯ ಬಳಕೆಗೆ ಬಳಸುತ್ತಾರೆ. 

Follow Us:
Download App:
  • android
  • ios