ಜಮೀನು ಮಾರಿ ಪತ್ನಿ ಕಲಿಕೆಗೆ ನೆರವಾಗಿದ್ದ ಗಂಡ, ಕಾನ್ಸ್‌ಟೇಬಲ್‌ ಆದ ನಂತ್ರ ಹೆಂಡ್ತಿ ಮಾಡಿದ್ದೇನು ನೋಡಿ!

By Vinutha Perla  |  First Published Jul 11, 2023, 4:02 PM IST

ಓದಿಸಿ, ಸರ್ಕಾರಿ ಅಧಿಕಾರಿ ಮಾಡಿದ ಗಂಡನ ಮೇಲೆಯೇ ವರದಕ್ಷಿಣೆ ಆರೋಪ ಮಾಡಿ ಜೈಲಿಗಟ್ಟಿದ SDM ಜ್ಯೋತಿ ಮೌರ್ಯರ ಪ್ರಕರಣದ ಬೆನ್ನಲ್ಲೇ ಈಗ ಅಂಥಹದ್ದೇ ಇನ್ನೊಂದು ಘಟನೆ ವರದಿಯಾಗಿದೆ. ಮಹಿಳೆ ಕಾನ್‌ಸ್ಟೇಬಲ್‌ ಆದ ಮೇಲೆ ಪತಿ-ಮಗುವನ್ನೇ ತೊರೆದು ಹೋಗಿದ್ದಾಳೆ,


ಪತ್ನಿಯನ್ನು ಓದಿಸಿ ಆಕೆಯನ್ನು ಸರ್ಕಾರಿ ಅಧಿಕಾರಿಯನ್ನಾಗಿ ಮಾಡಿದ ಪತಿಗೆ, ಪತ್ನಿ ಅಕ್ರಮ ಸಂಬಂಧವೆಸಗಿ ಮೋಸ ಮಾಡಿದ ಅಲೋಕ್‌ ಮೌರ್ಯ ಹಾಗೂ ಜ್ಯೋತಿ ಮೌರ್ಯ ಪ್ರಕರಣ ಇತ್ತೀಚಿಗೆ ಎಲ್ಲೆಡೆ ಸಂಚಲವನ್ನು ಸೃಷ್ಟಿಸಿತ್ತು. ಸದ್ಯ ಅದರ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಂಥದ್ದೇ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಪ್ರಯಾಗ್‌ರಾಜ್ ನ ಮೇಜಾದಲ್ಲಿ ಈ ಘಟನೆ ನಡೆದಿದೆ. ತನ್ನ ಪತ್ನಿ ರೇಷ್ಮಾ ಯುಪಿ ಪೊಲೀಸ್‌ ನಲ್ಲಿ ಕಾನ್ಸ್‌ಟೇಬಲ್ ಆಗಿ ಆಯ್ಕೆಯಾದ ಬಳಿಕ ತನ್ನನು ತೊರೆದಿದ್ದಾಳೆ ಎಂದು ಪತಿ ರವೀಂದ್ರ‌ ಆರೋಪಿಸಿದ್ದಾರೆ. 

2017ರಲ್ಲಿ‌ ಕಾಲಿಟ್ಟ ರವೀಂದ್ರ - ರೇಷ್ಮಾ ಮದುವೆ (Marriage)ಯಾದರು. ಮದುವೆಯಾಗಿ ಅವರ ಸಂಬಂಧ (Relationship) ಒಂದು ವರ್ಷದವರೆಗೂ ಚೆನ್ನಾಗಿಯೇ ಇತ್ತು. ಈ ಸಂದರ್ಭದಲ್ಲಿ ರವೀಂದ್ರ ಉತ್ತರ ಪ್ರದೇಶದ ಹೊರಗಿರುವ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ರೇಷ್ಮಾ ಮನೆಯಲ್ಲಿಯೇ ಇದ್ದು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.

Tap to resize

Latest Videos

ಗಂಡನ ಮೇಲೆ ಸುಳ್ಳು ವರದಕ್ಷಿಣೆ ಆರೋಪ ಮಾಡಿದ್ದ ಸರ್ಕಾರಿ ಅಧಿಕಾರಿ ಜ್ಯೋತಿ ಮೌರ್ಯ ಸಸ್ಪೆಂಡ್‌

ಕಾನ್ಸ್‌ಟೇಬಲ್ ಕೆಲಸ ಸಿಕ್ಕ ಬಳಿಕ ಗಂಡನಿಗೆ ಮೋಸ
ಪತ್ನಿ ರೇಷ್ಮಾಳಿಗೆ ಯುಪಿ ಪೊಲೀಸ್‌ ನಲ್ಲಿ ಕಾನ್ಸ್‌ಟೇಬಲ್ ಆಗುವ ಕನಸು ಇತ್ತು. ಅದಕ್ಕಾಗಿ ನಾನು ಆಕೆಯ ಶಿಕ್ಷಣಕ್ಕಾಗಿ ನನ್ನ ಒಂದು ಜಮೀನು ಮಾರಿದೆ. ಪದವಿ ಶುಲ್ಕ ಪಾವತಿಸಿ ಆಕೆಯ ಶಿಕ್ಷಣಕ್ಕೆ (Education) ಬೆಂಬಲ ನೀಡಿದ್ದೆ. ಆದರೆ ಕಾನ್ಸ್‌ಟೇಬಲ್ ಕೆಲಸ ಸಿಕ್ಕ ಬಳಿಕ ಆಕೆ ನನಗೆ ದ್ರೋಹ ಮಾಡಿರುವುದಾಗಿ ರವೀಂದ್ರ ಹೇಳಿದ್ದಾರೆ. 

ಮಾತ್ರವಲ್ಲ ರೇಷ್ಮಾ ಯುಪಿ ಪೊಲೀಸ್‌ ನಲಿ ಆಯ್ಕೆಯಾದ ಬಳಿಕ ಆಕೆ ನನ್ನಿಂದ ಅಂತರ ಕಾಯ್ದುಕೊಂಡಳು ಎಂದು ರವೀಂದ್ರ ತಿಳಿಸಿದ್ದಾರೆ. ಪತಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರೇಷ್ಮಾ, 'ರವೀಂದ್ರ ನನ್ನ ಮೇಲೆ ಅನೇಕ ಬಾರಿ ದೈಹಿಕವಾಗಿ ಹಲ್ಲೆಗೈದಿದ್ದಾರೆ. ಅವಮಾನ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾರಿಗೂ ಹೇಳದೆ ಸುಮ್ಮನಿದ್ದೆ. ಅವರು ಮಾಡಿರುವ ಆರೋಪಗಳೆಲ್ಲ ನಿರಾಧಾರವಾಗಿದೆ' ಎಂದಿದ್ದಾರೆ.

ಎರಡು ಮಕ್ಕಳ ತಾಯಿಗೆ ಮೂರು ಮಕ್ಕಳ ತಂದೆ ಮೇಲೆ ಪ್ರೀತಿ! ಪತಿಗೆ ಗೊತ್ತಾದ್ಮೇಲೆ?

ರವೀಂದ್ರ ಮತ್ತು ರೇಷ್ಮಾ ಗಾಜಿಪುರಕ್ಕೆ ಹೋಗಿದ್ದರು. ರವೀಂದ್ರ ರೇಷ್ಮಾ ಅವರೊಂದಿಗೆ ವಾಪಾಸ್‌ ಬಂದಿರಲಿಲ್ಲ. ರವೀಂದ್ರ ಅವರ ಕುಟುಂಬ ಅಹಿತಕರ ಘಟನೆ ನಡೆದಿರಬಹುದು ಎಂದು ಶಂಕಿಸಿ ಈ ಬಗ್ಗೆ ಮೇಜಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ರವೀಂದ್ರ ಅವರ ತಾಯಿ ಮಾತನಾಡಿ, 'ರೇಷ್ಮಾಳನ್ನು ಮಗಳಂತೆ ನೋಡಿಕೊಂಡೆವು. ಆಕೆಗೆ ಶಿಕ್ಷಣ ಕೊಡಿಸಿದೆವು. ಆದರೆ ಆಕೆ ಮೋಸ ಮಾಡಿದಳು' ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ರೇಷ್ಮಾ ಹಿಂತಿರುಗಲು ನಿರ್ಧರಿಸಿದರೆ ಭವಿಷ್ಯದ ಯಾವುದೇ ಕೌಟುಂಬಿಕ ಸಮಸ್ಯೆಗಳನ್ನು ತಪ್ಪಿಸಲು ಸಿದ್ಧವಿದ್ದೇವೆ' ಎಂದಿದ್ದಾರೆ. ರವೀಂದ್ರ ಸಹ, 'ಇದೀಗ ಪತ್ನಿಯನ್ನು ನಾನು ಕ್ಷಮಿಸಲು ಸಿದ್ದನಾಗಿದ್ದೇನೆ. ಆಕೆ ನಾನೊಂದಿಗೆ ಮತ್ತೆ ಬರಲಿ' ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ರೇಷ್ಮಾ ಬಳಿ, ಪತಿಯೊಂದಿಗೆ ಮತ್ತೆ ಒಂದಾಗಲು ನೀವು ಸಿದ್ಧರಿದ್ದೀರಾ ಎಂದು ಕೇಳಿದಾಗ, ರವೀಂದ್ರ ತನಗೆ ಮಾಡಿದ ಅವಮಾನಕ್ಕೆ ಕ್ಷಮೆ ಕೇಳಿ ಗೌರವದಿಂದ ನಡೆದುಕೊಂಡರೆ ಆತನೊಂದಿಗೆ ಹೋಗಲು ಸಿದ್ದನೆಂದು ರೇಷ್ಮಾ ತಿಳಿಸಿದ್ದಾರೆ.

click me!