ಯೋನಿ ಸೋಂಕು 10ರಲ್ಲಿ ಐದು ಮಂದಿ ಮಹಿಳೆಯರನ್ನು ಕಾಡುತ್ತದೆ. ತುರಿಕೆ, ಉರಿ ಸೇರಿದಂತೆ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಈ ಸಮಸ್ಯೆ ಮಧ್ಯೆಯೇ ಶಾರೀರಿಕ ಸಂಬಂಧ ಬೆಳೆಸುವ ಮಹಿಳೆಯರು ಬಹಳಷ್ಟು ತಿಳಿದಿರಬೇಕು.
ಮಹಿಳೆಯರು ಹೆಚ್ಚಾಗಿ ಯೋನಿ ಸೋಂಕಿನಿಂದ ಬಳಲುತ್ತಾರೆ. ತುರಿಕೆ, ಉರಿ, ದಟ್ಟವಾದ ವಾಸನೆ ಸೇರಿದಂತೆ ಅನೇಕ ಸಮಸ್ಯೆ ಇದ್ರಲ್ಲಿ ಉಂಟಾಗುತ್ತದೆ. ಯೋನಿಯಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಹೇಳಿಕೊಳ್ಳಲು ಬಹುತೇಕ ಮಹಿಳೆಯರು ಹಿಂಜರಿಯುತ್ತಾರೆ. ವೈದ್ಯರ ಬಳಿ ಹೋಗದೆ, ಸಂಗಾತಿಗೂ ತಿಳಿಸದೆ ಯೋನಿ ಸೋಂಕಿನ ಮಧ್ಯೆ ಶಾರೀರಿಕ ಸಂಬಂಧ ಬೆಳೆಸುವವರಿದ್ದಾರೆ. ಈ ಸಮಯದಲ್ಲಿ ಸಂಗಾತಿ ಜೊತೆ ದೈಹಿಕ ಸಂಬಂಧ ಬೆಳೆಸುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಮಹಿಳೆ (Women ) ಯರಿಗೆ ನಾನಾ ಕಾರಣಕ್ಕೆ ಯೋನಿ (Vagina) ಸೋಂಕು ಕಾಡುತ್ತದೆ. ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಕೊರತೆ ಇದಕ್ಕೆ ಮುಖ್ಯ ಕಾರಣ. ಇದಲ್ಲದೆ ಕೊಳಕಾಗಿರುವ ಒಳ ಉಡುಪಿನ ಬಳಕೆ ಹಾಗೂ ಸಾರ್ವಜನಿಕ ಶೌಚಾಲಯದ ಬಳಕೆ ಸೇರಿದಂತೆ ಅನೇಕ ಕಾರಣಕ್ಕೆ ಮಹಿಳೆಯರು ಯೋನಿ ಸೋಂಕಿಗೆ ಒಳಗಾಗ್ತಾರೆ. ಯೋನಿ ಸೋಂಕಿ (Infection) ನ ರೋಗ ಲಕ್ಷಣ ಅಹಿತಕರವಾಗಿರುತ್ತದೆ. ದಿನವಿಡಿ ತುರಿಕೆ, ಉರಿಯಂತಹ ಲಕ್ಷಣದಿಂದ ಕಿರಿಕಿರಿ ಅನುಭವಿಸುವ ಮಹಿಳೆಯರು ದೈಹಿಕ ಸಂಬಂಧ ಬೆಳೆಸಲು ಸಿದ್ಧವಾಗಿರೋದಿಲ್ಲ. ಇದ್ರಿಂದ ಅವರ ಸಂಭೋಗ ಸುಖಕ್ಕೆ ಅಡ್ಡಿಯಾಗುತ್ತದೆ. ಸೋಂಕಿನ ರೋಗ ಲಕ್ಷಣ ತುಂಬಾ ಗಂಭೀರವಾಗಿಲ್ಲದೆ ಹೋದಲ್ಲಿ ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸಬಹುದು. ಆದ್ರೆ ಲಕ್ಷಣ ಗಂಭೀರವಾಗಿದ್ದಾಗ ಯಾವುದೇ ಕಾರಣಕ್ಕೂ ಲೈಂಗಿಕ ಕ್ರಿಯೆ ಬೆಳೆಸಬಾರದು.
undefined
ಯೋನಿ ಸಿಸ್ಟ್ ಎಂದರೇನು? ಇದರ ಲಕ್ಷಣಗಳೇನು? ಇದು ಅಪಾಯಕಾರಿನಾ?
ತಕ್ಷಣ ಚಿಕಿತ್ಸೆ ಅಗತ್ಯ : ಯೋನಿ ಸೋಂಕನ್ನು ಮುಚ್ಚಿಟ್ಟರೆ ಸಮಸ್ಯೆ ಉಲ್ಬಣಿಸುತ್ತದೆ. ಹಾಗಾಗಿ ನೀವು ಸೋಂಕಿನ ಲಕ್ಷಣ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ವೈದ್ಯರ ಪರೀಕ್ಷೆ ಮಾಡಿ ಆಂಟಿಫಗಲ್ ಔಷಧಿಯನ್ನು ನೀಡ್ತಾರೆ. ಅದನ್ನು ಬಳಸಿದ ದೆರಡು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನೀವು ಚಿಕಿತ್ಸೆ ಪಡೆಯದೆ ಹೋದ್ರೆ ಅದು ಮತ್ತಷ್ಟು ನಿಮ್ಮನ್ನು ಕಾಡುತ್ತದೆ.
ಆಂಟಿ ಫಂಗಲ್ ಕ್ರೀಮ್ ಬಳಸಿ : ಸೋಂಕಿನ ಸಮಯದಲ್ಲಿ ಲೈಂಗಿಕತೆಗೆ ಮನಸ್ಸು ಆಸಕ್ತಿ ತೋರಿದ್ದರೆ ಆಗ ನೀವು ಆಂಟಿಫಂಗಲ್ ಕ್ರೀಮ್ , ಕ್ಲೋಟ್ರಿಮಜೋಲ್ನಂತಹ ಲೂಬ್ರಿಕಂಟ್ ಅನ್ನು ಬಳಸಬೇಕು. ಇದರಿಂದಾಗಿ ಸಂಗಾತಿಗೆ ಸೋಂಕು ತಗಲುವ ಅಪಾಯವಿರುವುದಿಲ್ಲ.
Intimate Health: ಒಳ ಉಡುಪಿಗೆ ಗುಡ್ ಬೈ ಯಾವಾಗ ಹೇಳಬೇಕು?
ಯೀಸ್ಟ್ ಸೋಂಕಿನ ಅಪಾಯ : ಯೋನಿ ಯೀಸ್ಟ್ ಸೋಂಕು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಇದನ್ನು ಪಿಂಗ್ ಪಾಂಗ್ ಸೋಂಕು ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮಹಿಳೆಯರು ಮೂತ್ರ ವಿಸರ್ಜಿಸುವಾಗ ಉರಿ ಸಂವೇದನೆ ಎದುರಿಸುತ್ತಾರೆ. ಯೋನಿ ಪ್ರದೇಶದಲ್ಲಿ ತುರಿಕೆ ಮತ್ತು ಉರಿ ಕಾಣಿಸಿಕೊಳ್ಳುತ್ತದೆ. ಯೀಸ್ಟ್ ಸೋಂಕಿನಿಂದ ಬಳಲುತ್ತಿರುವ ಮಹಿಳೆ ಶಾರೀರಿಕ ಸಂಬಂಧ ಬೆಳೆಸಿದ್ರೆ ಸೋಂಕು ದೀರ್ಘಕಾಲದವರೆಗೆ ಕಾಡುತ್ತದೆ. ಅಲ್ಲದೆ ಮತ್ತೆ ಹಿಂತಿರುಗುವ ಸಾಧ್ಯತೆಗಳು ಸಹ ಹೆಚ್ಚಾಗುತ್ತದೆ.
ಯೀಸ್ಟ್ ಸೋಂಕಿನ ಮಧ್ಯೆಯೇ ಸಂಬಂಧ ಬೆಳೆಸಿದ್ರೆ ಯೋನಿಯಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಯೋನಿ ಊದಿಕೊಳ್ಳುವ ಸಾಧ್ಯತೆಯಿರುತ್ತದೆ. ಮತ್ತೆ ಮತ್ತೆ ನಿಮಗೆ ರೋಗ ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ನಿಮ್ಮ ಯೋನಿ ಯೀಸ್ಟ್ ಸೋಂಕು, ಸಂಗಾತಿಯನ್ನು ಕಾಡುವ ಸಾಧ್ಯತೆಯಿರುತ್ತದೆ. ಯೀಸ್ಟ್ ಸೋಂಕು, ಸಂಭೋಗದ ವೇಳೆ ನಿಮ್ಮ ಸಂಗಾತಿಗೆ ವರ್ಗವಾಗುವ ಸಾಧ್ಯತೆಯಿದೆ. ನಿಮ್ಮ ಸಂಗಾತಿ ಪುರುಷನಾಗಿದ್ದರೆ ಇದ್ರ ಅಪಾಯ ಕಡಿಮೆ ಇರುತ್ತದೆ. ಶೇಕಡಾ 15ರಷ್ಟು ಪ್ರಕರಣಗಳಲ್ಲಿ ಮಾತ್ರ ಮಹಿಳಾ ಸಂಗಾತಿ ಯೀಸ್ಟ್ ಸೋಂಕನ್ನು ಪುರುಷ ಸಂಗಾತಿಗೆ ಹರಡುತ್ತಾಳೆ ಎನ್ನುತ್ತಾರೆ ತಜ್ಞರು.
ಯೀಸ್ಟ್ ಸೋಂಕಿಗೆ ಒಳಗಾದ ಸಮಯದಲ್ಲಿ ಸಂಭೋಗ ಬೆಳೆಸಿದ್ರೆ ಯೀಸ್ಟ್ ಸೋಂಕು ಕಡಿಮೆಯಾಗಲು ಮತ್ತಷ್ಟು ಸಮಯ ಹಿಡಿಯುತ್ತದೆ. ಒಂದ್ವೇಲೆ ನಿಮ್ಮಿಂದ ನಿಮ್ಮ ಸಂಗಾತಿಗೆ ಸೋಂಕು ವರ್ಗವಾಗಿದ್ದರೆ ಮುಂದಿನ ಬಾರಿ ಶಾರೀರಿಕ ಸಂಬಂಧ ಬೆಳೆಸಿದಾಗ ಆ ಸೋಂಕು ಮತ್ತೆ ನಿಮ್ಮನ್ನು ಸೇರುತ್ತದೆ.