ಬೆನಜೀರ್ ಭುಟ್ಟೋ ಅವರ ವೈಯಕ್ತಿಕ ಜೀವನದ ಬಗ್ಗೆ ಹೊಸ ಪುಸ್ತಕವೊಂದು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದೆ. ಪುಸ್ತಕದ ಪ್ರಕಾರ, ಭುಟ್ಟೋ ಅವರು ಅಕ್ರಮ ಸಂಬಂಧ ಮತ್ತು ಸೆಕ್ಸ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ (Pakistan first woman Prime Minister Benazir Bhutto) ವೈಯಕ್ತಿಕ ವಿಚಾರ ಈಗ ಮತ್ತೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಬೆನಜೀರ್ ಭುಟ್ಟೋ ಬಗ್ಗೆ ಹೊಸ ಪುಸ್ತಕವೊಂದು ಬಿಡುಗಡೆಯಾಗಿದೆ. ಈ ಬುಕ್ ನಲ್ಲಿ ಬೆನಜೀರ್ ಭುಟ್ಟೋ ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ರು, ವಿದೇಶದಲ್ಲಿ ಸೆಕ್ಸ್ ಪಾರ್ಟಿ (sex party) ಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಅಂತ ಬರೆಯಲಾಗಿದೆ. ಇದನ್ನು ಓದಿದ ಜನರು, ಇದ್ರಲ್ಲಿ ಎಷ್ಟು ಸತ್ಯವಿದೆ ಎನ್ನುವ ಬಗ್ಗೆ ಬಿಸಿ ಬಿಸಿ ಚರ್ಚೆ ಶುರು ಮಾಡಿದ್ದಾರೆ.
ಭುಟ್ಟೋ ಕುಟುಂಬದ ಸದಸ್ಯೆ ಮತ್ತು ಜುಲ್ಫಿಕರ್ ಅಲಿ ಭುಟ್ಟೋ (Zulfiqar Ali Bhutto) ಅವರ ಪುತ್ರಿಯಾಗಿದ್ದ ಬೆನಜೀರ್, 35 ನೇ ವಯಸ್ಸಿನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹಾರ್ವರ್ಡ್ ಮತ್ತು ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಪಡೆದಿದ್ದ ಬೆನಜೀರ್ ಭುಟ್ಟೋ ಪಾಕಿಸ್ತಾನದಲ್ಲಿ ಅತ್ಯಂತ ಜನಪ್ರಿಯರಾಗಿದ್ದ ರಾಜಕಾರಣಿ. ಭುಟ್ಟೋ ಉತ್ತಮ ಆಡಳಿತ ನಡೆಸಿದ್ರೂ ಅವರ ವೈಯಕ್ತಿಕ ಜೀವನ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
undefined
ಹೊಸ ಪುಸ್ತಕದಲ್ಲಿ ಏನಿದೆ? : ಇಂಡಿಸೆಂಟ್ ಕರೆಸ್ಪಾಂಡೆನ್ಸ್: ಸೀಕ್ರೆಟ್ ಸೆಕ್ಸ್ ಲೈಫ್ ಆಫ್ ಬೆನಜೀರ್ ಭುಟ್ಟೋ (Indecent Correspondence: The Secret Sex Life of Benazir Bhutto) ಎಂಬ ಶೀರ್ಷಿಕೆಯಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಇದನ್ನು ರೋಶನ್ ಮಿರ್ಜಾ (Roshan Mirza) ಬರೆದಿದ್ದಾರೆ. ರೋಶನ್ ಮಿರ್ಜಾ, ತಮ್ಮ ಪುಸ್ತಕದಲ್ಲಿ ಬೆನಜೀರ್ ಭುಟ್ಟೋ ಅವರ ಅಶ್ಲೀಲತೆ ಮತ್ತು ವೈಯಕ್ತಿಕ ಜೀವನದ ಬಗ್ಗೆ ಅನೇಕ ಆಘಾತಕಾರಿ ವಿಷ್ಯಗಳನ್ನು ಬಹಿರಂಗಪಡಿಸಿದ್ದಾರೆ.
ಯಾರ ಜೊತೆ ಬೆನಜೀರ್ ಭುಟ್ಟೋ ಸಂಬಂಧ? : ಪುಸ್ತಕದ ಪ್ರಕಾರ, ಬೆನಜೀರ್ ಅಕ್ರಮ ಸಂಬಂಧ ಹೊಂದಿದ್ದರು ಎಂದು ಬರೆಯಲಾಗಿದೆ. ಅಂದಹಾಗೆ, ಭುಟ್ಟೋ ತಮ್ಮ ಅರ್ಧ ವಯಸ್ಸಿನ ಮೊರೊಕನ್ ಗೋ-ಗೋ ಬಾಯ್ ಜೊತೆ ದೈಹಿಕ ಸಂಬಂಧವನ್ನು ಹೊಂದಿದ್ದರು. ಈ ಮೊರೊಕನ್ ಹುಡುಗ ಕೂಡ ಇದನ್ನು ಒಪ್ಪಿಕೊಂಡಿದ್ದಾನೆ. ತಾನು ಬೆನಜೀರ್ ಜೊತೆ ದೈಹಿಕ ಸಂಬಂಧ ಹೊಂದಿರುವುದಾಗಿ ಆತ ಹೇಳಿದ್ದಾನೆ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೊತೆ ಸಂಬಂಧ : ಪುಸ್ತಕದಲ್ಲಿ ಈ ವಿಷ್ಯವನ್ನೂ ಉಲ್ಲೇಖ ಮಾಡಲಾಗಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೊತೆ ಬೆನಜೀರ್ ಸಂಬಂಧದ ಹೊಂದಿದ್ದರು ಎನ್ನಲಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಸಮಯದಲ್ಲಿ ಇಮ್ರಾನ್ ಖಾನ್ ಮತ್ತು ಬೆನಜೀರ್ ಭುಟ್ಟೋ ನಡುವೆ ದೈಹಿಕ ಸಂಬಂಧವಿತ್ತು ಎಂದು ಹೇಳಲಾಗಿದೆ. ಆದ್ರೆ ಈ ವಿಷ್ಯವನ್ನು ಲೇಖಕ ಕ್ರಿಸ್ಟೋಫರ್ ಸ್ಯಾಂಡ್‌ಫೋರ್ಡ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇಬ್ಬರೂ ಸಾರ್ವಜನಿಕವಾಗಿ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಮದುವೆಯಾದ ಎರಡೇ ತಿಂಗಳಲ್ಲಿ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಗರ್ಭಿಣಿ?!
ಅಮೆರಿಕಾದಲ್ಲಿ ಸೆಕ್ಸ್ ಪಾರ್ಟಿ : ಚಿಕ್ಕ ವಯಸ್ಸಿನ ಹುಡುಗನ ಜೊತೆ ಸಂಬಂಧ ಬೆಳೆಸಿದ್ದಲ್ಲದೆ, ಬೆನಜೀರ್ ಭುಟ್ಟೋ, ಪಾರ್ಟಿಯಲ್ಲಿ ಆಸಕ್ತಿ ಹೊಂದಿದ್ದರು. ಅದ್ರಲ್ಲೂ ಸೆಕ್ಸ್ ಪಾರ್ಟಿಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ಬೆನಜೀರ್ ಅವರು ಅಮೆರಿಕದ ಮಾಜಿ ಪಾಕಿಸ್ತಾನಿ ರಾಯಭಾರಿ ಶೆರ್ರಿ ರೆಹಮಾನ್ ಜೊತೆ ಸೇರಿ ಸೆಕ್ಸ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು ಎಂದು ಇಂಡಿಸೆಂಟ್ ಕರೆಸ್ಪಾಂಡೆನ್ಸ್: ಸೀಕ್ರೆಟ್ ಸೆಕ್ಸ್ ಲೈಫ್ ಆಫ್ ಬೆನಜೀರ್ ಭುಟ್ಟೋ ಪುಸ್ತಕದಲ್ಲಿ ಬರೆಯಲಾಗಿದೆ.
ರಾವಲ್ಪಿಂಡಿಯ ಲಿಯಾಕತ್ ನ್ಯಾಷನಲ್ ಬಾಗ್‌ನಲ್ಲಿ 2007 ರ ಡಿಸೆಂಬರ್ 27 ರಂದು ಭುಟ್ಟೋ ಅವರನ್ನು ಹತ್ಯೆ ಮಾಡಲಾಯಿತು. ಅವರು 1988 ರಿಂದ 1990 ರವರೆಗೆ ಮತ್ತು 1993 ರಿಂದ 1996 ರವರೆಗೆ ಪಾಕಿಸ್ತಾನದ 11 ಮತ್ತು 13 ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 1987 ರಲ್ಲಿ, ಭುಟ್ಟೋ ಆಸಿಫ್ ಅಲಿ ಜರ್ದಾರಿಯನ್ನು ವಿವಾಹವಾಗಿದ್ದರು.