
ಮದುವೆಗಳಲ್ಲಿ ವಧು-ವರ ಸೆಂಟರ್ ಆಫ್ ಅಟ್ರಾಕ್ಷನ್. ಸಾಮಾನ್ಯವಾಗಿ ಮದುವೆ ಡೇಟ್ ಫಿಕ್ಸ್ ಆಗುತ್ತಿದ್ದಂತೆ ವಧು ತಾನು ಏನು ಧರಿಸಬೇಕೆಂದು ಯೋಚಿಸಲು ಆರಂಭಿಸುತ್ತಾಳೆ. ಆದ್ರೆ ಹುಡುಗರ ಬಳಿ ಅಷ್ಟೊಂದು ಆಯ್ಕೆಗಳು ಇರಲ್ಲ. ಲಭ್ಯವಿರೋ ಶೇರ್ವಾನಿ, ಸೂಟ್ ಅಥವಾ ಪಂಚೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವಧು ಹಾಗಲ್ಲ ಅಡಿಯಿಂದ ಮುಡಿಯವರೆಗೂ ಏನು ಧರಿಸಬೇಕು ಎಂಬುದರ ಬಗ್ಗೆ ಪ್ರತಿ ಧಿರಿಸಿಗೂ ಪ್ರಾಮುಖ್ಯತೆ ಕೊಡುತ್ತಾರೆ. ಭಾರತದಲ್ಲಿ ಗ್ರ್ಯಾಂಡ್ ಸೀರೆ ಅಥವಾ ಲೆಹೆಂಗಾ ಜೊತೆ ಅದ್ಧೂರಿ ಆಭರಣಗಳನ್ನು ಧರಿಸುತ್ತಾರೆ. ವಿದೇಶಗಳಲ್ಲಿ ಸಾಮಾನ್ಯವಾಗಿ ವಧು ವೈಟ್ ಗೌನ್ ಧರಿಸುತ್ತಾರೆ. ಇಂದು ಗೌನ್‌ಗಳಲ್ಲಿಯೂ ನೂರಾರು ವೆರೈಟಿ ಡಿಸೈನ್ ಸಿಗುತ್ತವೆ.
ಮದುವೆಗೆ ಎಷ್ಟೇ ತಯಾರಿ ಮಾಡಿಕೊಂಡರೂ ಕೊನೆ ಕ್ಷಣದಲ್ಲಿ ಏನಾದ್ರೂ ಎಡವಟ್ಟು ಆಗಿರುತ್ತದೆ. ಖರೀದಿಸುವಾಗ ಚೆಂದ ಕಂಡ ಡ್ರೆಸ್ ಧರಿಸಿದಾಗ ಯಾಕಾದ್ರೂ ಇದನ್ನು ತೆಗೆದುಕೊಂಡ ಎಂಬ ಭಾವನೆ ಬರುತ್ತದೆ. ಇದೀಗ ಇಂತಹುವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮದುವೆಯ ಆಕರ್ಷಣೆ ಕೇಂದ್ರ ಬಿಂದು ವಧು ತನ್ನ ಡ್ರೆಸ್‌ನಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಇವರ ಪ್ರೀತಿಗೆ ವಯಸ್ಸು ಅಡ್ಡಿಯಾಗಲಿಲ್ಲ... ಈ ಸ್ಟಾರ್ ಜೋಡಿ ನಡುವೆ ಇದೆ ಹೆಚ್ಚು ವಯಸ್ಸಿನ ಅಂತರ!
ಡೇನಿಯಲ್ ಡೋಲ್‌ಗರ್ಟ್ (Danielle Dolgert @floraldream66) ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಡೇನಿಯಲ್ ವಧುವಿನ ಬಗ್ಗೆ ಯಾವ ಮಾಹಿತಿಯನ್ನು ನೀಡಿಲ್ಲ. ಆದ್ರೆ ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಮದುವೆ ದಿನವನ್ನು ಅತ್ಯಂತ ಸಂತೋಷದಿಂದ ಕಳೆಯಬೇಕು. ಆದ್ರೆ ವಧು ಮಾತ್ರ ಇಡೀ ದಿನ ಡ್ರೆಸ್ ಸರಿಮಾಡಿಕೊಳ್ಳುವದರಲ್ಲಿಯೇ ಕಳೆದಿದ್ದಾರೆ. ಈ ಲಾಂಗ್ ಡ್ರೆಸ್ ನಿಂದಾಗಿ ವಧುವಿಗೆ ನಡೆಯುಲು ಸಹ ಕಷ್ವವಾಗುತ್ತಿರದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ತನ್ನ ಗೌನ್ ಸರಿಪಡಿಸಿಕೊಳ್ಳಲು ವಧು ಯಾರನ್ನೋ ಹುಡುಕುತ್ತಿರುತ್ತಾಳೆ. ಆದ್ರೆ ಎಲ್ಲಿ ಯಾರೂ ಕಾಣಿಸದಿದ್ದಾಗ ಗೌನ್ ಹಿಡಿದುಕೊಂಡು ವಧು ಮುಂದೆ ಬರುತ್ತಾಳೆ.
ವಧು ಧರಿಸಿದ್ದ ಗೌನ್ ಕೆಳಗಡೆ ಕಟ್ ರೀತಿಯಲ್ಲಿ ಡಿಸೈನ್ ಮಾಡಲಾಗಿತ್ತು ಮತ್ತು ಅದು ಅತಿ ದೊಡ್ಡದಾಗಿದ್ದರಿಂದ ಯುವತಿಗೆ ಅದನ್ನು ಮೇಂಟೇನ್ ಮಾಡಲು ಆಗಿಲ್ಲ. ಇದರಿಂದ ವಧು ಪಜೀತಿಗೆ ಸಿಲುಕಿದ್ದಳು. ವಧು ಡ್ರೆಸ್ ಸರಿ ಮಾಡಿಕೊಳ್ಳುತ್ತಿದ್ದರೂ ಮದುವೆಗೆ ಆಗಮಿಸಿದ ಅತಿಥಿಗಳು ಮಾತ್ರ ಆಕೆ ಬಳಿಯಲ್ಲಿ ಬಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ವೈರಲ್ ವಿಡಿಯೋಗೆ 95 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ಹಲವು ಕಮೆಂಟ್‌ಗಳು ಬಂದಿವೆ.
ಐಶ್ವರ್ಯಾ-ಹೃತಿಕ್ ಸ್ಟೈಲ್ ರೀತಿ ರಾಜಧಾನಿಯ ರಸ್ತೆಯಲ್ಲಿ ಜೋಡಿಯ ಖುಲ್ಲಂ ಖುಲ್ಲಾ ರೊಮ್ಯಾನ್ಸ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.