
ಮೂತ್ರ (Urine) ವಿಸರ್ಜನೆ (Discharge) ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದೆ ಹೋದ್ರೆ ಅದು ಅನೇಕ ಸಮಸ್ಯೆ (Problem)ಗಳಿಗೆ ಕಾರಣವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ ? ವಿಶೇಷವಾಗಿ ಮಹಿಳೆ (Woman)ಯರು ಈ ಸಮಸ್ಯೆಯನ್ನು ಹೆಚ್ಚು ಎದುರಿಸಬೇಕಾಗುತ್ತದೆ. ಮೂತ್ರ ವಿಸರ್ಜನೆ(Peeing)ಯ ಸಮಯದಲ್ಲಿ ಮಾಡಿದ ಕೆಲವು ತಪ್ಪುಗಳಿಂದಾಗಿ ಸೋಂಕಿನ ಸಮಸ್ಯೆ ಬಹಳಷ್ಟು ಹೆಚ್ಚಾಗುತ್ತದೆ. ಸೋಂಕು ಅಪಾಯಕಾರಿಯಾಗಿದ್ದು, ಸಾವಿಗೂ ಕಾರಣವಾಗುವ ಸಾಧ್ಯತೆಯಿದೆ. ಮಹಿಳೆಯರ ದೇಹ ರಚನೆಯಿಂದಾಗಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆಯರ ಮೂತ್ರನಾಳ ಚಿಕ್ಕದಾಗಿದೆ. ಇದರಿಂದಾಗಿ ಬ್ಯಾಕ್ಟೀರಿಯಾಗಳು ಮೂತ್ರದ ಪೈಪ್ ಅನ್ನು ಸುಲಭವಾಗಿ ಪ್ರವೇಶಿಸಬಹುದು. ಇದು ಮಹಿಳೆಯರ ದೇಹದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಮೂತ್ರದ ಸೋಂಕಿನ ಸಮಸ್ಯೆಯನ್ನು ಎದುರಿಸಬೇಕಾದ ಮಹಿಳೆಯರು, ಅವರು ಇತರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಹಿಳೆಯರು ತಮ್ಮ ಜೀವನದುದ್ದಕ್ಕೂ ಮುಟ್ಟು, ಗರ್ಭಧಾರಣೆ ಮತ್ತು ಋತುಬಂಧದಂತಹ ವಿವಿಧ ಶಾರೀರಿಕ ಬದಲಾವಣೆಗಳನ್ನು ಅನುಭವಿಸುತ್ತಾರೆ. ಈ ಎಲ್ಲಾ ಅಂಶಗಳು ಮೂತ್ರನಾಳದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಸ್ತ್ರೀರೋಗ ತಜ್ಞರು ಹೇಳ್ತಾರೆ. ಮಹಿಳೆಯರು ಮೂತ್ರ ವಿಸರ್ಜನೆ ವೇಳೆ ಕೆಲವೊಂದು ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು.
ಹಿಂದಿನಿಂದ ಮುಂದಕ್ಕೆ ಒರೆಸುವುದು : ಮಹಿಳೆಯರು ಖಾಸಗಿ ಅಂಗ ಸ್ವಚ್ಛ ಗೊಳಿಸುವ ವೇಳೆ ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಹಿಳೆಯರು ಎಂದಿಗೂ ಹಿಂದಿನಿಂದ ಮುಂದಕ್ಕೆ ಖಾಸಗಿ ಅಂಗವನ್ನು ಸ್ವಚ್ಛಗೊಳಿಸಬಾರದು. ನಮ್ಮ ಗುದದ್ವಾರದಲ್ಲಿ ಬಹಳಷ್ಟು ಬ್ಯಾಕ್ಟೀರಿಯಾಗಳಿರುತ್ತವೆ. ಹಿಂದಿನಿಂದ ಮುಂದೆ ಒರೆಸುವುದ್ರಿಂದ ಗುದದ್ವಾರದಲ್ಲಿರುವ ಬ್ಯಾಕ್ಟೀರಿಯಾ ಹಿಂದಿನಿಂದ ಮುಂದಕ್ಕೆ ಬರುತ್ತದೆ. ಅದು ಮೂತ್ರನಾಳವನ್ನು ಪ್ರವೇಶ ಮಾಡುತ್ತದೆ. ಇದರಿಂದ ಮೂತ್ರನಾಳದ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಮೂತ್ರನಾಳದ ಸೋಂಕಿನಿಂದಾಗಿ ಖಾಸಗಿ ಅಂಗದಲ್ಲಿ ಉರಿ ಮತ್ತು ತುರಿಕೆಯ ಸಮಸ್ಯೆ ಕಾಡುತ್ತದೆ.
LIFE STORY: 1966ರಲ್ಲಿ ಸುಂದರ ಹುಡುಗನ ಹುಡುಕಾಟಕ್ಕೆ ಹುಡುಗಿಯರು ಮಾಡಿದ್ದ ಆ ಕೆಲಸವೇನು ಗೊತ್ತಾ?
ಖಾಸಗಿ ಅಂಗವನ್ನು ಅತಿಯಾಗಿ ಒರೆಸುವುದು : ಅನೇಕರು ಮೂತ್ರ ವಿಸರ್ಜನೆ ನಂತ್ರ ಖಾಸಗಿ ಅಂಗವನ್ನು ಸ್ವಚ್ಛಗೊಳಿಸುತ್ತಾರೆ. ನೀರಿನಿಂದ ಸ್ವಚ್ಛಗೊಳಿಸಿದ ನಂತ್ರ ಅದನ್ನು ಗಟ್ಟಿಯಾಗಿ ಒರೆಸುತ್ತಾರೆ. ಖಾಸಗಿ ಅಂಗ ಒರೆಸುವುದು ಬಹಳ ಒಳ್ಳೆಯದು. ಆದ್ರೆ ಗಟ್ಟಿಯಾಗಿ ಒರೆಸುವುದ್ರಿಂದ ಖಾಸಗಿ ಅಂಗಕ್ಕೆ ಗಾಯವಾಗುವ ಅಪಾಯವಿರುತ್ತದೆ. ಅಲ್ಲದೆ ಖಾಸಗಿ ಅಂಗದ ಚರ್ಮದಲ್ಲಿ ಉರಿ ಹಾಗೂ ತುರಿಕೆ ಕಾಣಿಸಿಕೊಳ್ಳುತ್ತದೆ.
ಮೂತ್ರ ಕಟ್ಟಿಗೊಳ್ಳುವುದು : ಮೂತ್ರ ಬಂದಾಗ ವಿಸರ್ಜನೆ ಮಾಡ್ಬೇಕು. ಆದ್ರೆ ಅನೇಕರು ಮೂತ್ರವನ್ನು ಕಟ್ಟಿಕೊಳ್ತಾರೆ. ದಿನದಲ್ಲಿ ಇಷ್ಟು ಸಮಯ ಮಾತ್ರ ಮೂತ್ರ ವಿಸರ್ಜನೆ ಮಾಡ್ಬೇಕೆಂದು ನಿಯಮ ಮಾಡಿಕೊಳ್ತಾರೆ. ಅದರಂತೆ ಮೂತ್ರ ವಿಸರ್ಜನೆ ಮಾಡ್ತಾರೆ. ಮೂತ್ರ ಬಂದರೂ ಶೌಚಾಲಯಕ್ಕೆ ಹೋಗುವುದಿಲ್ಲ. ಮೂತ್ರವನ್ನು ತಡೆ ಹಿಡಿಯುವುದು ಹೆಚ್ಚು ಅಪಾಯಕಾರಿ.
ಗರ್ಭ ಧರಿಸಲು ಸಮಸ್ಯೆ ಆಗುತ್ತಿದೆಯೇ? ಹಾಗಿದ್ರೆ ಇದಕ್ಕೆ ಪಿಸಿಒಡಿ ಕಾರಣ !
ಮೂತ್ರ ವಿಸರ್ಜನೆಗೆ ಸಮಯ ನಿಗದಿ : ಇನ್ನು ಕೆಲವರು ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತಾರೆ. ಸಾಮಾನ್ಯವಾಗಿ ಮೂತ್ರಕೋಶದಲ್ಲಿ 450 ರಿಂದ 500 ಮಿಲಿ ಮೂತ್ರ ಸಂಗ್ರಹವಾಗುತ್ತದೆ. ಆದರೆ ನೀವು ಪ್ರತಿ ಅರ್ಧ ಅಥವಾ ಒಂದು ಗಂಟೆಗೊಮ್ಮೆ ಮೂತ್ರಕ್ಕೆ ಹೋದರೆ, ಮೂತ್ರಕೋಶವು ಅತಿ ಕಡಿಮೆ ಪ್ರಮಾಣದ ಮೂತ್ರವನ್ನು ಸಂಗ್ರಹಿಸಲು ಕಾರಣವಾಗುತ್ತದೆ. ಇದರಿಂದಾಗಿ ಮೂತ್ರಕೋಶವು ಸರಿಯಾಗಿ ಕೆಲಸ ಮಾಡುವುದಿಲ್ಲ. ತುಂಬಾ ಸಮಯ ಮೂತ್ರವನ್ನು ಸಂಗ್ರಹಿಸುವುದಿಲ್ಲ.
ಅತಿ ಹೆಚ್ಚು ನೀರಿನ ಸೇವನೆ : ದಿನದಲ್ಲಿ ಎರಡರಿಂದ ಮೂರು ಲೀಟರ್ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಬಾಯಾರಿಕೆಯಾದಾಗ ಅಥವಾ ಬೇಸಿಗೆಯಲ್ಲಿ ನಾವು ಹೆಚ್ಚು ನೀರು ಕುಡಿಯುತ್ತೇವೆ. ಬಾಯಾರಿಕೆಯಾದಾಗ ಮಾತ್ರ ನೀರು ಸೇವನೆ ಮಾಡ್ಬೇಕು. ಕೆಲವರು ಒತ್ತಾಯ ಪೂರ್ವಕವಾಗಿ 6 – 7 ಲೀಟರ್ ನೀರನ್ನು ಕುಡಿಯುತ್ತಾರೆ. ಇದ್ರಿಂದ ಆರೋಗ್ಯ ಹಾಳಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.