
ಇಂದು ಪ್ರಪಂಚದಾದ್ಯಂತ ಡೇಟಿಂಗ್ ಅಪ್ಲಿಕೇಶನ್ (Dating App) ಗಳ ಅಬ್ಬರ ಹೆಚ್ಚಿದೆ. ಡೇಟಿಂಗ್ ಅಪ್ಲಿಕೇಷನ್ ಗಳು ಸಂಗಾತಿ (Partner) ಯನ್ನು ಹುಡುಕಲು ನೆರವಾಗ್ತಿವೆ. ಪ್ರತಿಯೊಬ್ಬರೂ ಹೊಸ ವ್ಯಕ್ತಿಯನ್ನು ಡೇಟಿಂಗ್ ಅಪ್ಲಿಕೇಷನ್ ಮೂಲಕ ಭೇಟಿಯಾಗ್ತಿದ್ದಾರೆ. ಅವರನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹಿಂದಿನ ಕಾಲದಲ್ಲಿ ಹಾಗಿರಲಿಲ್ಲ. ಸಂಪರ್ಕಕ್ಕೆ ಫೋನ್ (Phone) ಕೂಡ ಇರಲಿಲ್ಲ. ಮದುವೆ ಅಂದ್ರೆ ದೊಡ್ಡ ಯುದ್ಧವಾಗಿತ್ತು. ಇನ್ನು ಪ್ರೀತಿ, ಸಂಗಾತಿ ಹುಡುಕಾಟ ಸಣ್ಣ ವಿಷ್ಯವಾಗಿರಲಿಲ್ಲ. 1966 ರಲ್ಲಿ, ಇಂಗ್ಲೆಂಡ್‌ನ ಲಿಂಕನ್‌ಶೈರ್ ಬಳಿ ಕುಳಿತಿದ್ದ ಇಬ್ಬರು ಯುವತಿಯರು ಭಿನ್ನವಾಗಿ ಆಲೋಚನೆ ಮಾಡಿದ್ದರು. ಸಂಗಾತಿಯ ಹುಡುಕಾಟಕ್ಕೆ ಮುಂದಾದ ಅವರು, ಪತ್ರ ಬರೆದು ಬಾಟಲಿಯೊಳಗೆ ಹಾಕಿದ್ದರು. ಈ ಪತ್ರ ಒಂದು ರೀತಿಯಲ್ಲಿ ಜಾಹಿರಾತಾಗಿತ್ತು. ಪತ್ರವಿರುವ ಬಾಟಲಿಯನ್ನು ಅವರು ನೀರಿಗೆ ಎಸೆದಿದ್ದರು. 56 ವರ್ಷಗಳ ನಂತರ ಆ ಬಾಟಲಿ ಪತ್ತೆಯಾಗಿದೆ. ಅದರೊಳಗೆ ಬರೆದಿರುವ ವಿಷ್ಯ ಎಲ್ಲರ ಗಮನ ಸೆಳೆದಿದೆ.
ಸ್ವಚ್ಛತಾ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸಿಕ್ಕಿತ್ತು ಬಾಟಲಿ : ಹಂಬರ್ (Humber Estuary) ನದಿಯಲ್ಲಿ ಗುಂಪೊಂದು ಸ್ವಚ್ಛತೆಯ ಕೆಲಸ ಮಾಡ್ತಿತ್ತು. ಅಲ್ಲಿ ಅವರಿಗೆ ಹಸಿರು ಬಾಟಲಿ ಸಿಕ್ಕಿದೆ. ಬಾಟಲಿಯೊಳಗೆ ಎರಡು ಪತ್ರಗಳಿದ್ದವು. ಇದನ್ನು ಆಗಸ್ಟ್ 9, 1966 ರಂದು 15 ವರ್ಷದ ಜೆನ್ನಿಫರ್ ಕೋಲ್ಮನ್ (Jennifer Coleman) ಮತ್ತು ಜಾನೆಟ್ ಬ್ಲಾಂಕ್ಲಿ (Janet Blankley) ಬರೆದಿದ್ದರು.
ಆ ಪತ್ರದಲ್ಲಿ ಏನಿತ್ತು ಗೊತ್ತಾ? :
ಜಾನೆಟ್ ಪತ್ರ : ಜಾನೆಟ್ ಬರೆದ ಪತ್ರ ತುಂಬಾ ಮುದ್ದಾಗಿದೆ. `ನನಗೆ 15 ವರ್ಷ. ನಾನು ನೋಡಲು ಕೆಟ್ಟದಾಗೇನಿಲ್ಲ. ನನಗೆ ಉದ್ದನೆಯ ಗುಂಗುರು ಕಂದು ಕೂದಲು ಇದೆ. ನನ್ನ ಎತ್ತರ 5'4 ಇಂಚುಗಳು. ಯಾರಿಗಾದರೂ ಆಸಕ್ತಿ ಇದ್ದರೆ, ಫೋಟೋವನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ನನಗೆ ಪ್ರತಿಕ್ರಿಯಿಸುವ ಹುಡುಗ 16 ವರ್ಷಕ್ಕಿಂತ ಕಡಿಮೆಯಿರಬಾರದು ಮತ್ತು 18 ವರ್ಷಕ್ಕಿಂತ ಹೆಚ್ಚಿರಬಾರದು’ ಎಂದು ಬರೆಯಲಾಗಿತ್ತು.
CLEANING TIPS: ಕಿಚನ್ ಕ್ಯಾಬಿನೆಟ್ ಹ್ಯಾಂಡಲ್ ಕ್ಲೀನ್ ಮಾಡೋಕೆ ಇಲ್ಲಿದೆ ಸುಲಭ ಟಿಪ್ಸ್
ಜೆನ್ನಿಫರ್ ಪತ್ರದಲ್ಲಿ ಏನಿತ್ತು? : ಜೆನ್ನಿಫರ್ ಕೂಡ ಹುಡುಗನ ಅನ್ವೇಷಣೆಗೆ ಪತ್ರ ಬರೆದಿದ್ದಳು. `ಯಾರಿಗಾದರೂ ಈ ಪತ್ರ ಸಿಕ್ಕರೆ, ಅವರು ಜೆ ಕೋಲ್ಮನ್ ಅವರನ್ನು ಸಂಪರ್ಕಿಸಬೇಕು. ದಯವಿಟ್ಟು ನೀವು 16 ರಿಂದ 18 ವರ್ಷ ವಯಸ್ಸಿನವರಾಗಿದ್ದರೆ ಮಾತ್ರ ಪತ್ರ ಬರೆಯಿರಿ. ನಿಮ್ಮ ಫೋಟೋವನ್ನು ಕಳುಹಿಸಿ, ಧನ್ಯವಾದಗಳು’. ಅದರಲ್ಲಿ ಇಬ್ಬರು ಹುಡುಗಿಯರೂ ತಮ್ಮ ಮನೆಯ ವಿಳಾಸ ಬರೆದಿದ್ದರು.
ಆ ಕಾಲದಲ್ಲಿ ಡೇಟಿಂಗ್ ಗಾಗಿ ಈ ಪತ್ರದ ಸಹಾಯಪಡೆದಿದ್ದು ರೋಮಾಂಚನಕಾರಿ ಮಾರ್ಗವೆಂದ್ರೆ ತಪ್ಪಾಗಲಾರದು.
ಈಗ ಇವರ ವಯಸ್ಸೆಷ್ಟು ಗೊತ್ತಾ? : ಜೆನ್ನಿಫರ್‌ಗೆ ಈಗ 71 ವರ್ಷ. ಬಾಟಲಿಯಲ್ಲಿ ಬರೆದಿರುವ ಸಂದೇಶ ಇನ್ನೂ ಯಥಾಸ್ಥಿತಿಯಲ್ಲಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಜೆನ್ನಿಫರ್. ನಾನು ಮತ್ತು ಜಾನೆಟ್ ತಮ್ಮ ಶಾಲಾ ದಿನಗಳಲ್ಲಿ ಉತ್ತಮ ಸ್ನೇಹಿತರಾಗಿದ್ದೆವು. ಶಾಲೆಯ ರಜೆಯಲ್ಲೂ ಇಬ್ಬರೂ ಹೆಚ್ಚಾಗಿ ಜೊತೆಯಲ್ಲಿ ಇರುತ್ತಿದ್ದೆವು. ಅರ್ಧ ಶತಮಾನದ ನಂತರವೂ ಬಾಟಲಿ ಹಾಳಾಗಿಲ್ಲ. ನೀರಿನಲ್ಲಿದೆ. ಪತ್ರ ಹಾಗೆಯೇ ಇದೆ ಎಂಬುದನ್ನು ನಂಬಲು ಸಾಧ್ಯವಿಲ್ಲ ಎನ್ನುತ್ತಾರೆ ಜೆನ್ನಿಫರ್.
Life Hacks: ಇರುವೆಗಳ ಕಾಟ ತಪ್ಪಿಸೋದು ಹೇಗೆ?
ಪತ್ರಕ್ಕೆ ಪ್ರತಿಕ್ರಿಯೆ : ಈ ಪತ್ರಕ್ಕೆ ಅವರು ಯಾರಿಂದಲಾದ್ರೂ ಪ್ರತಿಕ್ರಿಯೆ ಪಡೆದಿದ್ದರಾ ಎಂಬುದು ತಿಳಿದಿಲ್ಲ. ತಮ್ಮ ಪತ್ರಕ್ಕೆ ಕುತೂಹಲಕಾರಿ ಉತ್ತರ ಸಿಗುತ್ತದೆ ಎಂದುಕೊಂಡು ಅವರು ಪತ್ರ ಬರೆದಿದ್ದರಂತೆ. ಟ್ರೇಸಿ ಮಾರ್ಷಲ್ ಮತ್ತು ಅವರ ಮಗಳು ಚಾರ್ಲೊಟ್ ಸೇತುವೆಯ ಬಳಿ ಸ್ವಚ್ಛಗೊಳಿಸುವಾಗ ಬಾಟಲಿ ಕಾಣಿಸಿತ್ತು. ಕೆಸರು ತುಂಬಿದ್ದ ಬಾಟಲಿಯನ್ನು ಸ್ವಚ್ಛಗೊಳಿಸಿದಾಗ ಅದರೊಳಗೆ ಏನೋ ಇರುವುದು ಅರಿವಿಗೆ ಕಂಡುಬಂದಿತ್ತು. ಅದನ್ನು ತೆಗೆದಾಗ ಈ ಅದ್ಭುತ ಘಟನೆ ಬೆಳಕಿಗೆ ಬಂತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.