
ಒಂದು ಕಾಲದಲ್ಲಿ ದ್ವಿಚಕ್ರವಿರಲಿ ಯಾವುದೇ ವಾಹನವಿರಲಿ ಎಲ್ಲವೂ ಕೇವಲ ಪುರುಷರಿಗೆ ಮಾತ್ರ ಸೀಮಿತ ಎಂಬ ಕಾಲವಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಂದು ಮನೆಯಲ್ಲೂ ಗಾಡಿ ಇದೆ. ಪ್ರತಿ ಹೆಣ್ಣು ಮಕ್ಕಳು ವಾಹನ ಚಾಲನೆ ಕಲಿತು ಕಾರು ಬೈಕ್ ಸ್ಕೂಟಿ ಓಡಿಸುತ್ತಾರೆ. ಮತ್ತೆ ಕೆಲವು ಹೆಣ್ಣು ಮಕ್ಕಳು ಇನ್ನೂ ಮುಂದೆ ಸಾಗಿದ್ದು, ಬಸ್ ಲಾರಿ ಟ್ರಕ್ ಮುಂತಾದ ಬೃಹತ್ ವಾಹನಗಳನ್ನು ಕೂಡ ಚಾಲನೆ ಮಾಡಿ ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ವಾಹನ ಚಾಲನೆ ಪುರುಷರಿಗೆ ಮಾತ್ರ ಸೀಮಿತ ಎಂಬಂತಹ ಕಾಲಘಟ್ಟದ ವೃದ್ಧ ಮಹಿಳೆಯೊಬ್ಬರ ಬಿಂದಾಸ್ ಆಗಿ ಹೈವೇಯಲ್ಲಿ ಗಾಡಿ ಓಡಿಸುತ್ತಿದ್ದರೆ ಹೇಗನಿಸುತ್ತದೆ? ಪರವಾಗಿಲ್ಲ, ಭಲೇ ನಾರಿ ಈಕೆ ಎಂದು ಬಹುತೇಕರಿಗೆ ಅನಿಸುತ್ತದೆ. ಅದೇ ಕಾರಣಕ್ಕೆ ವೃದ್ಧ ಮಹಿಳೆಯೊಬ್ಬರು ಗಾಡಿ ಓಡಿಸುತ್ತಿದ್ದಾರೆ ಅವರ ಪಕ್ಕಾದಲ್ಲೇ ಸಾಗುತ್ತಿದ್ದವರು ಇವರ ವೀಡಿಯೋ ಮಾಡಿದ್ದು, ವೀಡಿಯೋ ನೋಡಿದ ವೃದ್ಧೆ ಕ್ಯಾಮರಾದತ್ತ ಪ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಅಜ್ಜಿಯ ಬಿಂದಾಸ್ ನಡೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಅಜ್ಜಿಯ ಬಿಂದಾಸ್ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ Shabeerzyed ಎಂಬುವವರು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಹಿಂದೊಬ್ಬರು ಮಹಿಳೆಯನ್ನು ಕೂರಿಸಿಕೊಂಡು ವೃದ್ಧ ಮಹಿಳೆ ಬಿಂದಾಸ್ ಆಗಿ ಜೊತೆಗೆ ಬಹಳ ವೇಗವಾಗಿ ಗಾಡಿ ಓಡಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಕ್ಯಾಮರಾ ನೋಡಿದ ಅವರು ಕ್ಯಾಮರಾದತ್ತ ಕೈ ಬೀಸಿ ಪ್ಲೈಯಿಂಗ್ ಕಿಸ್ ಮಾಡಿದರೆ, ಅವರ ಹಿಂದೆ ಕೂತಿದ್ದ ಮಹಿಳೆ ಟಾಟಾ ಮಾಡಿದ್ದಾರೆ.
ತೆಂಗಿನ ಗರಿಯ ಪೊರಕೆ ಮಾಡುವ ಸುಲಭ ವಿಧಾನ: ಅಜ್ಜಿಯ ವೀಡಿಯೋ ಸಖತ್ ವೈರಲ್
ವೃದ್ಧ ಮಹಿಳೆ ಸೀರೆಯುಟ್ಟಿದ್ದು, ರಸ್ತೆಯಲ್ಲಿ ಬಹಳ ಸಲೀಸಾಗಿ ಗಾಡಿ ಓಡಿಸುತ್ತಿದ್ದಾರೆ. ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಅನೇಕರು ವಯಸ್ಸು ಕೇವಲ ನಂಬರ್ ಅಷ್ಟೇ ಎಂದು ಕಾಮೆಂಟ್ ಮಾಡಿದ್ದಾರೆ. ಇವರನ್ನು ನೋಡಿದವರಿಗೆಲ್ಲರಿಗೂ ಖುಷಿಯಾಗುತ್ತಿದೆ. ಅವರು ಖುಷಿಯಾಗಿದ್ದಾರೆ ನಿಮಗೂ ಖುಷಿಯಾಗಿದೆ. ವಿಡಿಯೋ ನೋಡುತ್ತಿರುವ ನಮಗೂ ಖುಷಿಯಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅಜ್ಜಿಯ ಈ ವೀಡಿಯೋ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ತುಂಬುತ್ತಿದೆ. ಕೆಲವರು ಅಜ್ಜಿ ಈ ಜನರೇಷನ್‌ನಲ್ಲಿ ಜನಿಸಿರಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
Watch: ಮುರಿದ ಕುರ್ಚಿಯೇ ಆಸರೆ, ಸುಡುವ ಬಿಸಿಲಲ್ಲಿ ಬರಿಗಾಲಿನಲ್ಲಿ ಕುಂಟುತ್ತಲೇ ಬ್ಯಾಂಕ್‌ಗೆ ಬಂದ 70 ವರ್ಷದ ಅಜ್ಜಿ!
ಒಟ್ಟಿನಲ್ಲಿ ಅಜ್ಜಿಯ ಜೀವನೋತ್ಸಾಹ ಅನೇಕರಿಗೆ ಖುಷಿ ನೀಡಿದೆ. ಸಾಧನೆ ಮಾಡುವುದಕ್ಕೆ ವಯಸ್ಸಿನ ಅಗತ್ಯವಿಲ್ಲ ವಯಸ್ಸು ಕೇವಲ ಸಂಖ್ಯೆ ಮಾತ್ರ. ಈ ವಿಚಾರವನ್ನು ನಮ್ಮ ನಡುವೆ ಇರುವ ಅನೇಕ ಹಿರಿಯರು ಸಾಬೀತುಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.