ಕಣ್ಣೀರು ತರಿಸುವಂತಿದೆ ಪ್ರಸೂತಿ ವೈದ್ಯೆಯೊಬ್ಬರು ಹಂಚಿಕೊಂಡ ತಾಯಿಯೊಬ್ಬಳ ನೋವಿನ ಕತೆ

Published : Mar 09, 2025, 06:09 PM ISTUpdated : Mar 10, 2025, 10:45 AM IST
ಕಣ್ಣೀರು ತರಿಸುವಂತಿದೆ ಪ್ರಸೂತಿ ವೈದ್ಯೆಯೊಬ್ಬರು ಹಂಚಿಕೊಂಡ ತಾಯಿಯೊಬ್ಬಳ ನೋವಿನ ಕತೆ

ಸಾರಾಂಶ

ವಿಶೇಷವಾಗಿ ಆಸ್ಪತ್ರೆಗಳಲ್ಲಿ ಬದುಕಿನ ನೈಜ ಚಿತ್ರಣಗಳು, ಮನಕಲುಕುವ ಕತೆಗಳು ಹೆಚ್ಚಾಗಿ ಕಾಣ ಸಿಗುತ್ತವೆ. ವೈದ್ಯರು ನರ್ಸ್‌ಗಳಾದವರಿಗೆ ಪ್ರತಿಯೊಂದು ದಿನವೂ ಒಂದು ಹೊಸ ಹೊಸ ಅನುಭವವೇ ಜೀವನ ಪಾಠವನ್ನು ಅವರಿಗಿಂತ ಚೆನ್ನಾಗಿ ಬೇರೆ ಯಾರು ಕಲಿಯಲು ಸಾಧ್ಯವಿಲ್ಲ. ವೈದ್ಯೆಯೊಬ್ಬರು ಹಂಚಿಕೊಂಡ ಕರುಣಾಜನಕ ಕತೆ ಇಲ್ಲಿದೆ.

ಜೀವನ ಎಲ್ಲರಿಗೂ ಒಂದೇ ತರ ಇರುವುದಿಲ್ಲ, ಒಬ್ಬೊಬ್ಬರ ಬದುಕಿನ ಹಿಂದೂ ಒಂದೊಂದು ಘೋರವಾದ ಕತೆ ಇರುತ್ತದೆ. ಕೆಲವರು ಬೇರೆಯವರ ಕಷ್ಟ ನೋಡಿ ಅವರ ಕಷ್ಟದ ಮುಂದೆ ನಮ್ಮದೇನು ದೊಡ್ಡ ವಿಚಾರವಲ್ಲ ಅಂತ ಬದುಕುತ್ತಿರುತ್ತಾರೆ. ವಿಶೇಷವಾಗಿ ಆಸ್ಪತ್ರೆಗಳಲ್ಲಿ ಬದುಕಿನ ನೈಜ ಚಿತ್ರಣಗಳು, ಮನಕಲುಕುವ ಕತೆಗಳು ಹೆಚ್ಚಾಗಿ ಕಾಣ ಸಿಗುತ್ತವೆ. ವೈದ್ಯರು ನರ್ಸ್‌ಗಳಾದವರಿಗೆ ಪ್ರತಿಯೊಂದು ದಿನವೂ ಒಂದು ಹೊಸ ಹೊಸ ಅನುಭವವೇ ಜೀವನ ಪಾಠವನ್ನು ಅವರಿಗಿಂತ ಚೆನ್ನಾಗಿ ಬೇರೆ ಯಾರು ಕಲಿಯಲು ಸಾಧ್ಯವಿಲ್ಲ. ಅದೇ ರೀತಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ, ವೈದ್ಯೆಯೊಬ್ಬರು ತಮ್ಮ ವೃತ್ತಿ ಬದುಕಿನಲ್ಲಿ ಆದ ಒಂದು ಅನುಭವವನ್ನು ಆಗಷ್ಟೇ ತಾಯಿಯಾದವಳ ದುರಂತ ಕತೆಯನ್ನು ಹಂಚಿಕೊಂಡಿದ್ದು, ಇದನ್ನು ಓದಿದವರ ಕಣ್ಣಾಲಿಗಳು ತೇವವಾಗುವುದಂತೂ ಸತ್ಯ...

ಹೆಣ್ಣು ಹೆತ್ತಳೆಂದು ಬಿಟ್ಟು ಹೋದ ಪತಿ

ಸ್ತ್ರೀರೋಗ ತಜ್ಞೆ ಪ್ರಸೂತಿ ವೈದ್ಯೆ ಲಲಿತಾ ಚೆಲ್ಲುರಿ ರಾವ್‌ ಎಂಬುವವರು ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್‌ನಲ್ಲಿ (fifty_and_fab_) ಈ ಮನಕಲಕುವ ವಿಚಾರವನ್ನು ಹಂಚಿಕೊಂಡಿದ್ದಾರೆ.  ಅವರ ಬರಹದ ಸಾರಾಂಶ ಹೀಗಿದೆ, ಒಬ್ಬ ಪ್ರಸೂತಿ ತಜ್ಞೆಯಾಗಿರುವುದು ಯಾವಾಗಲೂ ಸಿಹಿಯಾಗಿ ಹಾಗೂ ಸುಲಭವಾಗಿರುವುದಿಲ್ಲ. ರೆಹನಾ(ಹೆಸರು ಬದಲಾಯಿಸಲಾಗಿದೆ) ಅವರನ್ನು ಮೂರನೇ ಮಗುವಿಗೆ ಸಹಜ ಹೆರಿಗೆಯ ನಂತರ ಇಂದು ಡಿಸ್ಚಾರ್ಜ್ ಮಾಡಲಾಯಿತು. ಅವರು ನಿನ್ನೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವರಿಗೆ ಈಗಾಗಲೇ 5 ವರ್ಷದ ಮಗಳು ಮತ್ತು 3 ವರ್ಷದ ಒಂದು ಗಂಡು ಮಗುವಿದೆ.

ಎದೆಹಾಲಿಗಾಗಿ ಹಠ ಮಾಡಿದ್ದಕ್ಕೆ ನಾಲ್ಕು ದಿನದ ಶಿಶುವನ್ನು ಸಾಯಿಸಲು ಹೋಗಿದ್ದೆ! ನಟಿಯ ಶಾಕಿಂಗ್​ ಹೇಳಿಕೆ

ಮೂರನೇ ಹೆರಿಗೆಯಲ್ಲಿ ಅವಳಿಗೆ ಹೆಣ್ಣು ಮಗು ಆಗಿದೆ ಎಂದು ಕೇಳಿದ ಗಂಡ ಅವಳ ಜೊತೆ ಮಾತನಾಡಲು ಅಥವಾ ಅವಳನ್ನು ಭೇಟಿ ಮಾಡಲು ನಿರಾಕರಿಸಿದನು. ಅಲ್ಲದೇ ಅವರ ಇನ್ನೆರಡು ಸಣ್ಣ ಮಕ್ಕಳನ್ನು ಆಗಷ್ಟೇ ಮಗುವಿನ ಜನ್ಮ ನೀಡಿದ ಈ ತಾಯಿಯ ಬಳಿ ಬಿಟ್ಟು ಹೊರಟು ಹೋದರು. ಆಗಷ್ಟೇ ಮಗುವಿಗೆ ಜನ್ಮ ನೀಡಿದ ಆಕೆ ಆ ನವಜಾತ ಮಗುವಿನ ಜೊತೆ ಈ ಇಬ್ಬರು ಪುಟ್ಟ ಮಕ್ಕಳನ್ನು ನೋಡಿಕೊಳ್ಳಬೇಕಿತ್ತು. 

ಬಿಲ್ ಪಾವತಿಸಿ ಹೊರಟು ಹೋದ ಅತ್ತೆ

ಇತ್ತ ಅವಳ ಅತ್ತೆ ಬಿಲ್ ಪಾವತಿಸಿ ಅವಳನ್ನು ಕರೆದುಕೊಂಡು ಹೋಗದೆ ಬಿಟ್ಟು ಹೊರಟು ಹೋದರು. ಆದರೆ ನನಗೆ ಅವಳ ಬಗ್ಗೆ ಕನಿಕರವಿದ್ದ ಕಾರಣ ಆಸ್ಪತ್ರೆಯ ಬಿಲ್ ಕಡಿಮೆ ಮಾಡುತ್ತೇನೆ ಎಂದು ನಾನು ರೆಹಾನಾಗೆ ಹೇಳಿದ್ದೆ. ಆದರೆ ಅವಳು ತನ್ನ ಅತ್ತೆಯಿಂದ ಸಂಪೂರ್ಣ ಮೊತ್ತವನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ನನಗೆ ಕೊಡಿ ಎಂದು ಹೇಳಿದಳು. ಅತ್ತ ಅವಳ ಗಂಡ ಅವಳಿಗೆ ಯಾವುದೇ ಹಣವನ್ನು ನೀಡುವುದಿಲ್ಲ ಮತ್ತು ಅವಳನ್ನು ಹೊರಗೆ ಕೆಲಸಕ್ಕೂ ಹೋಗಲು ಬಿಡುವುದಿಲ್ಲ. 

ಹೊಸ ತಾಯಂದಿರಲ್ಲಿ ನಿದ್ರಾಹೀನತೆಯ ಸಮಸ್ಯೆ, ಮೂಡ್ ಸ್ವಿಂಗ್ಸ್‌ಗೂ ಇದುವೇ ಕಾರಣ !

ಪ್ರೀತಿಯೆಂಬ ಪ್ರಪಾತಕ್ಕೆ ಬಿದ್ದಿದ್ದ ಮುದ್ದು ಹುಡುಗಿ ರೆಹಾನಾ

ರೆಹಾನಾ ನೋಡಲು ತುಂಬಾ ಎತ್ತರವಾಗಿದ್ದ ಸುಂದರ ಹುಡುಗಿ ನಾನು ಆಕೆಯನ್ನು ಮೊದಲ ಬಾರಿ ನೋಡಿದಾಗ ಆಕೆ ತುಂಬ ಮುದ್ದು ಮುದ್ದಾಗಿದ್ದಳು ಚುರುಕಾಗಿದ್ದಳು. ಆಕೆಯದ್ದು ಒಂದು ಪ್ರೇಮಕತೆಯಾಗಿತ್ತು. ಆಖೆಗೆ ತಾನು ಎಂತಹ ಕಂದಕಕ್ಕೆ ಬೀಳುತ್ತಿದ್ದೇನೆ ಎಂಬುದರ ಅರಿವಿರಲಿಲ್ಲ. ನಾನು ಆಕೆಯ ಪತಿಗೆ (ಆತನಿಗೆ ತಿಳಿದಿಲ್ಲದಿದ್ದರೆ) ಈ ಹೆಣ್ಣು ಹಾಗೂ ಗಂಡು ಮಗು ಆಗುವುದಕ್ಕೆ ಕಾರಣವಾಗುವ ಎಕ್ಸ್ ಹಾಗೂ ವೈ ವರ್ಣತಂತುಗಳ ಬಗ್ಗೆಆತನಿಗೆ ಮಾಹಿತಿ ನೀಡಬೇಕೆಂದು ಯೋಚನೆ ಮಾಡಿದ್ದೆ. ಆದರೆ ಆತ ನನ್ನನ್ನು ಭೇಟಿ ಮಾಡುವುದಕ್ಕೆ ನಿರಾಕರಿಸಿದ.

ಹೆಣ್ಮಕ್ಕಳೇ ಯೋಚಿಸಿ ಹೆಜ್ಜೆ ಇಡಿ.

ಹೆಣ್ಣು ಮಕ್ಕಳೇ, ಆತ ಚೆನ್ನಾಗಿದ್ದಾನೆ ಶ್ರೀಮಂತನಿದ್ದಾನೆ  ಎಂದು ಭಾವಿಸಿಕೊಂಡು ಮದುವೆಯಾಗುವುದಕ್ಕೆ ಆತುರಪಡಬೇಡಿ, ಅದರಲ್ಲೂ ವಿಶೇಷವಾಗಿ ನೀವು ಆರ್ಥಿಕವಾಗಿ ಕೆಳಮಟ್ಟದಲ್ಲಿ ಇರುವವರಾಗಿದ್ದರೆ ಆತ ಜನರೊಂದಿಗೆ ಹೇಗೆ ನಡೆದುಕೊಳ್ಳುತ್ತಾನೆ. ಆತನ ವರ್ತನೆ ಹೇಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ, ಅದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ.ವಿಶೇಷವಾಗಿ ಮದುವೆಯಾಗುವುದಕ್ಕೂ ಮೊದಲು ಆರ್ಥಿಕವಾಗಿ ಸ್ವತಂತ್ರರಾಗಿರಿ ಎಂದು ವೈದ್ಯೆ ಬರೆದುಕೊಂಡಿದ್ದಾರೆ. ಅಲ್ಲದೇ ರಿಹಾನಾಗೆ ಬೇಕಾದಷ್ಟು ಹಣಕಾಸಿನ ಸಹಾಯ ಮಾಡುವುದರ ಜೊತೆಗೆ ಆಕೆಗೆ ಆರ್ಥಿಕವಾಗಿ ಸ್ವಾತಂತ್ರವಾಗುವಂತೆ ಸಲಹೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. 

ಭಾವುಕರಾದ ನೆಟ್ಟಿಗರು

ಇದು ರಿಹಾನಾ ಒಬ್ಬಳ ಕತೆ ಅಲ್ಲ, ಬಹುತೇಕ ಆರ್ಥಿಕವಾಗಿ ಸ್ವಾತಂತ್ರವಿಲ್ಲದ ಹೆಣ್ಣು ಮಕ್ಕಳ ಕತೆಯಾಗಿದೆ. ಅನೇಕರು ವೈದ್ಯೆ ಹೇಳಿದ ತಾಯಿಯ ಕತೆ ಕೇಳಿ ಭಾವುಕರಾಗಿದ್ದಾರೆ. ಆಕೆಗೆ ಆರ್ಥಿಕವಾಗಿ ಸ್ವಾತಂತ್ರವಾಗುವ ಶಕ್ತಿ ಹಾಗೂ ಭಾವನಾತ್ಮಕ ಬೆಂಬಲ ಸಿಗುವಂತಾಗಲಿ ಎಂದು ಅನೇಕರು ಹಾರೈಸಿದ್ದಾರೆ. ಇದೊಂದು ಕಣ್ಣು ತೆರೆಸುವ ಕತೆ ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ. ಇದು ಮಹಿಳೆಯೊಬ್ಬ ಭಯಾನಕ ಕತೆ, ಇಂತಹ ಸ್ಥಿತಿಯಲ್ಲಿ ಸಿಲುಕಿಕೊಂಡ ಹಲವು ಹೆಣ್ಣು ಮಕ್ಕಳ ಕತೆ ಇದೇ ಆಗಿದೆ. ಇದು ದೆವ್ವ ಹಾಗೂ ಆಳ ಸಮುದ್ರದ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡುವಂತಹ ಸ್ಥಿತಿ. ಹೇಗೆ ಆ ಸ್ಥಿತಿಯಲ್ಲಿ ಆ ತಾಯಿ ನವಜಾತ ಶಿಶುವಿನ ಜೊತೆ ಮತ್ತಿಬ್ಬರು ಪುಟ್ಟ ಮಕ್ಕಳನ್ನು ನಿಭಾಯಿಸಿದಳೋ? ನಮ್ಮ ಸಮಾಜ ಯಾವಾಗ ಈ ಮನಸ್ಥಿತಿಯಿಂದ ಹೊರಗೆ ಬರುವುದೋ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಪ್ರಸೂತಿ ವೈದ್ಯಯೊಬ್ಬರು ಹಂಚಿಕೊಂಡ ಈ ಕರುಣಾಜನಕ ಕತೆಯ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.  ಪ್ರಸೂತಿ ವೈದ್ಯ ಹಂಚಿಕೊಂಡ ಒರಿಜಿನ್ ಪೋಸ್ಟ್ ಇಲ್ಲಿದೆ ನೋಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೆಚ್ಚಿನ ಡಿವೋರ್ಸ್‌ಗಳು 'ಆ' ತಿಂಗಳಲ್ಲೇ ಆಗೋದು ಯಾಕೆ? ಅಂಥ ಸೀಕ್ರೆಟ್ ಈ ತಿಂಗಳಲ್ಲಿ ಏನಿದೆ?
40 ವರ್ಷದ ನಂತರ ಮಹಿಳೆಯರಲ್ಲಿ ಕಿಡ್ನಿ ಹಾನಿ ಮಾಡುವ 5 ದೈನಂದಿನ ಅಭ್ಯಾಸಗಳು