
ಅಂತರಾಷ್ಟ್ರೀಯ ಮಹಿಳಾ ದಿನ (International Womens Day)ದ ಶುಭ ಸಂದರ್ಭದಲ್ಲಿ ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಪತ್ನಿ ಮತ್ತು ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ತಮ್ಮ ಫಿಟ್ನೆಸ್ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ನೀತಾ ಅಂಬಾನಿ (Nita Ambani) ತಮ್ಮ ವರ್ಕ್ ಔಟ್, ಆರೋಗ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೀತಾ ಅಂಬಾನಿ ವರ್ಕ್ ಔಟ್ ವಿಡಿಯೋ ಗಮನ ಸೆಳೆದಿದೆ.
ನೀತಾ ಅಂಬಾನಿ ತಮ್ಮ ಸ್ಪೂರ್ತಿದಾಯಕ ಫಿಟ್‌ನೆಸ್ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಎಲ್ಲಾ ವಯಸ್ಸಿನ ಮಹಿಳೆಯರು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದ್ದಾರೆ. ತಮ್ಮ ನಿಯಮಿತ ವ್ಯಾಯಾಮ ದಿನಚರಿಯೊಂದಿಗೆ, ವಯಸ್ಸು ಕೇವಲ ಒಂದು ಸಂಖ್ಯೆ ಎಂದು ನೀತಾ ನಮಗೆ ತೋರಿಸಿದ್ದಾರೆ. ವಯಸ್ಸಾದಂತೆ ಫಿಟ್ನೆಸ್ ಮುಖ್ಯ ಎಂಬುದನ್ನು ಅವರು ತಮ್ಮ ಅದ್ಭುತ ವ್ಯಾಯಾಮದ ಮೂಲಕ ಸಾಬೀತುಪಡಿಸಿದ್ದಾರೆ.
ಮುಕೇಶ್ ನೀತಾ ಅಂಬಾನಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ, ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
ಮನೆ, ಕೆಲಸ, ಬೇರೆಯವರನ್ನು ಬಿಟ್ಟು, ನಿಮಗಾಗಿ ನೀವು ಸಮಯ ಮೀಸಲಿಟ್ಟು ಎಷ್ಟು ಸಮಯ ಕಳೆದಿದೆ ಎಂಬ ಪ್ರಶ್ನೆ ಕೇಳುತ್ತಲೇ ನೀತಾ ಅಂಬಾನಿ ತಮ್ಮ ವಿಡಿಯೋ ಆರಂಭ ಮಾಡ್ತಾರೆ. ನಮ್ಮ ದೇಹದ ಬಗ್ಗೆ ನಾವೇ ಕಾಳಜಿವಹಿಸಿಲ್ಲ ಅಂದ್ರೆ ಮತ್ತೆ ಯಾರು ನೋಡಿಕೊಳ್ತಾರೆ ಎನ್ನುವ ನೀತಾ ಅಂಬಾನಿ, 50 -60ನೇ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಗತ್ಯ ಎಂದಿದ್ದಾರೆ. ಮಹಿಳೆಯರ ದೇಹದಲ್ಲಿ 30ನೇ ವರ್ಷಕ್ಕೆ ಯಾವೆಲ್ಲ ಬದಲಾವಣೆಯಾಗುತ್ತದೆ ಎಂಬುದನ್ನು ವಿವರಿಸಿದ ನೀತಾ ಅಂಬಾನಿ, ಆರಾಮವಾಗಿ ಯೋಗಾಸನ ಮಾಡೋದನ್ನು ನೀವು ಕಾಣ್ಬಹುದು. ನಂತ್ರ ಜಿಮ್ ನಲ್ಲಿ ಬೆವರಿಳಿಸುವ ನೀತಾ ಅಂಬಾನಿ ಅಷ್ಟಕ್ಕೆ ನಿಲ್ಲೋದಿಲ್ಲ. ಬರೀ ಯೋಗ, ಜಿಮ್ ಮಾತ್ರವಲ್ಲ ನೀತಾ ಅಂಬಾನಿ ಡಾನ್ಸ್ ಮೂಲಕವೂ ತಮ್ಮ ಶಕ್ತಿ ಹೆಚ್ಚಿಸಿಕೊಂಡಿದ್ದಾರೆ. ಅವರು ತಮ್ಮ ಆರನೇ ವರ್ಷದಿಂದಲೇ ಭರತನಾಟ್ಯ ಅಭ್ಯಾಸ ಶುರು ಮಾಡಿದ್ದರು. ಪ್ರತಿ ದಿನ ದೇಹದ ಎಲ್ಲ ಭಾಗಕ್ಕೆ ವ್ಯಾಯಾಮ ನೀಡಲು ನೀತಾ ಅಂಬಾನಿ ಇಷ್ಟಪಡುತ್ತಾರೆ. ಮೊಬಿಲಿಟಿ, ಫೆಕ್ಸಿಬಿಲಿಟಿ, ಯೋಗಾ ಮತ್ತು ಕೋ ಸ್ಟ್ರೆಂತ್ಗೆ ನೀತಾ ಅಂಬಾನಿ ಆದ್ಯತೆ ನೀಡ್ತಾರೆ. ಕೆಲ ದಿನ ತಮ್ಮ ದಿನಚರಿ ಬದಲಿಸುವ ನೀತಾ ಅಂಬಾನಿ ಸ್ವಿಮ್ಮಿಂಗ್, ಆಕ್ವಾ ಎಕ್ಸಸೈಜ್ ಮಾಡ್ತಾರೆ. ವಾರದಲ್ಲಿ 5 ರಿಂದ 6 ದಿನ ವರ್ಕ್ ಔಟ್ ಮಾಡ್ತಾರೆ ನೀತಾ. ಪ್ರವಾಸದ ಸಮಯದಲ್ಲಿ ವರ್ಕ್ ಔಟ್ ಸಾಧ್ಯವಿಲ್ಲ ಎಂದಾದ್ರೆ ವಾಕ್ ಮಾಡ್ತಾರೆ ನೀತಾ. 5 ರಿಂದ 7 ಸಾವಿರ ಸ್ಟೆಪ್ ನಡೆಯುವ ನೀತಾ, ಡಯಟ್ ಗೂ ಮಹತ್ವ ನೀಡಿದ್ದಾರೆ.
ಮಗುವಾದ್ಮೇಲೆ ದೀಪಿಕಾ ಗೂಗಲ್ನಲ್ಲಿ ಹುಡುಕಿದ್ದು 'ಪುರ್ರ್'! ಏನಿದು ಅಂತ ನಟಿನೇ ಹೇಳಿದ್ದಾರೆ ಕೇಳಿ...
ಬ್ಯಾಲೆನ್ಸ್ ಡಯಟ್ ನೀತಾ ಇಷ್ಟಪಡ್ತಾರೆ. ಸಸ್ಯಹಾರಿಯಾಗಿರುವ ನೀತಾ ಅಂಬಾನಿ, ಸಾವಯವ ಆಹಾರವನ್ನು ಸೇವನೆ ಮಾಡ್ತಾರೆ. ನೀತಾ ಡಯಟ್ನಲ್ಲಿ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತೆ. ಶುಗರನ್ನು ದೂರ ಇಟ್ಟಿರುವ ನೀತಾ ಅಂಬಾನಿ, ವ್ಯಾಯಾಮ ಮಾಡೋದ್ರಿಂದ ಮನಸ್ಸು ಶಾಂತವಾಗುತ್ತೆ, ಇಡೀ ದಿನ ದೇಹ ಉತ್ಸಾಹದಿಂದ ಕೂಡಿರುತ್ತದೆ ಎಂದಿದ್ದಾರೆ. ಹ್ಯಾಪಿ ಹಾರ್ಮೋನ್ ರಿಲೀಸ್ ಮಾಡುತ್ತೆ , ಒತ್ತಡವನ್ನು ಕಡಿಮೆ ಮಾಡುತ್ತೆ ಎನ್ನುವ ನೀತಾ, 61ನೇ ವಯಸ್ಸಿನಲ್ಲಿ ನಾನೇ ಇದನ್ನೆಲ್ಲ ಮಾಡ್ತಿನಿ ಅಂದ್ಮೇಲೆ ನಿಮಗೆ ಯಾಕೆ ಆಗೋದಿಲ್ಲ. ಇದಕ್ಕೆ ಸಮಯ ಮೀಸಲಿಡಿ. ನಿಮ್ಮ ಮೇಲೆ ಪ್ರೀತಿ ತೋರಿಸಿ, ವಾರದಲ್ಲಿ ನಾಲ್ಕು ದಿನ 30 ನಿಮಿಷ ವ್ಯಾಯಾಮ ಮಾಡಿ. ನೀವು ಸ್ಟ್ರಾಂಗ್ ಆದ್ರೆ ನಿಮ್ಮನ್ನು ಸ್ಟಾಪ್ ಮಾಡಲು ಸಾಧ್ಯವಿಲ್ಲ. ಇಂದಿನಿಂದ್ಲೇ ಶುರು ಮಾಡಿ ಎನ್ನುತ್ತ ಕೋಟ್ಯಾಂತರ ಮಹಿಳೆಯರಿಗೆ ಸ್ಪೂರ್ತಿ ತುಂಬಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.